ಪ್ರಚಲಿತ

ಸೀತೆಯ ತವರು ರಾಷ್ಟ್ರವಾದ ನೇಪಾಳಕ್ಕೆ ಮೊಘಲರಾಗಲಿ, ಬ್ರಿಟಿಷರಾಗಲಿ ಅಧಿಪತ್ಯ ಸ್ಥಾಪಿಸುವಲ್ಲಿ ವಿಫಲರಾಗಿದ್ದೇಕೆ ಗೊತ್ತೇ?!

ಶ್ರೀಮಂತ ಭರಿತವಾಗಿದ್ದ ಭಾರತವು ಮೊಘಲರ ದಾಳಿಗೆ ತುತ್ತಾಗಿ ದೇಶದ ಈಡೀ ಸಂಪತ್ತೇ ನಾಶವಾಗಿ ಹೋಗುವುದರ ಜೊತೆಗೆ ಹಿಂದೂ ರಾಷ್ಟ್ರವಾಗಿದ್ದ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಬದಲಾಯಿತು!! ಮೊಘಲರ, ಬ್ರಿಟಿಷರ ಅಟ್ಟಹಾಸದಿಂದ ಪವಿತ್ರವಾದ ಭಾರತೀಯ ಸಂಸ್ಕೃತಿಯೂ ಅಳಿವಿನ ಅಂಚಿಗೆ ತಪ್ಪಿತ್ತಲ್ಲದೇ, ಅದೆಷ್ಟೋ ಜನ ಹಿಂದೂಗಳ ಮಾರಣಹೋಮವೇ ನಡೆದು ಹೋಯಿತು. ಅದರಲ್ಲಿ ಅದೆಷ್ಟೋ ಹಿಂದೂಗಳು ಮತಾಂತರಗೊಂಡರಲ್ಲದೇ ತನ್ನ ಧರ್ಮವನ್ನೇ ಧಿಕ್ಕರಿಸಿ ನಡೆದರು!! ಆದರೆ ಭಾರತದ ನೆರೆಯ ರಾಷ್ಟ್ರವಾಗಿರುವ ನೇಪಾಳ ಮಾತ್ರ “ಹಿಂದೂ ರಾಷ್ಟ್ರ”ವಾಗಿಯೇ ಉಳಿಯಿತು!! ಅಷ್ಟಕ್ಕೂ ನೇಪಾಳ ಹಿಂದೂ ರಾಷ್ಟ್ರವಾಗಿಯೇ ಉಳಿಯಲು ಕಾರಣವಾದರೂ ಏನು ಗೊತ್ತಾ?

ಭಾರತದ ಮಗ್ಗಲಲ್ಲೇ ಇರುವ ನೇಪಾಳವು 2008 ರವರೆಗೂ ರಾಜಪ್ರಭುತ್ವವನ್ನು ಹೊಂದಿದ್ದ ಏಕೈಕ ರಾಷ್ಟ್ರವಾಗಿದೆಯಲ್ಲದೇ ದಕ್ಷಿಣ ಏಷ್ಯಾದಲ್ಲಿರುವ ಏಕೈಕ “ಹಿಂದೂ ರಾಷ್ಟ್ರ”ವೂ ಹೌದು!! ಶ್ರೀರಾಮಚಂದ್ರನ ಮಡದಿ ಸೀತೆಯ ಜನ್ಮಭೂಮಿ ಮಿಥಿಲಾ ಇದ್ದುದು ಇದೇ ನೇಪಾಳದಲ್ಲಿಯೇ. ಹಾಗಾಗಿ ಈ ದೇಶವು ಸೀತೆಯ ತವರು ಮನೆಯಾಗಿದ್ದು, ಹಲವು ಸೀತಾ ಮಂದಿರಗಳನ್ನು ಹೊಂದಿರುವ ಏಕೈಕ ದೇಶ ಎಂದರೆ ತಪ್ಪಾಗಲಾರದು!! “ಸೀತಾ ವಿವಾಹ ಪಂಚಮಿ”ಯು ಈ ದೇಶದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇಲ್ಲಿಯ ಚಿತ್‍ವನ ರಾಷ್ಟ್ರೀಯ ಉದ್ಯಾನವನದಲ್ಲಿ ವಾಲ್ಮೀಕಿ ಆಶ್ರಮವಿದ್ದು, ಸೀತೆಯು ತನ್ನ ಮಕ್ಕಳಿಗೆ ಜನ್ಮ ನೀಡಿದ್ದು ಇಲ್ಲೇ ಎನ್ನುವ ಪ್ರತೀತಿಯೂ ಇದೆ. ಇಂತಹ ರಾಷ್ಟ್ರದಲ್ಲಿ ಮೊಘಲರಾಗಲಿ, ಬ್ರಿಟಿಷರಾಗಲಿ ನೇಪಾಳದಲ್ಲಿರುವ ಹಿಂದೂ ಧರ್ಮವನ್ನೇ ಇವರಿಂದ ಕಿತ್ತೆಸೆಯಲಾಗಲಿಲ್ಲ!!

Image result for nepal mughals and british

ಭಾರತವು 18 ಹಾಗೂ 19 ನೇ ಶತಮಾನದಲ್ಲಿ ಬ್ರಿಟಿಷ್ ಹಾಗೂ ಮೊಘಲರ ಆಕ್ರಮಣಕ್ಕೆ ತುತ್ತಾಗಿದ್ದಂತಹ ಸಂದರ್ಭದಲ್ಲಿ, ನೇಪಾಳವು ಹಿಂದೂ ರಾಜಪ್ರಭುತ್ವವನ್ನೇ ಹೊಂದಿತ್ತು. ಇದು ಒಂದು ಸಣ್ಣ ಸಾಮ್ರಾಜ್ಯವಾಗಿದ್ದರೂ ಸಹ ತಾನು ಹಿಂದೂ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡು ಬಂದಿತ್ತು. ಈ ರಾಷ್ಟ್ರವು ಅನುಸರಿಸುವ ನಿಯಮಗಳು ಹಿಂದೂ ಧರ್ಮಗ್ರಂಥವನ್ನೇ ಆಧರಿಸಿತ್ತಲ್ಲದೇ 2008 ರವರೆಗೂ ಅದನ್ನೇ ಮುಂದುವರಿಸಿಕೊಂಡು ಬಂದಿದೆ. ನೇಪಾಳವು ಎಂದಿಗೂ ಮುಸ್ಲಿಂ ಆಕ್ರಮಣಕಾರರಿಂದ ಆಕ್ರಮಣಕ್ಕೊಳಗಾಗಿಲ್ಲ , ಬ್ರಿಟಿಷರು ನೇಪಾಳವನ್ನು ತನ್ನ ವಸಾಹತನ್ನಾಗಿ ಮಾಡಿಕೊಳ್ಳಲು ಬಯಸಿಕೊಂಡರೂ ಅದು ಸಾಧ್ಯವಾಗಿಲ್ಲ. ಇನ್ನು ಚೀನಾವಂತೂ ನೇಪಾಳವನ್ನು ಪ್ರವೇಶಿಸುವ ಧೈರ್ಯ ಕೂಡ ಮಾಡಿರಲಿಲ್ಲ.

ಹೌದು, ನೇಪಾಳವು ಹಿಂದೂ ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ದೇಶದ ಆಡಳಿತ ನಿಯಮವನ್ನು ನಿರ್ಮಾಣ ಮಾಡಿಕೊಂಡು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವುದರಿಂದಲೇ ಮುಸಲ್ಮಾನರು ಎಂದಿಗೂ ನೇಪಾಳದ ಕಡೆ ವಲಸೆಹೋಗುವ ಮೊಂಡು ಧೈರ್ಯ ಮಾಡಿರಲಿಲ್ಲ. ಇದು ಹಿಂದೂ ಧರ್ಮದ ಮೂಲತತ್ವವನ್ನು ನೇಪಾಳದ ಜನತೆಗೆ ಕಾಪಾಡಿಕೊಳ್ಳಲು ಹಾಗೂ ಹಿಂದು ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ನೆರವಾಯಿತು.

ನೇಪಾಳವು 2008 ರವರೆಗೆ ಹಿಂದೂ ದೇಶವಾಗಿ ಉಳಿದಿತ್ತೆಂದರೆ ಅದಕ್ಕೆ ಪ್ರಮುಖ ಕಾರಣವೂ ಇದೆ. ಅದೇನೆಂದರೆ, 1743-1775 ರ ಕಾಲಾವಧಿಯಲ್ಲಿ ರಾಜನಾಗಿದ್ದ ಪೃಥ್ವಿ ನಾರಾಯಣ ಷಾನು ತನ್ನ 20 ನೇ ವಯಸ್ಸಿನಲ್ಲಿ ಓರ್ವ ಹಿಂದೂ ದೊರೆಯಾಗಿ ಅಧಿಕಾರವನ್ನು ಕೈಗೆತ್ತಿಕೊಂಡಿದ್ದ. ಅಷ್ಟೇ ಅಲ್ಲದೇ, ನೇಪಾಳದಲ್ಲಿ ಹಿಂದುತ್ವವನ್ನು ಅನುಸರಿಸಿದ ಕೂಡ!! ಈತ ಭಾರತದ ಶಿವಾಜಿ ಹಾಗೂ ಮಹಾರಾಣ ಪ್ರತಾಪ್ ರಂತೆಯೇ ಮುಸಲ್ಮಾನ ಆಡಳಿತದ ವಿರುದ್ಧ ಹೋರಾಡಿದ ನೇಪಾಳದ ಏಕೈಕ ಹಿಂದೂ ರಾಜನಾಗಿದ್ದ!!

Related image

18ನೇ ಶತಮಾನದಲ್ಲಿ ಭಾರತದ ಉತ್ತರ ಪ್ರದೇಶದಲ್ಲಿ ಮುಸಲ್ಮಾನರು ದುರ್ಬಲರಾಗುತ್ತಿದ್ದರು. ಆ ಸಂದರ್ಭದಲ್ಲಿ ಭಾರತದ ಹೆಚ್ಚಿನ ಭೂ ಪ್ರದೇಶಗಳು ಮರಾಠರ ನಿಯಂತ್ರಣದಲ್ಲಿತ್ತು. ಆ ವೇಳೆ ಅಫ್ಘಾನಿಸ್ತಾನದ ಮುಸ್ಲಿಮರು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ 1761 ರಲ್ಲಿ ಮರಾಠರು ಮೂರನೇ ಪಾಣಿಪತ್ ಕದನದಲ್ಲಿ ಸೋಲನ್ನು ಅನುಭವಿಸಿದರು. ಇದೇ ಸಂದರ್ಭಕ್ಕೋಸ್ಕರನೇ ಹೊಂಚು ಹಾಕುತ್ತಿದ್ದ ಮುಸ್ಲಿಂ ಆಡಳಿತಗಾರರು ಹಿಮಾಲಯದ ಸಣ್ಣ-ಸಣ್ಣ ಹಿಂದೂ ಪ್ರದೇಶಗಳ ಮೇಲೆ ದಾಳಿಮಾಡತೊಡಗಿದರು. ಆ ದಾಳಿಕೋರರು ಹಿಂದೂ ದೇವಾಲಯಗಳನ್ನು ಲೂಟಿಮಾಡಿ ಅವನ್ನು ಕೆಡವಿ ನಾಶಮಾಡಿದರು.

ಈ ಮುಸ್ಲಿಂ ಆಡಳಿತಗಾರರ ಈ ದರ್ಪವನ್ನು ಇಳಿಸುವ ಸಲುವಾಗಿ ನೇಪಾಳದ ರಾಜ ಪೃಥ್ವಿ ನಾರಾಯಣ ಷಾ ರವರು, ಕೆಚ್ಚೆದೆಯ ಗೊರ್ಖಾಯೋಧರ ಬಲವಾದ ಸೈನ್ಯವನ್ನು ಹಿಮಾಲಯಕ್ಕೆ ಕಳುಹಿಸಿ ಮುಸ್ಲಿಂ ದಾಳಿಕೋರರಿಂದ ಅಲ್ಲಿನ ಹಿಂದೂ ಪ್ರದೇಶಗಳನ್ನು ರಕ್ಷಿಸಿದರು. ಹಾಗಾಗಿ ನೇಪಾಳವು ಹಿಂದೂ ದೇಶವಾಗಿಯೇ ಉಳಿದುಬಿಟ್ಟಿತ್ತಲ್ಲದೇ, ಮೊಘಲರೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳದೇ, ಮುಸ್ಲಿಂ ಆಡಳಿತಗಾರರ ಅಟ್ಟಹಾಸವನ್ನು ಹಿಮಾಲಯದಲ್ಲಿ ಮುರಿಯಲು ಸುಲಭವಾಗಿ ದಾರಿ ನಿರ್ಮಿಸಿಕೊಟ್ಟಿತು. ಅಷ್ಟೇ ಅಲ್ಲದೇ, ರಾಜ ಪೃಥ್ವಿ ನಾರಾಯಣ ಷಾನು ಆಧುನಿಕ ನೇಪಾಳದ ಅಡಿಪಾಯವನ್ನು ಭದ್ರಪಡಿಸಿಕೊಂಡಿದ್ದ ಕಾರಣ ಈತನಿಗೆ ನೇಪಾಳವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಯಿತು.

ಈತ ನೇಪಾಳದ ಸುತ್ತ ನಿರ್ಮಿಸಿದ ಭದ್ರತಾ ಗಡಿಯು ಬ್ರಿಟಿಷರಿಗೆ ನೇಪಾಳವನ್ನು ಪ್ರವೇಶಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಿಲ್ಲ. ಇದರಿಂದಾಗಿ ಈತನು ಹಿಂದೂ ಧರ್ಮ, ಸಂಸ್ಕತಿಯನ್ನು ತನ್ನ ಸಾಮ್ರಾಜ್ಯದಲ್ಲಿ ರಕ್ಷಿಸಲು ಸಾಧ್ಯವಾಯಿತು. ಇದಾದ ಕೆಲವೇ ತಿಂಗಳ ನಂತರ ರಾಜ ಪೃಥ್ವಿ ನಾರಾಯಣ ಮೃತಪಟ್ಟನು. ಈತನು ನೇಪಾಳ ಆಡಳಿತದ ಬಗ್ಗೆ ತನ್ನ ದಿವ್ಯ ಸಂದೇಶವನ್ನು ಈ ಮೊದಲೇ ದಾಖಲಿಸಿಕೊಂಡಿದ್ದು, ಇದರಲ್ಲಿ “ನೇಪಾಳವು ಹಿಂದು ರಾಷ್ಟ್ರವಾಗಿಯೇ ಉಳಿಯಬೇಕು, ಮೊಘಲರೊಂದಿಗೆ ಎಂದಿಗೂ ರಾಜಿಯಾಗುವಂತಿಲ್ಲ, ಅವರಿಗೆ ಯಾವುದೇ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸುವಂತಿಲ್ಲ” ಎಂದು ದಾಖಲಾಗಿತ್ತು. ಇದರಂತೆಯೇ ನೇಪಾಳದ ಜನತೆ ಈ ದಿವ್ಯವಾಣಿಯನ್ನು ತಮ್ಮ ಆಡಳಿತಾತ್ಮಕ ತತ್ವವಾಗಿ ಬಳಸಿದರು.

ಆದರೆ 19 ನೇ ಶತಮಾನದಲ್ಲಿ ನೇಪಾಳದ ರಾಜ ಬಹದ್ದೂರ್ ರಾಣಾ ಈ ದಿವ್ಯ ಸಂದೇಶವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದ, ಈ ಬದಲಾವಣೆಯು ನೇಪಾಳದ ಆಡಳಿತದ ದಿಕ್ಕನ್ನೇ ಬದಲಾಯಿಸಿತು. ಬಹದ್ದೂರ್ ರಾಣಾ ಈ ಸಂದೇಶದಲ್ಲಿ “ಮುಲ್ಕಿ ಐನ್”( ಭೂಮಿಯ ಕಾನೂನು) ಎಂಬ ಬದಲಾವಣೆಯನ್ನು ತಂದನು. ಈತನ 1853 ನೇ ನೇಪಾಳದ ಸಂಕೇತದ ಅನುಸಾರವಾಗಿ ಅಲ್ಲಿಯ ಮುಸ್ಲಿಂ ಅಲ್ಪಾಸಂಖ್ಯಾತರಿಗೆ ಭೂಮಿಯನ್ನು ಪಡೆಯುವ ಅಧಿಕಾರವನ್ನು ನೀಡಲಾಯಿತು. ನೇಪಾಳದಲ್ಲಿ ಮುಸ್ಲಿಮರಿಗೆ ಸಾಮಾಜಿಕ ಸ್ಥಾನಮಾನವನ್ನು ನೀಡಲಾಯಿತು. 1853 ರ ಸಂಕೇತದ ಪ್ರಕಾರ ಹಿಂದು ಗ್ರಂಥಗಳ ತತ್ವಕ್ಕೆ ಯಾವುದೇ ರೀತಿ ಧಕ್ಕೆ ಬಾರದಂತೆ ಮುಸ್ಲಿಮರು ನೇಪಾಳದಲ್ಲಿ ಸಾಮರಸ್ಯದಿಂದ ವಾಸಿಸುತ್ತಿದ್ದರು.

Image result for nepal mughals and british

1963 ರಲ್ಲಿ ರಾಜ ಮಹೇಂದ್ರ ನು 1853ರ ಸಂಕೇತವನ್ನು ಬದಲಿಸಿದರಲ್ಲದೇ ಇದರಲ್ಲಿ ಮುಸ್ಲಿಮರಿಗೂ ನೇಪಾಳದಲ್ಲಿ ಸಮಾನ ಪೌರತ್ವವನ್ನು ನೀಡಲಾಯಿತು. ಆದರೆ ಈತ ಮತಾಂತರ ಹಾಗೂ ವಿವಾಹ ಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಿಲ್ಲ, ಆದರೆ ನೇಪಾಳದಲ್ಲಿ ಮತಾಂತರವು ಶಿಕ್ಷಾರ್ಹ ಅಪರಾಧವಾಗಿತ್ತು. ತದನಂತರದ 1963 ರಲ್ಲಿ ನೇಪಾಳದಲ್ಲಿ ರಾಜಪ್ರಭುತ್ವವು ಕೊನೆಗೊಂಡ ನಂತರ ಮೊಟ್ಟ ಮೊದಲಬಾರಿಗೆ ಅಂದರೆ 2008 ರಲ್ಲಿ ಮುಸಲ್ಮಾನರ ಹಬ್ಬಕ್ಕೆ ಸರಕಾರವು ರಜೆ ಘೋಷಿಸಿತು. ಅಲ್ಲದೇ 1963 ರ ನೇಪಾಳದ ಈ ವಿಶ್ರಾಂತಿಯು ಮುಸಲ್ಮಾನರು ನೇಪಾಳದ ಕಡೆ ಹರಿದು ಬರಲು ಬಾಗಿಲು ತೆರೆದಿಟ್ಟಂತಾಯಿತು!! ಆದರೆ ಆ ವರದಿಯು ಸೂಚಿಸುವ ಪ್ರಕಾರ ಪಾಕಿಸ್ತಾನದ ಐ ಎಸ್ ಐ ತಂಡವು ಭಯೋತ್ಪಾದಕರನ್ನು ನೇಪಾಳದ ಮೂಲಕ ಭಾರತಕ್ಕೆ ಕಳುಹಿಸಲು ಎಡೆಮಾಡಿ ಕೊಟ್ಟಿತು. ಎನ್.ಜಿ.ಒ ಗಳು ನೇಪಾಳದಲ್ಲಿ ಮುಸಲ್ಮಾನರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದು, ಪ್ರಪಂಚದ ಉಳಿದ ಭಾಗಗಳಂತೆಯೇ ಇಲ್ಲಿಯು ಮುಸಲ್ಮಾನರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ಆದರೆ ನೇಪಾಳದ ಹಿಂದೂ ರಾಜನು, ಮುಸಲ್ಮಾನರು ತನ್ನ ದೇಶದ ಕಾನೂನನ್ನು ಪಾಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಓರ್ವ ಬಲಶಾಲಿ ಹಿಂದೂ ರಾಜ ಮುಸಲ್ಮಾನರು ಶರಿಯತ್ ಕಾನೂನನ್ನು ತಿರಸ್ಕರಿಸಿ ಹಿಂದು ನೀತಿ ತತ್ವವನ್ನು (ಒಂದೇ ಭೂಮಿ, ಒಂದೇ ಕಾನೂನು) ಪಾಲಿಸುವಂತೆ ಮಾಡಬಹುದು ಎಂಬುವುದಕ್ಕೆ ಹಿಂದೂ ರಾಷ್ಟ್ರವಾದ ನೇಪಾಳದ ಹಿಂದೂ ರಾಜರುಗಳೇ ಸಾಕ್ಷಿ.. ಹಾಗಾದರೆ ನಮ್ಮ ಭಾರತದಲ್ಲಿ ಈ ರೀತಿಯ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲವೇ ???.. ಹಿಂದು ರಾಷ್ಟ್ರವಾದ ಭಾರತ ಹಿಂದೂ ರಾಷ್ಟ್ರವಾಗಿಯೇ ಮೆರೆಯುವುದಾದರೂ ಯಾವಾಗ?!!

ಅಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಬಹುಸಂಖ್ಯೆಯ ಹಿಂದೂಗಳೇ ತುಂಬಿದ್ದ ನೇಪಾಳ ನಮ್ಮೊಂದಿಗೆ ವಿಲೀನವಾಗಬೇಕೆಂದು ತುದಿಗಾಲಲ್ಲಿ ನಿಂತಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾಗಿದ್ದ ಕೆ.ಎಸ್ ಸುದರ್ಶನ್ ರವರು ಹೇಳುವ ಪ್ರಕಾರ ಅವರ ಬೇಡಿಕೆಯನ್ನು ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರು ನಿರಾಕರಿಸಿದ್ದರು. “ಸ್ವಾತಂತ್ರ್ಯ ಸಿಕ್ಕ ತಕ್ಷಣದಲ್ಲಿ ನೇಪಾಳದ ಪ್ರಧಾನಿಯಾಗಿದ್ದ ಮಾತೃಕಾ ಪ್ರಸಾದ್ ಕೊಯಿರಾಲ ಅವರು ತಮ್ಮ ರಾಷ್ಟ್ರವಾದ ನೇಪಾಳವನ್ನು ಭಾರತದೊಡನೆ ವಿಲೀನಗೊಳಿಸುವಂತೆ ನೆಹರೂ ಅವರಲ್ಲಿ ಕೇಳಿಕೊಂಡಿದ್ದರು” ಎಂಬುದಾಗಿ 2008 ರಲ್ಲಿ ನಡೆದ ಒಂದು ಸಭೆಯಲ್ಲಿ ಉಲ್ಲೇಖಿಸಿದ್ದರು!! ನೇಪಾಳ ಕೇವಲ ಒಂದು ಬಾರಿಯಲ್ಲದೆ 2 ಬಾರಿ ಭಾರತದ ಜೊತೆ ವಿಲೀನವಾಗಲು ಪರಿಪರಿಯಾಗಿ ಬೇಡಿತ್ತು. ಆದರೆ ಖಡಾಖಂಡಿತಾವಾಗಿ ಇದನ್ನು ನೆಹರೂ ತಿರಸ್ಕರಿಸಿದರು. ಒಂದುವೇಳೆ ವಿಲೀನಗೊಂಡಿದ್ದಿದ್ದರೆ ಭಾರತ ಇಂದು ಹಿಂದೂ ರಾಷ್ಟ್ರವಾಗಿ ಮೆರೆಯುತ್ತಿತ್ತು ಎನ್ನುವುದು ಅಕ್ಷರಶಃ ನಿಜ!!

ಮೂಲ: postcard.news

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close