ಅಂಕಣ

ಪಾಕಿಸ್ತಾನದ ವಶದಲ್ಲಿರುವ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಮರಳಲಿದ್ದಾರೆ! ಅಂತರಾಷ್ಟ್ರೀಯ ನಿಯಮದ ಪ್ರಕಾರ ಪಾಕಿಸ್ತಾನ ಭಾರತಕ್ಕೆ ಹಿಂದಿರುಗಿಸಲೇಬೇಕು! ಭಾರತೀಯರೇ ಚಿಂತೆ ಬೇಡ

ನಿನ್ನೆಯಿಂದ ಸಂತೋಷದಲ್ಲಿದ್ದ ಇಡೀ ದೇಶ ಇಂದು ಒಂದೇ ಸಮನೆ ಮೌನವಾಗಿದೆ, ಸಂಭ್ರಮಾಚರಣೆ ಮಾಡುತ್ತಿದ್ದ ಜನರು ಇಂದು ನಾಪತ್ತೆಯಾದ ವೀರ ಯೋಧನಿಗಾಗಿ ಕಣ್ಣೀರಿಡುತ್ತಿದ್ದಾರೆ. ಹೌದು ಇಂದು ನಡೆದ ಘಟನೆಯಲ್ಲಿ ಭಾರತದ ವೀರ ಯೋಧ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ವಶವಾಗಿದ್ದಾರೆ, ಪಾಕ್ ಸೇನೆಯನ್ನು ಮಟ್ಟ ಹಾಕಲು ಹೋದ ಸೈನಿಕ ದುರಾದೃಷ್ಟವಶಾತ್ ಪಾಕಿಸ್ತಾನದ ಸೈನಿಕರ ಕೈಗೆ ಸಿಲುಕಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಯಾವ ರೀತಿ ಇದೆ ಎಂದರೆ ಯಾವ ಕ್ಷಣದಲ್ಲಿ ಬೇಕಾದರೂ ಯುದ್ಧ ಘೋಷಣೆಯಾಗುವ ಸಾಧ್ಯತೆ ಇದೆ, ಆದರೆ ಅದಕ್ಕೂ ಮೊದಲು ಪಾಕ್ ವಶದಲ್ಲಿರುವ ಕಮಾಂಡರ್ ಅಭಿನಂದನ್ ಕ್ಷೇಮವಾಗಿ ಮರಳಬೇಕು ಎಂಬುದು ಸಮಸ್ತ ಭಾರತೀಯರ ಪ್ರಾರ್ಥನೆಯಾದರೆ, ಅತ್ತ ಪಾಕಿಸ್ತಾನ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸಬೇಕಾದ ಅನಿವಾರ್ಯತೆ ಕೂಡ ಇದೆ.

ಹೌದು ಅಂತರಾಷ್ಟ್ರೀಯ ಯುದ್ಧ ನಿಯಮದ ಪ್ರಕಾರ ಯಾವುದೇ ದೇಶ ಇನ್ನೊಂದು ದೇಶದ ನಾಗರಿಕರನ್ನು ಅಥವಾ ಸೈನಿಕರನ್ನೇ ಆಗಲಿ ತನ್ನ ವಶದಲ್ಲಿಟ್ಟುಕೊಳ್ಳುವಂತಿಲ್ಲ. ೮ ದಿನಗಳ ಒಳಗಾಗಿ ವಶದಲ್ಲಿರುವ ವ್ಯಕ್ತಿಯನ್ನು ಆತನ‌ ದೇಶಕ್ಕೆ ಹಸ್ತಾಂತರಿಸಲೇಬೇಕು. ಯಾಕೆಂದರೆ ಒಬ್ಬ ಸೈನಿಕ ಅಥವಾ ಪೈಲೆಟ್ ಯಾರೇ ಆಗಿರಲಿ ತನ್ನ ದೇಶ ಬಿಟ್ಟು ಇನ್ನೊಂದು ದೇಶದೊಳಗೆ ಹೋದರೆ ಆತನನ್ನು ಸ್ಥಳದಲ್ಲೇ ಹೊಡೆದುರುಳಿಸುವ ಹಕ್ಕು ಆ ದೇಶದ ಸೇನೆಗೆ ಇದೆ, ತಮ್ಮ ದೇಶದ ಸುರಕ್ಷತಾ ದೃಷ್ಟಿಯಿಂದ ಇನ್ನೊಂದು ದೇಶದ ಸೈನಿಕನನ್ನು ಕೊಂದಿದ್ದಾಗಿ ಹೇಳಿ ಚಾಪ್ಟರ್ ಕ್ಲೋಸ್ ಮಾಡಬಹುದು. ಆದರೆ ಅಭಿನಂದನ್ ಅವರ ವಿಚಾರದಲ್ಲಿ ಪಾಕಿಸ್ತಾನ ಸುಳ್ಳು ಹೇಳುವಂತಿಲ್ಲ, ಯಾಕೆಂದರೆ ಭಾರತ ಸ್ಪಷ್ಟನೆ ನೀಡುವುದಕ್ಕೂ ಮೊದಲೇ ಪಾಕಿಸ್ತಾನ ಸರಕಾರ ಮತ್ತು ಸೇನೆ ಈ ಬಗ್ಗೆ ಹೇಳಿಕೆ ನೀಡಿತ್ತು. ನಮ್ಮ ಗಡಿ ದಾಟಿ ಬಂದ ಭಾರತೀಯ ಪೈಲೆಟ್ ನನ್ನು ನಾವು ಬಂಧಿಸಿರುವುದಾಗಿ ಹೇಳಿಕೊಂಡ ಪಾಕ್, ಈ ಬಗ್ಗೆ ವಿಡಿಯೋ ಕೂಡ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ ಗಮನಿಸಿದರೆ ನಮ್ಮ ದೇಶದ ಕಮಾಂಡರ್ ಅಭಿನಂದನ್ ಅವರಿಗೆ ವಿಮಾನದಿಂದ ಬಿದ್ದ ಸಂದರ್ಭದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ, ಆದರೆ ಅವರನ್ನು ಕಂಡ ಪಾಕ್ ಜನರು ಮತ್ತು ಸೈನಿಕರು ಬಂಧಿಸುವ ಸಂದರ್ಭದಲ್ಲಿ ರಕ್ತ ಬರುವಂತೆ ಹೊಡೆದು ಅವಮಾನವೀಯವಾಗಿ ನಡೆದುಕೊಂಡಿದ್ದಾರೆ. ನಿಯಮದ ಪ್ರಕಾರ ಪಾಕಿಸ್ತಾನ ಅಭಿನಂದನ್‌ಗೆ ಯಾವುದೇ ರೀತಿಯ ಹಿಂಸೆ ನೀಡುವಂತಿಲ್ಲ ಮತ್ತು ಪ್ರಾಣಕ್ಕೆ ಏನೂ ಆಗದಂತೆ ನೋಡಿಕೊಳ್ಳಬೇಕಿದೆ.

ಸ್ಥಳದಲ್ಲೇ ಕಂಡು ಶೂಟೌಟ್ ನಡೆಸುವ ಹಕ್ಕು ಪ್ರತೀ ದೇಶಕ್ಕೂ ಇದೆಯಾದರೂ ಪಾಕಿಸ್ತಾನ ಘಟನೆಯನ್ನು ವಿಡಿಯೋ ಚಿತ್ರಿಕರಣ ಮಾಡಿ ಜಗತ್ತಿಗೆ ಪ್ರದರ್ಶಿಸಿತ್ತು. ಆದ್ದರಿಂದ ಪಾಕಿಸ್ತಾನ ಇನ್ನು ಮುಂದೆ ಬಂಧಿಸಲ್ಪಟ್ಟ ಕಮಾಂಡರ್‌ಗೆ ಯಾವುದೇ ರೀತಿಯ ತೊಂದರೆ ನೀಡುವಂತಿಲ್ಲ. ಲಾ ಆಫ್ ಆರ್ಮ್ಡ್ ಕಾನ್ಫ್ಲಿಕ್ಟ್ ಪ್ರಕಾರ ಜಿನೀವಾ ಒಪ್ಪಂದದಲ್ಲಿ ಹೇಳಿರುವಂತೆ ಬಂಧಿಸಲ್ಪಟ್ಟವ ಊಟ ಉಪಚಾರ ಎಲ್ಲವನ್ನೂ ಬಂಧಿಸಿದ ದೇಶವೇ ನೋಡಿಕೊಳ್ಳಬೇಕಿದೆ ಮತ್ತು ಯಾವುದೇ ತೊಂದರೆ ಕೊಡುವಂತಿಲ್ಲ. ಅಂತರಾಷ್ಟ್ರೀಯ ನಿಯಮವನ್ನು ತೂರಿ ಪಾಕಿಸ್ತಾನ ಏನಾದರೂ ತೊಂದರೆ ನೀಡಿದರೆ ಮುಂದೆ ಭಾರತ ಅಥವಾ ಜಗತ್ತಿನ ಯಾವ ರಾಷ್ಟ್ರಗಳು ಕೂಡ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಹುದು ಮತ್ತು ಯಾವುದೇ ಕ್ರಮ‌ ಕೈಗೊಳ್ಳಬಹುದು. !

ಈ‌ ಹಿಂದೆ ಕಾರ್ಗಿಲ್ ಯುದ್ಧದ ಸಮಯದಲ್ಲೂ ನಮ್ಮ ಪೈಲಟ್ (ಕ್ಯಾ. ಕಂಬಂಪಟ್ಟಿ ನಚಿಕೇತ್) ಸೆರೆಯಾಗಿದ್ದರು ಮತ್ತು ಎಂಟು ದಿನದ ನಂತರ ಮರಳಿಬಂದಿದ್ದರು.

ಇವೆಲ್ಲಾ ನಿಯಮವಳಿಗಳು. ಹೌದು. ಆದರೆ ನಾವು ವ್ಯವಹರಿಸುತ್ತಿರುವುದು ಪಾಕಿಸ್ಥಾನದೊಂದಿಗೆ. ಅವರ ಸೈನ್ಯಕ್ಕೂ ಭಯೋತ್ಪಾದಕರಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಯಾಕೆಂದರೆ ಕ್ಯಾ. ನಚಿಕೇತ್ ವಿಮಾನ ಹೊಡೆತತಿಂದಾಗ ಆತನನ್ನು ಹುಡುಕಲು ಆತನ ಸ್ವಾಡ್ರನ್ ಲೀಡರ್ ಅಜಯ್ ಅಹುಜಾ ಇನ್ನೊಂದು ವಿಮಾನದಲ್ಲಿ ಬಂದಿದ್ದರು. ಅದನ್ನೂ ಹೊಡೆದುರುಳಿಸಿದ ಪಾಕಿಗಳು ಅಹುಜಾ ಎಜೆಕ್ಟ್ ಮಾಡಿ ಲ್ಯಾಂಡ್ ಆದಾಗ, ಪಾಯಿಂಟ್ ಬ್ಲಾಂಕ್ನಲ್ಲಿ ಎದೆಗೆ ಮತ್ತು ಹಣೆಗೆ ಗುಂಡಿಟ್ಟು ಕೊಂದಿದ್ದರು. ದೇಹವನ್ನು ಭಾರತಕ್ಕೆ ಹಸ್ತಾಂತರಿಸುವವರೆಗೂ ಪಾಕಿ ಸೈನ್ಯ “ಆತ ಅಪಘಾತದಲ್ಲಿ ಮರಣ ಹೊಂದಿದ್ದಾನೆ” ಅಂತಲೇ ಹೇಳುತ್ತಾ, ಕೊನೆಗೆ ಭಾರತೀಯ ಸೈನ್ಯ ಪೋಸ್ಟ್-ಮಾರ್ಟಂ ನಡೆಸಿ ಈ ಕೋಲ್ಡ್ ಬ್ಲಡೆಡ್ ಮರ್ಡರ್ ಬಗ್ಗೆ ಹೇಳಿದಾಗ, “ನನಗೇನೂ ಗೊತ್ತೇ ಇಲ್ಲ. ನಮಗೆ ಆತನ ಶವ ಸಿಕ್ಕಿದ್ದೇ ಆತ ಬಿದ್ದು ಎರಡು ದಿನದ ನಂತರ” ಅಂತಾ ನಾಟಕವಾಡಿತ್ತು.

ಕ್ಯಾ. ನಚಿಕೇತ್ ಕೂಡಾ ಎಂಟು ದಿನದ ಸೆರೆ ಹೇಗಿತ್ತು ಅಂತಾ ಕೇಳಿದಾಗ ಯಾವ ಉತ್ತರವನ್ನೂ ಕೊಡಲು ನಿರಾಕರಿಸಿದ್ದರು. “ಸಾವೇ ಅದಕ್ಕಿಂತಾ ಒಳ್ಳೆಯದಿತ್ತು” ಅಂದಷ್ಟೇ ಹೇಳಿದ್ದು.

ಇಂದು ಬಂಧಿಸಲ್ಪಟ್ಟ ಕಮಾಂಡರ್ ಅಭಿನಂದನ್ ಅವರ ಮುಖದಲ್ಲೂ ಯಾವುದೇ ರೀತಿಯ ಭಯವಿರಲಿಲ್ಲ ಸುತ್ತ ಪಾಪಿ ಪಾಕಿಸ್ತಾನದ ಸೈನಿಕರು ರಾಕ್ಷಸರಂತೆ ಕಾಯುತ್ತಿದ್ದರೂ ಕೂಡ ಧೈರ್ಯದಿಂದ ಮಾತನಾಡಿದ ಕಮಾಂಡರ್, ತನ್ನ ಹೆಸರು ಮತ್ತು ಹಿಂದೂ ಧರ್ಮ ಎಂದು ಎದೆಯುಬ್ಬಿಸಿ ಹೇಳಿಕೊಂಡು ಮುಂದಕ್ಕೆ ಯಾವುದೇ ಉತ್ತರ ನೀಡಲು ಸಾದ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕೊಂಡಿದ್ದರು. ಇದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರ. ಅದೇನೇ ಇರಲಿ ಪಾಕ್ ಬಂಧನದಲ್ಲಿರುವ ನಮ್ಮ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂಬುದೇ ನಮ್ಮ ಆಶಯ…!

ಜೈ ಹಿಂದ್

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close