ಪ್ರಚಲಿತ

ತಿಲಕ ಕಂಡರೆ ಭಯ ಆಗುತ್ತೆ ಎಂದ ಸಿದ್ದರಾಮಯ್ಯನವರಿಗೆ ಮಹಿಳೆಯರಿಂದ ಉಡುಗೊರೆ! ಗಿಫ್ಟ್ ಕಂಡು ದಂಗಾಗಿ ಹೋದ ಬದಾಮಿ ಶಾಸಕ!

ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಮಾತು ಅಕ್ಷರಶಃ ಸತ್ಯ, ಯಾಕೆಂದರೆ ಒಂದು ಮಾತು ಹೇಳುವಾಗ ಅದರಿಂದ ಇನ್ನೊಬ್ಬರಿಗೆ ಯಾವುದೇ ರೀತಿಯ ತೊಂದರೆ ಅಥವಾ ನೋವಾಗದಂತೆ ನೋಡಿಕೊಳ್ಳಬೇಕು. ಆದರೆ ಇತ್ತೀಚೆಗೆ ಬದಾಮಿ ಶಾಸಕ ಸಿದ್ದರಾಮಯ್ಯನವರು ಮಂಗಳೂರಿನಲ್ಲಿ ಮಾತನಾಡುತ್ತಾ ಬಿಜೆಪಿಯವರು ತಿಲಕ ಇಟ್ಟು ಇಟ್ಟು ಇಂದು ನನಗೆ ತಿಲಕ ಇಡುವವರನ್ನು ಕಂಡರೆ ಭಯ ಆಗುತ್ತದೆ ಎಂದ ಸಿದ್ದರಾಮಯ್ಯನವರು ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಯಾಕೆಂದರೆ ಸಿದ್ದರಾಮಯ್ಯನವರು ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಹಿಂದೂಗಳನ್ನು ಕಂಡರೆ ಉರಿದು ಬೀಳುತ್ತಿದ್ದರು ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ಕೀಳಾಗಿ ಮಾತನಾಡಿ ಅನೇಕ ಬಾರಿ ವಿವಾದ ಸೃಷ್ಟಿಸಿದ್ದರು. ಅದ್ಯಾವ ರೀತಿಯ ಛಾಳಿಯೋ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯನವರು ಇನ್ನೂ ಕೂಡ ತಮ್ಮ ಹಳೇ ಬುದ್ದಿ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಆದರೆ ಈ ಬಾರಿ ಸಿದ್ದರಾಮಯ್ಯನವರಿಗೆ ರಾಜ್ಯದ ಜನರು ಯಾವ ರೀತಿ ಬುದ್ದಿ ಕಲಿಸಿದ್ದಾರೆ ಎಂದರೆ ಮುಂದಿನ ಬಾರಿ ಹಿಂದೂಗಳ ಬಗ್ಗೆ ಮಾತನಾಡಬೇಕಾದರೆ ಹತ್ತು ಬಾರಿ ಆಲೋಚನೆ ಮಾಡಬೇಕು , ಆ ರೀತಿ ಉತ್ತರ ನೀಡಿದ್ದಾರೆ ಹಿಂದೂಗಳು.!

ಹೌದು ತಿಲಕ ಕಂಡರೆ ಭಯ ಆಗುತ್ತದೆ ಎಂದ ಸಿದ್ದರಾಮಯ್ಯನವರ ವಿರುದ್ಧ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೇಶಾದ್ಯಂತ ಹೊಸ ಅಭಿಯಾನ ಆರಂಭವಾಗಿದ್ದು “ಸೆಲ್ಫಿ ವಿಥ್ ತಿಲಕ್” ಎಂದು ತಿಲಕ ಹಾಕಿಕೊಂಡ ಫೋಟೋಗಳನ್ನು ತಮ್ಮ ಫೇಸ್‌ಬುಕ್‌ ವಾಟ್ಸಾಪ್ ಟ್ವಿಟರ್ ಗಳಲ್ಲಿ ಹಾಕಿ ತಿರುಗೇಟು ನೀಡಿದ ಜನರು ಒಂದೆಡೆಯಾದರೆ ಇದೀಗ ರಾಜ್ಯದ ಮಹಿಳೆಯರು ಸಿದ್ದರಾಮಯ್ಯನವರಿಗೆ ಗಿಫ್ಟ್ ನೀಡುವ ಮೂಲಕ ಮತ್ತೊಂದು ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಯಾಕೆಂದರೆ ಬದಾಮಿ ಶಾಸಕ ಸಿದ್ಧರಾಮಯ್ಯವರಿಗೆ ಉಡುಗೊರೆ ಕಳುಹಿಸಿದ ಮಹಿಳೆಯರು ಒಂದು ಡಬ್ಬಿ ಅರಶಿನ ಕುಂಕುಮ ಮತ್ತು ಕುಂಕುಮದ ಮಹತ್ವ ಇರುವ ಪುಸ್ತಕವನ್ನು ಕಳುಹಿಸಿ ಕುಂಕುಮದ ಮಹತ್ವ ಮೊದಲು ಅರಿಯಿರಿ, ನಂತರ ತಿಲಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.!

ಸಿದ್ದರಾಮಯ್ಯನವರಿಗೆ ತಿಲಕದ ಬಗ್ಗೆ ಅರಿವು ಇಲ್ಲದೇ ಇದ್ದರೆ ತಮ್ಮ ಪತ್ನಿಯ ಬಳಿ ಕೇಳಲಿ, ಮುತ್ತೈದೆಯರಿಗೆ ಕುಂಕುಮದ ಮಹತ್ವ ಗೊತ್ತಿರುತ್ತದೆ ಎಂದು ಟಾಂಗ್ ನೀಡಿದ್ದಾರೆ. ಅದೇ ರೀತಿ ಈ ಬಗ್ಗೆ ಟ್ವಿಟರ್ ನಲ್ಲಿ ಟ್ರೆಂಡ್ ಕೂಡ ನಡೆದಿತ್ತು, ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದು, ತಿಲಕ ಎಂದರೆ ಅದು ರಾಜಕೀಯಕ್ಕಾಗಿ ಬಳಸುವ ವಸ್ತುವಲ್ಲ, ಸನಾತನ ಧರ್ಮದ ಸಂಸ್ಕೃತಿಯ ಪ್ರತೀಕ ಈ ತಿಲಕ ಎಂದು ಕುಂಕುಮ‌ ಹಾಕಿಕೊಂಡ ತಮ್ಮ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಈಗಾಗಲೇ ಸಿದ್ದರಾಮಯ್ಯನವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಮಾಡಿದ್ದುಣ್ಣೋ ಮಹಾರಾಯ ಎಂದ ಹಾಗೆ ಸಿದ್ದರಾಮಯ್ಯನವರ ಒಂದು ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಅವರ ಮಾನ ಕಳೆಯುವಂತೆ ಮಾಡಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close