ಅಂಕಣಪ್ರಚಲಿತ

ಹೂ ಈಸ್ ಜಾರ್ಜ್ ಫರ್ನಾಂಡೀಸ್? ಸೋನಿಯಾ ಫೋಟೋ ತೆಗೆಸಿದ ವೀರ, ಯುದ್ಧಭೂಮಿಗಿಳಿದು ಘರ್ಜಿಸಿದ ಶೂರ, ಕೊಂಕಣ ರೈಲಿನ ಸರದಾರ.!

ವರು ಭಾರತದ ಜಾತ್ಯಾತೀತ ನಿಲುವಿಗೆ ಗೆಲುವು ತಂದುಕೊಟ್ಟ ನಾಯಕರು, ಯುದ್ಧದ ಸಂದರ್ಭದಲ್ಲಿ ಖುದ್ದಾಗಿ ರಣಭೂಮಿಗೇ ಎಂಟ್ರಿಕೊಟ್ಟು ಸೈನಿಕರಿಗೆ ಆತ್ಮವಿಶ್ವಾಸ ತುಂಬುವ ದಿಟ್ಟ ನಾಯಕರು, ಬಡ ಕಾರ್ಮಿಕರ ಪಾಲಿಗೆ ಆಶಾಕಿರಣವಾಗಿದ್ದ ಬಡವರ ಬಂಧು, ನೆಹರೂ ಪರಿವಾರದ ವಿರುದ್ಧ ಸೆಟೆದು ನಿಂತು ಪೌರುಷ ತೋರಿಸಿದ್ದ ಧೈರ್ಯಶಾಲಿ, ಫೋಕ್ರಾನ್ ಬಾಂಬ್ ಸ್ಪೋಟದ ಕಾರಣಕರ್ತರಾಗಿರುವವರಲ್ಲಿ ಓರ್ವರು… ಹೌದು, ಅವರು ಬೇರಾರೂ ಅಲ್ಲ, ಇಂದು ಕೋಟ್ಯಾಂತರ ಭಾರತೀಯರನ್ನು ಅಗಲಿ ತನ್ನ ನೆಚ್ಚಿನ ಗೆಳೆಯರಿಬ್ಬರ ಬಳಿ ತೆರಳಿರುವ ಅದ್ಭುತ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್. ಕರಾವಳಿಯ ಹೆಮ್ಮೆಯ ಕಣ್ಮಣಿ ಇನ್ನು ಮುಂದೆ ನೆನಪು ಮಾತ್ರ.

ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ಸ್ವತಃ ತಾನೇ ಯುದ್ಧಭೂಮಿಗೆ ತೆರಳಿ, ದುರಸ್ತಿಯಾಗಿದ್ದ ಯುದ್ಧವಿಮಾನದಲ್ಲಿ ಸೈನಿಕರನ್ನು ಕುಳ್ಳಿರಿಸುವ ಮೊದಲು ತಾನು ಕುಂತು ಸೈನಿಕರಿಗ ಧೈರ್ಯ ತುಂಬಿ ಯುದ್ಧಕ್ಕೆ ಪ್ರೋತ್ಸಾಹಿಸಿ ಕೋಟಿ ದೇಶಭಕ್ತರಿಗೆ ಶ್ರೇಷ್ಟ ನಾಯಕರೆನಿಸಿಕೊಂಡಿದ್ದರು. ಬಡ ಕೂಲಿ ಕಾರ್ಮಿಕರ ಪರವಾಗಿ ಬಲವಾದ ಧ್ವನಿ ಎತ್ತುವ ಮೂಲಕ ಬಡವರ ಪಾಲಿಗೆ ಧ್ವನಿಯಾಗಿದ್ದವರು ಇವರು. ಇಂದು ಮಂಗಳೂರಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವ ಕೊಂಕಣ್ ರೈಲಿಗೆ ಅಡಿಪಾಯ ಹಾಕಿದವರೇ ಜಾರ್ಜ್ ಫರ್ನಾಂಡೀಸ್. “ನಾನು ಇರಲಿ ಅಥವಾ ಇಲ್ಲದಿರಲಿ, ಕೊಂಕಣ್ ರೈಲ್ವೇ ಯೋಜನೆ ಜಾರಿಯಾಗೇ ಆಗುತ್ತೆ” ಎಂದಿದ್ದರು ಜಾಜ್ ಸಾಹೇಬರು.

ಜಾರ್ಜ್ ಫರ್ನಾಂಡೀಸ್ ಅವರು ನಿರ್ವಹಿಸಿದ ಜವಾಬ್ದಾರಿಗಳು:

 • 1967-70 ರ ನಡುವೆ ನಾಲ್ಕನೇ ಲೋಕಸಭಾದ ಸದಸ್ಯರಾಗಿದ್ದರು.
 •  1969-73 ರ ನಡುವೆ ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿದ್ದರು.
 •  1973-77 ರ ನಡುವೆ ಆಲ್ ಇಂಡಿಯಾ ರೈಲ್ವೇ ಮೆನ್ಸ್ ಫೆಡರೇಶನ್ ನ ಅಧ್ಯಕ್ಷರಾಗಿದ್ದರು.
 • 1977-79 ರ ನಡುವೆ ಮತ್ತೊಮ್ಮೆ ಆರನೇ ಲೋಕಸಭಾದ ಸದಸ್ಯರಾಗಿ ಆಯ್ಕೆಗೊಂಡರು.
 •  1977 ರ ಮಧ್ಯಭಾಗದವರೆಗೆ ಕಮ್ಯುನಿಕೇಷನ್‌ನ ಕೇಂದ್ರ ಸಚಿವರಾಗಿ ಮತ್ತು 1977-79 ರ ನಡುವೆ ಕಾರ್ಖಾನೆ ವಿಭಾಗಕ್ಕೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
 •  1980-84 ರ ನಡುವೆ ಏಳನೇ ಲೋಕಸಭಾದ ಸದಸ್ಯರಾಗಿ ಆಯ್ಕೆಗೊಂಡರು. ಎಂಟನೇ ಲೋಕಸಭೆಗೂ ಆಯ್ಕೆಗೊಂಡರು.
 •  1989-90 ರ ನಡುವೆ ರೈಲ್ವೆ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
 •  1991 ರಲ್ಲಿ ಒಂಭತ್ತನೇ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
 •  ಹನ್ನೊಂದು, ಹನ್ನೆರಡನೇ ಮತ್ತು ಹದಿಮೂರನೇ ಲೋಕಸಭೆಯಲ್ಲೂ ಸದಸ್ಯರಾಗಿ ಆಯ್ಕೆಗೊಂಡರು
 •  2001-2004 ರ ನಡುವೆ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ
 •  2004-2009 ರ ನಡುವೆ 14 ನೇ ಲೋಕಸಭೆಗೆ ಸದಸ್ಯರಾಗಿದ್ದರು.
 •  2009-10 ರ ನಡುವೆ ರಾಜ್ಯಸಭಾದ ಸದಸ್ಯರಾಗಿದ್ದರು.
 • Image result for jeorge fernandes

ಸೋನಿಯಾ ಗಾಂಧಿಯ ಫೋಟೋವನ್ನೇ ತೆಗೆಸಿದ್ದರು ಜಾರ್ಜ್.!

ಸರ್ಕಾರಿ ಕಟ್ಟಡವೊಂದರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧೀಯವರ ಭಾವಚಿತ್ರವನ್ನು ತೂಗುಹಾಕಲಾಗಿತ್ತು. ರಾಷ್ಟ್ರದಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದ ಮಹನೀಯರ ಚಿತ್ರಗಳನ್ನು ಅಲ್ಲಿ ಅಳವಡಿಸಲಾಗಿತ್ತು. ಇದನ್ನು ಕಂಡಂತಹ ಜಾರ್ಜ್ ಫರ್ನಾಂಡೀಸ್ ಕೂಡಲೇ ಅದನ್ನು ತೆರವುಗೊಳಿಸುವಂತೆ ಆದೇಶಿಸುತ್ತಾರೆ.

ಈ ವೇಳೆ ಹೇಳಿಕೆ ನೀಡಿದ್ದ ಜಾರ್ಜ್ ಫರ್ನಾಂಡೀಸ್, “ಯಾರೋ ವಂಶಸ್ಥರ ಗುಲಾಮರು ಈ ಫೋಟೋವನ್ನು ಇಲ್ಲಿ ಹಾಕಿದ್ದಾರೆ. ಇದನ್ನು ನಾನು ತೆಗೆಸಿದ್ದೇನೆ. ಇವರೇನು ದೇಶವನ್ನು ಖರೀದಿ ಮಾಡಿದ್ದಾರಾ? ನೆಹರೂ ವಂಶದವರು ಈ ದೇಶವನ್ನು ಲೂಟಿ ಮಾಡಲೆಂದೇ ಬಂದವರು. ಅವರ ವಂಶವೇ ಲೂಟ್ ವಾಲಾ ವಂಶ. ಇದಕ್ಕೆಲ್ಲಾ ನಾವು ಅವಕಾಶ ನೀಡೋದಿಲ್ಲ. ನಮಗೆ ಅಧಿಕಾರ ಅಥವಾ ಹೆಸರು ಮುಖ್ಯವಲ್ಲ. ನಮಗೆ ದೇಶವನ್ನು ಸುಭೀಕ್ಷೆಯೆಡೆಗೆ ಕೊಂಡೊಯ್ಯುವುದೇ ಮುಖ್ಯವಾಗಿದೆ” ಎಂದು ಹೇಳಿದ್ದರು.

ಸದಾ ನೆಹರೂ ವಂಶಸ್ಥರ ದುರಾಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದ ಜಾರ್ಜ್ ಫರ್ನಾಂಡೀಸ್ ಅವರು ಮಾಜಿ ಪ್ರಧಾನಿ ಶ್ರೀಮತೀ ದಿ.ಇಂದಿರಾ ಗಾಂಧಿಯವರ ದುರಹಂಕಾರದ ಪ್ರತೀಕವಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಂದಿರಾ ಗಾಂಧಿ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದರು. “ಇದೊಂದು ಕರಾಳ ಪರಿಸ್ಥಿತಿ, ಭಾರತೀಯರ ಹಕ್ಕನ್ನು ಕಸಿಯುವ ಹುನ್ನಾರ” ಎಂದು ಇಂದಿರಾ ಗಾಂಧಿ ವಿರುದ್ಧ ಬಣ್ಣಿಸಿದ್ದರು.

Image result for jeorge fernandes

ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರ ಕಂಡ ಶ್ರೇಷ್ಟ ವಿಜ್ಞಾನಿ ಅಬ್ದುಲ್ ಕಲಾಂರವರ ಅತ್ಯಂತ ಆಪ್ತ ಸ್ನೇಹಿತರಾಗಿದ್ದ ಜಾರ್ಜ್ ಫರ್ನಾಂಡೀಸ್ ಇಂದು ತನ್ನ ಕುಚಿಕು ಗೆಳೆಯರ ಬಳಿ ಪ್ರಯಾಣ ಬೆಳೆಸಿದ್ದಾರೆ. ಅಟಲ್, ಕಲಾಂ ತರಹದ ಸರಳ ಜೀವನವನ್ನು ಮೈಗೂಡಿಸಿಕೊಂಡಿದ್ದ ಜಾರ್ಜ್ ಇಂದು ತಮ್ಮ ನೆನಪುಗಳನ್ನು ಮಾತ್ರವೇ ಬಿಟ್ಟು ಹೋಗಿದ್ದಾರಷ್ಟೇ. ಕರಾವಳಿಯ ಹೆಮ್ಮೆಯ ಪುತ್ರನೋರ್ವ ರಾಷ್ಟ್ರದ ಅತ್ಯುನ್ನತ ಹುದ್ದೆಯಾದ ರಕ್ಷಣಾ ಸಚಿವಾಲಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವ ಹೆಮ್ಮೆಯೂ ಕನ್ನಡಿಗರದ್ದು, ಅದರಲ್ಲೂ ಕರಾವಳಿಗರದ್ದು. ನಮ್ಮ ನಾಡಿನ ನಾಯಕ ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನದ ಪಾಪಿಗಳನ್ನು ಮಣ್ಣು ಮುಕ್ಕಿಸಿ ವಿಜಯದ ಪತಾಕೆಯನ್ನು ಹಾರಿಸಿದ್ದಾರೆ ಅನ್ನೋದೇ ಕಾಲರ್ ಟೈಟ್ ಮಾಡಿಕೊಂಡು ಹೇಳುವಂತಹಾ ಸಂಗತಿ.
“ಮತ್ತೆ ಹುಟ್ಟಿ ಬನ್ನಿ ಜಾರ್ಜ್ ತಾತಾ-ಕಾಯುತ್ತಿದ್ದಾಳೆ ನಿಮ್ಮ ಸೇವೆಗೆ ಭಾರತಮಾತಾ”

 • ಸುನಿಲ್ ಪಣಪಿಲ
Tags

Related Articles

FOR DAILY ALERTS
 
FOR DAILY ALERTS
 
Close