ಅಂಕಣಇತಿಹಾಸದೇಶಪ್ರಚಲಿತ

ಹಿಂದೂಗಳನ್ನು ಒಡೆದು ಆಳುವ ಕಾಂಗ್ರೆಸ್ ಅನುಸರಿಸುವ ತಂತ್ರದ ಹಿಂದೆ ಯಾರಿದ್ದಾರೆ ಗೊತ್ತೇನು?!

ವಿಶ್ವಕ್ಕೆ ಜ್ಞಾನವನ್ನು ಹಂಚುತ್ತಿದ್ದ ಭಾರತ, ವಿಶ್ವಗುರು ಸ್ಥಾನದಲ್ಲಿದ್ದ ಭಾರತ ಏನಾಗಿ ಹೋಯಿತು?? ಪ್ರಥಮವಾಗಿ ಮುಸಲ್ಮಾನರ ಆಕ್ರಮಣವಾಯಿತು! ನಂತರ ಡಚ್ಚರು ಬಂದರು! ಪೋರ್ಚುಗೀಸರು ದಾಳಿಯಿಟ್ಟರು! ಸ್ಪೇನರು ಬಂದರು! ಟರ್ಕಿಯರು ಬಂದರು! ಎಲ್ಲ ಬಂದು ಭಾರತವನ್ನು ಆಕ್ರಮಿಸಿ! ಕೊಳ್ಳೆ ಹೊಡೆದು ತೃಪ್ತಿಯಾಗಿ ಹೋದ ನಂತರ ಬಂದವರೇ ಚಾಣಾಕ್ಷ ಕುತಂತ್ರಿ ಫಿರಂಗಿಗಳು !!!

ಇದರ ಪರಿಣಾಮವಾಗಿ ಭಾರತದ ಅಭಿವೃದ್ಧಿ ಕುಸಿಯುತ್ತಾ ಹೋಯಿತು. ಬಡತನ ಪ್ರಾರಂಭವಾಯಿತು. ಭಾರತ ದೇಶವು ಅಭಿವೃದ್ಧಿಗಾಗಿ ಮತ್ತೊಮ್ಮೆ ಹಾತೊರೆಯುಂತೆ ಮಾಡಿತು. ಹಾಗಾದರೆ ಈ ಪರಿಸ್ಥಿತಿ ಯಾತಕ್ಕಾಗಿ ನಿರ್ಮಾಣವಾಯಿತು?? ಕೇವಲ ಆಕ್ರಮಣಕಾರರಿಂದ ಇಂತಹ ಬದಲಾವಣೆ ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಹಣ ಮಾತ್ರ ಬೇಕಿತ್ತು. ಇವೆಲ್ಲಾ ಆಗಿದ್ದು ಅದೇ ಫಿರಂಗಿಗಳಿಂದ!! ಯಾಕೆಂದರೆ ಅವರಿಗೆ ಹಣವೂ ಬೇಕಿತ್ತು, ಅಧಿಕಾರವೂ ಬೇಕಿತ್ತು.

ಒಂದು ಉದಾಹರಣೆಯನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ. ಸುಮಾರು 1000 ವರ್ಷಗಳ ಕಾಲ ಮುಸಲ್ಮಾನರು ಭಾರತವನ್ನು ಲೂಟಿ ಹೊಡೆದರು, 1700 ನೇ ಇಸವಿಯಲ್ಲಿಯೂ ಭಾರತ ಸಂಪದ್ಭರಿತ ರಾಷ್ಟ್ರವಾಗಿತ್ತೆಂಬುದಾಗಿಯೂ ಜ್ಞಾನದಲ್ಲಿ ಭಾರತವನ್ನು ಮೀರಿಸುವವರು ಇಲ್ಲವೆಂಬುದಾಗಿಯೂ ನಂತರ ಒಬ್ಬ ಬ್ರಿಟಿಷ್ ಅಧಿಕಾರಿ ಹೇಳುತ್ತಾನೆಂದರೆ ಭಾರತ ಅದ್ಯಾವ ಪರಿಸ್ಥಿತಿಯಲ್ಲಿತ್ತೆಂಬುದನ್ನು ಅವಲೋಕಿಸಿ. ಅನೇಕ ಆಕ್ರಮಣಗಳ ನಂತರವೂ ಭಾರತ ಜಗತ್ತಿನೆದುರು ಸ್ಥಿರವಾಗಿ ನಿಂತಿತ್ತು. ಜ್ಞಾನದ ರಾಷ್ಟ್ರವಾದ ಭಾರತ ತನ್ನ ಕಾಯಕವಾದ ಜ್ಞಾರ್ನಾಜನೆಯನ್ನು ವಿಶ್ವಕ್ಕೆ ಕೊಡುತ್ತಲೇ ಇತ್ತು.

1600- 1800 ಇಸವಿಯ ಅವಧಿಯಲ್ಲಿ ಬಂದ ವಿದೇಶಿ ಲೇಖಕರೆಲ್ಲಾ ಭಾರತದ ಸಾಂಸ್ಕøತಿಕ ವೈಭವವನ್ನು, ಕಲೆಯನ್ನು, ಶ್ರೀಮಂತಿಕೆಯನ್ನು ಶ್ಲಾಘಿಸಿದವರೇ. 1600 ನೆಯ ಇಸವಿಯ ಕಾಲಘಟ್ಟದಲ್ಲಿ ದಕ್ಷಿಣ ಭಾರತದಲ್ಲಿದ್ದ ವಿಜಯನಗರ ಸಂಸ್ಥಾನವು ಭಾರತದ ಸುವರ್ಣಯುಗವೆಂಬುದಾಗಿ ವಿದೇಶಿ ಲೇಖಕೊಬ್ಬರು ವರ್ಣಿಸಿದ್ದಾರೆ. ಅವರೇ ಉಲ್ಲೇಖಿಸುವ ಪ್ರಕಾರ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಮುತ್ತು ರತ್ನಗಳನ್ನು ಬೀದಿ ಬೀದಿಯಲ್ಲಿ ಮಾರುತ್ತಿದ್ದರು, ಮನೆಗಳಿಗೆ ಬಾಗಿಲುಗಳೇ ಇರಲಿಲ್ಲ ಎಂದೆಲ್ಲಾ ಅಭಿವರ್ಣಿಸಿದ್ದಾರೆಂದರೆ ಅದು ಯಾವ ಪರಿಗೆ ಭಾರತ ಮುಂದುವರೆದಿತ್ತು ಅನ್ನುವ ಪರಿಕಲ್ಪನೆ ಬರುವುದಕ್ಕೆ ಸಾಧ್ಯವಿದೆ.

ಭಾರತದ ಸಂಪತ್ತನ್ನೇ ಮೂಲವಾಗಿಟ್ಟುಕೊಂಡಿದ್ದ ಪರಕೀಯರಿಗೆ ಭಿನ್ನವೆಂಬಂತೆ ಪ್ರತಿಕ್ರೆಯೆ ನೀಡಿದ್ದು, ಆಘಾತ ನೀಡಿದ್ದು ಬ್ರಿಟಿಷ್ ಎಂಬ ಕುತಂತ್ರಿ ಫಿರಂಗಿಗಳು !! ಭಾರತದ ಶಕ್ತಿ ಇಲ್ಲಿನ ಸಾಂಸ್ಕøತಿಕತೆ, ಆರ್ಥಿಕತೆ ಹಾಗೂ ಒಗ್ಗಟ್ಟು ಎಂಬುದನ್ನು ಅರ್ಥೈಸಿಕೊಂಡ ಬ್ರಿಟಿಷರು ಅದರ ಶಮನಕ್ಕೆ ಕಟಿಬದ್ಧರಾದರು. ಅದಕ್ಕೋಸ್ಕರವೇ ತೋಮಸ್ ಬಾಬಿಂಗ್ಟನ್ ಮೆಕಾಲೆ ಎಂಬಾತ ನಿಯೋಜನೆಗೊಂಡ. ಆತನನ್ನು ಲಾರ್ಡ್ ಅಂದರೆ ದೇವರೆಂಬುದಾಗಿ ಯಾರು ಕರೆದರೋ ದೇವನೇ ಬಲ್ಲ.! ಯಾಕೆಂದರೆ ಆತ ನಮ್ಮ ದೇಶಕ್ಕಿದ್ದ ಅಂತಃಸತ್ವವನ್ನು ಶಮನಮಾಡಲು ಪ್ರಯತ್ನಿಸಿದ ಬ್ರಿಟಿಷ್ ರಾಜಕಾರಣಿ. ಭಾರತಕ್ಕೆ ಆಗಮಿಸಿದ ಮೆಕಾಲೆ ಮಾಡಿದ ಮೊದಲನೆಯ ಕೆಲಸವೇ ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತಾದ ಅಧ್ಯಯನ. ಆತನಿಗೆ ಇಲ್ಲಿನ ಅದ್ಭುತವನ್ನು ಕಂಡು ಆಶ್ಚರ್ಯವಾಗುತ್ತದೆ. 4 ವರ್ಷಗಳ ಕಾಲ ಭಾರತದಲ್ಲಿದ್ದ ಮೆಕಾಲೆ ಇಲ್ಲಿನ ಸಾಂಸ್ಕøತಿಕ ವೈಭವವನ್ನು, ಜನರ ಶ್ರೀಮಂತಿಕೆಯನ್ನು ಕಂಡು ಬೆರಗಾಗುತ್ತಾನೆ. ಭಾರತದಲ್ಲಿ ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಹವಣಿಸುತ್ತಿದ್ದವನಿಗೆ ನಿರಾಶೆಯಾಗಿತ್ತು. ಯಾಕೆಂದರೆ ಅವರ ಶಿಕ್ಷಣ ವ್ಯವಸ್ಥೆಯನ್ನು ಭಾರತದಲ್ಲಿ ಅನುಷ್ಠಾನ ಮಾಡುವುದೆಂದರೆ ಕೇವಲ ವಿದ್ಯಾಭ್ಯಾಸವನ್ನು ಬೋಧಿಸುವುದು ಮಾತ್ರ, ಅವರ ಸಂಸ್ಕøತಿಯ, ಹಾಗೂ ಮತದ ಕುರಿತಾಗಿ ಭಾರತದಲ್ಲಿ ಪರಿಚಯಿಸುವುದು ಎಂದೇ ಅರ್ಥ. ಅವರ ಸಂಸ್ಕøತಿಯನ್ನು ಪರಿಚಯಿಸಿದರೆ ಭಾರತವೂ ಇಂಗ್ಲೆಂಡ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂಬ ಬಲವಾದ ನಂಬಿಕೆ ಆತನಲ್ಲಿತ್ತು. ದುರ್ದೈವ, ಆತನ ನಂಬಿಕೆಯನ್ನು ಇವತ್ತು ಸತ್ಯವಾಗಿಸಲು ಕೆಲವು ಭಾರತದ ಪಕ್ಷಗಳು ಹೊರಟಿವೆ.

1835 ನೇ ಇಸವಿಗೆ ಆತ ಬ್ರಿಟನ್ ಗೆ ತೆರಳಿ ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಒಂದು ಐತಿಹಾಸಿಕವಾದ ಭಾಷಣವೊಂದನ್ನು ಮಾಡುತ್ತಾನೆ. ವಿಶೇಷವೇನೆಂದರೆ ಅದು ಭಾರತದ ಕುರಿತಾಗಿಯೇ ಆಗಿತ್ತು. “ನಾನು ಭಾರತದ ಉದ್ದಗಲ ಸಂಚರಿಸಿದ್ದೇನೆ. ಆದರೆ ಅಲ್ಲಿ ಒಬ್ಬ ಭಿಕ್ಷುಕನನ್ನಾಗಲೀ, ಕಳ್ಳನನ್ನಾಗಲೀ ನಾನು ಕಂಡಿಲ್ಲ. ಅಷ್ಟು ಸಂಪದ್ಭರಿತವಾದ ರಾಷ್ಟ್ರ, ಅತ್ಯುತ್ತಮ ಮೌಲ್ಯವನ್ನು ಮೈಗೂಡಿಸಿರುವ ಜನರು, ಆ ರಾಷ್ಟ್ರದಲ್ಲಿ ವಾಸಿಸುತ್ತಿದ್ಧಾರೆ. ಬಹುಶಃ ಅಲ್ಲಿನ ಆಧಾರಸ್ತಂಭವಾದ ಆಧ್ಯಾತ್ಮ ಹಾಗೂ ಸಾಂಸ್ಕøತಿಕತೆಯನ್ನು ಮುರಿಯದೇ ಹೋದರೆ ಭಾರತವನ್ನು ಆಕ್ರಮಿಸಿಕೊಳ್ಳುವುದು ಅಸಾಧ್ಯವೆಂದು ನನಗೆ ಅನಿಸುತ್ತಿದೆ. ಆದ್ದರಿಂದ ಅಲ್ಲಿ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆಯೊಂದಿಗೆ ಬದಲಾಯಿಸಬೇಕಿದೆ. ಆಗ ಭಾರತೀಯರು ತಮ್ಮ ವಿಚಾರಕ್ಕಿಂತ ಪರಕೀಯರ ವಿಚಾರಗಳೇ ಶ್ರೇಷ್ಠವೆಂದು ತಿಳಿದು ವ್ಯವಹರಿಸುತ್ತಾರೆ. ಆಗ ಅವರ ಸ್ವಾಭಿಮಾನವನ್ನು, ಅವರ ಸಾಂಸ್ಕøತಿಕ ವೈಭವವನ್ನೂ ಕಳೆದುಕೊಳ್ಳುತ್ತಾರೆ. ಆಗ ವಸ್ತುಶಃ ಅವರು ಗುಲಾಮರಾಗುತ್ತಾರೆ.”

ಅವರ ಸಂಪೂರ್ಣ ಭಾಷಣದಲ್ಲಿ ಭಾರತವನ್ನು ಯಾವ ರೀತಿಯಲ್ಲಿ ಒಡೆಯಬಹುದೆಂಬ ಕಲ್ಪನೆಯನ್ನು ಆವತ್ತು ಮೆಕಾಲೆ ಕೊಟ್ಟಿದ್ದರು. ಭಾರತದಲ್ಲಿ ಶಿಕ್ಷಣ ವ್ವಸ್ಥೆಯನ್ನು ಜಾರಿಗೊಳಿಸುವ ವೇಳೆಗೆ ಆತ ತನ್ನ ತಂದೆಗೆ ಒಂದು ಪತ್ರವನ್ನು ಬರೆಯುತ್ತಾನೆ. “ಡಿಯರ್ ಫಾದರ್, ಇಲ್ಲಿ ಎಲ್ಲವೂ ಯೋಜನಾಬದ್ಧವಾಗಿ ನಡೆಯುತ್ತಿದೆ. ಭಾರತದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ಇನ್ನು ಕೆಲವೇ ವರ್ಷಗಳಲ್ಲಿ ಅನುಷ್ಠಾನವಾಗಲಿದೆ. ನೋಡುತ್ತಿರಿ.. ಇನ್ನು ಕೆಲವೇ ಕೆಲವು ವರ್ಷಗಳು ಅಷ್ಟೇ. ಭಾರತೀಯರ ದೇಶ ಮಾತ್ರ ಭಾರತವಾಗಿರುತ್ತೆ ಆದರೆ ಅವರ ಬುದ್ಧಿ ಮಾತ್ರ ವಿದೇಶಿಯರದ್ಧಾಗಿರುತ್ತೆ.”

ಇದರ ಪರಿಣಾಮವಾಗಿ ನೂರಾರು ಗುರುಕುಲಗಳನ್ನು ಸರ್ವನಾಶಮಾಡಲಾಯಿತು. ಹಿಂದೂಗಳ ಶಿಕ್ಷಣ ವ್ಯವಸ್ಥೆಯನ್ನು, ಸನಾತನ ಪರಂಪರೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಹರಸಾಹಸಪಟ್ಟರು. ವಿರೋಧಿಸಿದವರನ್ನು ನಿರ್ದಯವಾಗಿ ಹತ್ಯೆಗೈಯಲಾಯಿತು. ನಿಮ್ಮ ಗಮನದಲ್ಲಿರಲೆಂದು ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. ಆತನ ಸಾಮಾಜಿಕ ಕಾರ್ಯವನ್ನು ಪ್ರತೀ ಬಾರಿಯೂ ಶ್ಲಾಘಿಸುವ ನಾವು, ಮೆಕಾಲೆಯ ಕನಸನ್ನು ನನಸು ಮಾಡಿದವನೂ ಅವನೇ ಎಂಬ ಕಹಿಸತ್ಯವನ್ನು ಮರೆತಿದ್ದೇವೆ. ಭಾರತದಲ್ಲಿ ಪ್ರಥಮ ಆಂಗ್ಲ ಶಾಲೆಯನ್ನು ಪ್ರಾರಂಭ ಮಾಡಿದವ ಆತ. ಆತನೇ ರಾಜಾರಾಮ್ ಮೋಹನ್ ರಾಯ್ !!! ಭಾರತದಲ್ಲಿ ಆಂಗ್ಲ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವುದು ತಪ್ಪಲ್ಲ; ಆದರೆ ಅನುಷ್ಠಾನಗೊಳಿಸಿದ ರೀತಿಯನ್ನು ನಾವೆಲ್ಲಾ ವಿಮರ್ಶಿಸಬೇಕಾಗಿದೆ.

ಮೆಕಾಲೆಯ ಮಾತುಗಳನ್ನು ಹಾಗೂ ಕಾರ್ಯಗಳನ್ನು ಅಕ್ಷರಶಃ ಸತ್ಯ ಮಾಡುತ್ತಿದೆ ಕಾಂಗ್ರೆಸ್. ಬ್ರಿಟಿಷರು ಭಾರತವನ್ನು ಒಡೆದಿದ್ದು ಧರ್ಮದ ಹೆಸರಿನಲ್ಲಿ. ನಮಗೆಲ್ಲಾ ಗೊತ್ತಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೂಲ ಕಾರಣವೇ ಗೋಹತ್ಯೆ ಮತ್ತು ಹಂದಿ ಮಾಂಸವನ್ನು ಸೇವಿಸಲು ಬ್ರಿಟಿಷ್ ಆದೇಶಿಸಿದ್ದು. ಎರಡು ಧರ್ಮದ ನಡುವೆ ಬಿರುಕು ಮೂಡಿಸಿದ ಮೊದಲ ಸನ್ನಿವೇಶವದು. ಅನಂತರ ಬಂಗಾಲ ವಿಭಜನೆ, ಪಾಕಿಸ್ತಾನ ವಿಭಜನೆ ಇತ್ಯಾದಿ ದುರಾಲೋಚನೆಯನ್ನು ಮಾಡಿ ಭಾರತದಲ್ಲಿನ ಸಾಮಾರಸ್ಯವನ್ನು ನಿರ್ನಾಮ ಮಾಡಿದ್ದು ಕುತಂತ್ರಿಗಳು.

ಇದೇ ಕುತಂತ್ರದ ಹಾದಿಯನ್ನೇ ಪಾಲಿಸುತ್ತಿದೆ ಬ್ರಿಟಿಷ್ ಇಂಡಿಯನ್ ಪಕ್ಷ ಕಾಂಗ್ರೆಸ್. ಸ್ವತಂತ್ರ ಭಾರತದ ಮೊದಲ ಪಕ್ಷವೆಂದು ಕರೆಯಲಾಗುತ್ತಿರುವ ಕಾಂಗ್ರಸ್ ಅನ್ನು ವಿದೇಶಿಯವರ ಪಕ್ಷವೆಂದು ಕರೆಯುತ್ತಿದ್ದಾರೆ ಎಂದು ಗಾಬರಿಯಾಗಬೇಡಿ. ವಾಸ್ತವವಾಗಿ ಇದುವೇ ಸತ್ಯಾಂಶ. ಬ್ರಿಟಿಷ್ ಇಂಡಿಯಾದ ಅಧಿಕಾರಿಯಾಗಿದ್ದ ಎ ಒ ಹ್ಯೂಮ್ ಪ್ರಾರಂಭ ಮಾಡಿದ ಕಾಂಗ್ರೆಸ್ ಪಕ್ಷವಿದು. ಎಂತಹ ಕುಚೋದ್ಯದ ಸಂಗತಿ ನೋಡಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಬ್ರಿಟಿಷರೇ ಒಂದು ಪಕ್ಷವನ್ನು ಸ್ಥಾಪನೆ ಮಾಡಿದರು. ಅಂದರೆ ಕಾಂಗ್ರೆಸ್‍ನಲ್ಲಿರುವ ರಕ್ತ ಹರಿಯುತ್ತಿರುವುದು ಬ್ರಿಟಿಷರದ್ದೇ ಹೊರತು ಭಾರತದ್ದಂತೂ ಅಲ್ಲ ಅನ್ನುವುದು ಸ್ಪಷ್ಟ.

ಯಾವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯರನ್ನು ಒಡಿಯುತ್ತಿದೆ ಅನ್ನುವುದು ನಮ್ಮ ಅರಿವಿಗೆ ಬರುತ್ತಿದೆ. ಶರತ್ ಮಡಿವಾಳನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿತು, ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಇತರರಿಗೆ ಏನೂ ಸಿಗದಂತೆ ಮಾಡಿದರು. ಹಿಂದೂ ಧರ್ಮದಲ್ಲಿ ಒಂದಾಗಿದ್ದ ಲಿಂಗಾಯತರನ್ನು ಪ್ರತ್ಯೇಕ ಧರ್ಮವನ್ನಾಗಿ ನಿರ್ಮಾಣ ಮಾಡುವಂತೆ ಪ್ರೇರೇಪಿಸಿತು ಕಾಂಗ್ರೆಸ್. ಮುಸಲ್ಮಾನರ ಓಲೈಕೆಗಾಗಿ ಅನೇಕ ಕಸರತ್ತನ್ನೂ ಇದೇ ಕಾಂಗ್ರೆಸ್ ಪಕ್ಷ ಮಾಡಿತ್ತು. ಅಂದರೆ ಬ್ರಿಟಿಷರ ರಕ್ತ ಕಾಂಗ್ರೆಸ್ ನಲ್ಲಿ ಹರಿದಾಡುತ್ತಿರುವುದು ಅಷ್ಟೇ ಸ್ಪಷ್ಟ.

ಬ್ಟಿಷ್ ಇಂಡಿಯಾ ಪಕ್ಷದ ಅತೀ ದೊಡ್ಡ ಭ್ರಷ್ಟಾಚಾರಿಯಾಗಿದ್ದ ನೆಹರೂ ರವರ ಕಾರಣದಿಂದಾಗಿ ಭಾರತ ಚೀನೀಯರ ವಿರುದ್ಧ ಸೋಲುವಂತಾಗಿತ್ತು. 1947 ರಲ್ಲಿ ಇದೇ ಕಾಂಗ್ರೆಸ್ ಪಕ್ಷದ ಅಧಿಕಾರದ ಆಸೆಯಿಂದಾಗಿ ಭಾರತ-ಪಾಕಿಸ್ತಾನ ಪ್ರತ್ಯೇಕವಾಗುವಂತೆ ಮಾಡಿತು. ಭಾರತದ ಸ್ವಾತಂತ್ರ್ಯವನ್ನು ತುರ್ತುಪರಿಸ್ಥಿತಿಯ ಮೂಲಕ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆಯ ಗೈದಿದ್ದು ಇದೇ ಪಕ್ಷ. ಯಾವ ರೀತಿಯಲ್ಲಿ ಬ್ರಿಟಿಷರು ಭಾರತವನ್ನು ಲೂಟಿ ಮಾಡಿದರೋ, ಅದೇ ರೀತಿಯಾಗಿ ಹಗರಣಗಳ ಸುರಿಮಳೆಯನ್ನೇ ಮಾಡಿ ಲೂಟಿಗೈದಿದ್ದು ಇದೇ ಕಾಂಗ್ರೆಸ್.

ಕರುನಾಡಿನಲ್ಲಷ್ಟೇ ಅಲ್ಲದೇ, ಇಡೀ ದೇಶದಲ್ಲಿ ಸಾಮರಸ್ಯವನ್ನು, ಸಮಾಜದ ನಡುವೆ ಇದ್ದಂತಹ ಬಾಂಧವ್ಯದ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ರಾಜಸ್ತಾನದಲ್ಲಿ ಜಾಟ್ ಸಮಾಜವನ್ನು ಎತ್ತಿ ಕಟ್ಟಿ ಇತರರಿಂದ ಪ್ರತ್ಯೇಕ ಸ್ಥಾನವನ್ನು ಕಲ್ಪಿಸಲು ಯತ್ನ ಮಾಡುತ್ತಿದೆ. ಗುಜರಾತ್ ರಾಜ್ಯದಲ್ಲಿ ಪಟೇಲ್ ಸಮುದಾಯವನ್ನು ತನ್ನ ಕುತಂತ್ರಕ್ಕೆ ಬಳಸಿಕೊಂಡಿದ್ದು ವಿಪರ್ಯಾಸ. ದೇಶ ಬಿಡಿ, ರಾಜ್ಯ ಬಿಡಿ, ದಕ್ಷಿಣ ಕರ್ನಾಟಕದಲ್ಲಿಯೇ ಬಿಲ್ಲವ ಮತ್ತು ಬಂಟ್ಸ್ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ ಕಾಂಗ್ರೆಸ್ . ಇದೆಲ್ಲವೂ ಭಾರತದಲ್ಲಿನ ಒಗ್ಗಟ್ಟನ್ನು ಮುರಿಯುವ ವ್ಯವಸ್ಥಿತವಾದ ಕಾರ್ಯಯೋಜನೆಯನ್ನು ರೂಪಿಸುತ್ತಿದೆ ಕಾಂಗ್ರೆಸ್.

200 ವರ್ಷಗಳ ಕಾಲ ಆಳಿದ ಬ್ರಿಟಿಷರ ರೂಪದಲ್ಲಿ ಇವತ್ತು ಕಾಂಗ್ರೆಸ್ ಪಕ್ಷ ಆಳ್ವಿಕೆಯನ್ನು ಮಾಡುತ್ತಿದೆ. ಹಾಗಾಗಿ ಆದಷ್ಟು ಶೀಘ್ರದಲ್ಲಿ ಇಂತಹ ಬ್ರಿಟಿಷ್ ಇಂಡಿಯಾ ಪಕ್ಷಕ್ಕೆ ಭಾರತದಿಂದ ಮುಕ್ತಿಯೆಂದು ಎಂಬುದನ್ನು ಭಾರತೀಯರಾದ ನಾವು ಅವಲೋಕನ ಮಾಡಬೇಕಿದೆ. ಇಲ್ಲವಾದರೆ ದೇಶ ಇನ್ನಷ್ಟು ಅಧೋಗತಿಗೆ ಇಳಿಯುವುದು ಅಷ್ಟೇ ಸ್ಪಷ್ಟ.. ಯೋಚಿಸಿ ನೋಡಿ.

– Postcard team

Tags

Related Articles

FOR DAILY ALERTS
 
FOR DAILY ALERTS
 
Close