ಪ್ರಚಲಿತ

ಶಿವನ ಪವಿತ್ರ ರಾತ್ರಿ ಏನಿದು?!

ಶಿವರಾತ್ರಿ ಎಂಬುದು ಹಾಗೆ! ಅದೇನೋ! ಅಧ್ಯಾತ್ಮ ಪಥದಲ್ಲಿ ಸಾಗುವ ಪ್ರತಿ ವ್ಯಕ್ತಿಗೂ ಕೂಡ ಅನುಭಾವಕ್ಕೀಡಾಗುವಂತಹ ದಿನವದು!! ಶಿವರಾತ್ರಿಯ ದಿನವೊಂದನ್ನು ಆಚರಿಸಬೇಕಿದೆ! ಅವತ್ತು, ಶಿವನನ್ನುಆರಾಧಿಸಬೇಕು! ಇಷ್ಟರ ಹೊರತಾಗಿ, ಯಾಕೆ ಶಿವನನ್ನೇ ಆಚರಿಸಬೇಕು?! ಯಖೆ ಜಾಗರಣೆಯನ್ನು ಮಾಡುತ್ತಾರೆ?! ಯಾಕಾಗಿ ಆಚರಿಸಬೇಕು ಎನ್ನುವುದರ ಬಗ್ಗೆ ಅರಿವಿರುವುದು ಎಲ್ಲೋ ಬೆರಳಣಿಕೆಯ ಜನಗಳಿಗಷ್ಟೆ!!

ವಾಸ್ತವವಾಗಿ, ಅದೇ ಹಿಂದೂ ಧರ್ಮದಲ್ಲಾಗಿದ್ದು!! ತಮ್ಮ ಧರ್ಮದ ಹಬ್ಬಗಳ ವಿಶೇಷತೆಯನ್ನು ಅರಿಯದೇ, ಕೇವಲ ಆಚರಿಸಬೇಕು ಅಥವಾ ಇನ್ನೇನೋ ಎಂಬಷ್ಟಕ್ಕೆ ಸೀಮಿತವಾಗಿ ಹೋಯಿತು ಹಿಂದೂವಿನ ಧಾರ್ಮಿಕ ಹಬ್ಬಗಳಷ್ಟೇ!! ಆದರೆ, ಶಿವರಾತ್ರಿಯ ಮಹತ್ವವನ್ನೇನಾದರೂ ಅರಿತಿದ್ದರೆ ಬಹುಷಃ ಅಧ್ಯಾತ್ಮ ಯುಗದಲ್ಲಿ ಭಾರತ ಅದೆಷ್ಟೋ ಮುಂದೆ ಹೋಗುತ್ತಿತ್ತು!! ಕೇವಲ, ಶಿವರಾತ್ರಿ ಎಂಬುದೊಂದು ಮಾತ್ರವಲ್ಲ, ಪ್ರತೀ ಹಿಂದೂ ಧಾರ್ಮಿಕ ಹಬ್ಬಗಳೂ ಅದೇ ರೀತಿ ಇರುವಂತಹದ್ದು!!

ಇರಲಿ!!ಶಿವರಾತ್ರಿಯ ಬಗ್ಗೆ ನೂರಾರು ದಂತಕಥೆಗಳು ಹುಟ್ಟಿಕೊಂಡವು!! ಆದರೆ, ಪ್ರತಿಯೊಂದರ ಹಿಂದಿದ್ದದ್ದು ಕೂಡ ಒಂದೇ ಧ್ಯೇಯ!! ಶಿವ ತನ್ನ ಭಕ್ತಾದಿಗಳ ಭಕ್ತಿಗೆ ಮೆಚ್ಚಿ ಏನನ್ನಾದರೂ ನೀಡಬಲ್ಲ ಎಂಬುದೊಂದಷ್ಟೇ!! ಬಹುಷಃ ಗಮನಿಸಿರಬಹುದು! ಶಿವನನ್ನು ಆರಾಧಿಸಿ ಜಗತ್ತನ್ನೇ ಗೆಲ್ಲಲು ಹೊರಟವರು ಅದೆಷ್ಟು ಜನವಿರಬಹುದು?! ಅಸುರರು ಶಕ್ತಿ ಸಂಪಾದನೆಗಾಗಿ ಅವಲಂಬಿಸುತ್ತಿದ್ದು ಶಿವನನ್ನೇ! ರಾವಣಾದಿಯಾಗಿ ಕೊನೆಗೆ ಸಾತ್ವಿಕ ಮಾರ್ಗದ ಸತಿಗೂ ಅಧ್ಯಾತ್ಮಿಕ ಪಥವನ್ನು ಒದಗಿಸಿಕೊಟ್ಟಿದ್ದು, ಸುರರಿಗೂ ಅಸುರರಿಗೂ ಕೂಡ ಸಮಾನವಾಗಿ ತಪಃ ಶಕ್ತಿಗೆ ತಕ್ಕನಾಗಿ ವರವನ್ನು ನೀಡುತ್ತಾ ಹೋದವನು ಅವನೇ!! ಶಿವನನ್ನು ನಂಬಿದವನಿಗೆ ಯಾವತ್ತಿಗೂ ಸೋಲಿಲ್ಲ ಎಂಬುದೊಂದು ಪ್ರತೀತಿ ಮಾತ್ರವಲ್ಲ, ಅದು ಸತ್ಯ ಕೂಡಾ!! ಅದಕ್ಕೇ, ಇವತ್ತಿಗೂ ಸಾಧು ಸಂತರು, ಅಘೋರಿಗಳೆಲ್ಲ ಹೆಚ್ಚಿನ ಸಾಧನೆಗಾಗಿ ಶಿವನ ಹಲವಾರು ರೂಪಗಳನ್ನು ಆರಾಧಿಸುತ್ತಾ ಹೋಗುವುದು!!

ಬಿಡಿ! ಶಿವನನ್ನು ಅರಿಯದೆಯೇ ಆರಾಧಿಸಿದವನಿಗೂ ಸಹ ಶಿವ ನೀಡಿದ್ದು ಮತ್ತದೇ ಅಭಯವನ್ನೇ! ಮತ್ತದೇ ಬ್ರಹ್ಮಜ್ಯೋತಿಯನ್ನೇ!! ಸಾಂಪ್ರದಾಯಿಕವಾಗಿ ಪರಂಪರಾಗತವಾಗಿ ಹರಿದು ಬಂದ ಕಥೆಯೊಂದಿದೆ ಶಿವರಾತ್ರಿಯ ಬಗೆಗೆ ಕೇಳಿ!!

ಒಮ್ಮೆ ಒಬ್ಬ ಕಳ್ಳನಾದವನು ಓಡಿಸಿಕೊಂಡು ಬಂದ ರಾಜಭಟರಿಂದ ತಪ್ಪಿಸಿಕೊಳ್ಳಲು ಬಿಲ್ವ ಪತ್ರೆಯ ಮರವನ್ಬೇರುತ್ತಾನೆ! ರಾತ್ರಿ ಹೊತ್ತು ಕಳೆಯಲು, ಒಂದೊಂದೇ ಬಿಲ್ವ ಎಲೆಯನ್ನು ಕಿತ್ತು ಹಾಕುವಾಗ, ಅಲ್ಲಿಯೇ ಕೆಳಗೆ ಇದ್ದ ಶಿವಲಿಂಗದ ಮೇಲೆ ಪತ್ರೆ ಬೀಳುತ್ತ ಹೋಗುತ್ತದೆ! ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವವನ್ನು ಅರಿಯದೆಯೇ ಅರ್ಪಿಸಿದ ಕಳ್ಳನಿಗೆ ಶಿವ ಅಧ್ಯಾತ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಾನೆ! ಕಳ್ಳ ಸಾಧುವಾಗಿ ಬದಲಾಗುತ್ತಾನೆ! ಮನದ ಕಲ್ಮಷವನ್ನು ಕಳೆದ ದಿನವನ್ನು ಶಿವರಾತ್ರಿಯನ್ನಾಗಿ ಆಚರಿಸಲಾಗುತ್ತದೆ ಎಂಬುದೂ ಪ್ರತೀತಿಯಲ್ಲಿದೆ!

ಈ ದಂತಕಥೆಗಳನ್ನು ಬಿಡಿ!! ಬದಲಾಗಿ, ಪುರಾಣಗಳ ಪ್ರಕಾರ ಒಮ್ಮೆ ಶಿವನು ಜಗತ್ತನ್ನೇ ನಾಶಮಾಡಲಿದ್ದ ಹಾಲಾಹಲವನ್ನು ಕುಡಿದಾಗ, ಪಾರ್ವತಿ ಬಂದು ಗಂಟಲನ್ನು ಒತ್ತಿ ಹಿಡಿಯುತ್ತಾಳೆ!! ಶಿವನ ಹೃದಯ ಭಾಗ ಸೇರಿದರೆ ಪತಿಯನ್ನು ಕಳೆದುಕೊಳ್ಳುವೆ ಎಂದುಕೊಂಡ ಪಾರ್ವತಿಗೆ ಶಿವ ಹಾಲಹಲವನ್ನು ಹೊರಗೆ ಹಾಕಲಿ ಎಂಬ ಆಶಯ! ಹಾಲಾಹಲವನ್ನು ಹೊರಚೆಲ್ಲಿದರೆ, ಇಡೀ ಜಗತ್ತೇ ನಾಶವಾಗುವ ಭಯ ದೇವದೇವಾದಿಗಳಿಗೆ!! ಪಾರ್ವತಿ ಎಷ್ಟೇ ಗಂಟಲನ್ನು ಒತ್ತಿ ಹಿಡಿದರೂ ಸಹ, ಶಿವ ಉಗುಳಲಾರ!! ಇಡೀ ರಾತ್ರಿ ದೇವ ದೇವಾದಿಗಳು ಶಿವನನ್ನು ಭಜಿಸತೊಡಗುತ್ತಾರೆ! ಅನನ್ಯ ಭಕ್ತಿಯಿಂದ ಸ್ತುತಿಸಲು ಪ್ರಾರಂಭಿಸುತ್ತಾರೆ! ಪತ್ನಿಯ ಒಲವನ್ನೂ ಮೀರಿದ ಶಿವ ಹಾಲಾಹಲವನ್ನು ಗಂಟಲಲ್ಲಿಯೇ ಉಳಿಸಿಕೊಳ್ಳುತ್ತಾನೆ!! ಅದರಿಂದ, ನೀಲಕಂಠೆನೆನ್ನಿಸಿಕೊಂಡ ಶಿವ ಜಗತ್ತಿನ ರಕ್ಷಕನೆನಿಸಿಕೊಂಡ ನೆನಪಿಗೆ ಶಿವರಾತ್ರಿಯಂದು ಜಾಗರಣೆ ಮಾಡುತ್ತಾರೆ!!

ಕೇವಲ ಕಾಲ್ಪನಿಕ ಕಥೆಗಳಲ್ಲವೇ ಅಲ್ಲ ಇದು!! ಅಚ್ಚರಿಯೇನೆಂದರೆ, ಶಿವ ಯಾವುದೇ ರೀತಿಯ ಅವತಾರವಲ್ಲ! ಕೇವಲ, ಮಾನವತ್ವದಿಂದ ದೈವತ್ವಕ್ಕೇರಿದ ತಪಸ್ವಿ!! ಆತ ಯಾವುದೇ ರೀತಿಯ ಆಡಂಬರದ ಬದುಕನ್ನು ಬದುಕುವನಲ್ಲ! ಅಥವಾ, ಇನ್ಯಾವುದೇ ಭೋಗದ ಬದುಕಿಗಾಗಿ ಹಂಬಲಿಸಿದವನಲ್ಲ!! ಹಾವನ್ನೇ ಆಭರಣವನ್ನಾಗಿಸಿಕೊಂಡವನು ಆತ! ಸ್ಮಶಾನದ ಹೆಣ ಸುಟ್ಟು ಉಳಿದ ಬೂದಿಯನ್ನೇ ಮೈಗೆಲ್ಲ ಬಡಿದುಕೊಂಡು ರುದ್ರ ತಾಂಡವನಾಡುತ್ತ ಜಗತ್ತಿನ ಕಲ್ಮಷಗಳನ್ನೆಲ್ಲ ತುಳಿಯುವವ! ಜಟೆಯಲ್ಲಿ ಗಂಗೆಯನ್ನೇ ತಡೆ ಹಿಡಿದ ಅಜೇಯನಾತ!! ಚಂದಿರನನ್ನೇ ಅಲಂಕಾರವನ್ನಾಗಿಸಿಕೊಂಡ ಮಹಾಮಹಿಮ! ಶಿವನಿಗೂ ಇತ್ತು ಕ್ರೋಧ ಕೋಪ ತಾಪಗಳು!! ಆದರೆ, ಶಿವ‌ ತನ್ನ ಬದುಕಿನ ದಿಕ್ಕನ್ನೇ ಬದಲಿಸಿ ಮಹಾಮಹಿಮನಾದವನಷ್ಟೇ! ಅದಕ್ಕೇ, ತೀರಾ ಹತ್ತಿರ ಮತ್ತು ತೀರಾ ನಿಷ್ಕಲ್ಮಷನೆನ್ನಿಸುವ ಶಿವನನ್ನು ಒಲಿಸಿಕೊಳ್ಳುವುದೂ ಸುಲಭವಲ್ಲ!!

ಸ್ವತಃ ಚಂದ್ರನೇ ಶರಣು ಎಂದಿದ್ದ ಶಿವನಿಗೆ!! ಚಂದ್ರ ೨೭ ನಕ್ಷತ್ರಗಳನ್ನು ಮದುವೆಯಾದಾಗಲೂ ಸಹ ರೋಹಿಣೀ ನಕ್ಷತ್ರಕ್ಕೆ ಬೆಲೆಕೊಡುವಷ್ಟು ಬೇರೆ ಯಾವ ನಕ್ಷತ್ರಕ್ಕೂ ಬೆಲೆ ಕೊಡದೇ ಇರುವುದೇ ಇದ್ದುದರಿಂದ , ಉಳಿದ ೨೬ ಹೆಂಡತಿಯರು ಪ್ರಜಾಪತಿ ದಕ್ಷನಿಗೆ ದೂರು ನೀಡಿದಾಗ, ದಕ್ಷನು ಚಂದ್ರನಿಗೆ ಶಾಪ ನೀಡಿದ ಫಲವಾಗಿ, ದಿನೇ ದಿನೇ ತನ್ನ ವರ್ಚಸ್ಸನ್ನು ಕಳೆದುಕೊಂಡು ಬಂದ ಚಂದ್ರನು, ಕೊನೆಗೆ ಶಿವನ ಹತ್ತಿರ ಧಾವಿಸುತ್ತಾನೆ! ಶಿವನು ತನ್ನ ಜಟೆಯಲ್ಲಿರಿಸಕೊಂಡ ಪರಿಣಾಮ, ದಕ್ಷನ ಶಾಪ ಚಂದ್ರನನ್ನು ತಾಗದೇ ಹೋಗುತ್ತದೆ!!

ಅಧ್ಯಾತ್ಮದ ಕಷ್ಟಕರವಾದ ಹಾದಿ ತಂತ್ರ ಮಾರ್ಗ!! ತಂತ್ರದಲ್ಲಿ ಚಂದ್ರ ಶೀತವನ್ನು ಸೂಚಸಿದರೆ, ಸೂರ್ಯ ಬೆಂಕಿಯನ್ನುಗುಳುವವನು!! ಇವೆರಡನ್ನೂ ಸಹ ಸರಿಯಾಗಿ ನಿಭಾಯಿಸಿದವನು ಮಾತ್ರ ಪೃಕೃತಿಯಲ್ಲಿ ನೆಲೆಯೂರಬಲ್ಲ! ಅದೇ ರೀತಿ, ಶಿವ, ವಿಷ್ಣು , ಬ್ರಹ್ಮ ರೂ ಸಹ ಜಗತ್ತಿನ ಆದಿಗೆ, ಸ್ಥಿತಿಗೆ ಮತ್ತು ಅಂತ್ಯಕ್ಕೆ ಕಾರಣವಾದವರು! ಅಂದರೆ, ಇವರೆಲ್ಲರೂ ಒಟ್ಟಾಗಿ ಇದ್ದರೆ ಮಾತ್ರ ಬದುಕನ್ನು ಪ್ರತಿಪಾದಿಸಬಲ್ಲಂತಹವರು!

ಶಿವ ತಾನು ಮದುವೆಯಾಗುವುದೇ ಇಲ್ಲ ಎಂದಾಗ, ವಿಷ್ಣು ಒತ್ತಡ ಹೇರುತ್ತಾನೆ! ಯಾವಾಗ ದೇವಿ ಶಿವನ ಜೊತೆಯಾಗುತ್ತಾಳೋ, ಆಗ ಯೋಗಿ ಭೋಗಿಯಾಗುತ್ತಾನೆ! ಸೃಷ್ಟಿ ಮತ್ತೆ ಪ್ರಾರಂಭವಾಗುತ್ತದೆ! ಮತ್ತದೇ ಜಗತ್ತು ಅನಾವರಣಗೊಳ್ಳುತ್ತದೆ! ಹೇಗೆ, ಯೋಗಿ ಭೋಗಿಯಾಗಿ, ತನ್ಮೂಲಕ ಜಗತ್ತಿನ ಸ್ಥಿತಿಕಾರಕನಾಗಿ ನಿರ್ಮಾಣ ಹೊಂದುತ್ತಾನೋ, ಅದೇ ರೀತಿ ಇದೂ ಕೂಡ! ಜಗತ್ತಿನ ಸುಖ ದುಃಖ, ಸ್ವರ್ಗ ನರಕ ಏನೇ ಇರಲಿ! ಅವೆಲ್ಲವೂ ಶಿವನ ಮಾತ್ರವೇ! ಜೀವನದಲ್ಲಿಯೂ ವನವಿರುವ ಹಾಗೆ, ಜಗತ್ತಿನ ಒಡೆಯಾನಾಗುವ ಶಿವನ ಆಚರಣೆಯಿಂದ ಬದುಕು ಸಮಸ್ಥಿತಿಯಲ್ಲಿರುತ್ತದಷ್ಟೇ!! ಅದಕ್ಕೆ, ಶಿವನನ್ನು ಸೂಚಿಸುವ ಯಾವುದನ್ನೇ ತೆಗೆದುಕೊಂಡರೂ ಸಹ, ಬದುಕಿನ ಗತಿಗೆ ಹತ್ತಿರವಾದಂತೆನಿಸುವುದು!

– ಪೃಥು ಅಗ್ನಿಹೋತ್ರಿ

Tags

Related Articles

Close