ಪ್ರಚಲಿತ

ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತ್ರವಲ್ಲದೆ ಅನೇಕ ರಕ್ಷಣಾ ವ್ಯವಹಾರದಲ್ಲೂ ದಂಧೆ ನಡೆಸಿದ್ದಾನೆ ಕ್ರಿಶ್ಚಿಯನ್ ಮಿಷೆಲ್! ನಕಲಿ ಗಾಂಧಿ ಕುಟುಂಬಕ್ಕೂ ಮಿಷೆಲ್‌ಗೂ ಇರುವ ಸಂಬಂಧವೇನು?

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಪಕ್ಷ, ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನು ಆಳಿದ ಪಕ್ಷದ ಚರಿತ್ರೆ ಭಾರತೀಯರ ಎದುರು ಬಹಿರಂಗವಾಗುತ್ತಿದೆ. ದೇಶದ ಸಂಪತನ್ನು ಬ್ರಿಟೀಷರು ಲೂಟಿ ಮಾಡಿರುವುದಕ್ಕಿಂತ ಹೆಚ್ಚು ಲೂಟಿ ಮಾಡಿದ್ದಾರೆ ಈ ಕಾಂಗ್ರೆಸಿಗರು ಎಂಬುದು ತಿಳಿಯಲು ಮೋದಿಯೇ ಬರಬೇಕಾಯಿತು. ದೇಶವನ್ನು ಕೊಳ್ಳೆ ಹೊಡೆದು ತಮ್ಮ ಖಜಾನೆ ತುಂಬಿಸಿಕೊಂಡ ಕಾಂಗ್ರೆಸಿಗರು, ಭಾರತದ ರಕ್ಷಣಾ ವ್ಯವಸ್ಥೆಯಲ್ಲೂ ಹಗರಣ ನಡೆಸಿದ್ದಾರೆ ಎಂಬ ಮಹತ್ತರವಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ ಇಡಿ ಅಧಿಕಾರಿಗಳು. ಸದ್ಯ ಅಗಸ್ಟಾ ವೆಸ್ಟ್ ಲ್ಯಾಂಡ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಇಡಿ ಅಧಿಕಾರಿಗಳ ವಶದಲ್ಲಿದ್ದು, ದಿನದಿಂದ ದಿನಕ್ಕೆ ಒಂದೊಂದೇ ಸತ್ಯಾಂಶ ಹೊರಬೀಳುತ್ತಿದೆ. ಕ್ರಿಶ್ಚಿಯನ್ ಮಿಷೆಲ್ ಕೇವಲ ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತ್ರವಲ್ಲದೆ ಭಾರತದ ಅನೇಕ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವ್ಯವಹಾರದಲ್ಲೂ ಪಾಲು ಪಡೆದಿದ್ದಾನೆ ಎಂದು ನ್ಯಾಯಾಲಯಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಕಳ್ಳ ಕ್ರಿಶ್ಚಿಯನ್ ಮಿಷೆಲ್‌ಗೂ ಇರುವ ಒಳ ಸಂಭಂದ ಬಹಿರಂಗವಾಗಿದೆ.!

ಹವಾಲಾ ದಂಧೆ ಮೂಲಕ ಹಣ ವರ್ಗಾವಣೆ!

ಈ ಕಾಂಗ್ರೆಸ್ ನಮ್ಮ ದೇಶಕ್ಕೆ ಯಾವ ರೀತಿ ಪೆಟ್ಟು ನೀಡಿದೆ ಎಂದರೆ ಭಾರತವನ್ನು ಸಂಪೂರ್ಣ ಸರ್ವನಾಶ ಮಾಡಲೆಂದೇ ಪ್ರತೀ ಬಾರಿ ಪ್ರಯತ್ನಿಸುತ್ತಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ದೇಶವನ್ನು ಉಪಯೋಗಿಸಿಕೊಂಡ‌ ಕಾಂಗ್ರೆಸಿಗರು ತಮಗೆ ಬೇಕಾದ ವ್ಯಕ್ತಿಗಳಿಗೆ ಬೇಕಾಬಿಟ್ಟಿ ಹಣ , ವ್ಯವಹಾರವನ್ನು ನೀಡಿ ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ಇದೀಗ ಬಂಧನದಲ್ಲಿರುವ ಕ್ರಿಶ್ಚಿಯನ್ ಮಿಷೆಲ್ ಸ್ವತಃ ಸತ್ಯಾಂಶ ಬಾಯಿ ಬಿಟ್ಟಿದ್ದು, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವು ವ್ಯವಹಾರದಲ್ಲೂ ಪಾಲು ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ. ‌ಅಷ್ಟೇ ಅಲ್ಲದೆ ಇದರ ಹಿಂದೆ ಕಾಂಗ್ರೆಸ್‌ನ ಕುಟುಂಬ ಇರುವುದಾಗಿಯೂ ಹೇಳಿಕೊಂಡಿದ್ದಾನೆ. ‌ಈಗಾಗಲೇ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರು ನ್ಯಾಯಾಲಯಕ್ಕೆ ಸಲ್ಲಿಸಿದ ಇಡಿ ಅಧಿಕಾರಿಗಳು, ಇನ್ನೂ ಅನೇಕರ ಹೆಸರು ಬಹಿರಂಗವಾಗುವ ಸಾಧ್ಯತೆ ಇದೆ. ‌ಆದರೆ ಕ್ರಿಶ್ಚಿಯನ್ ಮಿಷೆಲ್ ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ವ್ಯವಹಾರದಲ್ಲೂ ಪಾಲು ಪಡೆದಿರುವುದಾಗಿ ಒಪ್ಪಿಕೊಂಡಿದ್ದು ಇದರ ಹಿಂದಿರುವ “ಕೈ” ಯಾರದು ಎಂಬುದು ಮುಂದಿನ‌ ವಿಚಾರಣೆಯಲ್ಲಿ ಬಹಿರಂಗವಾಗಲಿದೆ.!

ಇಟಲಿ ಮಹಿಳೆಯ ಮಗ ಭಾರತದ ಮುಂದಿನ‌ ಪ್ರಧಾನಿ!

ಹೌದು, ಕ್ರಿಶ್ಚಿಯನ್ ಮಿಷೆಲ್ ಹೇಳಿಕೆಯ ಪ್ರಕಾರ ಇಟಲಿ ಮಹಿಳೆಯ ಮಗ ಭಾರತದ ಮುಂದಿನ‌ ಪ್ರಧಾನಿ ಆಗಲಿದ್ದಾರೆ ಅಂತೆ. ಎಷ್ಟೊಂದು ಭರವಸೆಯಿಂದ ಹೇಳಿಕೆ ನೀಡಿದ್ದಾನೆ ಎಂದರೆ ತಾನೇ ಗಾಂಧಿ ಪರಿವಾರವನ್ನು ಸಾಕುವ ರೀತಿ ಹೇಳಿಕೊಂಡಿದ್ದಾನೆ. ಇಟಲಿ ಮಹಿಳೆ ಯಾರೆಂಬುದು ಹೆಸರು ಉಲ್ಲೇಖ ಮಾಡದೇ ಇದ್ದರೂ ಸ್ಪಷ್ಟವಾಗಿ ತಿಳಿಯುತ್ತದೆ “ಆ” ಮಹಿಳೆ ಯಾರೆಂದು.‌ ಅಷ್ಟೇ ಅಲ್ಲದೇ ಸದ್ಯ ಭಾರತದಲ್ಲಿ ಮುಂದಿನ ಪ್ರಧಾನಿ ನಾನಾಗುತ್ತೇನೆ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ಸುತ್ತಾಡುತ್ತಿರುವ “ಆ” ವ್ಯಕ್ತಿ ಕೂಡ ಯಾರೆಂದು ನಮಗೆ ತಿಳಿದಿದೆ. ಆದ್ದರಿಂದ ಕ್ರಿಶ್ಚಿಯನ್ ಮಿಷೆಲ್ ಮಾಡಿರುವ ಹಗರಣಗಳ ಹಿಂದೆ “ನಕಲಿ ಗಾಂಧಿ ಕುಟುಂಬ” ಇರುವುದು ಖಚಿತವಾಯಿತು. ಯಾಕೆಂದರೆ ಬಂಧನದಲ್ಲಿದ್ದರೂ ಕೂಡ ಯಾವುದೇ ಅಂಜಿಕೆ‌ ಇಲ್ಲದೆ ಒಂದು ಕುಟುಂಬವನ್ನು ಬೆಂಬಲಿಸುತ್ತಾನೆ ಎಂದರೆ ಆತನಿಗೆ ಆ ಕುಟುಂಬದಿಂದ ಯಾವ ರೀತಿ ಲಾಭ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಭಾರತದ ಪಾಲಿಗೆ ಸದ್ಯ ಅಗಸ್ಟಾ ವೆಸ್ಟ್ ಲ್ಯಾಂಡ್ ಬಹುದೊಡ್ಡ ಹಗರಣವಾಗಿದ್ದು ಇದರ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್‌ನನ್ನು ಸರಿಯಾಗಿ ವಿಚಾರಣೆ ನಡೆಸಿ ಬಾಯಿ ಬಿಡಿಸಿದರೆ ಇದರ ಹಿಂದಿರುವ ಎಲ್ಲಾ ದೊಡ್ಡ ದೊಡ್ಡ ಕುಳಗಳು ಕೂಡ ಹೊರ ಬರಲಿದೆ. ಆದ್ದರಿಂದ ಈಡಿ ಅಧಿಕಾರಿಗಳು ಈಗಾಗಲೇ ಈತನನ್ನು ಮತ್ತಷ್ಟು ದಿನ‌ ತಮ್ಮ ವಶಕ್ಕೆ ನೀಡಬೇಕೆಂದು ಸಲ್ಲಿಸಿದ ಅರ್ಜಿಗೆ ಸಮ್ಮತಿ ಸೂಚಿಸಿದ ಕೋರ್ಟ್, ಫೆಬ್ರವರಿ ೨೭ರ ವರೆಗೆ ಈಡಿ ವಶಕ್ಕೆ ಒಪ್ಪಿಸಿದೆ.‌ ಮುಂದಿನ ದಿನಗಳಲ್ಲಿ ಮತ್ತಷ್ಟು ಸತ್ಯಾಂಶ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close