ಪ್ರಚಲಿತ

ರಾಷ್ಟ್ರವಾದಿ ಸಂಘಟನೆಯೊಂದರ ಎದುರಿಗೆ ಮಕಾಡೆ ಮಲಗಿತೇಕೆ ಕಮ್ಯೂನಿಸಂ? ಒಂದೆ ಸಮಯದಲ್ಲಿ ಹುಟ್ಟಿದ್ದ ಎರಡು ವಿಭಿನ್ನ ಸಿದ್ದಾಂತಗಳಲ್ಲಿ ಕಮ್ಯೂನಿಸಂನ ಅಂತ್ಯಕಾಲ ಸಮೀಪಿಸಿತೇಕೆ?

 

ಆರ್.ಎಸ್.ಎಸ್ ಮತ್ತು ಕಮ್ಯೂನಿಸ್ಟ್ ಚಳವಳಿಗಳು ಒಟ್ಟಿಗೆ ಜನ್ಮ ತಾಳಿ ತಮ್ಮ ಪ್ರಯಾಣವನ್ನು ಹೆಚ್ಚು ಕಡಿಮೆ ಒಂದೆ ಸಮಯದಲ್ಲಿ ಪ್ರಾರಂಭಿಸಿದವು. ಆದರೆ ಇಂದು ಕಮ್ಯುನಿಸ್ಟ್ ಪಕ್ಷ ಮತ್ತು ಅವರ ಸಿದ್ಧಾಂತವು ಭಾರತದಲ್ಲಿ ಅಳಿವಿನ ಅಂಚಿನಲ್ಲಿದ್ದರೆ ಸಂಘದ ತತ್ವ ಸಿದ್ದಾಂತಗಳು ಸಾರ್ವಕಾಲಿಕ ಎತ್ತರದಲ್ಲಿದೆ. ಎರಡು ವೈರುಧ್ಯಪೂರ್ಣ ಸಿದ್ದಾಂತಗಳಲ್ಲಿ ಈ ತೆರನಾದ ಬದಲಾವಣೆಗೆ ಕಾರಣಗಳೇನು?

ಬರೋಬ್ಬರಿ ಒಂಬತ್ತು ದಶಕಗಳ ಹಿಂದೆ 1925 ರಲ್ಲಿ ಎರಡು ವಿಚಾರಧಾರೆಗಳ ಉಗಮವಾಯಿತು. ಒಂದು ಅಪ್ಪಟ ದೇಶೀಯ ವಿಚಾರಧಾರೆಯಾದರೆ ಮತ್ತೊಂದು ರಷ್ಯಾದಿಂದ ಎರವಲು ಪಡೆದುಕೊಂಡದ್ದು. ಎರಡೂ ಸಂಘಟನೆಗಳು ಕೇಡರ್ ಆಧಾರದ ಮೇಲೆ ಕಾರ್ಯನಿರ್ವಹಿಸುವಂತದ್ದು. ಆದರೆ ಕಮ್ಯೂನಿಸಂ ಅನ್ನುವುದು ವಿದೇಶೀ ವಿಚಾರಧಾರೆಯ ತಳಹದಿಯ ಮೇಲೆ ರೂಪುಗೊಂಡಿದ್ದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಪ್ಪಟ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ತಳಹದಿಯ ಮೇಲೆ ನಿಂತಿತ್ತು.

ಕಮ್ಯೂನಿಷ್ಟರು ತಮ್ಮ ನಿಷ್ಠೆಯನ್ನು ಭಾರತಕ್ಕಿಂತಲೂ ಹೆಚ್ಚಾಗಿ ರಷ್ಯಾಕ್ಕೆ ತೋರಿಸುತ್ತಿದ್ದರು. ಕಮ್ಯೂನಿಷ್ಟರಿಗೆ ಹಣ ಕೂಡಾ ವಿದೇಶದಿಂದಲೆ ಬರುವಂತದ್ದು. ಆದರೆ ಸಂಘ ತನ್ನ ಸ್ವಂತ ದುಡಿಮೆಯಿಂದ ತನ್ನೆಲ್ಲಾ ಖರ್ಚುಗಳನ್ನು ನಿಭಾಯಿಸುತಿತ್ತು. ಕಮೂನಿಷ್ಟರು ದೇಶ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದರೆ, ಸಂಘ ಜಾತಿ ಜಾತಿಗಳ ನಡುವಿನ ಬೇಧ ತೊಡೆದು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿತು.

ಸ್ಟಾಲಿನ್ ಕಾಲದಲ್ಲಿ ಇದೆ ಕಮ್ಯೂನಿಷ್ಟರು ಭಾರತ ಸ್ವತಂತ್ರ ದೇಶವಾಗಬಾರದು ಮತ್ತು ಭಾರತದ ಅಧಿಕಾರ ಕಾಂಗ್ರೆಸ್ ನ “running dogs of capitalism” ಅಂದರೆ ಬಂಡವಾಳಶಾಹಿಯನ್ನು ಅನುಮೋದಿಸುವ ನಾಯಕರಿರುವ ಕಾಂಗ್ರೆಸ್ ಕೈಗೆ ಆಡಳಿತ ಸಿಗಬಾರದು ಎಂದು ವಾದಿಸಿದ್ದರು. ಎಂಥಾ ವಿಚಿತ್ರ ನೋಡಿ ಇವತ್ತು ಅದೆ ಕಾಂಗ್ರೆಸ್ ಜೊತೆ ಸೇರಿ ಅಧಿಕಾರದ ಸವಿ ಉಣ್ಣುತ್ತಿದ್ದಾರೆ ಕಮ್ಮಿನಿಷ್ಠರು. ಮೊದ ಮೊದಲು ರಷ್ಯಾದಿಂದ ಹಣ ಪಡೆದುಕೊಳ್ಳುತ್ತಿದ್ದ ಕಮ್ಯೂನಿಷ್ಟರು ತದನಂತರ ಚೀನಾದಿಂದ ಹಣ ಪಡೆಯಲು ಶುರು ಮಾಡಿ ಅವರ ನಿಯತ್ತಿನ ನಾಯಿಯಾದರು. ಚೀನಾ ಮತ್ತು ಭಾರತ ಯುದ್ದ ನಡೆದ ಸಂಧರ್ಭದಲ್ಲಿ ಕಮೂನಿಷ್ಟರು ಚೀನಾದ ಪರ ನಿಂತರು!

ಇದಕ್ಕೆ ತದ್ವಿರುದ್ದವಾಗಿ ಕೆ.ಬಿ.ಹೆಡ್ಗೆವಾರ್ ಸ್ಥಾಪಿಸಿದಂತಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಸ್ವಾಂತಂತ್ರ್ಯಕ್ಕಾಗಿ ಹೋರಾಡುತ್ತಲೆ ಅಪ್ಪಟ ರಾಷ್ಟ್ರವಾದವನ್ನು ದೇಶದ ಜನತೆಯಲ್ಲಿ ಬಿತ್ತುತ್ತಾ ಹೋಯಿತು. ಸಂಘದ ಗೀತೆಯಲ್ಲೂ ತನು-ಮನ-ಧನಗಳಿಂದ ನಾವು ರಾಷ್ಟ್ರವನ್ನು ಆರಾಧಿಸುತ್ತೇವೆ ಎಂದೆ ಹಾಡಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಯಾರೆ ಹೋರಾಡಲಿ ಸಂಘ ಅವರ ಬೆಂಬಲಕ್ಕೆ ನಿಂತಿತು.

ಸಂಘ ಭಾರತೀಯ ಪರಂಪರೆಯ ಭದ್ರ ನೆಲೆಗಟ್ಟಿನಲ್ಲಿ ನಂಬಿಕೆ ಇಟ್ಟು ಅದನ್ನು ಅನುಸರಿಸುತ್ತಲೆ ಬಂತು. ಕಮ್ಯೂನಿಸಂ “ಭಾರತೀಯತೆ”, ಸನಾತನ ಹಿಂದುತ್ವ ಇವುಗಳನ್ನು ದ್ವೇಷಿಸುತ್ತಾ ಬಂತು. ಭಾರತೀಯ ಪರಂಪರೆಯನ್ನು ತುಚ್ಛವಾಗಿ ಕಾಣುತ್ತಾ, ವಿದೇಶೀ ಸಂಸ್ಕೃತಿಯೆ ಮೇಲೆಂದು ವಾದಿಸುತ್ತಾ ಬಂತು. ಜನಸಾಮಾನ್ಯರೊಡನೆ ಬೆರೆಯುವ ಯಾವೊಂದು ಪ್ರಯತ್ನವನ್ನೂ ಕಮೂನಿಷ್ಟರು ಮಾಡಲೆ ಇಲ್ಲ.

ಕಮ್ಯೂನಿಷ್ಟರು ಭಾರತವನ್ನು “ಅಖಂಡ ರಾಷ್ಟ್ರ” ಎಂದು ಭಾವಿಸಲೆ ಇಲ್ಲ. ಬದಲಿಗೆ ಹದಿನಾರು ದೇಶಗಳು ಒಂದು ಬಲದಿಂದ ಒಟ್ಟಿಗೆ ಸೇರಿವೆ ಎಂದು ಭಾವಿಸುತ್ತಾರೆ. ಇದನ್ನು ಸಮರ್ಥಿಸಲು 1942 ರಲ್ಲಿ ಬ್ರಿಟಿಷರಿಗೆ ಮನವಿ ಮಾಡುತ್ತಾ ಒಂದು ರೆಸಲ್ಯೂಷನ್ ಕೂಡಾ ತಯಾರಿಸಿದ್ದರು. ಹಾಗಾಗಿಯೆ ಇವರಿಗೆ ಟುಕಡೆ ಟುಕಡೆ ಗ್ಯಾಂಗ್ ಕಂಡರೆ ಅಷ್ಟೊಂದು ಪ್ರೀತಿ. ಇಂತಹವರಿಗೆ ಅಖಂಡ ಭಾರತವನ್ನು ಬೆಸೆದ ಪಟೇಲರಾಗಲಿ ಅಥವಾ ಮೋದಿಯಾಗಲಿ ಇಷ್ಟವಾಗಲು ಸಾಧ್ಯವೆ ಇಲ್ಲ.

ರಾಜಕಾರಣದಿಂದ ಮೈಲು ದೂರವುಳಿದು ಹೃದಯಗಳನ್ನು ಬೆಸೆಯುತ್ತಾ ದೇಶಕಟ್ಟುವ ಕಾರ್ಯದಲ್ಲಿ ಸಂಘ ಸದ್ದಿಲ್ಲದೆ ಬೆಳೆಯುತ್ತಲೆ ಹೋಯಿತು. ಅದೆ ಕಮೂನಿಸಂ ದೇಶ ಒಡೆಯುವ ಕಾರ್ಯದಲ್ಲಿ ನಿರತವಾಗಿ ಸ್ವಾರ್ಥ ರಾಜಕಾರಣ ಮಾಡುತ್ತಾ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಯಿತು. ತನ್ನ ಹುಟ್ಟೂರಿನಲ್ಲೆ ಹೇಳ ಹೆಸರಿಲ್ಲದೆ ಮಾಯವಾದ ಕಮ್ಯೂನಿಸಂ ಇವತ್ತು ಭಾರತ ಭೂಪಟದಿಂದ ಮಾಯವಾಗುವ ಕಾಲ ಸನ್ನಿಹಿತವಾಗಿದ್ದರೆ. ಪುಟ್ಟ ಗಿಡದಂತಿದ್ದ ಸಂಘ ಪರಿವಾರ ಬೃಹತ್ ಮರವಾಗಿ ವಿಶ್ವಾದ್ಯಂತ ಪಸರಿಸಿದೆ.

 

ಪ್ರತಿ ರಾಷ್ಟ್ರವೂ ತನ್ನದೆ ಆದ ಸ್ವಂತ ಚಿಂತನೆ ಅಥವಾ ಅಂತರ್ಗತ ಸ್ವಭಾವವನ್ನು ಹೊಂದಿದೆಯೆಂದು ದೀನ ದಯಾಳ್ ಉಪಾಧ್ಯಾಯ ಹೇಳುತ್ತಿದ್ದರು. ಈ ‘ಚಿತಿ’ ಯನ್ನು ಗುರುತಿಸುವ ಮತ್ತು ಅದಕ್ಕನುಗುಣವಾಗಿ ನೀತಿಗಳನ್ನು ರಚಿಸುವ ರಾಷ್ಟ್ರಗಳು ಹುಲುಸಾಗಿ ಬೆಳೆಯುತ್ತವೆ. ಅಂತೆಯೆ ಚಿತಿಗೆ ವಿರುದ್ಧವಾಗಿ ನೀತಿಗಳನ್ನು ರಚಿಸುವವರು ವಿಫಲರಾಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದರು. ಈಗ ಅದು ನಿಜವಾಗುತ್ತಿದೆ.

ಮೂಲ ಲೇಖ: ರತನ್ ಶಾರ್ದಾ( ಪ್ರಸಿದ್ದ ಲೇಖಕ)

organiser.org

Tags

Related Articles

FOR DAILY ALERTS
 
FOR DAILY ALERTS
 
Close