ಪ್ರಚಲಿತ

ಯುದ್ಧಕ್ಕೆ ಸಜ್ಜಾಗಿದ್ದ ಭಾರತವನ್ನು ಕಂಡು ಪಾಕ್ ಬೆದರಿದ್ದು ಹೇಗೆ ಗೊತ್ತಾ? ದಾಳಿ ಮಾಡುತ್ತೇನೆ ಎಂದ ಪಾಕ್ ಶಾಂತಿ ಮಾತುಕತೆ ನಡೆಸೋಣ ಎಂದಿದ್ಯಾಕೆ?

ಪಾಕಿಸ್ತಾನ ಎಂದರೆ ಏನು ಮತ್ತು ಪಾಕಿಸ್ತಾನ ನರಿ ಬುದ್ಧಿ ಎಂಥದ್ದು ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ ಭಾರತದ ವಿರುದ್ಧ ಏನಾದರೊಂದು ಪಿತೂರಿ ನಡೆಸುತ್ತಲೇ ಇದೆ, ತನ್ನ ದೇಶದಲ್ಲಿ ಉಗ್ರರನ್ನು ಸಾಕಿ ಅವರಿಗೆ ಆಶ್ರಯ ನೀಡಿ ಸಲಹುತ್ತಿರುವ ಪಾಕಿಸ್ತಾನ ಈ ಬಾರಿ ಅಕ್ಷರಶಃ ತತ್ತರಿಸಿದೆ. ಭಾರತದ ಮೇಲೆ ದಾಳಿ ಮಾಡುತ್ತೇನೆ ಎಂದು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಇಂದು ಭಾರತದ ಜೊತೆ ನಾವು ಶಾಂತಿ ಮಾತುಕತೆ ನಡೆಸುತ್ತೇವೆ ಎನ್ನುತ್ತಿದೆ ಎಂದರೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇಬೇಕು ಭಾರತ ಯಾವ ರೀತಿ ಬಲಿಷ್ಠವಾಗಿದೆ ಎಂದು. ಸ್ವಾತಂತ್ರ್ಯ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಯಾವ ರೀತಿ ಹದಗೆಟ್ಟಿದೆ ಎಂದರೆ ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನ ವೈರಿ ರಾಷ್ಟ್ರ ಎಂದು ಎಲ್ಲರಿಗೂ ತಿಳಿದಿದೆ.‌

ಒಂದು ವೇಳೆ ಉಭಯ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಿದರೂ ಕೂಡ ಪಾಕಿಸ್ತಾನ ಮಕಾಡೆ ಮಲಗುವುದು ಗ್ಯಾರಂಟಿ, ಯಾಕೆಂದರೆ ಭಾರತದ ಮುಂದೆ ಪಾಕಿಸ್ತಾನ ಏನೂ ಅಲ್ಲ. ಭಾರತದ ಸಾಮಾರ್ಥ್ಯ ಏನೆಂಬುದು ಜಗತ್ತಿನ ಅರಿವಾಗಿದೆ ಮತ್ತು ಪಾಕಿಸ್ತಾನಕ್ಕೂ ಅರಿವಾಗಿದೆ. ಆದ್ದರಿಂದಲೇ ಪಾಕ್ ಇಂದು ಭಾರತದ ಜೊತೆ ಯುದ್ಧ ಬೇಡ ಶಾಂತಿ ಮಾತುಕತೆ ನಡೆಸಿ ಉತ್ತಮ ಸ್ನೇಹ ಸಂಬಂಧ ಬೆಳೆಸುತ್ತೇನೆ ಎಂದು ಭಿಕ್ಷೆ ಬೇಡುತ್ತಿದೆ.!

ಅಮೇರಿಕಾದ ಎಚ್ಚರಿಕೆಗೂ ಕ್ಯಾರೇ ಅನ್ನದೆ ತನ್ನ ಉಗ್ರವಾದ ಪ್ರೇಮವನ್ನು ಹೆಚ್ಚು ಮಾಡುತ್ತಲೇ ಇದ್ದ ಪಾಕಿಸ್ತಾನ ಭಾರತವನ್ನು ಕಂಡರೆ ಇಂದು ಕೈ ಮುಗಿಯುತ್ತಿದೆ. ಭಾರತ ತಾನಾಗಿ ಈವರೆಗೆ ಯಾವ ದೇಶದ ಮೇಲೂ ದಾಳಿ ಮಾಡಿಲ್ಲ ಮತ್ತು ತನ್ನ ಮೇಲೆ ದಾಳಿ ಮಾಡಿದ ಪಾಕಿಸ್ತಾನವನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇತ್ತೀಚಿಗೆ ಭಾರತ ನೀಡಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿ ಭಾರತವನ್ನು ಯಾವ ರೀತಿ ಬಡಿದೆಬ್ಬಿಸಿತ್ತು ಎಂದರೆ ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ಯುದ್ಧ ನಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರಕಾರ ಕೂಡ ಸುಮ್ಮನಾಗಲಿಲ್ಲ, ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಒಳನುಗ್ಗಿ ಪಾಕ್ ಉಗ್ರರನ್ನು ಧ್ವಂಸ ಮಾಡಲಾಗಿತ್ತು.

ಈ ಒಂದು ಘಟನೆ ಪಾಕಿಸ್ತಾನವನ್ನು ಯಾವ ರೀತಿ ಬದಲಾಯಿಸಿತು ಎಂದರೆ ಭಾರತದ ಮೇಲೆ ದಾಳಿ ಮಾಡಲು ನಮ್ಮ ಬಳಿಯೂ ಸೇನಾ ಸಾಮಾರ್ಥ್ಯ ಇದೆ, ಭಾರತಕ್ಕೆ ಶರಣಾಗುವ ಮಾತೇ ಇಲ್ಲ ಎಂದು ಬಹಳ ಧೈರ್ಯದಿಂದ ಹೇಳಿಕೊಳ್ಳುತ್ತಿದ್ದ ಪಾಕ್ ಇಂದು ಯುದ್ಧದ ಮಾತೂ ಆಡುತ್ತಿಲ್ಲ ಮತ್ತು ಉಭಯ ರಾಷ್ಟ್ರಗಳು ಕೂಡ ಶಾಂತಿಯಿಂದ ಇರೋಣ, ಭಾರತದ ಜೊತೆ ನಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿಕೊಳ್ಳುತ್ತಿದೆ.!

ಪಾಕಿಸ್ತಾನ ಈ ಮಟ್ಟಕ್ಕೆ ಬದಲಾಗಿದೆ ಎಂದರೆ ಅದಕ್ಕೆ ಕಾರಣ ಭಾರತದ ಪ್ರಧಾನಿ ನರೇಂದ್ರ ಮೋದಿ ಅಲ್ಲದೆ ಮತ್ತಿನ್ನೇನೂ ಅಲ್ಲ. ಈ ಹಿಂದೆ ಕೂಡ ಪಾಕಿಸ್ತಾನ ಇದೇ ರೀತಿ ಉದ್ಧಟನ ಪ್ರದರ್ಶಿಸುತ್ತಲೇ ಇತ್ತು, ಆದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತು ಪಡಿಸಿ ಬೇರೆ ಯಾವ ಪ್ರಧಾನಿ ಕೂಡ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಸುಮ್ಮನೆ ಕೂರಲಿಲ್ಲ, ದಾಳಿ ನಡೆದ ದಿನವೇ ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿಕೊಂಡಿದ್ದರು.ಕೇವಲ ಬಾಯಿ ಮಾತಿಗೆ ಹೇಳಿಕೊಳ್ಳದ ಮೋದಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಂಡರು ಕೂಡ. ಪ್ರತೀಕಾರ ಯಾವ ರೀತಿ ಇತ್ತು ಎಂದರೆ ಪಾಕಿಸ್ತಾನ ನಿಂತಲ್ಲೇ ದಂಗಾಗಿತ್ತು ಯಾಕೆಂದರೆ ಮಲಗಿದಲ್ಲೇ ೩೦೦ಕ್ಕೂ ಹೆಚ್ಚು ಉಗ್ರರು ಸುಟ್ಟು ಭಸ್ಮವಾಗಿದ್ದರು.

ಈ ಒಂದು ಘಟನೆ ಪಾಕಿಸ್ತಾನಕ್ಕೆ ಮರೆಯಲಾಗದ ಪಾಠವಾಗಿ ಬಿಟ್ಟಿದೆ ಎಂದರೂ ತಪ್ಪಾಗದು, ಯಾಕೆಂದರೆ ಪಾಕಿಸ್ತಾನ ಇಂದು ಭಾರತದ ಜೊತೆ ನಾವು ಯುದ್ಧ ಮಾಡುವುದಿಲ್ಲ, ಬದಲಾಗಿ ಶಾಂತಿ ಮಾತುಕತೆ ನಡೆಸಲು ಸಿದ್ಧ ಎಂದು ಅಂಗಲಾಚಿ ಬೇಡುತ್ತಿದೆ. ಇದು ಭಾರತ ಪಾಕಿಸ್ತಾನಕ್ಕೆ ಕಲಿಸಿದ ಪಾಠ ಆದರೆ, ಇತ್ತ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಒಬ್ಬಂಟಿಯಾಗಿದೆ. ಯಾವ ರಾಷ್ಟ್ರ ಕೂಡ ಪಾಕಿಸ್ತಾನವನ್ನು ಮೂಸಿ ನೋಡುತ್ತಿಲ್ಲ ಎಂದರೆ ಅದಕ್ಕೆ ಕಾರಣ ಮೋದಿ. ಇದು ಭಾರತೀಯರಿಗೆ ಹೆಮ್ಮೆಯ ವಿಷಯ, ಪದೇ ಪದೇ ನರಿ ಬುದ್ದಿ ತೋರಿಸುತ್ತಿದ್ದ ಪಾಕಿಸ್ತಾನ ಇಂದು ಬಾಲಮುದುರಿಕೊಂಡು ಕೂತಿದೆ ಎಂದರೆ ಅದಕ್ಕೆ ಕಾರಣ ಮೋದಿ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close