ಪ್ರಚಲಿತ

ಸೈನಿಕರ ಕುಟುಂಬದ ಮೊದಲ ವ್ಯಕ್ತಿಯಾಗಿ ಸೇನೆಯ ಲೆಫ್ಟಿನೆಂಟ್ ಆಗುತ್ತಿದ್ದಾರೆ ಈ ಹುತಾತ್ಮ ಯೋಧನ ಪತ್ನಿ!!

ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡುವ ಯೋಧರಿಗೆ ಎಷ್ಟು ಬಾರಿ ಸಲಾಮ್ ಮಾಡಿದರೂ ಸಾಲದು!! ಯಾಕೆಂದರೆ ಚಳಿ ಬಿಸಿಲು ಎನ್ನದೇ, ರಾತ್ರಿ ಹಗಲೆನ್ನದೇ ನಿರಂತರವಾಗಿ ದೇಶದ ರಕ್ಷಣೆಯನ್ನು ಮಾಡುವ ಯೋಧರಿಂದಾಗಿ ನಾವು ಇವತ್ತು ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತಿರುವಾಗ, ಯುದ್ದದಲ್ಲಿ ಹುತಾತ್ಮನಾದ ಸೈನಿಕನ ಪತ್ನಿ ರಕ್ಷಣಾ ಪಡೆಗೆ ಸೇರುತ್ತಿದ್ದಾರೆಂದರೆ ಅದಕ್ಕಿಂತ ಹೆಮ್ಮೆಯ ವಿಚಾರ ಬೇರೊಂದಿಲ್ಲ!!

“ಎಲ್ಲರೂ ಕೂಡ ದೇಶ ಸೇವೆ ಮಾಡಲಾಗದು ಅದಕ್ಕೂ ಕೂಡ ಯೋಗಬೇಕು” ಎಂದು ಹೇಳುತ್ತಾರಲ್ಲ ಅದು ಅಕ್ಷರಶಃ ನಿಜ ಎಂದನಿಸುತ್ತೇ!! ಯಾಕೆಂದರೆ 2015ರ ಸೆಪ್ಟೆಂಬರ್ 2ರಂದು ಕಾಶ್ಮೀರದ ಬಾರಾಮುಲ್ಲಾ ದಲ್ಲಿ “ಆಪರೇಶನ್ ರಕ್ಷಕ್” ವೇಳೆ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮರಾಗಿದ್ದ ಶಿಶಿರ ಮಲ್ ಅವರ ಪತ್ನಿ ಸಂಗೀತಾ ಇದೀಗ ಕಾಶ್ಮೀರದಲ್ಲಿನ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯನ್ನು ಸೇರಿಕೊಂಡಿದ್ದಾರೆ.

ಪುರುಷ ಪ್ರಾಬಲ್ಯತೆಯಿಂದ ಕೂಡಿರುವ ಭಾರತೀಯ ಭೂಸೇನೆಯಲ್ಲಿ ಮಹಿಳಾ ಯೋಧರನ್ನು ನಿಯೋಜಿಸಲು ಚಿಂತನೆ ನಡೆಸಿದ್ದ ಹಿನ್ನಲೆಯಲ್ಲಿ ‘ಮಹಿಳೆಯರನ್ನು ಯೋಧರಾಗಿ ನಿಯೋಜಿಸಲು ತಯಾರಿದ್ದೇವೆ. ಆರಂಭದಲ್ಲಿ ಮಹಿಳೆಯರನ್ನು ಮಿಲಿಟರಿ ಪೆÇಲೀಸರಾಗಿ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಈಗಾಗಲೇ ಕಾರ್ಯಾರಂಭವಾಗಿದ್ದು, ಸರಕಾರದೊಂದಿಗೆ ಚರ್ಚಿಸಲಾಗುತ್ತಿದೆ,” ಎಂದು 2017ರಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದರು.

ತದನಂತರದಲ್ಲಿ ದೇಶದ ಮೊಟ್ಟ ಮೊದಲ ಪೂರ್ಣಾವಧಿ ಮಹಿಳಾ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ ಅವರು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದರು. ಅದರಂತೆಯೇ ಸೇನೆಯಲ್ಲಿರುವ ಲಿಂಗ ಭೇದವನ್ನು ತೊಡೆಯಲು ನಿರ್ಧರಿಸಿರುವ ಅವರು ಮುಂಬರುವ ದಿನಗಳಲ್ಲಿ ಮಹಿಳಾ ಸೇನಾ ತುಕುಡಿ ರಚಿಸುವ ನಿರ್ಣಯವನ್ನು ತಗೆದುಕೊಂಡಿದ್ದರು.

ಅದರಂತೆಯೇ ಇದೀಗ ಸೇನೆಯಲ್ಲಿ ಮಹಿಳೆಯರಿಗೂ ಕೂಡ ಉತ್ತಮವಾದ ಪ್ರಾಶ್ಯಸ್ತ ಸಿಗುತ್ತಿದ್ದು, ಹುತಾತ್ಮ ಶಿಶಿರ ಮಲ್ ಅವರ ಪತ್ನಿ ಸಂಗೀತಾ ಅವರು ಸೇನೆಗೆ ಸೇರಿಕೊಳ್ಳುವ ದಿಟ್ಟ ನಿರ್ಧಾರದಿಂದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯನ್ನು ಸೇರಿಕೊಂಡಿದ್ದಾರೆ!!

ಯಾರು ಈ ಶಿಶಿರ್ ಮಲ್………….!!

ಭಾರತೀಯ ಸಶಸ್ತ್ರ ಪಡೆಯಲ್ಲಿ ಓರ್ವ ರೈಫಲ್ ಮ್ಯಾನ್ ಆಗಿದ್ದ ಶಿಶಿರ್ ಮಲ್ ದೇಶ ರಕ್ಷಣೆಯಲ್ಲಿ ತೊಡಗಿದ್ದಂತಹ ಹೆಮ್ಮೆಯ ಯೋಧನಾಗಿದ್ದರು!! ಅಷ್ಟೇ ಅಲ್ಲದೇ, ಇವರನ್ನು ಗೋರ್ಖಾ ರೈಫಲ್ಸ್‍ನ 3/09 ರ ಭಾಗವಾಗಿದ್ದ ಮಲ್ ಅವರನ್ನು 32ನೇ ರಾಷ್ಟ್ರೀಯ ರೈಫಲ್ಸ್‍ಗೆ ನಿಯೋಜಿಸಲಾಗಿತ್ತು. 2015ರ ಸೆಪ್ಟೆಂಬರ್ 2ರಂದು ಕಾಶ್ಮೀರದ ಬಾರಾಮುಲ್ಲಾ ದಲ್ಲಿ “ಆಪರೇಶನ್ ರಕ್ಷಕ್” ವೇಳೆ ಉಗ್ರರ ವಿರುದ್ಧ ಹೋರಾಡುತ್ತಾ ಅಸು ನೀಗಿದ ಇವರು, ತನ್ನ ದೇಹಕ್ಕೆ ಗುಂಡು ತಗುಲಿದ್ದರೂ ಕೂಡ ಅಸುನೀಗುವ ಮುನ್ನ ಓರ್ವ ಉಗ್ರನನ್ನು ಸಾಯಿಸಿ ಇನ್ನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದರು.

ಆದರೆ ಪತಿಯ ಸಾವಿನಿಂದ ಖಿನ್ನತೆಗೆ ಗುರಿಯಾಗಿದ್ದ ಯೋಧನ ಪತ್ನಿ ಚೇತರಿಸಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತು ಬ್ಯಾಂಕ್ ಸೇವೆಗೆ ಆಯ್ಕೆಯಾಗಿದ್ದರು!! ಈ ವೇಳೆ ಡೆಹರಾಡೂನ್‍ನಲ್ಲಿ ವಾಸವಾಗಿದ್ದ ಸಂಗೀತಾಗೆ ಒಂದು ದಿನ ರಾಣಿಖೇತ್‍ನಲ್ಲಿನ ಸೆಂಟ್ರಲ್ ಕಮಾಂಡ್ ನ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿ ಒಂದು ಫೆÇೀನ್ ಕರೆ ಬಂದಿತ್ತು. ಅಲ್ಲಿ ಆಕೆಯ ದಿವಂಗತ ಪತಿ ಮಲ್ ಅವರ ಸಹೋದ್ಯೋಗಿಗಳು ಮತ್ತು ಸ್ನೇಹಿತರು ಆಕೆಯನ್ನು ರಕ್ಷಣಾ ಪಡೆ ಸೇರುವಂತೆ ಮನವೊಲಿಸಿದರು. ಅಂತೆಯೇ ಆಕೆ ಕಾಶ್ಮೀರದಲ್ಲಿನ ಸೇನಾಧಿಕಾರಿ ತರಬೇತಿ ಅಕಾಡೆಮಿಯನ್ನು ಸೇರಿಕೊಂಡಿದ್ದಾರೆ!!

ಸೈನಿಕರ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದ ಸಂಗೀತಾಗೆ ಸೇನೆಯೇ ಒಂದು ಜೀವನ ಸ್ಪೂರ್ತಿಯಾಯಿತು. ಆಕೆ ದಿಲ್ಲಿಯಲ್ಲಿನ ವೀರ ನಾರಿ ಸಮಿತಿಯನ್ನು ಸಂಪರ್ಕಿಸಿದರಲ್ಲದೇ, ಓಟಿಎ ಎಂಟ್ರೆನ್ಸ್ ಪರೀಕ್ಷೆಯನ್ನು ಪಾಸು ಮಾಡುವುದಕ್ಕೆ ತರಬೇತಿ ಪಡೆದಿದ್ದಾರೆ!! ಪತಿ ಶಿಶಿರ್ ಮಲ್ ಅವರ ನಿಧನದ ಮೂರು ವರ್ಷಗಳ ತರುವಾಯ ಸಂಗೀತಾ ಶಾರ್ಟ್ ಸರ್ವಿಸ್ ಕಮಿಷನ್ (ಎಸ್‍ಎಸ್‍ಸಿ) ಪರೀಕ್ಷೆಯನ್ನು ಪಾಸು ಮಾಡಿಕೊಂಡರು.

ಅದರ ಫಲವಾಗಿ ಆಕೆ ಚೆನ್ನೈನಲ್ಲಿನ ಆಫೀಸರ್ ಟ್ರೈನಿಂಗ್ ಅಕಾಡೆಮಿಯನ್ನು ಸೇರಿಕೊಂಡರು. ಆದರೆ ಓಟಿಎ ತರಬೇತಿಯನ್ನು ಮುಗಿಸಿದ ಬಳಿಕ ಸಂಗೀತಾ ಇದೀಗ ತಮ್ಮ ಸೈನಿಕರ ಕುಟುಂಬದ ಮೊದಲ ವ್ಯಕ್ತಿಯಾಗಿ ಸೇನೆಯನ್ನು ಲೆಫ್ಟಿನೆಂಟ್ ಆಗಿ ಸೇರುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ!!

ಈಗಾಗಲೇ ಹಿರಿಯ ಐಪಿಎಸ್ ಅಧಿಕಾರಿ ಅರ್ಚನಾ ರಾಮಸಂದರಮ್ ರನ್ನು ಸಶಸ್ತ್ರ ಸೀಮಾ ಬಲ್(ಎಸ್ ಎಸ್ ಬಿ)ನ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಆ ಮೂಲಕ ಅರೆ ಸೈನಿಕ ಪಡೆಗೆ ಆಯ್ಕೆಯಾಗಿರುವ ಪ್ರಪ್ರಥಮ ಮಹಿಳಾ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲದೇ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಸಂಬಂಧ ಸುತ್ತೋಲೆ ಜಾರಿಗೊಳಿಸಿದ್ದು, 58 ವರ್ಷದ ಅರ್ಚನಾ ಸಶಸ್ತ್ರ ಸೀಮಾ ದಳಕ್ಕೆ ಆಯ್ಕೆಯಾಗಿರುವ ಪ್ರಥಮ ಮಹಿಳಾ ಅಧಿಕಾರಿಯಾಗಿದ್ದು, ಈ ದಳವು ನೇಪಾಳ ಮತ್ತು ಭೂತಾನ್ ಗಡಿಯನ್ನು ಕಾಯುವ ಜವಾಬ್ದಾರಿಯನ್ನು ನಿಭಾಯಿಸುತ್ತದೆ.

ಈಗಾಗಲೆ, ಅಮೆರಿಕ, ಕೆನಡ, ಜರ್ಮನಿ, ಆಸ್ಪ್ರೇಲಿಯಾ, ನಾರ್ವೆ, ಸ್ವೀಡನ್, ಫ್ರಾನ್ಸ್, ಇಸ್ರೇಲ್, ಬ್ರಿಟನ್, ಫಿನ್‍ಲ್ಯಾಂಡ್, ಡೆನ್ಮಾರ್ಕ್‍ಗಳು ಮಾತ್ರ ಮಹಿಳೆಯರಿಗೆ ಸೈನಿಕರಾಗಲು ಅವಕಾಶ ನೀಡಿತ್ತು. ಆದರೆ ಭಾರತೀಯ ಮಹಿಳೆಯರು ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಸಿಗ್ನಲ್ಸ್ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ನಿರ್ಮಲಾ ಸೀತರಾಮನ್ ಅಧಿಕಾರ ಸ್ವೀಕರಿಸಿದಾಗಿನಿಂದ ಮಹಿಳೆಯರಿಗೂ ಉತ್ತಮ ಸ್ಥಾನಮಾನ ಸಿಕ್ಕಿರುವುದೇ ಹೆಮ್ಮೆಯ ವಿಚಾರ!!

ಹಾಗಾಗಿ, ಇದೀಗ ಸೇನೆಗೆ ಸೇರಿಕೊಳ್ಳುವ ದಿಟ್ಟ ನಿರ್ಧಾರದಿಂದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯನ್ನು ಸೇರಿಕೊಂಡಿರುವ ಹುತಾತ್ಮ ಯೋಧನ ಪತ್ನಿ ಸಂಗೀತಾ ಅವರ ಧೈರ್ಯವನ್ನು ಎಲ್ಲರೂ ಕೂಡ ಮೆಚ್ಚುವಂತಹದ್ದು!! ಅಷ್ಟೇ ಅಲ್ಲದೇ, ಸೇನೆಗೆ ಸೇರಿಕೊಳ್ಳುವುದೇ ಒಂದು ಹೆಮ್ಮೆಯ ವಿಚಾರವಾದರೆ ದೇಶ ಸೇವೆಯೇ ಈಶ ಸೇವೆ ಎಂದು ನಂಬುವ ಅದೆಷ್ಟೋ ಜನರಿಗೆ ಈಕೆಯ ದಿಟ್ಟ ನಿರ್ಧಾರ ಹೆಮ್ಮೆ ಎಂದನಿಸುವುದರಲ್ಲಿ ಎರಡು ಮಾತಿಲ್ಲ!!

– ಅಲೋಖಾ

Tags

Related Articles

Close