ಅಂಕಣದೇಶಪ್ರಚಲಿತ

ಹೆಚ್ಚು ಹೆಚ್ಚು ಪಾಶ್ಚಿಮಾತ್ಯರು ಹಿಂದೂ ಧರ್ಮಕ್ಕೆ ಆಕರ್ಷಿತರಾಗುತ್ತಿರುವುದು ಯಾಕೆ?

ಜಗತ್ತಿನಲ್ಲಿ ಅನೇಕ ಸಮಸ್ಯೆಗಳಿಗೆ ಇವತ್ತಿನವರೆಗೂ ಯಾವುದೇ ರೀತಿಯ ಉತ್ತರ ಸಿಕ್ಕಿಲ್ಲ. ಆದರೆ ಜಗತ್ತು ಬೆಳೆಯುವುದು ಮಾತ್ರ ನಿಂತಿಲ್ಲ. ಏಕೆಂದರೆ ಕಾಡುವ ಶಕ್ತಿಗಳಿಗಿಂತ ಕಾಪಾಡುವ ಶಕ್ತಿ ಬಲಿಷ್ಠವಾಗಿರುತ್ತೆ ಅನ್ನೋದು ಕೆಲವರ ನಂಬಿಕೆ.

ಈ ನಂಬಿಕೆ ಎನ್ನುವ ಪ್ರಬಲ ಶಕ್ತಿಯಲ್ಲಿ ದೇವರು ಎನ್ನುವ ಅಂಶ ಎದ್ದು ಕಾಣುತ್ತೆ. ದೇವರಲ್ಲಿರುವ ಅಗಾಧವಾದ ಶಕ್ತಿ ಎಂಥವರನ್ನೂ ಕೂಡ ತನ್ನೆಡೆಗೆ ಸೆಳೆಯುವಂತೆ ಮಾಡುತ್ತೆ. ಅಲ್ಲದೇ ಅದೆಷ್ಟೋ ದೈವಿಕ ಶಕ್ತಿಗಳು ತನ್ನೆಡೆಗೆ ಸೆಳೆಯುವಲ್ಲಿ ಕಾರಣಕರ್ತರಾಗಿರುತ್ತಾರೆ ಕೂಡ!!!

ಯಾಕಂದರೆ ಒಬ್ಬ ಮನುಷ್ಯ ಅಮೇರಿಕಾದಲ್ಲೇ ಹುಟ್ಟಲಿ ಅಥವಾ ಭಾರತದಲ್ಲೇ ಹುಟ್ಟಲಿ ಅಥವಾ ವಿಶ್ವದ ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಹುಟ್ಟಲಿ ಆದರೆ ದೇವರ ಶಕ್ತಿಯ ಮುಂದೆ ಯಾವುದೂ ಕೂಡ ಗಣನೆಗೆ ಬರುವುದಿಲ್ಲ. ದೈವಿ ಶಕ್ರೀಯೇ ಅಂತಹುದು! ಪ್ರಪಂಚದ ಯಾವುದೇ ಒಬ್ಬ ವ್ಯಕ್ತಿ ದೇವರ ಸಾಕ್ಷಾತ್ಕರ ಪಡೆದಿರಲಿ ಅಥವಾ ಪಡೆಯದೇ ಇರಲಿ ಅಥವಾ ದೇವರನ್ನು ನಂಬಲಿ, ಬಿಡಲಿ…ಆತ ಆಸ್ತಿಕ ನಾಸ್ತಿಕನೇ ಆಗಿರಲಿ… ಆದರೆ ಅವರೆಲ್ಲರ ಮಾತಿನಲ್ಲಿ ದೇವರು ಎನ್ನುವ ಪದ ಇದ್ದೇ ಇರುತ್ತೇ.

ಆಸ್ತಿಕ ಬಗ್ಗೆ ಹೇಳುವುದಾದರೇ ಅವರಿಗೆ ದೇವರು ಸರ್ವಾಂತರ್ಯಾಮಿ !!! ಸರ್ವಶಕ್ತನಾದ ದೇವರು ಆಸ್ತಿಕರ ಪಾಲಿಗೆ ಅವರರವ ಧರ್ಮಾನುಸಾರವಾಗಿ ವಿಷ್ಣು, ಅಲ್ಲ, ಏಸು, ಬುದ್ಧ ಹೀಗೆ ನಾನಾ ದೇವತೆಗಳನ್ನು ಪೂಜಿಸುವ ಪಂಗಡ ಈ ಜಗತ್ತಿನಲ್ಲಿದೆ.

ಧರ್ಮಾನುಸಾರವಾಗಿ ಧರ್ಮದ ಸಾರವನ್ನು ಜಗತ್ತಿನಡೆಗೆ ಸಾರುವ ಧರ್ಮಗ್ರಂಥಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಕೂಡ!! ಮುಸಲ್ಮಾನರ ಕುರಾನ್, ಕ್ರಿಶ್ಚಿಯನ್ನರ ಬೈಬಲ್ ಗ್ರಂಥಗಳು ಅವರಿಗೆ ಮೂಲಗ್ರಂಥಗಳಾದರೆ, ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ವೇದ, ಉಪನಿಷತ್, ಮಹಾಪುರಾಣಗಳು ಹೀಗೆ ಹತ್ತು ಹಲವಾರು ಧರ್ಮಗ್ರಂಥಗಳಿವೆ.

ಮುಸ್ಲಿಂಮರ ಕುರಾನ್ ಗ್ರಂಥವನ್ನು ಮಹಮ್ಮದ್ 609 ಸಿಇ (ಇಸ್ಲಾಂ ಯುಗದ ಪ್ರಕಾರ)ಯಲ್ಲಿ ಬರೆದಿದ್ದರೆ, ಬೈಬಲ್ ವಿದ್ವಾಸಂರ ಪ್ರಕಾರ ಬೈಬಲ್‍ನ್ನು ಏಳನೇ ಶತಮಾನದಲ್ಲಿ ಬರೆದಿರಬಹುದೆಂದು ಹೇಳುತ್ತಾರೆ. ಆದರೆ ಈ ಎರಡು ಧರ್ಮಗ್ರಂಥಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಸಿದ್ಧಾಂತಗಳನ್ನು ಬದಲಾಯಿಸಲಾಗಿದೆ ಕೂಡ.

ಯಾಕಂದರೆ ‘ಬಹುಪತ್ನಿತ್ವ’ ಪದ್ಧತಿಯನ್ನು ಮಹಮ್ಮದ್ ತಮ್ಮ ಗ್ರಂಥದಲ್ಲಿ ನಿರ್ಧಿಷ್ಟಪಡಿಸಿದ್ದಲ್ಲದೇ ಒಬ್ಬ ಮುಸಲ್ಮಾನ ನಾಲ್ಕು ಮದುವೆಯನ್ನು ಆಗಬಹುದು ಮಾತ್ರವಲ್ಲದೇ ತನ್ನ ಐದನೇ ಮದುವೆಯನ್ನು ತನ್ನ ಸೊಸೆಯೊಂದಿಗೆ ಆಗಬಹುದು ಎಂದು ಕುರಾನ್‍ನ ಕೆಲವು ಸಾಲುಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಬೈಬಲ್ ಗ್ರಂಥದಲ್ಲಿ ಸಂಶೋಧಕರು ಪತ್ತೆಹಚ್ಚಿದ ಪ್ರಕಾರ ಅನೇಕ ಗೊಂದಲಗಳು, ತೊಡಕುಗಳು ಹಾಗೂ ಪುನಾರಾವರ್ತನೆಗಳು ಕಂಡು ಬಂದಿದೆ ಎಂದು ಹೇಳುತ್ತಾರೆ.

ಹಿಂದೂ ಧರ್ಮ ಪ್ರಾಚೀನ ಯುಗದಿಂದಲೇ ಇದ್ದ ಧರ್ಮ ಎನ್ನುವುದು ಈ ವಿಶ್ವದ ನಂಬಿಕೆ. ಹಿಂದೂ ಧರ್ಮದ ಗ್ರಂಥಗಳಾದ ವೇದ, ಉಪನಿಷತ್ ಮತ್ತು ಪುರಾಣಗಳು ಬಹಳ ಪುರಾತನವಾದದ್ದು. ಹಿಂದೂ ಧರ್ಮ ಮತ್ತು ದೈವಿಕ ಗ್ರಂಥಗಳು, ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಬೇಕಾದಂತಹ ಮಾರ್ಗಗಳನ್ನು ಕಲಿಸಿಕೊಟ್ಟಿದೆ. ಅಲ್ಲದೇ ಪುರಾಣ ಗ್ರಂಥದಲ್ಲಿರುವ ತತ್ವಜ್ಞಾನ ಹಿಂದೂ ಧರ್ಮದ ಸಾರವನ್ನು ಹೇಳುತ್ತದೆ.

ಕ್ರಿಶ್ಚಿಯನ್ ಮಿಷನರಿಗಳು ಎಷ್ಟೋ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವಲ್ಲಿ ತಮ್ಮ ಸಮಯವನ್ನು ಕಳೆಯುತ್ತಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಇದರಿಂದ ತಮ್ಮ ಧರ್ಮದ ಸಾರವನ್ನೇ ಮರೆತು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂಧರ ಮಾಡುವ ವಿಚಾರದಲ್ಲಿ, ಧರ್ಮದ ಸಾರದ ಪ್ರಮಾಣವನ್ನೇ ಕೆಲಮಟ್ಟಕ್ಕೆ ತರುತ್ತಿದೆ ಎಂದರೆ ಧರ್ಮಕ್ಕಿಂತ ಮತಾಂತರ ಮಾಡುವುದೇ ಹೆಚ್ಚು ಎಂದೆನಿಸಿದೆ.

ಕ್ರಿಶ್ಚಿಯನ್ನರು ತಮ್ಮ ಧರ್ಮದಲ್ಲಿ, ಆಡನ್ ಮತ್ತು ಈವ್‍ನಿಂದ ಪ್ರಾರಂಭವಾದ ಮತಾಂಧರಗೊಳ್ಳುವಿಕೆ, ಪಾಪ ಅಥವಾ ಪೂರ್ವಿಕಪಾಪಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತೆ ಎನ್ನುವ ಕಾರಣವನ್ನು ಹಿಡಿದುಕೊಂಡು ತಮ್ಮ ಧರ್ಮಕ್ಕೆ ಜನರನ್ನು ಸೆಳೆಯುವಲ್ಲಿ ಕಾರಣಕರ್ತರಾಗಿದ್ದಾರೆ. ಅದಲ್ಲದೇ ಚರ್ಚ್‍ಗೆ ಹಾಜರಾಗುವವರು ಸ್ವರ್ಗದೊಂದಿಗೆ ದೇವರ ಪ್ರೀತಿಯನ್ನು ಪಡೆಯುತ್ತಾರೆ ಎಂದು ಬೈಬಲ್ ಜನರನ್ನು ತನ್ನತ್ತ ಪ್ರಚೋದಿಸುತ್ತದೆ. ಅಷ್ಟೇ ಅಲ್ಲದೇ ಯಾರು ಇದನ್ನೆಲ್ಲ ನಂಬುವುದಿಲ್ಲವೋ ಅವರು ಬೈಬಲ್‍ನ ಪ್ರಕಾರ ನರಕವನ್ನು ಕಾಣುತ್ತಾರೆ. ಕ್ರಿಶಿಯನ್ ಧರ್ಮ ಪುನರ್‍ಜನ್ಮದ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಬದಲಾಗಿ ತಮ್ಮ ಜೀವಿತಾವಧಿಯಲ್ಲಿ ಚರ್ಚ್‍ಗೆ ಭೇಟಿ ನೀಡಿದರೆ ನರಕದಿಂದ ಮುಕ್ತರಾಗಿ ಸ್ವರ್ಗವನ್ನು ಕಾಣುತ್ತೀರಿ ಎಂದು ಹೇಳುತ್ತೆ.

ಹಿಂದೂ ಧರ್ಮದ ತತ್ವಜ್ಞಾನ ಈಡೀ ಬ್ರಹ್ಮಾಂಡವನ್ನು ಜ್ಞಾನೋದಯ ಪಡಿಸುವುದಲ್ಲದೇ, ಸನಾತನ ಧರ್ಮವನ್ನು ಎತ್ತಿ ಹಿಡಿದೆ. ಸಂಸ್ಕೃತದ ಮಾತಿನ ಪ್ರಕಾರ ಸೃಷ್ಠಿ ಮತ್ತು ಲಯ ಎನ್ನುವುದು ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದು, ಹುಟ್ಟು ಮತ್ತು ಸಾವು ಪ್ರತಿಯೊಬ್ಬರಿಗೂ ನಿಶ್ಚಿತ!! ಅಲ್ಲದೇ ಆತ್ಮಕ್ಕೆ ಸಾವಿಲ್ಲ ಅದರೊಂದಿಗೆ ಪುನರ್‍ಜನ್ಮದ ಬಗ್ಗೆ ಸಾಕಷ್ಟು ನಂಬಿಕೆಯನ್ನು ಹೊತ್ತಿದೆ ಹಿಂದೂ ಧರ್ಮ. ಅಗಾಧ ಶಕ್ತಿ ಹೊಂದಿರುವ ವಿಷ್ಣುವಿನ ಬಗ್ಗೆ ವಿಷ್ಣು ಅವತಾರಗಳ ಬಗ್ಗೆ ಬಹಳ ನಂಬಿಕೆಯನ್ನು ಹೊತ್ತಿರುವುದಲ್ಲದೇ ಧರ್ಮದ ಸಾರದಲ್ಲಿ ಆತ್ಮ ಎನ್ನುವುದಕ್ಕೆ ಸಾವಿಲ್ಲ. ಸತ್ತ ಮನುಷ್ಯನ ಆತ್ಮ ಇನ್ನೊಂದು ಆತ್ಮವನ್ನು ಸೇರುತ್ತೆ. ಅದು ಹೇಗೆಂದರೆ ಒಬ್ಬ ಮನುಷ್ಯ ತನ್ನ ಕೊಳೆಯಾದ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯನ್ನು ಹಾಕಿದಂತೆ, ನಮ್ಮ ಆತ್ಮ ಒಂದು ಶರೀರದಿಂದ ಮುಕ್ತಿ ಪಡೆದು ಇನ್ನೊಂದು ಹೊಸ ಜನ್ಮವನ್ನು ಪಡೆಯುತ್ತೆ ಅನ್ನೋದು ಇದರ ಅರ್ಥ.
ಪುರಾಣಗಳು, ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು. ಪುರಾಣಗಳಲ್ಲಿ ಮಹಾ ಪುರಾಣವೆಂದೂ, ಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ್ತು ರಾಮಾಯಣಗಳು ಮಹಾಕಾವ್ಯಗಳು, ಹಾಗಾಗಿ ಇವು ಪುರಾಣಗಳಲ್ಲಿ ಸೇರಿಲ್ಲ, ಬದಲಾಗಿ ಮಹಾನ್ ಗ್ರಂಥಗಳೆಂದು ಕರೆಯಲ್ಪಟ್ಟಿದೆ.
“ಕರ್ಮ”ದ ಸಾಹಿತ್ಯಿಕ ಅರ್ಥವೆಂದರೆ “ಕೆಲಸ” ಅಥವಾ “ಕ್ರಿಯೆ”, ಮತ್ತು ವಿಶಾಲವಾಗಿ ವಿಶ್ವವ್ಯಾಪಿ ತತ್ವದ ಮೂಲಕ ಹೇಳುವುದಾದರೆ ಕಾರ್ಯ ಮತ್ತು ಪರಿಣಾಮವಾಗಿದ್ದು, ಕ್ರಿಯೆ ಮತ್ತು ಪ್ರತಿಕ್ರಿಯೆ, ಇದು ಹಿಂದೂ ನಂಬಿಕೆಯ ಪ್ರಕಾರ ಎಲ್ಲಾ ಅರಿವನ್ನು ಆಳುತ್ತದೆ.

ಕರ್ಮವು ವಿಧಿಲಿಖಿತವಲ್ಲ, ಮಾನವನು ಶುದ್ಧ ಮನಸ್ಸಿನಿಂದ ಮಾಡಿದ ಕಾರ್ಯವು ಆತನ ಗಮ್ಯವನ್ನು ನಿರ್ಧರಿಸುತ್ತದೆ. ವೇದಗಳ ಪ್ರಕಾರ ಒಳ್ಳೆಯತನವನ್ನು ಬಿತ್ತಿದರೆ ನಾವು ನಾವು ಒಳ್ಳೆಯದನ್ನು ಕೊಯ್ಯುತ್ತೇವೆ, ನಾವು ಕೆಟ್ಟದ್ದನ್ನು ಬಯಸಿದರೆ ಕೆಟ್ಟದ್ದನ್ನೇ ಪಡೆಯುತ್ತೇವೆ. ಕರ್ಮವು ಈ ಮತ್ತು ಹಿಂದಿನ ಜನ್ಮಗಳಲ್ಲಿ ಮಾಡಿದ ನಮ್ಮ ಪೂರ್ಣ ಕ್ರಿಯೆಗಳು ಮತ್ತು ಅವುಗಳಿಂದಾದ ಪ್ರತಿಕ್ರಿಯೆಗಳ ಪೂರ್ಣಾಂಶವಾಗಿರುತ್ತದೆ, ಮತ್ತು ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.

ಹಿಂದೂ ಧರ್ಮದ ಸಾರವನ್ನು ಅರಿತ ಅದೆಷ್ಟೊ ವಿದೇಶಿಗರು ಹಿಂದೂ ಧರ್ಮಕ್ಕೆ ಆಕರ್ಷಿತರಾಗಿರುವುದೇ ವಿಶೇಷ. ಅಲ್ಲದೇ ವಿದೇಶಿಗರು ಹಿಂದೂ ಧರ್ಮಕ್ಕೆ ಆಕರ್ಷಿತರಾಗಿದ್ದೇ ಯೋಗ, ಜ್ಞಾನ, ಆರ್ಯುವೇದಕ್ಕೆ!!!

ಹೌದು… ಹಿಂದೂ ಧರ್ಮ ಈಡೀ ವಿಶ್ವದ ಮೂಲೆ ಮೂಲೆಗಳಿಗೆ ಪರಿಚಿತವಾಗಿದೆ ಎಂದರೆ ಹಿಂದೂ ಧರ್ಮದಲ್ಲಿರುವ ಶ್ರೀಮಂತಿಕೆ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ಸೂಚಿಸುತ್ತದೆ. ಈಗಾಗಲೇ ಸಾಕಷ್ಟು ವಿದೇಶಿಗರು ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದಾರಲ್ಲದೇ ಭಾರತೀಯ ಆಚಾಋ ವಿಚಾರಗಳನ್ನು ಪಾಲಿಸುತ್ತಿರುವುದು ಅಚ್ಚರಿಯ ಸಂಗತಿ.

200 ಮಿಲಿಯನ್‍ಗಿಂತಲೂ ಹೆಚ್ಚಿನ ಯೋಗ ಪಟುಗಳು ವಿಶ್ವದ ಮೂಲೆಮೂಲೆಯಲ್ಲಿದ್ದು, ಯೋಗದ ಬಗೆಗಿರುವ ಅಪಾರವಾದ ಜ್ಞಾನವನ್ನು ಸಾರುತ್ತಿರುವುದು ಇನ್ನೂ ವಿಶೇಷ. ಅಲ್ಲದೇ ಹಿಂದೂ ಧರ್ಮದ ಪರಿಕಲ್ಪನೆಯನ್ನು ತನ್ನೊಂದಿಗೆ ಅಳವಡಿಸಿಕೊಂಡಿರುವ ಯೋಗದಿಂದ ಮನಸ್ಸು ಮತ್ತು ದೇಹಕ್ಕೆ ಆಗುವ ಲಾಭಗಳು ಅನೇಕ!! ಅಲ್ಲದೇ ಆರ್ಯುವೇದದ ಬಗ್ಗೆ ಇಡೀ ವಿಶ್ವವೇ ತಲೆಬಾಗಿದೆ ಎಂದರೆ ಹಿಂದೂ ಧರ್ಮದ ಆಳವನ್ನು ತಿಳಿಯಲು ಅಸಾಧ್ಯ. ವಿಷ್ಣುವಿನ ದಶವತಾರಗಳಲ್ಲಿ ಒಂದಾದ ಧನ್ವಂತರಿಯ ಅವತಾರ ಆಯುರ್ವೇದ ಪರಿಚಯಿಸಿದೆ ಎಂದು ಪುರಾಣಗಳು ಹೇಳುತ್ತೆ.

ಸಸ್ಯಹಾರ ಪದ್ಧತಿಯು ಪಶ್ಚಿಮದಲ್ಲಿ ಜಗತ್‍ಪ್ರಸಿದ್ಧಿಯನ್ನು ಪಡೆದಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುವ ಸಸ್ಯಹಾರಿಗಳು ತಮ್ಮ ಆಹಾರ ಪದ್ಧತಿಯನ್ನು ಕ್ರಮವಾಗಿ ನೋಡಿಕೊಳ್ಳುತ್ತಾರೆ ಕೂಡ. ಹಾಗಾಗಿ “ಗೋ ಗ್ರೀನ್, ಗೋ ವೆಜಿಟೇರಿಯನ್” ಎನ್ನುವುದು ಪಶ್ಚಿಮ ದೇಶಗಳಲ್ಲಿ ಇತ್ತೀಚಿಗೆ ಇರುವ ಟ್ರೆಂಡ್.

ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ಇಸ್ಕಾನ್(ಇಂಟರ್‍ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾಂಸಿಯಸ್‍ನೆಸ್) ಇದೀಗ ಕೃಷ್ಣನ ಸಿದ್ಧಾಂತದ ಬಗ್ಗೆ ವಿಶ್ವದೆಲ್ಲೆಡೆ ಪಸರಿಸಿದ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ. ಇಲ್ಲಿ ಭಗವದ್ಗೀತೆಯ ಬೋಧನೆಗಳು ನಡೆಯುತ್ತಿದ್ದು, “ಹರೇ ಕೃಷ್ಣ” ಎನ್ನುವ ದೇವರ ಭಜನೆಗಳು, ಭಕ್ತಿ ಮಾರ್ಗದ ಮೂಲಕ ಭಕ್ತರ ಮನಸ್ಸಿನಲ್ಲಿ ಭಕ್ತಿಯ ಭಾವನೆಗಳನ್ನು ಉಂಟುಮಾಡುತ್ತಿದೆ. ಅಮೇರಿಕಾ, ಇಂಗ್ಲೆಂಡ್, ಆಫ್ರಿಕಾ, ರಷ್ಯಾ, ಚೀನಾ ಹೀಗೆ ವಿಶ್ವದ ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ ಇಸ್ಕಾನ್. ವಿಷ್ಣುವಿನ ಅವತಾರದಲ್ಲಿ ಒಂದಾದ ಕೃಷ್ಣನಿಗೆ ಭಕ್ತರ ಸಾಗರವೇ ಇರುವುದು ಮಾತ್ರ ಸತ್ಯ.

ಎಲ್ಲಾ ಭಾಷೆಗಳ ಮೂಲವೇ ಸಂಸ್ಕೃತ. ಹಿಂದೂ ಧರ್ಮದಲ್ಲಿರುವ ಎಲ್ಲಾ ಗ್ರಂಥಗಳು ಸಂಸ್ಕೃತದ ನೆಲೆಯಲ್ಲಿ ಉದಯಿಸಿದ ಗ್ರಂಥಗಳಾಗಿವೆ. ಇದರಲ್ಲಿರುವ ಅಭೂತಪೂರ್ವವಾದ ಮಾಹಿತಿ ಎಲ್ಲವೂ ಅದ್ಭುತ. ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ಅರ್ಥಶಾಸ್ತ್ರ ಎಲ್ಲವನ್ನೂ ಒಳಗೊಂಡಿದೆ ಹಿಂದೂ ಧರ್ಮ ಗ್ರಂಥಗಳು. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು ಸಂಸ್ಕೃತವನ್ನು ಬೋಧಿಸುತ್ತೆ ಎಂದರೆ ಸಂಸ್ಕೃತದಲ್ಲಿ, ಹಿಂದೂ ಧರ್ಮದಲ್ಲಿರುವ ಅಪಾರದ ಜ್ಞಾನ ಮತ್ತೆಲ್ಲೂ ಸಿಗಲು ಸಾಧ್ಯವೇ ಇಲ್ಲ ಬಿಡಿ.

ಹಿಂದೂ ಧರ್ಮದಲ್ಲಿರುವ ಹಬ್ಬಗಳು, ಕಲೆ, ಸಂಸ್ಕೃತಿಗಳು ನೆಲೆಗೊಂಡತಂಹ ಪವಿತ್ರವಾದ ಧರ್ಮ. ಅದಲ್ಲದೇ ಎಲ್ಲವೂ ಪ್ರಕೃತಿ ಮತ್ತು ವೈಜ್ಞಾನಿಕ ಕಾರಣಗಳಿಗೆ ಸಂಬಂಧಿಸಿದಂತಹ ಆಚರಣೆಗಳಾಗಿವೆ. ಹಿಂದೂ ಧರ್ಮದಲ್ಲಿ ಜ್ಞಾನವು ಆಚರಣೆಗಳಿಗಿಂತ ಮಿಗಿಲಾಗಿದೆ. ಕರ್ಮ ಸಿದ್ಧಾಂತ ಮತ್ತು ಜ್ಞಾನ ಸಿದ್ಧಾಂತಗಳು ಹಿಂದೂ
ಧರ್ಮದಲ್ಲಿ ಆಚರಣೆಯಲ್ಲಿದೆ.

ಸ್ವಾಮಿ ವಿವೇಕಾನಂದರ ಬಗ್ಗೆ ಹೇಳುವುದಾದರೆ, ಧರ್ಮದ ಸಾರವನ್ನು ದೇಶದುದ್ದಕ್ಕೂ ಸಾರಿದ ಮಹಾನ್ ಜ್ಞಾನಿ. 1893ರ ಚಿಕಾಗೋದಲ್ಲಿ ನಡೆದ ಅಧಿವೇಶದಲ್ಲಿ ಸ್ವಾಮಿ ವಿವೇಕಾನಂದರ ಭಾಷಣವನ್ನು ಕೇಳಿದ ಅದೆಷ್ಟೋ ಜನ, ಹಿಂದೂ ಸಂಸ್ಕೃತಿಗೆ ಮಾರುಹೋಗಿದ್ದಲ್ಲದೇ ಹಿಂದೂ ಧರ್ಮವನ್ನು ಪಾಲಿಸಿದ ಅದೆಷ್ಟೋ ಸಂಗತಿಗಳು ಆ ಸಮಯದಲ್ಲಿ ನಡೆದಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮವಾಗಿದೆ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವು ವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಟ್ಟಿದೆ. ಇಂತಹ ಪವಿತ್ರವಾದ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು ಎನ್ನುವುದಕ್ಕೆ ಎರಡು ಮಾತಿಲ್ಲ.

 

– ಸರಿತಾ***

Tags

Related Articles

FOR DAILY ALERTS
 
FOR DAILY ALERTS
 
Close