ಅಂಕಣದೇಶಪ್ರಚಲಿತರಾಜ್ಯ

ಅಷ್ಟಕ್ಕೂ, ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಗೇಕೆ ಪ್ರಧಾನಿ ಮೋದಿಯನ್ನು ಕಂಡರೆ ಮೈ ಉರಿ ಗೊತ್ತಾ?!

ಇದೊಂಥರಾ ಹುಚ್ಚು ಎನ್ನಿಸಬಹುದೇನೋ! ಆದರೆ, ನಂಬಿ! ಇದಕ್ಕಿಂತ ಬೇರೆ ಯಾವ ಕಾರಣಗಳೂ ತೃಪ್ತಿ ತರಲಾರವು! ಈಗೀಗ ನಡೆಯುತ್ತಿರುವ ರಾಜಕೀಯ ಹುನ್ಬಾರಗಳೆಲ್ಲ, ಒಬ್ಬ ಸಾಮಾನ್ಯ ಮನುಷ್ಯನಿಗೆ ತಲೆಕೆಡಿಸಿದರೆ, ಸ್ವಲ್ಪ ಲಾಜಿಕ್ಕಿಟ್ಟುಕೊಂಡು ವಿಚಾರ ಮಾಡುವವನಿಗೆ ಒಂತರಾ ಹಾಸ್ಯಾಸ್ಪದ ಎನ್ನಿಸಿಬಿಡುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ! ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ವಿಷಯ ಬಂದಾಗ, ಮೊದಲನೆಯದಾಗಿ ‘ಮಾನವ ಸಹಜ” ರೂಪಿಗೆ ನೆನಪಿಗೆ ಬರುವುದು ಶಿಸ್ತು, ರಾಷ್ಟ್ರಭಕ್ತಿ ಮತ್ತು ಅಭಿವೃದ್ಧಿ ಧ್ಯೇಯ! ಆದರೇನು ಮಾಡುವುದು ಹೇಳಿ?! ಮೋದಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ, ಉರಿಸಿಕೊಂಡು ಬರ್ನಾಲ್ ಹಚ್ಚುತ್ತಲೇ ಬರುತ್ತಿರುವ ಕೆಲ ಅಡ್ಡನಾಡಿಗಳು ನಾಟಕಕ್ಕಿಟ್ಟುಕೊಂಡಿದ್ದಾರೆನ್ನುವುದು ಇನ್ನೂ ಹಾಸ್ಯಾಸ್ಪದ!

ರಾಹುಲ್ ಗಾಂಧಿಯಿಂದ ರಮ್ಯಾಳವರೆಗೆ, ಲಾಲೂ ಪ್ರಸಾದ್ ರಿಂದ ಕೇಜ್ರಿವಾಲ್ ವರೆಗೆ,. ಹೀಗೆ ಮೋದಿ ವಿರೋಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದಷ್ಟೇ! ಅದಕ್ಕೆ, ತೀರಾ ಇತ್ತೀಚೆಗೆ ಸೇರ್ಪಡೆ ಗೊಂಡ ಅತ್ಯದ್ಭುತ ನಟನೆನ್ನಿಸಿಕೊಂಡಿದ್ದ ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಅಲಿಯಾಸ್ ರೈ! ಸರಿಯಾಗಿಯೇ ಇದೆ ನಿಮ್ಮ ಯೋಚನೆ! ಎರಡು ತಲೆ ಹಾವು! ಈ ಹಾವೊಂದು ಬುಸುಗುಡುತ್ತಾ ಕಚ್ಚಲು ಪ್ರಾರಂಭಿಸಿದ್ದು ಪತ್ರಕರ್ತೆ (?) ಮತ್ತು ಎಡಪಂಥೀಯ ವಿಚಾರವಾದಿಯಾಗಿದ್ದ ಗೌರೀ ಲಂಕೇಶ್ ಹತ್ಯೆಯಾದಾಗಿನಿಂದ! ಅಲ್ಲಿಂದ ಪ್ರಾರಂಭವಾಗಿದ್ದ ಬುಸುಗುಡುವಿಕೆ, ಮೋದಿ ಮತ್ತು ಯೋಗಿ ಆದಿತ್ಯನಾಥ್ ರನ್ನು ನಟರೆಂದು ಕರೆಯುಗ ತನಕವೂ ಎಳೆದುಕೊಂಡು ಹೋಗಿದ್ದಲ್ಲದೇ, ಹಾವು ಕಂಡಲ್ಲಿ ಕಲ್ಲು ಬೀಸತೊಡಗಿದ್ದರು ಜನ! ಸಾಮಾಜಿಕ ಜಾಲತಾಣದಲ್ಲೆಂತೂ, ಹಾವಿಗೆ ಬಿದ್ದ ಹೊಡೆತಕ್ಕೆ ಪೆಟ್ಟಾದರೂ ಬುಸುಗುಡುವುದು ಮಾತ್ರ ಮುಂದುವರೆದಿತ್ತು ಬಿಡಿ!

ಯಾವತ್ತೂ ಇಲ್ಲದಿದ್ದ ಈ ಹಾವು, ಇದ್ದಕ್ಕಿದ್ದ ಹಾಗೆ ಬೆಡ್ ರೂಮಿನಿಂದ ತಪ್ಪಿಸಿಕೊಂಡು ಬಂದದ್ಯಾಕೆ ಎಂಬುದೇ ಗೊತ್ತಾಗಲಿಲ್ಲ! ಇಡೀ ಭಾರತವನ್ನೇ ಅಭಿವೃದ್ಧಿಯ ಪಥದೆಡೆ ನಡೆಸಬೇಕೆಂಬ ಇಚ್ಛಾಶಕ್ತಿಯಿಂದ ಕರ್ತವ್ಯ ನಿರತರಾಗಿರುವ ಮೋದಿಗೆ ಜಗತ್ತಿನ ಬಲಶಾಲಿ ರಾಷ್ಟ್ರಗಳೇ ಜೈಕಾರ ಹಾಕುವಾಗ, ಮೋದಿಯನ್ನು ಆ ಪರಿ ದ್ವೇಷಿಸುವಷ್ಟು ಎಂತಹ ಕಾರಣ ಸಿಗಬಲ್ಲದು?! ಅಭಿವೃದ್ದಿಯ ಅಂಕಿ ಅಂಶಗಳು ಕಣ್ಣಿಗೆ ರಾಚಿದರೂ ಮುಖ ತಿರುಗಿಸಿ ದ್ವೇಷಿಸುವಷ್ಟು ಎಂತಹದ್ದಿರಬಹುದು?! ಅದಕ್ಕೇ, Quora ದಲ್ಲಿ ಒಬ್ಬರು ಉತ್ತರಿಸಿದ ರೀತಿಯಿದೆಯಲ್ಲವಾ?! ಹಾವಿಗೆ ಬುಸುಗುಡುವುದೇ ಕ್ಷಣ ಮರೆತು ಹೋಗಿತ್ತಂತೆ!

ಹಾವಿಗೆ ಓದಲಿಕ್ಕೆ ಬರೆಯಲಿಕ್ಕೆ ಬರುತ್ತಾ ಎನ್ನಬೇಡಿ! ಇದೊಂತರಾ ಸ್ಪೆಷಲ್ ಹಾವು! ಹಾಲೂ ಕುಡಿಯುತ್ತದೆ! ವಿಷವನ್ನೂ ಕಕ್ಕುತ್ತದೆ!

ಈ ಪ್ರಕಾಶ್ ರಾಜ್ ಎಂಬ ಹಾವಿನ ದ್ವೇಷ ಸಂಬಂಧಪಟ್ಟಿರುವುದು ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಸರಕಾರದ ರಾಜಕೀಯ ಬೆಳವಣಿಗೆಯ ಜೊತೆ! ಅದರ, Contemporary political scenario ಎನ್ನುತ್ತಾರಲ್ಲ?! ಅಂತಹ ವಿಚಾರಗಳ ಜೊತೆ! ಮೊನ್ನೆಯಷ್ಟೇ, ಇಡೀ ಸಾರ್ವಜನಿಕ ವಲಯದಲ್ಲಿ , ಕಾಂಗ್ರೆಸ್ ಪಕ್ಷದ ಮರ್ಯಾದೆ ಬೀದಿ ಪಾಲಾಯಿತು! ಕಾಂಗ್ರೆಸ್ ನ ಎಮ್ ಎಲ್ ಎ ಮತ್ತು ಬೆಂಗಳೂರು ಜಿಲ್ಲಾ ಯುವ ಜನರಲ್ ಕಾರ್ಯದರ್ಶಿ ಯಾದ ಎನ್ ಎ ನಲಪಾಡ್ ನ ಮಗನಾದ ಮುಹಮ್ಮದ್ ಹ್ಯಾರಿಸ್ ನಲಪಾಡ್ ಕ್ಷುಲ್ಲಕ ಕಾರಣಕ್ಕೆ ಶ್ರೀ ಸಾಮಾನ್ಯನ ಮೇಲೆ ಕೈ ಎತ್ತಿ ಹಲ್ಲೆ ಮಾಡಿ ತನ್ನ ಮೃಗತ್ವವನ್ನು ಸಾಬೀತು ಪಡಿಸಿದ ರೀತಿಯಿದೆಯಲ್ಲವಾ?! ಅದು, ಇವತ್ತಿನ ರಾಜ್ಯ ಸರಕಾರದ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ ಕನ್ನಡಿ!

ಕೇವಲ ಕ್ಷುಲ್ಲಕ ಕಾರಣಕ್ಕೆ ವಿದ್ಯುತ್ ಎಂಬುವವರಿಗೆ ಈ ಮುಹಮ್ಮದ್ ಎಂಬ ರಾಜಕುಮಾರನ ಆಜ್ಞೆಯಂತೆ ಜೊತೆಯಲ್ಲಿದ್ದವರು ಬಡಿದು, ಕಾಲು ಮುರಿದು ಸಾಕಾಗಲಿಲ್ಲ ಎಂಬಂತೆ, ಲಿಕ್ಕರ್ ಬಾಟಲಿಯನ್ನು ಆ ಯುವಕನ ತಲೆಯ ಮೇಲೆ ಬಡಿದರೂ ಪಾಪ! ರಾಜಕುಮಾರನಿಗೆ ತೃಪ್ತಿಯಾಗಲಿಲ್ಲವೇನೋ! ಆಸ್ಪತ್ರೆಗೆ ಸೇರಿದ ಮೇಲೂ ಹಲ್ಲೆಗಿಳಿದ ಹ್ಯಾರಿಸ್ ಮತ್ತು ಆತನ ತಂಡದವರು ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ, ಒಬ್ಬ ಎಮ್ ಎಲ್ ಎ ಮಗನಿಗೆ ಯಾವ ರೀತಿ ಪವರ್ರುಗಿರಿ ಬರುತ್ತದೆಂಬುದನ್ನು ತೋರಿಸಿಕೊಟ್ಟರಷ್ಟೇ!

ಅಚ್ಚರಿಯಾಗುತ್ತಿದೆಯಾ?! ಇದಕ್ಕೂ ನಮ್ಮ ಎರಡು ತಲೆ ಹಾವಾದ ಪ್ರಕಾಶ್ ರಾಜ್ ಗೂ ಏನು ಸಂಬಂಧ ಎಂದು?! ಛೇ! ಗೊತ್ತಿಲ್ಲವೆಂದರೆ, ನಿಮಗಿದು ಗೊತ್ತಾಗಲೇ ಬೇಕು! ದುರಾದೃಷ್ಟವೋ ಅದೃಷ್ಟವೋ, ಮಹಮ್ಮದ್ ಹ್ಯಾರಿಸ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಸಹ ಸಿಕಾಪಟೆ ದೋಸ್ತರಪ್ಪ!! ಸಾಮಾಜಿಕ ಜಾಲತಾಣದಲ್ಲಿ, ಹೋಗಲಿ! ಗೂಗಲ್ಲೂ ಇವರಿಬ್ಬರ ಅಮರ ಸ್ನೇಹದ ಬಗ್ಗೆ ಪುರಾವೆ ಒದಗಿಸುತ್ತದೆ! ಮಜಾ ಏನು ಗೊತ್ತಾ?! ಇದೇ ಪ್ರಕಾಶ್ ರಾಜ್, ಕಾರ್ಯಕ್ರಮವೊಂದರಲ್ಲಿ ಹ್ಯಾರಿಸ್ ಎಂತಹ ಸುಗುಣ ಸಂಪನ್ನ! ಎಂತಹ ಒಳ್ಳೆಯ ಹುಡುಗ! ಎಷ್ಟು ಉದಾರಿ! ಎಂದೆಲ್ಲ ಉದ್ಗಾರ ವಾಚಕದಿಂದ ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಪ್ರತಿಯಾಗಿ, ನೆರೆದಿದ್ದವರಿಂದ ಸಿಳ್ಳೆ, ಕರತಾಡನ! ಆದರೆ, ಅಲ್ಲಿದ್ದವರಿಗ್ಯಾರಿಗೂ, ಅದರಲ್ಲೂ, ಪ್ರಕಾಶ್ ರಾಜ್ ಗೂ ಸಹ ಹೊಗಳಿದಾಗ ಕೈ ಮುಗಿದುಕೊಂಡು ನಿಂತ ಹ್ಯಾರಿಸ್ ಅದೇ ಕೈಗಳಿಂದ ಒಬ್ಬ ಶ್ರೀ ಸಾಮಾನ್ಯನ ತಲೆಗೆ ಲಿಕ್ಕರ್ ಬಾಟಲಿನಿಂದ ಹಲ್ಲೆ ಮಾಡುವಷ್ಟು ಉದಾರಿಯಾಗಿದ್ದ!! ವ್ಹಾ! ಗೂಂಡಾ ಮನಃಸ್ಥಿತಿಯವನನ್ನು ಉದಾರಿಯಾಗಿ ಕಂಡ ಪ್ರಕಾಶ್ ರಾಜ್ ಗೆ ಇವತ್ತು ನಾವೂ ಚಪ್ಪಾಳೆ ಹೊಡೆಯಬೇಕಿದೆ!

ಕೆಳಗಿನ ಚಿತ್ರ ನೋಡಿ! ಹ್ಯಾರಿಸ್ ನಲಪಾಡ್ ಮತ್ತು ಪ್ರಕಾಶ್ ರಾಜ್ ಎಂತಹ ಒಳ್ಳೆಯವರೆಂದು ತಿಳಿದು ಹೋಗುತ್ತದೆ! ಪ್ರಕಾಶ್ ರಾಜ್ ಕೈಯ್ಯಲ್ಲಿರುವ ಸಿಗರೇಟು, ಹೆಂಡವನ್ನು ಮಾತ್ರ ನೋಡಬೇಡಿ ಎಂದು ನಾನು ಹೇಳುವುದಿಲ್ಲ!

ಆದರೆ, ನಿಮಗೆ ಒಂದನ್ನು ತಿಳಿಸಲೇಬೇಕಿದೆ! ಅಷ್ಟಕ್ಕೂ ಯಾಕೆ ಪ್ರಕಾಶ್ ರಾಜ್ ಅಂತಹವರು ಮೋದಿಯನ್ನು ದ್ವೇಷಿಸುವುದು ಗೊತ್ತಾ?!

ಕಾರಣ ತೀರಾ ಸಿಂಪಲ್ಲು ರೀ!

ನರೇಂದ್ರ ಮೋದಿ ಅಥವಾ ಅವರ ಬಳಗವಾಗಲಿ, ಪ್ರಕಾಶ್ ರಾಜ್ ಅಥವಾ ಹ್ಯಾರಿಸ್ ತರಹ ‘ಉದಾರ’ ಸಂಸ್ಕಾರದಲ್ಲಿ ಬೆಳೆದುಕೊಂಡು ಬಂದವರಲ್ಲ ಬಿಡಿ! ಅದರಲ್ಲಿಯೂ, ಛೇ! ಲಿಕ್ಕರ್ರು, ಸಿಗರೇಟು ಹಿಡಿದು, ಮುಂಬೈ ಬೆಡಗಿ ಜೊತೆ ಸಲ್ಲಾಪವಾಡುವ ಪ್ರಕಾಶ್ ರಾಜ್ ಎಲ್ಲಿ?! ಮೋದಿ ಎಲ್ಲಿ?! ಶ್ರೀ ಸಾಮಾನ್ಯನನ್ನು ಕೇವಲ ದರ್ಪದ ನಡವಳಿಕೆಯನ್ನು ಪ್ರಶ್ನಿಸಿದನೆಂಬ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡುವಷ್ಟು ಉದಾರಿಯಾಗಿರುವ ಹ್ಯಾರಿಸ್ ಎಲ್ಲಿ?! ಮೋದಿ ಮತ್ತು ಸರಕಾರದ ಸಚಿವರೆಲ್ಲಿ?! ಯೆಸ್!! ನಾವು ಒಪ್ಪುತ್ತೇವೆ! ನಾವು ಪ್ರಕಾಶ್ ರಾಜ್ ಅಥವಾ ಹ್ಯಾರಿಸ್ ರಂತಹ ಸಂಸ್ಕೃತಿಯೆಂಬ ‘well brought up’ ಮತ್ತು ‘well behaved” ಸಂಸ್ಕಾರಕ್ಕೆ ಸೇರಿದವರಲ್ಲ! ಥ್ಯಾಂಕ್ ಗಾಡ್!

ಪ್ರಕಾಶ್ ರಾಜ್ ಗೇಕೆ ಅಷ್ಟು ದ್ವೇಷವೆಂದರೆ, ರಾಜ್ ನಂತೆ ಮೋದಿಯವರು ಎದುರಿಗೆ ಮಾತ್ರ ರಾಷ್ಟ್ರಭಕ್ತ ಎಂದು ತೋರಿಸಿಕೊಂಡು, ಹಿಂದೆ ಶ್ರೀ ಸಾಮಾನ್ಯನ ಮೇಲೆ ದಾಳಿ ಮಾಡುವಷ್ಟು ಸಂಸ್ಕಾರಿಯಲ್ಲ! ದೊಡ್ಡ ದೊಡ್ಡ NGO ಗಳಿಗೆ ಡೊನೇಷನ್ನು ನೀಡಿ, ಉದಾರಿ ಎನ್ನಿಸಿಕೊಳ್ಳಲು ಪೋಸು ಕೊಟ್ಟು, ಹಿಂದೆಯಿಂದ ಅದೆಷ್ಟೋ ತಾಯ ಒಡಲ ಬರಿದು ಮಾಡುವಂತಹ ಸಂಸ್ಕಾರಿಯಲ್ಲ! ರಾಜ್ ನಂತೆ, ರೌಡಿ ಗೂಂಡಾಗಳಂತಹವರನ್ನು Well brought up, well behaved ಎಂದು ಮೋದಿ ಹೊಗಳಿ ಅಟ್ಟಕ್ಕೇರಿಸುವಂತಹ ಸಂಸ್ಕಾರಿಯಲ್ಲ! ಸಾರ್ವಜನಿಕ ವಲಯದಲ್ಲಿಯೇ.. ಕುಡಿದು, ಸಿಗರೇಟು ಹಚ್ಚುವ ಸಂಸ್ಕೃತಿ ನಮ್ಮ ಮೋದಿಯವರದಲ್ಲ! ಆಹ್! ಇನ್ನೂ ಇಂತಹ ಎಷ್ಟೋ ಕಾರಣಗಳಿವೆ! ಇವೆಲ್ಲ ಸ್ಯಾಂಪಲ್ಲುಗಳಷ್ಟೇ! ಬೇಕಾದರೆ ನೀವು ಕೂಡ ಕಾರಣಗಳನ್ನು ನೀಡಬಹುದು!

– ತಪಸ್ವಿ

Tags

Related Articles

FOR DAILY ALERTS
 
FOR DAILY ALERTS
 
Close