ಪ್ರಚಲಿತ

ದ್ವೇಷದಿಂದ‌ ದೇಶವನ್ನು ವಿಭಜಿಸಿದ್ದು ಯಾರು, ವಿಭಜಿಸುತ್ತಾ ಇರುವುದು ಯಾರು? ನೇತಾರರ ರಾಜಕೀಯಕ್ಕಾಗಿ ಬಳಕೆಯಾಗಿತ್ತಾ ಭಾರತ?

ಭಾರತ ಒಂದು ಸಂಪದ್ಭರಿತ ರಾಷ್ಟ್ರ, ಜಗತ್ತಿಗೆ ಒಳಿತನ್ನು ಬಯಸಿದ ರಾಷ್ಟ್ರ, ಜಗತ್ತು ತನ್ನ ಅಸ್ತಿತ್ವ ಕಳೆದುಕೊಳ್ಳುವ ಸಂದರ್ಭದಲ್ಲೂ ಭಾರತ ಜಗತ್ತಿಗೆ ದಾರಿ ತೋರಿಸಿದ ವಿಶ್ವಗುರು ರಾಷ್ಟ್ರ. ಯಾವ ರೀತಿ ಎಂದರೆ ಇತಿಹಾಸದಲ್ಲಿ ಅದೆಷ್ಟೋ ಅರಸರು ಭಾರತದ ಮೇಲೆ ದಂಡೆತ್ತಿ ಬಂದರೂ, ಭಾರತವನ್ನು ವಿಭಜಿಸುವ ಪ್ರಯತ್ನ ನಡೆಸಿದರು ಕೂಡ ಭಾರತ ತನ್ನ ಸೊಬಗನ್ನು ಕಳೆದುಕೊಳ್ಳಲಿಲ್ಲ. ನಂತರದಲ್ಲಿ ಬ್ರಿಟೀಷರ ದಬ್ಬಾಳಿಕೆಗೆ ಒಳಗಾದರೂ ಭಾರತ ತನ್ನ ಸಂಸ್ಕೃತಿಯನ್ನು ಬಿಟ್ಟು ಕೊಡಲಿಲ್ಲ. ಆದರೆ ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನು ಆಳ್ವಿಕೆ ನಡೆಸಿದ ನೆಹರೂ ಕುಟುಂಬ ನಿಜಕ್ಕೂ ಭಾರತವನ್ನು ವಿಭಜಿಸಿತ್ತು. ತಮ್ಮ ರಾಜಕೀಯ ಲಾಭಕ್ಕಾಗಿ ಭಾರತವನ್ನು ಬಳಸಿಕೊಂಡ‌ ಕೆಲ ರಾಜಕೀಯ ನೇತಾರರು ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸಿದರು. ಆದರೆ ಇಂದು ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಅವರು ಹೇಳುತ್ತಿದ್ದಾರೆ, “ಪ್ರಧಾನಿ ಮೋದಿ ದ್ವೇಷದಿಂದ ವಿಷ ಕಾರುತ್ತಿದ್ದಾರೆ, ದೇಶವನ್ನು ವಿಭಜಿಸುತ್ತಿದ್ದಾರೆ” ಎಂದು. ರಾಹುಲ್ ಗಾಂಧಿ ಹೇಳಿಕೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ದ್ವೇಷದ ರಾಜಕೀಯ ನಡೆಸುತ್ತಿದ್ದಾರಾ? ಭಾರತವನ್ನು ವಿಭಜನೆ ಮಾಡುತ್ತಿದ್ದಾರಾ.?

ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಾಯಕ ಇಂದು ಭಾರತವನ್ನು ವಿಭಜಿಸುವ ಮಾತುಗಳನ್ನು ಆಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತರೂ ಕೂಡ ಇನ್ನೂ ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳುವುದನ್ನು ನಿಲ್ಲಿಸದ ರಾಹುಲ್ ಗಾಂಧಿ, ತಾವು ಗೆದ್ದ ಕೇರಳದಲ್ಲಿ ಮಾತನಾಡುತ್ತಾ, ನಾನು ಪದೇ ಪದೇ ವಿಷ ಎಂಬ ಪದ ಬಳಕೆ ಮಾಡುತ್ತೇನೆ. ಯಾಕೆಂದರೆ ಪ್ರಧಾನಿ ಮೋದಿ ದ್ವೇಷದ ವಿಷ ನೀಡಿ ದೇಶವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಯಾವ ಉದ್ದೇಶ ಇಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ ಎಂಬುದು ಸ್ಪಷ್ಟಪಡಿಸದ ರಾಹುಲ್ ಗಾಂಧಿ, ದೇಶ ವಿಭಜನೆಯಾಗುತ್ತಿದೆ ಎಂಬಂತೆ ಹೇಳಿಕೊಂಡಿದ್ದಾರೆ.!

ನಿಜಕ್ಕೂ ದೇಶ ವಿಭಜನೆ ಮಾಡಿದ್ದು ಯಾರು?

ಅಷ್ಟಕ್ಕೂ ರಾಹುಲ್ ಗಾಂಧಿ ಹೇಳುವಂತೆ ಪ್ರಧಾನಿ ಮೋದಿ ಭಾರತವನ್ನು ವಿಭಜಿಸುವ ಕೆಲಸಕ್ಕೆ ಕೈ ಹಾಕಿದ್ದಾರಾ ಎಂಬ ಅನುಮಾನ ರಾಹುಲ್ ಗಾಂಧಿ ಬೆಂಬಲಿಗರಲ್ಲಿ ಮೂಡಬಹುದು. ಆದರೆ ಹೇಳಿಕೆ ನೀಡಿದ ರಾಹುಲ್ ಅವರ ಕುಟುಂಬದ ಇತಿಹಾಸ ಕೆದಕುತ್ತಾ ಹೋದಾಗ ಪ್ರತಿಯೊಬ್ಬರಿಗೂ ಸತ್ಯಾಂಶ ಅರಿವಾಗುತ್ತದೆ. ಯಾಕೆಂದರೆ ಮೊದಲು ದೇಶವನ್ನು ವಿಭಜನೆ ಮಾಡಿದ್ದು ನೆಹರೂ ಆದರೆ, ಆ ನಂತರದಲ್ಲಿ ಇಂದಿರಾ ಗಾಂಧಿ ಕೂಡ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಒತ್ತಾಯಪೂರ್ವಕವಾಗಿ ದೇಶದ ಜನರು ಸಂಕಷ್ಟಕ್ಕೀಡಾಗುವಂತೆ ಮಾಡಿದರು. ಒಂದರ್ಥದಲ್ಲಿ ಇದೂ ಕೂಡ ವಿಭಜನೆಯಂತೆ ನರಕದ ವಾತಾವರಣ ಸೃಷ್ಟಿಯಾಗಿತ್ತು. ಆ ನಂತರದಲ್ಲಿ ರಾಜೀವ್ ಗಾಂಧಿ ಸಿಖ್ಖರ ಹತ್ಯೆ ಮಾಡಿದ ಘಟನೆ ಕೂಡ ದೇಶದ ಇತಿಹಾಸದಲ್ಲಿ ಮರೆಯಲಾಗದ ಕರಾಳ ಘಟನೆ. ಆದರೆ ರಾಹುಲ್ ಗಾಂಧಿ ಇವೆಲ್ಲವನ್ನೂ ಮರೆತಂತಿದೆ. ಯಾಕೆಂದರೆ ಇಂದು ಪ್ರಧಾನಿ ಮೋದಿಯವರ ಮೇಲೆ ಇಂತಹ ಆರೋಪ ಮಾಡುವ ರಾಹುಲ್, ತಮ್ಮ ಪೂರ್ವಜರು ಈ ದೇಶಕ್ಕೆ ಯಾವ ರೀತಿ ಅನ್ಯಾಯ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇಡೀ ದೇಶಕ್ಕೆ ಗೊತ್ತಿದೆ, ಯಾರು ದೇಶವನ್ನು ವಿಭಜಿಸಿದ್ದಾರೆ, ಯಾರು ಒಗ್ಗೂಡಿಸಿದ್ದಾರೆ ಎಂಬುದು.‌ ಆದರೆ ರಾಹುಲ್ ಮಾತ್ರ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದು, ನಿಜಕ್ಕೂ ವಿಪರ್ಯಾಸವೇ ಸರಿ.!

ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವರ್ಚಸ್ಸು ಯಾವ ರೀತಿ ಹೆಚ್ಚಾಗುತ್ತಿದೆ ಮತ್ತು ಅದರಿಂದ ಭಾರತಕ್ಕೆ ಯಾವ ರೀತಿ ಗೌರವ ಹೆಚ್ಚಾಗುತ್ತಿದೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ ಮಾತ್ರವಲ್ಲದೆ ಇಂದು ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಅಮೇರಿಕ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳ ನಾಯಕರು ಭಾರತದ ಪ್ರಧಾನಿಗಾಗಿ ಕಾಯುತ್ತಾರೆ. ಇಂತಹ ನಾಯಕತ್ವ ಹೊಂದಿರುವ ನರೇಂದ್ರ ಮೋದಿಯವರು ಭಾರತವನ್ನು ವಿಭಜನೆ ಮಾಡುತ್ತಿದ್ದಾರೆ ಎಂದರೆ ಯಾರೂ ಕೂಡ ನಂಬಲು ಸಾಧ್ಯವಿಲ್ಲ. ‌ಈ ಸತ್ಯ ರಾಹುಲ್ ಗಾಂಧಿ ಅವರಿಗೂ ತಿಳಿದಿದೆ, ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡಿ ವಿವಾದ ಉಂಟು ಮಾಡುತ್ತಾರೆ. ಆದರೆ ಭಾರತೀಯರಿಗೆ ಗೊತ್ತಿದೆ, ಮೋದಿ ಏನು ಮಾಡುತ್ತಿದ್ದಾರೆ, ಭಾರತವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು.‌ ಹೀಗಿರುವಾಗ ಮೋದಿ ವಿರೋಧಿಗಳು ಯಾವ ಅಸ್ತ್ರ ಬಳಸಿದರು ಕೂಡ ಅದು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಟ್ಟಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close