ಪ್ರಚಲಿತ

ಉಗ್ರ ಅಜಾರ್ ಮಸೂದ್‌ನನ್ನು “ಜೀ” ಎಂದು ಗೌರವಿಸುವ ರಾಹುಲ್ ಈ ದೇಶದ ಪ್ರಧಾನಿಯಾದರೆ ದೇಶದ ಗತಿ ಏನು? ಮತದಾನ ಮಾಡುವ ಮುನ್ನ ಎಚ್ಚರ ಭಾರತೀಯರೇ!

ಬಹುಶಃ ಕಾಂಗ್ರೆಸ್‌ ಮತ್ತು ಪಾಕಿಸ್ತಾನಕ್ಕೆ ಇರುವ ನಂಟು ಇದು ಎಂದು ಹೇಳಬಹುದು, ಯಾಕೆಂದರೆ ದೇಶದ ವಿಚಾರದಲ್ಲಿ ಪದೇ ಪದೇ ಉಡಾಫೆ ತೋರುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಒಂದಲ್ಲಾ ಒಂದು ಎಡವಟ್ಟು ಮಾಡುತ್ತಲೇ ಇದ್ದಾರೆ. ಎಡವಟ್ಟು ಎನ್ನುವುದಕ್ಕಿಂತ ಇದು ಕಾಂಗ್ರೆಸ್‌ ಕಲಿಸಿಕೊಟ್ಟ ಸಂಸ್ಕೃತಿ ಎಂದು ಹೇಳಬಹುದು. ಕಾಂಗ್ರೆಸಿಗರಿಗೆ ಪಾಕಿಸ್ತಾನದ ಮೇಲೆ ಅದೇನೋ ಪ್ರೀತಿ ವಿಶ್ವಾಸ ಗೌರವ, ಪಾಕಿಸ್ತಾನವನ್ನು ಹೊಗಳುವ ಭರದಲ್ಲಿ ಭಾರತವನ್ನು ಹೀಯಾಳಿಸುತ್ತಾರೆ ಮತ್ತು ಅವಮಾನಿಸುತ್ತಾರೆ.

ಇದು ಹಿಂದಿನಿಂದಲೂ ನಾವು ನೋಡಿಕೊಂಡು ಬಂದಿರುವ ಸತ್ಯ ವಿಚಾರ. ಇದೀಗ ಪಾಕಿಸ್ತಾನದ ಓರ್ವ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಈ ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ರಾಹುಲ್ ಗಾಂಧಿ “ಜೀ” ಎಂದು ಗೌರವ ನೀಡಿ ಮಾತನಾಡಿಸುತ್ತಾರೆ ಎಂದರೆ ನಾವು ಅರ್ಥ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಒಂದೆಡೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗುತ್ತಿದೆ, ಆದರೆ ಇತ್ತ ಭಾರತದಲ್ಲಿ ಕಾಂಗ್ರೆಸ್‌ನ ನಾಯಕರು ಎಂದು ಕರೆಸಿಕೊಳ್ಳುವ ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಬಕೆಟ್ ಹಿಡಿಯಲು ಆರಂಭಿಸಿದ್ದಾರೆ.!

ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳ ಮೇಲೆ ದಾಳಿ ನಡೆಸಿದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಾಕಿಸ್ತಾನದ ಅಜಾರ್ ಮಸೂದ್‌ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಆಗ್ರಹ ಭಾರತ ಮಾಡುತ್ತಿದ್ದರೆ ಇತ್ತ ಕಾಂಗ್ರೆಸ್‌ ಉಗ್ರರ ಪರವಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದೆ. ಹೌದು ರಾಹುಲ್ ಗಾಂಧಿ ಇತ್ತೀಚೆಗೆ ಒಂದು ಸಭೆಯಲ್ಲಿ ಮಾತನಾಡುತ್ತಾ ಪಾಕಿಸ್ತಾನದ ಅಜಾರ್ ಮಸೂದ್ ಜೀ ಎಂದು ಗೌರವ ಕೊಟ್ಟು ಹೆಸರು ಉಲ್ಲೇಖಿಸಿರುವುದು ಇದೀಗ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಮೋದಿ ನೇತೃತ್ವದ ಕೇಂದ್ರ ಸರಕಾರ ಉಗ್ರರ ವಿರುದ್ಧ ಸಮರ ಸಾರಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶಕ್ತಿ ಸಾಮಾರ್ಥ್ಯವನ್ನು ಎತ್ತಿ ಹಿಡಿದರೆ, ಕಾಂಗ್ರೆಸ್‌ ಮಾತ್ರ ಇನ್ನೂ ಪಾಕಿಸ್ತಾನದ ಪರವಾಗಿ ಅದರಲ್ಲೂ ಉಗ್ರರ ಪರವಾಗಿ ಮಾತನಾಡುತ್ತಿದೆ ಎಂದರೆ ವಿಪರ್ಯಾಸವೇ ಸರಿ.!

ರಾಹುಲ್ ಪ್ರಧಾನಿಯಾದರೆ ದೇಶದ ಗತಿ ಏನು?

ಅಷ್ಟಕ್ಕೂ ಕಾಂಗ್ರೆಸ್‌ ರಾಹುಲ್ ಗಾಂಧಿಯನ್ನೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡಾಗಿದೆ, ಮೋದಿ ವಿರುದ್ಧ ಒಂದಾದ ವಿಪಕ್ಷಗಳು ಸರಕಾರ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ ಪ್ರತಿಯೊಬ್ಬ ಮತದಾರನೂ, ಭಾರತೀಯನೂ ಸದ್ಯ ಯೋಚಿಸಬೇಕಾದ ಸಮಯ ಬಂದಿದೆ, ಯಾಕೆಂದರೆ ಒಂದು ಬಾರಿ ಮಾಡಿದ ತಪ್ಪಿಗೆ ಅಟಲ್ ಬಿಹಾರಿ ವಾಜಪೇಯಿ ಅಂತಹ ದೇಶಪ್ರೇಮಿ ನಾಯಕನನ್ನು ಕಳೆದುಕೊಂಡು ಮತ್ತದೇ ದೇಶವನ್ನು ಲೂಟಿ ಮಾಡುವ ಕಾಂಗ್ರೆಸ್‌ ಕೈಗೆ ಅಧಿಕಾರ ನೀಡಿ ನರಕ ಅನುಭವಿಸುವಂತಾಗಿತ್ತು ಮತ್ತು ದೇಶದ ಸ್ಥಿತಿ ಪಾತಾಳಕ್ಕೆ ಕುಸಿಯುವಂತಾಗಿತ್ತು. ಸದ್ಯ ಅವೆಲ್ಲವನ್ನೂ ಸರಿಪಡಿಸಿ ಮತ್ತೆ ಸುಭದ್ರ ಆಡಳಿತವನ್ನು ನಡೆಸುತ್ತಾ ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಾವು ನಿಲ್ಲಬೇಕಾದ ಅನಿವಾರ್ಯತೆ ಇದೆ. ರಾಹುಲ್ ತಪ್ಪು ಮಾಡುತ್ತಿರುವುದು ಇದೇ ಮೊದಲಲ್ಲ, ಬದಲಾಗಿ ಸೈನಿಕರ ವಿಚಾರದಲ್ಲೂ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ತನ್ನ ಮಾನ ತಾನೇ ಕಳೆದುಕೊಂಡ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿದೆ.

ಆದರೆ ರಾಹುಲ್ ಗಾಂಧಿ ಈ ಬಾರಿ ಮಾಡಿರುವ ತಪ್ಪು ನಿಜಕ್ಕೂ ಕಾಂಗ್ರೆಸ್‌ಗೆ ನಾಚಿಕೆಕೇಡಿನ ಸಂಗತಿ. ಯಾಕೆಂದರೆ ಒಬ್ಬ ನರಹಂತಕ ಉಗ್ರನಿಗೆ ಗೌರವ ನೀಡುತ್ತಾರೆಂದರೆ ಈತನನ್ನು ಭಾರತೀಯರು ಕ್ಷಮಿಸಲು ಸಾಧ್ಯವೇ?

ಖಂಡಿತಾ ಸಾಧ್ಯವಿಲ್ಲ, ಯಾಕೆಂದರೆ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಇರುವ ದೇಶದ್ರೋಹಿಗಳು ಯಾರು ಎಂಬುದು ಒಂದೊಂದೇ ಬಯಲಾಗುತ್ತಿದೆ ಮತ್ತು ದೇಶದ ಜನ ಕೂಡ ಇದನ್ನು ಗಮನಿಸುತ್ತಿದ್ದಾರೆ. ಆದ್ದರಿಂದ ಇದಕ್ಕೆಲ್ಲ ಉತ್ತರ ಈ ಬಾರಿಯ ಚುನಾವಣೆಯಲ್ಲಿ ಜನರು ನೀಡಲಿದ್ದಾರೆ ಎಂಬುದು ಸ್ಪಷ್ಟ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close