ಪ್ರಚಲಿತ

ರಾಹುಲ್ ಗಾಂಧಿಯ ವಿರುದ್ದ ಸಿಡಿದೆದ್ದ ಯೋಗಿ ಆದಿತ್ಯನಾಥ್!! ಅಷ್ಟಕ್ಕೂ ರಾಹುಲ್ ಗಾಂಧಿಯ ಕಸದ ಬುಟ್ಟಿಗೆ ಸಿಕ್ಕ ತಕ್ಕ ತಿರುಗೇಟು ಏನು ಗೊತ್ತೇ??

ಸದಾ ಒಂದಲ್ಲಾ ಒಂದು ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಮೊನ್ನೆ ತಾನೇ ಸಿಂಗಾಪುರದಲ್ಲಿ ಲೇಖಕರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ತತ್ತರಿಸಿದ್ದುದರ ಜೊತೆಗೆ ಆ ವೀಡಿಯೋವನ್ನು ತಿರುಚಿ ಟ್ವೀಟ್ ಮಾಡುವ ಮೂಲಕ ದೇಶದ ಮರ್ಯಾದೆಯನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಹರಾಜು ಹಾಕಿದ್ದರು. ಆದರೆ ಇದರ ಬೆನ್ನಲ್ಲೇ “ನೋಟ್ ಬ್ಯಾನ್ ಪ್ರಸ್ತಾವನೆ ನನ್ನ ಎದುರು ಬಂದಿದ್ದರೇ, ಕಸದ ಬುಟ್ಟಿಗೆ ಎಸೆಯುತ್ತಿದ್ದೆ” ಎಂದು ಹೇಳಿದ್ದ ರಾಹುಲ್ ಗಾಂಧಿ ಅವರ ಮಾತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಕ ತಿರುಗೇಟು ನೀಡಿದ್ದಾರೆ.

ಹೌದು… ಆರ್ ಬಿಐ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಂಪುಟದ ಸಹೋದ್ಯೋಗಿಗಳನ್ನು ಕೋಣೆಯಲ್ಲಿ ಕೂಡಿ ಹಾಕಿ ಪ್ರಧಾನಿ ಮೋದಿ ಒಂದು ವರ್ಷದ ಹಿಂದೆಯಷ್ಟೇ ಮಾಡಿದ ದೊಡ್ಡ ಮುಖಬೆಲೆಯ ನೋಟು ರದ್ದತಿ ಘೋಷಣೆಯಿಂದ ದೇಶದ ಭ್ರಷ್ಟಾಚಾರಿಗಳಿಗೆ, ಕಪ್ಪುಹಣ ಕ್ಕೆ ಕಡಿವಾಣ ಹಾಕಿದ್ದರು!! ಅಷ್ಟೇ ಅಲ್ಲದೇ, ಈ ಬಗ್ಗೆ ಈಡೀ ದೇಶವೇ ಒಂದು ಕ್ಷಣ ತತ್ತರಿಸಿ ಹೋಗಿದ್ದರೂ ಕೂಡ ತದನಂತರ ನರೇಂದ್ರ ಮೋದಿಯವರ ಈ ಯೋಜನೆಯ ಬಗ್ಗೆ ಶ್ಲಾಘನೆಯ ಮಹಾಪೂರವೇ ಹರಿದು ಬಂದಿತ್ತು!!

ಇನ್ನು, ಈ ಬಗ್ಗೆ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾಯೋರ್ಜಿವಾ ಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ನಿರ್ಧಾರವನ್ನು ಹಾಡಿ ಹೊಗಳಿದ್ದರು. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಕ್ರಿಸ್ಟಾಲಿನಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಆರಂಭದ ದಿನದಲ್ಲಿ ಈ ನಿರ್ಧಾರದಿಂದ ಸಮಸ್ಯೆಯಾದರೂ ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಮೂಲಕ ದೇಶಕ್ಕೆ ಒಳ್ಳೆದಾಗಲಿದೆ. ಭಾರತದ ಈ ನಡೆಯನ್ನು ಇತರ ದೇಶಗಳು ಕೂಡ ಅಧ್ಯಯನ ಮಾಡಲಿವೆ ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೇ, ಭ್ರಷ್ಟಾಚಾರ ತಡೆಗಟ್ಟಲು ತೆಗೆದುಕೊಂಡಿರುವ ನೋಟ್ ಬ್ಯಾನ್ ನಿರ್ಧಾರ, ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾತ್ಮಕ ಪರಿಣಾಮ ಬೀರಲಿದೆ. ಇಲ್ಲಿನ ಬೆಳವಣಿಗೆ ಜಗತ್ತಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಕಾರಣ ನಮಗೆ ಭಾರತವು ಮುಖ್ಯವಾಗುತ್ತದೆಯಲ್ಲದೇ, ನೋಟು ಬ್ಯಾನ್ ಆದ ಬಳಿಕ ದೇಶದ ಜಿಡಿಪಿ ಭಾರೀ ಕುಸಿಯಲಿದೆ ಎಂದು ಆರ್ಥಿಕ ಪಂಡಿತರು ವಿಶ್ಲೇಷಿಸಿದ್ದರು. ಹೀಗಿರಬೇಕಾದರೇ ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಯೋಜನೆಯ ಬಗ್ಗೆ ಮಲೇಷ್ಯಾದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಯಡವಟ್ಟು ಮಾಡಿಕೊಂಡು ಆರ್ಥಿಕ ತಜ್ಞರ ಟೀಕೆಗೆ ಗುರಿಯಾಗಿದ್ದಾರೆ.

Image result for yogi

ಅಷ್ಟಕ್ಕೂ…. ಈ ಬಗ್ಗೆ ಯೋಗಿ ಆದಿತ್ಯನಾಥರು ನೀಡಿದ ತಕ್ಕ ಉತ್ತರವಾದರೂ ಏನು ಗೊತ್ತೇ?

ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರಿಗೆ, “ನೀವು ಪ್ರಧಾನಿ ಆಗಿದ್ದಾಗ ನೋಟು ರದ್ಧತಿ ವಿಚಾರ ನಿಮ್ಮ ಮುಂದಿದ್ದರೆ ಯಾವ ರೀತಿ ಅದನ್ನು ಅನುಷ್ಟಾನಕ್ಕೆ ತರುತ್ತಿದ್ದಿರಿ? ಎಂದು ಕೇಳಿದ ಪ್ರಶ್ನೆಗೆ” – “ನಾನು ಪ್ರಧಾನಿ ಆಗಿದ್ದರೆ, ನೋಟ್ ಬ್ಯಾನ್ ಪ್ರಸ್ತಾವನೆ ಏನಾದರೂ ನನ್ನ ಮುಂದಿದ್ದರೆ ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ” ಎನ್ನುವ ಬಾಲಿಷ ಉತ್ತರವನ್ನು ನೀಡಿ ಪೇಚಿಗೆ ಸಿಲುಕಿದ್ದು, ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

ಫೈರ್ ಬ್ರ್ಯಾಂಡ್ ಖ್ಯಾತಿಯ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ರಾಹುಲ್ ಗಾಂಧಿಯವರನ್ನೇ ಜನರು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಆದರೂ ಅವರಿಗೆ ಗಂಭೀರತೆ ಬಂದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಇಳಿಯುತ್ತಿರುವ ಹೀನಾಯ ಸ್ಥಿತಿಯನ್ನು ಅನಾವರಣ ಮಾಡಿದ್ದಾರೆ.

ಹೌದು…. ಗೋರಖಪುರ ಲೋಕಸಭೆ ಉಪಚುನಾವಣೆ ನಿಮಿತ್ತ ನಡೆದ ಮತದಾನದಲ್ಲಿ ಭಾಗಿಯಾಗಿ ಮತಚಲಾಯಿಸಿದ ನಂತರ ಮಾತನಾಡಿದ ಯೋಗಿ ಆದಿತ್ಯನಾಥರು, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ನಕಾರಾತ್ಮಕ ಚಿಂತನೆಯನ್ನೇ ಹೊಂದಿದ್ದಾರೆ. ಸದಾ ಋಣಾತ್ಮಕ ಯೋಚನೆಗಳನ್ನು ಮಾಡುತ್ತಿರುವುದರಿಂದ ಇಂತಹ ಪೆದ್ದು ಹೇಳಿಕೆಗಳು ರಾಹುಲ್ ಗಾಂಧಿ ಬಾಯಿಯಿಂದ ಬರುತ್ತಿವೆ. ಆದ್ದರಿಂದ ರಾಷ್ಟ್ರದ ಜನರು ರಾಹುಲ್ ಗಾಂಧಿ ಮನವಿಯನ್ನು ದೇಶದೆಲ್ಲೆಡೆ ತಿರಸ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಮತ ನೀಡದೇ ಬುದ್ಧಿ ಕಲಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

Image result for rahul gandhi

ಈಗಾಗಲೇ ಜಿಎಸ್ ಟಿ, ನೋಟ್ ಬ್ಯಾನ್ ನಿರ್ಧಾರದಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದಲ್ಲದೇ, ಭ್ರಷ್ಟಾಚಾರ, ತೆರಿಗೆ ವಂಚನೆಗೆ ಕಡಿವಾಣ ಹಾಕಿರುವ ಕಾರಣ ದೇಶದ ಬಹುಸಂಖ್ಯಾತ ಜನರು ಈ ಕ್ರಮವನ್ನು ಬೆಂಬಲಿಸುತ್ತಾರೆ ಎಂದು ಹಲವಾರು ಸಮೀಕ್ಷೆಯ ಮೂಲಕ ತಿಳಿದುಬಂದಿದೆ. ಹಾಗಾಗಿ ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ನರೇಂದ್ರ ಮೋದಿ ಒಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು, ತನ್ನ ವಾಕ್ ಚಾತುರ್ಯತೆಯಿಂದಾಗಿ ವಿಶ್ವದಲ್ಲೇ ಗಮನಸೆಳೆದಿದ್ದಾರೆ. ಹಾಗಾಗಿ ಈ ಬಗ್ಗೆ ಆಸೀಸ್ ಬಿಲಿಯನೇರ್ ಮೋದಿ ಅವರನ್ನು ಪ್ರಶಂಸಿದ್ದಲ್ಲದೇ, ಮೋದಿಯವರ ವಿಷನ್ ಅನುಸರಿಸಲು ತಮ್ಮ ಆಸ್ಟ್ರೇಲಿಯ ಸರ್ಕಾರಕ್ಕೆ ಹೇಳಿದ್ದರು.

ಆದರೆ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ನೋಟು ನಿಷೇಧ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕ್ರಮವನ್ನು ದುರಂತ ಎಂದು ಬಣ್ಣಿಸಿದ್ದಲ್ಲದೇ ನೋಟು ನಿಷೇಧದ ಮೊದಲ ವರ್ಷದ ಆಚರಣೆಯನ್ನು `ಬ್ಲಾಕ್ ಡೇ’ ಎಂದು ಪ್ರತಿಭಟನೆ ನಡೆಸಿತ್ತು. ಅಷ್ಟಕ್ಕೂ ನೋಟ್ ಬ್ಯಾನ್ ಭಾರತದಲ್ಲಿ ಫೇಲ್ ಏನು ಆಗಿಲ್ಲ, ಆದರೆ ಈ ನೋಟ್ ಬ್ಯಾನ್ ಮಾಡಿರುವುದೇ ತಪ್ಪು ಎನ್ನುವಂತೆ ಕಾಂಗ್ರೆಸ್ ವರ್ತಿಸುತ್ತಿರುವುದನ್ನು ನೋಡಿದರೆ ಇದಕ್ಕಿಂತಲೂ ದೊಡ್ಡ ದುರಂತ ಮತ್ತೊಂದಿಲ್ಲ ಎಂದನಿಸುತ್ತಿದೆ.

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close