ಪ್ರಚಲಿತ

ಚೀನಾದ ಸಾವಿರಾರು ಸೈನಿಕರ ಜೊತೆ ಭಾರತೀಯ 124 ಮಂದಿ ಹೋರಾಡಿದ ವೀರ ಸೇನಾನಿಯ ಕಥೆ ಇಂದಿಗೂ ಅಮರ! ನೆಹರೂ ಪಿತೂರಿಯಿಂದಲೇ ಸೋತಿತ್ತು ಆ ರೋಮಾಂಚನ ಯುದ್ಧ!

ಲಡಾಖ್ ಎನ್ನುವ ಪ್ರದೇಶ ಭಾರತದಲ್ಲೇ ಉಳಿಯಬೇಕಿದ್ದರೆ ಅದಕ್ಕೆ ಪ್ರಮುಖ ಕಾರಣ ಶೈತಾನ್ ಸಿಂಗ್. ಇವರು ಅಹಿರ್ ಎನ್ನುವ ಪಂಗಡಕ್ಕೆ ಸೇರಿದ್ದು, ವೀರ್ ಅಹಿರ್ ಎಂದೇ ಹೆಸರು ಪಡೆದಿದ್ದಾರೆ. ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ದೇಶಕ್ಕಾಗಿ ಪ್ರಾಣ ಕೊಟ್ಟ ಅಹಿರ್ ಪಂಗಡದ ಶೈತಾನ್ ಸಿಂಗ್ ನಡೆಸಿಕೊಂಡು ಬರುತ್ತಿದ್ದ ರೆಜಿಮೆಂಟ್ ಚೀನಾದವರನ್ನು ಮಣ್ಣುಮುಕ್ಕಿಸಿದ ರೀತಿಯೇ ಒಂದು ಅದ್ಭುತ.

ಲಡಾಖ್ ಎನ್ನುವುದು ಭಾರತಕ್ಕೆ ಅಗತ್ಯವಾಗಿ ಉಳಿಯಲೇಬೇಕಾದ ಪ್ರದೇಶ. ಯಾಕೆಂದರೆ ಚುಶುಲ್ ಕಣಿವೆ ಪ್ರaದೇಶದ ಸಮೀಪ ಭಾರತ ವಾಯುನೆಲೆಯನ್ನು ನಿರ್ಮಿಸಿರುವುದರಿಂದ ಶತ್ರುಗಳನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು. ಒಂದು ವೇಳೆ ಆ ಪ್ರದೇಶ ಚೀನಾಕ್ಕೆ ಹೋಗಿಬಿಟ್ಟಿದ್ದರೆ ಭಾರತಕ್ಕೆ ಭವಿಷ್ಯದಲ್ಲಿ ತುಂಬಾ ಅಪಾಯವಾಗುವ ಸಾಧ್ಯತೆ ಇತ್ತು. ಶೈತಾನ್ ಸಿಂಗ್ ಅವರನ್ನು ರೇಡಿಯೋದಲ್ಲಿ ಸಂಪರ್ಕಿಸಿದ ಹಿರಿಯ ಅಧಿಕಾರಿಗಳು, `ನಾಳೆ ಬೆಳಿಗ್ಗೆ ಚೀನಾ ನಿಮ್ಮ ಮೇಲೆ ದಾಳಿಮಾಡುವುದಿದೆ. ಅವರು 5 ರಿಂದ 6 ಸಾವಿರ ಜನ ಸೈನಿಕರಿರುವರು. ನೀವಿರುವುದು ಕೇವಲ 120 ಜನ ಕೆಳಗಿಳಿದು ಬಂದುಬಿಡಿ, ಮುಂದೆ ನೋಡಿಕೊಳ್ಳೋಣ’ ಎಂದು ಹೇಳಿದ್ದರು.

Related image

ತನ್ನ ಶಕ್ತಿಯನ್ನು ಕಡೆಗಣಿಸಿ ಭಾರತಮಾತೆಯ ಭೂಭಾಗವನ್ನು ಬಿಟ್ಟುಕೊಡಲು ಹೇಳಿದ್ದಕ್ಕೋ ಏನೋ ಶೈತಾನ್ ಸಿಂಗ್ ನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಈ ಶೈತಾನ್ ಸಿಂಗ್,, 13 ನೆಯ ಕುಮೌನ್ ಬಟಾಲಿಯನ್ ನ 124 ಸೈನಿಕರ ಆಫೀಸರ್.. ಭಾರತ ಚೀನಾ ಯುದ್ಧದ ಸಮಯದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ರೆಜಂಗ್ಲಾ ಪಾಸ್ ಎಂಬ 5000 ಮೀ. (16404 ಅಡಿ) ಎತ್ತರದ ಬೆಟ್ಟವನ್ನು ಕಾಯುವುದು ಶೈತಾನ್ ಸಿಂಗ್ ಮತ್ತು ತಂಡದ ಕೆಲಸವಾಗಿತ್ತು. ಅದನ್ನವರು ತನ್ನ ತಾಯಿಯ ದೇಹದ ಭಾಗವನ್ನು ಕಾಯುತ್ತಿರುವಷ್ಟೇ ಪ್ರೀತಿಯಿಂದ ಮಾಡುತ್ತಿದ್ದರು. ಅವರಿರುವುದು ಕೇವಲ 124 ಸೈನಿಕರು ಜೊತೆಗೆ ಆಫೀಸರ್ ಶೈತಾನ್ ಸಿಂಗ್.. ಆದ್ದರಿಂದಲೇ ಮೇಲಾಧಿಕಾರಿಗಳು ಇವರಿಗೆ ಕೆಳಗಿಳಿದು ಬರುವಂತೆ ಆದೇಶ ನೀಡಿದ್ದರು.. ಆದರೆ ನಮ್ಮ ಭೂಭಾಗವನ್ನು ಬಿಟ್ಟುಕೊಟ್ಟು ಹೋಗಲಿಚ್ಛಿಸದ ಶೈತಾನ್ ಸಿಂಗ್ ಅಲ್ಲೇ ಇರುವ ನಿರ್ಧಾರ ಮಾಡಿದ್ದನು. ಅಲ್ಲದೆ ತನ್ನ ಸೈನಿಕರನ್ನು ಬಳಿ ಕರೆದು, ` ನಾಳೆ ಬೆಳಿಗ್ಗೆ ಚೀನಾ ನಮ್ಮ ಮೇಲೆ ದಾಳಿ ಮಾಡುವುದಿದೆ ನಿಮ್ಮಲ್ಲಿ ಯಾರಿಗಾದರೂ ಜೀವ ಉಳಿಸಿಕೊಳ್ಳಬೇಕೆಂಬ ಹಂಬಲ ಇದ್ದಲ್ಲಿ ಕೆಳಗಿಳಿದು ಹೊರಟುಬಿಡಿ.

ನಾನಂತೂ ನನ್ನ ಕೊನೆಯುಸಿರಿರುವವರೆಗೂ ಕಾದಾಡುತ್ತೆನೆಯೇ ಹೊರತು ನನ್ನ ತಾಯ್ನಾಡನ್ನು ಬಿಟ್ಟುಕೊಡುವುದಿಲ್ಲ.’ ಎಂಬಿತ್ಯಾದಿ ಉತ್ಸಾಹ ವನ್ನು ನೋಡಿದ ಸೈನಿಕರು ತಾವೂ ಈ ಜಾಗ ಬಿಟ್ಟು ತೆರಳಲ್ಲ ಅಂತಾ ಅಲ್ಲೇ ಕುಳಿತು ಬಿಟ್ಟರು!! ರಾತ್ರಿ ಕುಳಿತು ಬೇರೆ ಬೇರೆ ವ್ಯೂಹಗಳನ್ನು ರಚಿಸಿದ ಶೈತಾನ್ ಸಿಂಗ್ ಚೀನಿಯರನ್ನು ಎದುರಿಸಲು ತನ್ನ ಪಡೆಯನ್ನು ಸನ್ನದ್ಧವಾಗಿಸಿ ಕುಳಿತ. ನಸುಕಿನ ಸುಮಾರು 4 ಗಂಟೆಗೆ ಚೀನಿಯರ ದಾಳಿ ಆರಂಭವಾಯಿತು. ಸಿಂಗ್ ತನ್ನ ಸೈನಿಕರನ್ನು ಅದ್ಯಾವ ಪರಿ ಹುರಿದುಂಬಿಸಿದ್ದ ಎಂದರೆ ಪ್ರತಿಯೊಂದು ಚೀನೀ ಸೈನಿಕರ ಅಲೆಯನ್ನೂ ಸಮರ್ಥವಾಗಿ ಹಿಮ್ಮೆಟ್ಟಿಸಿದರು.. ಸುಮಾರು 5 ಗಂಟೆಗಳ ಕಾಲ ಅದ್ಭುತವಾದ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರ ಬಲ ಕ್ಷೀಣಿಸಿತು.. ಚೀನೀ ಸೈನಿಕರು ತಮ್ಮ ರೇಡಿಯೋದಲ್ಲಿ ” ಇವರು ಸಾವಿರಾರು ಸೈನಿಕರು ಇರುವಂತೆ ತೋರುತ್ತದೆ” ಎಂದು ಮಾತಾಡಿದ್ದು ಇಂದಿಗೂ ನಮ್ಮ ಸೈನ್ಯದ ಬಳಿ ಇದೆ. ಅದ್ಯಾವ ಪರಿ ಕಾದಾಡಿದರೆಂದರೆ ಕೇವಲ 124 ನಮ್ಮ ಸೈನಿಕರು 2500 ಸಾವಿರಕ್ಕೂ ಅಧಿಕ ಚೀನೀಯರನ್ನು ಹೊಡೆದುರುಳಿಸಿದರು ಎಂದರೆ ಊಹಿಸಿಕೊಳ್ಳಿ..

Image result for shaitan singh

ಸ್ವತಃ ಶೈತಾನ್ ಸಿಂಗ್ ಬರೋಬ್ಬರಿ 54 ಚೀನೀಯರ ಗುಂಡುಗಳನ್ನು ತನ್ನ ದೇಹದೊಳಗೆ ನಿರುಮ್ಮಳವಾಗಿ ಹೊಕ್ಕಿಸಿಕೊಂಡ ಮೇಲಷ್ಟೇ ತನ್ನ ಪ್ರಾಣ ತೊರೆದರು.. ತನ್ನ ಕೈಯಲ್ಲಿನ ಬಂದೂಕಿನ ಟ್ರಿಗ್ಗರ್ ಮೇಲೆ ತನ್ನ ಕೈಬೆರಳಿರಿಸಿಕೊಂಡೇ ಪ್ರಾಣಬಿಟ್ಟ ಈ ಶೈತಾನ್ ಸಿಂಗ್ ನಿಜವಾದ ದೇಶಪ್ರೇಮಿ.. ಇದ್ದ ಸೈನಿಕರಲ್ಲಿ 114 ಸೈನಿಕರು ಸ್ಥಳದಲ್ಲಿಯೇ ಪ್ರಾಣಾರ್ಪಣೆ ಮಾಡಿದರೆ 5 ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಕರೆದೊಯ್ದರು. ಉಳಿದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಶೈತಾನ್ ಸಿಂಗ್ ನ ಪರಾಕ್ರಮವನ್ನು ನೋಡಿದ ಸರ್ಕಾರ `ಪರಮವೀರಚಕ್ರ’ ನೀಡಿ ಗೌರವಿಸಿತು.. ದುರ್ದೈವವೆಂದರೆ ಎಷ್ಟೋ ದೇಶಗಳ ಸೈನ್ಯ ತರಬೇತಿಯಲ್ಲಿ ಶೈತಾನ್ ಸಿಂಗ್ ನ ಮಾದರಿಯಾಗಿ ಇಟ್ಟುಕೊಂಡು ತರಬೇತಿ ನೀಡುತ್ತಿದ್ದರೂ ನಮ್ಮ ದೇಶದ ಜನರಿಗೆ ಈ ಮಹಾನ್ ದೇಶಪ್ರೇಮಿಯ ಬಗ್ಗೆ ಗೊತ್ತಿಲ್ಲ.!!

ಭಾರತ ಚೀನಾದೊಂದಿಗಿನ 1962ರ ಯುದ್ಧವನ್ನು ಸೋತಿರಬಹುದು ನಿಜ, ಆದರೆ ಯುದ್ಧ ಗೆದ್ದ ಚೀನಾ ನಿಜವಾಗಿಯೂ ಸೋತಿದೆ. ಯಾಕೆಂದರೆ ಆ ದೇಶ ಸಾವಿರಾರು ಮಂದಿ ಸೈನಿಕರನ್ನು ಕಳೆದುಕೊಂಡಿದೆ. ಭಾರತದ ಪ್ರಧಾನಿಯಾಗಿದ್ದ ನೆಹರೂ ಅವರ ಮೂರ್ಖತನದಿಂದಾಗಿ ನಮ್ಮ ದೇಶದ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಅದರಲ್ಲಿ ರೆಝಾಂಗ್ ಲಾ ಕದನವೂ ಒಂದು. ಎರಡನೇ ಮಹಾಯುದ್ಧದ ಕಾಲದ ಹಳೆಯ ಯುದ್ಧೋಪಕರಣಗಳಿಂದ ಚೀನಾದ ಅತ್ಯಾಧುನಿಕ ಸೈನ್ಯವನ್ನು ಎದುರು ಹಾಕುವುದೆಂದರೆ ಸುಮ್ಮನೆ ಅಲ್ಲ. ಈ ಯುದ್ಧ ಸಂಭವಿಸುವ ಒಂದು ವರ್ಷದ ಮುಂಚೆಯೇ ಭಾರತಕ್ಕೆ ಯುದ್ದೋಪಕರಣಗಳ ಅಗತ್ಯವಿದೆ ಎಂದು ಪ್ರಧಾನಿ ನೆಹರೂ ಅವರಲ್ಲಿ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನೆಹರು ಮನವಿಯನ್ನು ಕಸದ ಬುಟ್ಟಿಗೆ ಹಾಕಿದ ಪರಿಣಾಮ ಶೈತಾನ್ ಸಿಂಗ್‍ನಂಥಾ ಸಾವಿರಾರು ಸೈನಿಕರು ಪ್ರಾಣ ಕೊಡಬೇಕಾಯಿತು.

Related image

ಈ ಯುದ್ಧದಲ್ಲಿ ಬದುಕುಳಿದ ಕ್ಯಾಪ್ಟನ್ ರಾಮ್‍ಚಂದರ್ ಯಾದವ್ ಪ್ರಕಾರ, ಭಾರತದಲ್ಲಿ ಕಡಿಮೆ ಸಂಖ್ಯೆ ಸೈನಿಕರಿದ್ದರೂ ಚೀನಾದವರನ್ನು ಅಲ್ಲಿಂದ ಎರಡೆರಡು ಬಾರಿ ಹಿಮ್ಮೆಟ್ಟಿಸಿದ್ದರು. ಇವರ ಬೆಟಾಲಿಯನ್‍ನಲ್ಲಿದ್ದ ನಾಯಕ್ ರಾಂ ಸಿಂಗ್ ಎನ್ನುವವರ ಕೈ ತುಂಡಾಗಿ ನೇತಾಡುತ್ತಿತ್ತು. ಆದರೂ ಕೂಡಾ ಒಂದೇ ಕೈಯ್ಯಲ್ಲಿ 12ಕ್ಕಿಂತಲೂ ಅಧಿಕ ಚೀನಿಯರನ್ನು ಕೊಂದು ಹಾಕಿದರು. ಕಾಲು ತುಂಡಾಗಿದ್ದರೂ ಸಹ ಹೋರಾಟವನ್ನು ನಿಲ್ಲಿಸಲಿಲ್ಲ. ಅಭಿಮನ್ಯು ತರ ಹೋರಾಟ ನಡೆಸಿದ ನಾಯಕ್ ರಾಂ ಸಿಂಗ್‍ರನ್ನು ಚೀನಾದ ಯೋಧನೊಬ್ಬ ತಲೆಗೆ ಗುಂಡು ಹಾರಿ ಕೊಂದುಬಿಟ್ಟ. ಜೀವ ಇದ್ದಿದ್ದರೆ ಇನ್ನಷ್ಟು ಚೀನೀ ಸೈನಿಕರು ಇವರ ಕೈಯಿಂದ ಹತರಾಗಿರುತ್ತಿದ್ದರು ಎಂದು ರಾಮ್‍ಚಂದರ್ ಯಾದವ್ ಹೇಳುತ್ತಾರೆ.

ಭಾರತದ ಆರು ಸೈನಿಕರನ್ನು ಚೀನಾ ಸೈನಿಕರು ಯುದ್ಧಖೈದಿಗಳಂತೆ ಬಂಧಿಸಿದರು. ಆದರೆ ಆರು ಮಂದಿ ಅವರಿಂದ ತಪ್ಪಿಸಿಕೊಂಡರು. ಗಾಯಾಳುಗಳನ್ನು ಸೈನಿಕಾಸ್ಪತ್ರೆಗೆ ದಾಖಲಿಸಲಾಯಿತು. ಚೀನಿಯರ ಕೈಯಿಂದ ತಪ್ಪಿಸಿಕೊಂಡಿದ್ದ ಯಾದವ್ ಅವರನ್ನು ನವೆಂಬರ್ 19ರಂದು ಜಮ್ಮುವಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಇವರೆಲ್ಲಾ ದ.ಹರ್ಯಾಣದ ಗೂರ್ಗನ್ ರೇವರಿ, ನಾರ್ನೌಲ್ ಹಾಗೂ ಮಹೇಂದ್ರಗಡ್‍ನಿಂದ ಬಂದವರು. ಇಂದು ಲಡಾಕ್ ನಮ್ಮಲ್ಲೇ ಉಳಿದಿದೆ ಎಂದರೆ ಅದಕ್ಕೆ ಕಾರಣ ಇವರೇ… ಮಹಾಭಾರತದಲ್ಲಿನ ಅಭಿಮನ್ಯು ಅವತಾರ ಎತ್ತಿದಂತೆ ಹೋರಾಡಿದರು. ನಮ್ಮ ಸೈನ್ಯದ ನಿಜವಾದ ಬಾಹುಬಲಿ ಎಂದರೆ ಅದು ಶೈತಾನ್ ಸಿಂಗ್.!!

Image result for shaitan singh

ಆ ಸಮಯದಲ್ಲಿ ಪ್ರಧಾನಿಯಾಗಿದ್ದ ನೆಹರೂ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರೆ ಅಷ್ಟೂ ಸೈನಿಕರನ್ನು ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ!! ಆದರೆ ಹಿಂದಿನ ಯುಪಿಎ ಸರಕಾರಕ್ಕೂ ಮತ್ತು ಈಗಿನ ಮೋದಿ ಸರಕಾರಕ್ಕೂ ಒಮ್ಮೆ ಹೋಲಿಸಿ ನೋಡಿ!! ಮೋದಿ ಸರಕಾರ ನಮ್ಮ ದೇಶ ಕಾಯುವ ಸೈನಿಕರನ್ನು ದೇವರಂತೆ ಪೂಜಿಸುತ್ತಾರೆ!! ಅವರಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಕೂಡಾ ಎಷ್ಟೇ ಕಷ್ಟವಾದರೂ ಪೂರೈಸುತ್ತದೆ!! ಅದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಸೈನಿಕರ ಜೊತೆ ಹೋಗಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ!!

source: veerakesari.in

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close