ಅಂಕಣಪ್ರಚಲಿತ

ಕೋಟಿಗಟ್ಟಲೆ ಆಸ್ತಿಯ ಒಡೆಯನ್ನು ಮೀರಿಸಿದ ಮೋದಿ!! ಬಿಲ್ ಗೇಟ್ಸ್ ಗೂ ಮೋದಿಗೂ ಇರುವ ಸಂಬಂಧವೇನು?!

ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ನೈಜ್ಯ ಚಿತ್ರಣವನ್ನೇ ಮರೆಮಾಚಿ, ಕೇವಲ ವದಂತಿಗಳನ್ನೇ ಹಬ್ಬಿಸುವಲ್ಲಿ ನಿರತರಾಗಿರುವುದು ಗೊತ್ತಿರುವ ವಿಚಾರ!!! ಆದರೆ ಕೆಲ ಮಾಧ್ಯಮಗಳು ನರೇಂದ್ರಮೋದಿಯವರು ಉತ್ತಮ ಕಾರ್ಯವೈಖರಿಯ ಬಗ್ಗೆ ಹೇಳದೇ, ಮೋದಿಯವರ ಜವಾಬ್ದಾರಿಗಳನ್ನು ಟೀಕೆಮಾಡುತ್ತಾ, ಸುಳ್ಳುಪೊಳ್ಳು ಮಾಹಿತಿಗಳನ್ನು ನೀಡಿ ದುರುಪಯೋಗ ಪಡಿಸಿಕೊಳ್ಳಲು ತುದಿಗಾಲಿನಲ್ಲಿ ನಿಲ್ಲಲು ಬಯಸುತ್ತಿದ್ದಾರೆ !!

ಆದರೆ, ಮೋದಿಯ ಕಾರ್ಯವೈಖರಿ ಎಂತಹದ್ದು, ಎನ್ನುವುದರ ಬಗ್ಗೆ ‘ಹಿಂದುಸ್ತಾನ್ ಟೈಮ್ಸ್’ ನಡೆಸಿರುವ ಸಮೀಕ್ಷೆಯ ಪ್ರಕಾರ, ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ನರೇಂದ್ರ ಮೋದಿ!!

ಹೌದು… ‘ಹಿಂದುಸ್ತಾನ್ ಟೈಮ್ಸ್’ ಬಾಲಿವುಡ್ ಐಕಾನ್, ಪೊಲಿಟಿಕಲ್ ಐಕಾನ್, ಅತ್ಯುತ್ತಮ ಮಾದರಿ ವ್ಯಕ್ತಿ, ಸ್ಫೋಟ್ರ್ಸ್ ಐಕಾನ್ ಹೀಗೆ ಹಲವು ವಿಭಾಗಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಅತ್ಯುತ್ತಮ ಮಾದರಿ ವ್ಯಕ್ತಿ’ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ!!

Image result for modi with bill gates

ಅಷ್ಟೇ ಅಲ್ಲದೇ, ಪ್ರಧಾನಿ ಮೋದಿಯವರು ಯುವಕರಿಗೆ ಉತ್ತಮ ಆಕರ್ಷಣೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ ಎನ್ನುವುದಕ್ಕೆ ಇದೊಂದು ಉತ್ತಮ ಸಾಕ್ಷಿಯಾಗಿದೆ. ಹಾಗಾಗಿ ಈ ಸಮೀಕ್ಷೆಯ ಪ್ರಕಾರವಾಗಿ ಯುವಕರು ಮೋದಿಗೆ 34.6%ದಷ್ಟು ಮತ ನೀಡಿದರೆ, ಎರಡನೇ ಮತ್ತು ಮೂರನೇ ಸ್ಥಾನವನ್ನು ಬಿಲ್ ಗೇಟ್ಸ್(25.5%) ಮತ್ತು ಸುಂದರ್ ಪಿಚೈ(11%)ಪಡೆದುಕೊಂಡಿದ್ದಾರೆ!!.

ಆದರೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು 18.7% ಮತಗಳೊಂದಿಗೆ 3ನೇ ಸ್ಥಾನವನ್ನು ಪಡೆದಿದ್ದರು. ಆದರೆ ಇದೀಗ ಯುವಕರು ಮೋದಿಯ ಕೆಲಸದ ಮೇಲಿರುವ ಶ್ರದ್ಧೆ ಹಾಗೂ ದೇಶಕ್ಕಾಗಿ ಮಾಡುವ ಸಮರ್ಪಣಾ ಭಾವನೆ ಎಲ್ಲವೂ ಕೂಡ ಯುವಕರನ್ನು ಆಕರ್ಷಿತವಾಗಿದೆ!! ಅಲ್ಲದೇ, ಯುವಕರು ತಮ್ಮ ಕಠಿಣ ಕೆಲಸದ ಆಧಾರದ ಮೇಲೆ ದೀರ್ಘಾವಧಿಯ ಯಶಸ್ಸನ್ನು ಕಾಣಲು ಬಯಸುತ್ತಿರುವುದು ನಿಜ!!!

Image result for modi with bill gates

ಇದಿಷ್ಟೇ ಅಲ್ಲದೇ, ರಾಜಕೀಯ ಕ್ಷೇತ್ರಕ್ಕೆ ಬಂದಾಗ ಪ್ರಧಾನಿ ಮೋದಿ ಮತ್ತೊಮ್ಮೆ ಅಗಾಧವಾದ ಬೆಂಬಲವನ್ನು ಪಡೆದಿದ್ದು, ಅದರಲ್ಲಿ ಶೇಕಡಾ 47.5ರಷ್ಟು ಜನರು ತಮ್ಮ ನೆಚ್ಚಿನ ರಾಜಕಾರಣಿ (political icon) ಎಂದು ಮತ ಹಾಕಿದ್ದಾರೆ!! ಆದರೆ, ರಾಹುಲ್ ಗಾಂಧಿ ಶೇಕಡಾ 8.9ರಷ್ಟನ್ನು ಮತಗಳನ್ನು ಪಡೆದಿದ್ದರೆ, ರಾಹುಲ್‍ನ ಮಮ್ಮಿ ಸೋನಿಯಾ ಗಾಂಧಿ ಶೇಕಡಾ 8.7ರಷ್ಟು ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ!!

ಆದರೆ ಕಳೆದ ವರ್ಷ ಅರವಿಂದ ಕೇಜ್ರಿವಾಲ್, ಶೇಕಡಾ 14ರಷ್ಟು ಮತ ಪಡೆದು ಒಂದು ಹಂತದಲ್ಲಿದ್ದರು, ಆದರೆ ಈ ವರ್ಷ ಶೇಕಡಾ 7ರಷ್ಟು ಮತ ಪಡೆದು, ತೀರಾ ಕಡಿಮೆ ಮಟ್ಟದ ಸ್ಥಾನದಲ್ಲಿದ್ದಾರೆ!! ಇವರಷ್ಟೇ ಅಲ್ಲದೇ, ಜನಪ್ರಿಯ ರಾಜಕಾರಣಿ ಎಂದು ಪ್ರಖ್ಯಾತವಾಗಿರುವ ಮಮತಾ ಬ್ಯಾನರ್ಜಿ ಕೇವಲ ಶೇಕಡಾ 7 ರಷ್ಟು ಮತವನ್ನು ಪಡೆದುಕೊಂಡಿರುವುದು ಮಾತ್ರ ವಿಪರ್ಯಾಸ!!

ಪ್ರಧಾನಿ ನರೇಂದ್ರ ಮೋದಿಯವರ ಸಾಮಥ್ರ್ಯವನ್ನು ಈಡೀ ದೇಶದ ಯುವಕರೂ ಕೂಡ ಅರಿತಿದ್ದು, ತಾವು ಅದಕ್ಕಾಗಿ ಬೆಂಬಲವನ್ನು ಸೂಚಿಸಿರುವುದನ್ನು ನಾವು ಕಂಡಿದ್ದೇವೆ!! ಅಷ್ಟೇ ಅಲ್ಲದೇ, ಇಂದಿನ ಯುವಕರು ಜಾತಿ ಧರ್ಮದ ಬಗ್ಗೆ ಕಾಳಜಿಯನ್ನು ವಹಿಸದೇ ದೇಶ ಸುಭಿಕ್ಷೆಯತ್ತ ಸಾಗಬೇಕು ಎಂದು ಬಯಸುತ್ತಾರೆ. ಹೀಗಾಗಿ, ಭಾರತವು ಅಭಿವೃದ್ದಿ ಮತ್ತು ಪ್ರಗತಿಯತ್ತ ಸಾಗಬೇಕು ಎನ್ನುವ ದೃಷ್ಟಿಯಿಂದ ದೇಶಕ್ಕೋಸ್ಕರ ಪ್ರಾಣವನ್ನೇ ಮುಡಿಪಾಗಿರಲು ಸಿದ್ದರಾಗಿದ್ದರೆ ನಮ್ಮ ಯುವಕರು!!

Source :http://www.hindustantimes.com/india-news/ht-youth-survey-narendra-modi-continues-to-capture-the-imagination-of-the-youth/story-5FCFd39qZTD6I9PuKFJs0O.html

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close