ಅಂಕಣದೇಶ

ಕಾಂಗ್ರೆಸ್ಸಿಗರೆ ಮೋದಿ ಬೆಳೆಯಲು ಬಿಜೆಪಿ ಕಾರಣನಾ..? ಈ ಪ್ರಶ್ನೆಗೆ ಉತ್ತರಿಸುವಿರಾ..?

ಅದೇನೋ ಹೇಳ್ತಾರಲ್ಲಾ , ಕೊಟ್ಟವನು ಕೋಡಂಗಿ -ಈಸ್ಕೋಂಡೋನು ವೀರಭದ್ರ ಅಂತ. ಈ ಮಾತು ಕಾಂಗ್ರೆಸ್ ನ ಡೊಂಬರಾಟಕ್ಕೆ ಹೇಳಿ ಮಾಡಿಸಿದಂತಿದೆ. ಯಾಕೆಂದರೆ ತಮ್ಮ ಅಧಿಕಾರದ ಅವಧಿಯಲ್ಲಿ ತಾವು ಮಾತ್ರ ದೇಶವನ್ನು ಲೂಟಿ ಮಾಡದೇ , ದೋಚುವವರು ಇನ್ನೂ ದೋಚಿಕೊಂಡು ಹೋಗಲಿ ಎಂದು ಸಿಕ್ಕವರಿಗೆಲ್ಲಾ ಭಾರತದ ಖಜಾನೆಯ ಕೀಲಿ ಕೈ ಕೊಟ್ಟುಬಿಟ್ಟಿತ್ತು.

ಈ ಆಡಳಿತಕ್ಕೆ ಮುಕ್ತಿ ನೀಡಲೇಬೇಕೆಂಬ ನಿರ್ಧಾರದಿಂದಲೇ ನರೇಂದ್ರ ಮೋದಿಯವರು ಒಂದೊಂದೇ ನೀತಿಗಳನ್ನು ಜಾರಿಗೊಳಿಸುತ್ತಾ ಬಂದರು. ಇದರಿಂದ ಕಂಗೆಟ್ಟ ದೇಶದ ಸಂಪತ್ತು ದೋಚುತ್ತಿದ್ದವರೆಲ್ಲರೂ ಇಂದು ದೇಶಬಿಟ್ಟು ಪರಾರಿಯಾಗುತ್ತಿದ್ದಾರೆ. ಕಾಂಗ್ರೆಸ್ ನ ಆಡಳಿತದಲ್ಲಿ ಬೇಕಾಬಿಟ್ಟಿ ಯಾಗಿ ಹಣಗಳಿಸಿದ್ದ ಡೋಂಗಿವಾದಿಗಳೆಲ್ಲರೂ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೋಸದಿಂದ ಗಳಿಸಿದ ಹಣವನ್ನೆಲ್ಲಾ ಕಕ್ಕುವಂತಾಗಿದೆ..!

ಇದೀಗ ನೀರವ್ ಮೋದಿ ಎಂಬ ಕತರ್ನಾಕ್ ವಜ್ರ ವ್ಯಾಪಾರಿ ಮಾಡಿದ ಹಗರಣಗಳನ್ನು ಬಯಲಿಗೆಳೆದ ಮೋದಿ ಸರಕಾರದ ಈ ದಿಟ್ಟ ನಿರ್ಧಾರಕ್ಕೆ ಇಡೀ ದೇಶವೇ ನಿಬ್ಬೆರಗಾಗಿದೆ. ಯಾಕೆಂದರೆ ನೀರವ್ ಮೋದಿ ದೇಶದ ಬೊಕ್ಕಸಕ್ಕೆ ಮಾಡಿದ ಪೆಟ್ ಸಾಮಾನ್ಯವಾದದ್ದಲ್ಲ, ಬರೋಬ್ಬರಿ ೧೧ ಸಾವಿರ ಕೋಟಿಯಷ್ಟು ಸಾಲವನ್ನು ಮಾಡಿ ಇದೀಗ ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಕಾಂಗ್ರೆಸ್ ನ ಕಾಲಾವಧಿಯಲ್ಲೇ ಈ ಹಗರಣ ನಡೆದಿದ್ದು , ನರೇಂದ್ರ ಮೋದಿಯವರ ಸರ್ಕಾರ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆ, ಪೂರ್ಣ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದರಿಂದ ಮಾಡಿದ ಮೋಸಗಳೆಲ್ಲವೂ ಒಂದೊಂದಾಗಿಯೇ ಹೊರಬರುತ್ತಿದೆ. ಯುಪಿಯೇ ಸರಕಾರದ ಅವಧಿಯಲ್ಲಿ ಅದೆಷ್ಟೋ ಸಾವಿರ ಕೋಟಿ ಹಗರಣಗಳು ನಡೆದಿವೆ. ಆದರೆ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಮೋದಿಯವರ ದಿಟ್ಟ ನಿರ್ಧಾರಗಳಿಂದಾಗಿ ಮಾಡಿದ ಎಲ್ಲಾ ಹಗರಣಗಳು ಬಯಲಾಗುತ್ತಿದೆ.

ಹಗರಣಗಳು ನಡೆದಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಆದರೆ ಹೊಣೆಗಾರಿಕೆ ಮಾತ್ರ ಮೋದಿ ಸರಕಾರದ ಮೇಲೆ..!ದೇಶದ್ರೋಹಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದ್ದ ಕಾಂಗ್ರೆಸ್ ನ ಅವಧಿಯಲ್ಲಿ ಭಾರತದ ಬೊಕ್ಕಸವನ್ನು ಖಾಲಿ ಮಾಡುವ ಕೆಲಸ ನಡೆಯುತ್ತಿತ್ತು. ನೀರವ್ ಮೋದಿ ಗೆ ಸಾವಿರಾರು ಕೋಟಿ ಸಾಲ ನೀಡಿರುವುದು ಯುಪಿಯೇ ಸರಕಾರದ ಅವಧಿಯಲ್ಲಿ, ಆದರೂ ಈ ಹಗರಣದ ಹೊಣೆಗಾರಿಕೆಯನ್ನು ಮಾತ್ರ ಕಾಂಗ್ರೆಸ್ ಹೊರುತ್ತಿಲ್ಲ.  ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಆದರೂ ಕಾಂಗ್ರೇಸ್ ಯಾವುದೇ ರೀತಿಯ ಕ್ರಮ‌ ಕೈಗೊಳ್ಳದೆ ಲೂಟಿಕೋರರಿಗೆ ನೆರವಾಗಿತ್ತು.

ನರೇಂದ್ರ ಮೋದಿಯವರು ನೀರವ್ ಮೋದಿ ಯವರ ಇಷ್ಟು ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದಾರೆ. ಆದರೆ ಕಾಂಗ್ರೆಸ್ ಈ ಬಗ್ಗೆ ಚಕಾರ ಎತ್ತುತ್ತಿಲ್ಲ…! ಕಾರಣ…ತಾವೇ ತೋಡಿದ್ದ ಹಳ್ಳಕ್ಕೆ ತಾವೇ ಬೀಳುತ್ತೇವೆ ಎಂಬ ಭಯ.

ಕೇಂದ್ರದ ತನಿಖಾ ಸಂಸ್ಥೆಯು ಇಲಗಲಿಯವರೆಗೆ ನೀರವ್ ಮೋದಿ ಯ ಆಸ್ತಿ , ಬ್ಯಾಂಕ್ ಖಾತೆ ಎಲ್ಲವನ್ನೂ ಮಟ್ಟಹಾಕಿ ಸುಮಾರು ೫,೭೦೦ ಕೋಟಿಯಷ್ಟು ಮೊತ್ತವನ್ನು ಸರಕಾರ ವಶಪಡಿಸಿಕೊಂಡಿದೆ. ನೀರವ್ ಮೋದಿ ಸಾವಿರಾರು ಕೋಟಿ ಬ್ಯಾಂಕ್ ಸಾಲ ಮಾಡಿ ದೇಶಬಿಟ್ಟು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮೋದಿ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.
ಆದರೂ ಕಾಂಗ್ರೆಸ್ ಏಕೆ ಇನ್ನೂ ಕೊಂಕು ಬುದ್ದಿ ಪ್ರದರ್ಶಿಸುತ್ತಿದೆ..?

೨೦೧೩ ರಲ್ಲೇ ನೀರವ್ ಮೋದಿ ಗೆ ಸಾಲ‌ ಕೊಡಲು ನಿರಾಕರಿಸಿದ ಅಲಹಾಬಾದ್ ನ ಬ್ಯಾಂಕ್ ಅಧಿಕಾರಿಯೊಬ್ಬರು ಎಚ್ಚರಿಕೆಯೂ ನೀಡಿದ್ದರು. ಆದರೂ ಕಾಂಗ್ರೆಸ್ ಸರಕಾರ ಏಕೆ ಸುಮ್ಮನಿತ್ತು…?

ಇದೀಗ ಮೋದಿ ಸರಕಾರ ನೀರವ್ ಮೋದಿ ಯ ಪಾಸ್ ಪೋರ್ಟ್ ಮೇಲೆ ನಿರ್ಬಂಧ ಹೇರುವ ಮೂಲಕ ನೀರವ್ ಮೋದಿ ಯ ಮೇಲೆ ದಿಗ್ಬಂಧನ ಹೇರಿರುವುದು ಮೋದಿ ಸರಕಾರದ ದಿಟ್ಟ ನಿರ್ಧಾರ. ಆದರೆ ಅದನ್ನೂ ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಿಲುವೇನು..?

ಯುಪಿಎ ಅವಧಿಯಲ್ಲಿ ಕೊಟ್ಟ ಸಾಲವನ್ನು ಮೋದಿ ಸರಕಾರ ವಸೂಲಿ‌ ಮಾಡಲು ಕ್ರಮ‌ಕೈಗೊಳ್ಳುತ್ತಿದೆ.ಆದರೆ ಅದನ್ನೂ ವಿರೋಧಿಸುತ್ತಿರುವ ಕಾಂಗ್ರೆಸ್ ಕೂಡಾ ಈ ಹಗರಣದಲ್ಲಿ ಪಾಲುದಾರರಾಗಿದೆಯೇ..?

ಈ ಹಿಂದೆ ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲ ಮಾಡಿ ಮರುಪಾವತಿಸದೆ ಸುಖವಾಗಿ ಭಾರತದಲ್ಲೇ ಐಶಾರಾಮಿ ಜೀವನ ಸಾಗಿಸುತ್ತಿದ್ದರು.
ಆದರೆ ಮೋದಿ ಸರಕಾರ ಬರುತ್ತಲೇ ಇಂತಹ ಲೂಟಿಕೋರರಿಗೆ ನಡುಕ ಉಂಟಾಗಿ ಏನೂ ಮಾಡಲಾಗದೆ ದೇಶ ಬಿಟ್ಟು ವಿದೇಶಕ್ಕೆ ಓಡಿ ಹೋಗುತ್ತಿದ್ದಾರೆ.

ಯುಪಿಎ ಅವಧಿಯಲ್ಲಿ ಇಂತಹ ಪ್ರಭಾವಿ ವ್ಯಕ್ತಿಗಳಿಗೆ ಯಾವುದೇ ಆಧಾರ ಇಲ್ಲದೆ ಸಾವಿರಾರು ಕೋಟಿ ಸಾಲ ನೀಡಿ ಸಾಕುತ್ತಿತ್ತು. ಸಾಲ ಮರುಪಾವತಿ ಮಾಡದೇ ಮತ್ತೆ ಮತ್ತೆ ಸಾಲ ಮಾಡುತ್ತಿದ್ದ ದೇಶದ್ರೋಹಿಗಳ ಬಣ್ಣ ಮೋದಿ ಸರಕಾರ ಬಂದ ನಂತರ ಬಯಲಾಗತೊಡಗಿದೆ.

ಹಾಗಾದರೆ ನಿಜವಾಗಿಯೂ ಪ್ರಶ್ನಿಸಬೇಕಾದರು ಯಾರು ? ಮತ್ತು ಯಾರನ್ನು? ಎಂಬೂದು ಕಾಂಗ್ರೇಸಿಗರೇ ಉತ್ತರಿಸಬೇಕಾಗಿದೆ.

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close