ಪ್ರಚಲಿತ

ವೋಟ್ ಹಾಕದೇ ಟ್ವೀಟ್ ಮಾಡಿ ರಾಜಕೀಯ ಮಾಡುತ್ತಿರುವ ರಮ್ಯಾ ! ಫೇಕ್ ನಟಿಯಿಂದ ಫೇಕ್ ಟ್ವೀಟ್..!

ಪ್ರಚಾರಕ್ಕೆ ಬೇಕಾಗಿ ಏನೂ ಮಾಡಲು ತಯಾರಿರುವ ಕೆಲವರು ಅದ್ಯಾವ ಕೀಳು ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ರಾಜ್ಯದಲ್ಲಿ ಅನೇಕರನ್ನು ಕಂಡಾಗ ತಿಳಿಯುತ್ತದೆ. ಅದೇ ರೀತಿ ಬಿಟ್ಟಿ ಪ್ರಚಾರ ಪಡೆದುಕೊಳ್ಳಲೆಂದೇ ಕಾದುಕೊಂಡು ಕೂತಿದ್ದ ನಟಿ ಹಾಗೂ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಫೇಕ್ ವಿಚಾರಗಳಿಗೆ ಫುಲ್ ಫೇಮಸ್ಸು. ತನಗೆ ಪ್ರಚಾರ ಸಿಗುತ್ತದೆ ಎಂದಾದರೆ ಯಾರ ಬಗ್ಗೆಯೂ ಮಾತನಾಡಲು ಬಕಪಕ್ಷಿಯಂತೆ ತಯಾರಾಗಿರುವ ರಮ್ಯಾ ಚುನಾವಣೆಗೂ ಮೊದಲು ಭಾರೀ ಸುದ್ದಿಯಲ್ಲಿದ್ದವರು. ಆದರೆ ಯಾವಾಗ ತನ್ನ ಮಾತಿಗೆ ನಯಾ ಪೈಸೆಯ ಬೆಲೆ ಇಲ್ಲ ಎಂದು ಗೊತ್ತಾಯಿತೋ ಅಂದಿನಿಂದ ಈವರೆಗೂ ಕರ್ನಾಟಕದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ದೆಹಲಿಯಲ್ಲಿ ಕೂತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ರಮ್ಯಾ ಇದೀಗ ಚುನಾವಣೆಯ ನಂತರ ಮತ್ತೆ ಕಾಣಿಸಿಕೊಂಡಿದ್ದಾಳೆ..!

ವೋಟ್ ನೀಡಲು ಯೋಗ್ಯತೆ ಇಲ್ಲದವರು ರಾಜಕಾರಣದ ಬಗ್ಗೆ ಮಾತನಾಡುವುದೇ..!?

ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಹಕ್ಕುಗಳಿವೆ, ಅದೇ ರೀತಿ ಮತದಾನವೂ ಪ್ರತಿಯೊಬ್ಬರ ಹಕ್ಕು. ಮತದಾನ ಮಾಡಿ ಸರಿಯಾದ ವ್ಯಕ್ತಿಯನ್ನು ಆರಿಸಿ ಉತ್ತಮ ಆಡಳಿತ ನೀಡುವುದು ನಮ್ಮ ಕರ್ತವ್ಯ. ಅದೇ ರೀತಿ ಚುನಾವಣೆಗೂ ಮೊದಲು ಭಾರೀ ಮಾತನಾಡುತ್ತಿದ್ದ ರಮ್ಯಾ ಮತದಾನವೇ ಮಾಡಿಲ್ಲ ಎಂದರೆ ಈಯಮ್ಮನಿಗೆ ಯಾರು ಬಂದರೂ , ಹೋದರು ಅದರ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇಲ್ಲ, ಹಾಗೂ ಮತದಾನ ಮಾಡದೇ ಇರುವುದರಿಂದ ಅದರ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವೂ ಇಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ರಮ್ಯಾ ಇದೀಗ ನಾಪತ್ತೆಯಾಗಿದ್ದಾರೆ ಎಂದರೆ ಇದರ ಹಿಂದಿರುವ ಸತ್ಯ ಏನೆಂಬೂದು ತಿಳಿಯುತ್ತಿಲ್ಲ. ಕೇವಲ ಟ್ವಿಟ್ಟರ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ರಮ್ಯಾ ರಾಜ್ಯ ರಾಜಕಾರಣದಲ್ಲಿ ಸದ್ಯ ಯಾವುದೇ ಅಧಿಕಾರ ಹೊಂದಿಲ್ಲ.!

Image result for ramya

ಪಿಯೂಷ್ ಗೋಯಲ್ ವಿರುದ್ಧ ರಮ್ಯಾ ಕಿಡಿ..!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಸರತ್ತು ನಡೆಸುತ್ತಿದೆ , ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತಮ್ಮತ್ತ ಸೆಳೆಯಲು ನೂರು ಕೋಟಿಯ ಆಮಿಷ ಒಡ್ಡಲಾಗಿದೆ ಎಂಬ ಆಧಾರ ರಹಿತ ಆರೋಪ ಮಾಡಿರುವ ರಮ್ಯಾ, ಗುಜರಾತಿನ ಉದ್ಯಮಿ ಒಬ್ಬರು ಕರ್ನಾಟಕದ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ರಾಜ್ಯ ಬಿಜೆಪಿ ಮತ್ತು ಗುಜರಾತ್ ನ ಈ ಉದ್ಯಮಿಗೂ ಇರುವ ಸಂಬಂಧವೇನು ಎಂದು ಪ್ರಶ್ನಿಸಿರುವ ರಮ್ಯಾ ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕೇಳಿದ್ದಾರೆ.
ರಮ್ಯಾ ಈವರೆಗೆ ಮಾಡಿರುವ ಯಾವುದೇ ಆರೋಪಕ್ಕೂ ಆಧಾರವೇ ಇಲ್ಲ , ಆದರೂ ಪದೇ ಪದೇ ಬಿಜೆಪಿಯ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಮತದಾನವೇ ಮಾಡದ ರಮ್ಯಾ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ..!

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಲೆಳೆಯುವ ಕೆಲಸ ಮಾಡಿಕೊಂಡು ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡುವ ರಮ್ಯಾಳಿಂದ ಈ ರಾಜ್ಯದ ಜನತೆ ಯಾವ ಬುದ್ದಿ ಮಾತನ್ನೂ ಕೇಳಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಅಲ್ಲವೇ..!?

–ಸಾರ್ಥಕ್

Tags

Related Articles

FOR DAILY ALERTS
 
FOR DAILY ALERTS
 
Close