ಪ್ರಚಲಿತ

ಮೀಟೂ ಹಿಂದೆ ಓಡಿದಾಗ ಸಿಕ್ಕ ಉತ್ತರ ಮೋದಿ.!? ಸರ್ಜಾ ಆರೋಪದ ಹಿಂದಿರುವ ಕಾರಣ ಮೋದಿನಾ? ನಾನಾ ಪಾಟೇಕರ್, ಸರ್ಜಾಗೆ ಈ ಗತಿ ಬರಲು ಕಾಣವೇನು? ಇದು ಟ್ರೈಲರ್ ಅಷ್ಟೇ, ಮುಂದೈತೆ ಮಾರಿ ಹಬ್ಬ..!

ವಾರ್ಡ್ ವಾಪಸೀ, ಜೆ.ಎನ್.ಯು. ವಿವಾದ, ರೋಹಿತ್ ವೆಮುಲ ಆತ್ಮಹತ್ಯೆ ಕೇಸ್, ಲಿಂಗಾಯತ ಧರ್ಮ ವಿಭಜನೆ, ಅಸಹಿಷ್ಣುತೆ, ನಾನು ಗೌರಿ, ಅರ್ಬನ್ ನಕ್ಸಲ್ ಹೀಗೆ ಸಾಲು ಸಾಲು ವಿಚಾರಗಳಲ್ಲಿ ವಿವಾದ ಎಂಬಂತೆ ದೇಶದೆಲ್ಲೆಡೆ ವ್ಯಾಪಿಸಿ ಪ್ರತಿಭಟನೆಯ ಹಾದಿಯನ್ನು ಹಿಡಿದಿತ್ತು. ಇದಕ್ಕೆಲಾ ಕಾರಣ ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು. ಭರ್ಜರಿ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷ ದೇಶದ ಚುಕ್ಕಾಣಿಯನ್ನು ಹಿಡಿದಿದ್ದು ಕಾಂಗ್ರೆಸ್ ಹಾಗೂ ಇತೆರ ಎಡ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಕಾರಣಕ್ಕಾಗಿಯೇ ಈ ಎಲ್ಲಾ ವಿವಾದಗಳಿಗೆ ಮೋದಿಯೇ ಕಾರಣ ಎಂಬಂತೆ ಬಿಂಬಿಸಲು ಮುಂದಾಗಿ ನಂತರ ದೇಶದ ಜನರ ಮುಂದೆ ತಾನೇ ಬೆತ್ತಲಾಗಿತ್ತು. ಈ ಎಲ್ಲಾ ಪ್ರಯತ್ನಗಳ ನಂತರ ಈಗ ಮತ್ತೊಂದು ವಿವಾದವನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಎಡಚರರು ಸಿದ್ಧರಾಗಿ ನಿಂತಿದ್ದಾರೆ, ಅದು ಬೇರಾವುದೂ ಅಲ್ಲ., ಜಗತ್ತಿನೆಲ್ಲೆಡೆ ಭಾರೀ ಸುದ್ಧಿಯಾಗುತ್ತಿರುವ ದಶಕಗಳ ಹಿಂದೆ ಮೀಟಿಸಿಕೊಂಡಿದ್ದರು ಎನ್ನಲಾಗಿರುವ ಸ್ಟೋರಿ ಮೀಟೂ…

ಮೀಟೂ ಹಿಂದಿದೆ ಮತ್ತೊಂದು ಪ್ಲಾನ್.!

ಇದೀಗ ಭಾರತದಲ್ಲಿ ಮೀಟೂ ಎಂಬ ಘಾಟು ಭಾರೀ ಸದ್ದು ಮಾಡುತ್ತಿದೆ. ಎಂದೋ ಏನೋ ಆಗಿತ್ತು ಎಂಬ ಆರೋಪವನ್ನು ಈಗ ಮಾಡುವುದೇ ಮೀಟೂ ಅಂತೆ. ಅಂದಹಾಗೆ ಮೀಟೂ ಅಭಿಯಾನ ಆರಂಭವಾಗಿದ್ದು ವ್ಯಾಟಿಕನ್ ರಾಷ್ಟ್ರದಲ್ಲಿ. ಅದು ಬಾಲಿವುಡ್ ನಟಿ ತನುಶ್ರೀ ದತ್ತಾ ಮೂಲಕ ಭಾರತಕ್ಕೆ ಧಾವಿಸಿ ಬಂದಿದೆ. ಬಾಲಿವುಡ್ ನಟಿ ತನುಶ್ರೀ ದತ್ತಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ನಟಿ. ಈ ನಟಿ ಮೋದಿ ಪರವಾಗಿ ಪ್ರಬಲವಾಗಿ ನಿಂತಿದ್ದ ನಾನಾ ಪಾಟೇಕರ್ ವಿರುದ್ಧ ಕೆಲ ವರ್ಷಗಳ ಹಿಂದೆ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಾನಾ ಪಾಟೇಕಾರ್ ವಿರುದ್ಧ ಆರೋಪ ಮಾಡುತ್ತಾಳೆ. ಅಂದಿನಿಂದ ಮೀಟೂ ಸದ್ದು ಭಾರತದಲ್ಲೂ ಮುಂದುವರೆಯುತ್ತದೆ.

ಈ ಮೀಟೂ ಘಾಟಿಗೆ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ಸಿನ ವಿದ್ಯಾರ್ಥಿ ನಾಯಕನೋರ್ವ ರಾಜೀನಾಮೆ ನೀಡುವಂತಾಗಿದೆ. ಆದರೆ ಇದರ ಹಿಂದೆ ಮಹಾ ಖತರ್ನಾಕ್ ಪ್ಲಾನ್ ಇದೆ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಆರೋಪ ಹೊರಿಸಿದವರಿಗೆ ಭರಪೂರ ಹಣಗಳು ವಿದೇಶದಿಂದ ಬರುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ. ಫೇಮಸ್ ವ್ಯಕ್ತಿಗಳ ಮೇಲೆ ಮೀಟೂ ಎಂದು ತನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆಯೆಂಬಂತೆ ನಟಿಸಿ ಹಣ ಗಳಿಸಿ ನಂತರ ಈ ಮೀಟೂ ಎಂಬ ಚಳುವಳಿ ಹಳ್ಳಿ ಹಳ್ಳಿಯಲ್ಲೂ ಪರಿಚಯ ಆಗುವಂತೆ ನೋಡಿಕೊಳ್ಳುವುದು ಇದರ ಹಿಂದಿರುವ ಯೋಜನೆಯಾಗಿದೆ.

ಸರ್ಜಾ ಮೇಲಿನ ಸರ್ಜಿಕಲ್ ಸ್ಟ್ರೈಕ್..?

ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಇಂತಹಾ ಮೀಟೂ ಆರೋಪವನ್ನು ನಡೆಸಲಾಯಿತು. ಮಳಯಾಳಂ ನಟಿ ಶ್ರುತಿ ಹರಿಹರನ್ ತನ್ನ ಮೇಲೆ ಕೆಲ ವರ್ಷಗಳ ಹಿಂದೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಮೀಟೂ ಎನ್ನುತ್ತಾಳೆ. ಆವಾಗಲೇ ನೋಡಿ ಮೀಟೂ ಹಿಂದಿರುವ “ಆ” ಷಡ್ಯಂತ್ರ ಏನು ಎಂಬುವುದು ಗೊತ್ತಾಗಿದ್ದು. ಅಸಲೀ ಸತ್ಯ ಆವಾಗಲೇ ಬಹಿರಂಗವಾಗಿತ್ತು. ಜಂಟಲ್ ಮ್ಯಾನ್ ಎಂಬ ಖ್ಯಾತಿವೆತ್ತ ಅರ್ಜುನ್ ಸರ್ಜಾ ಮೇಲಿನ ಈ ಆರೋಪ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೇ ಬಹುದೊಡ್ಡ ಆಘಾತವನ್ನುಂಟು ಮಾಡಿತ್ತು. ಬಹುತೇಕ ಎಲ್ಲಾ ಸಿನಿ ದಿಗ್ಗಜರೂ ಅರ್ಜುನ್ ಸರ್ಜಾ ಅಂತವರಲ್ಲಾ, ಹೀ ಈಸ್ ಜಂಟಲ್ ಮ್ಯಾನ್ ಎಂದು ಸರ್ಜಾ ಬೆಂಬಲಕ್ಕೆ ನಿಂತಿದ್ದರು. ಮತ್ಯಾಕೆ ಮಳಿಯಾಳಂ ನಟಿ ಶ್ರುತಿ ಹರಿಹರನ್ ಈ ದೊಡ್ಡ ಆರೋಪ ಮಾಡಿದ್ದಾಳೆ ಎನ್ನುವ ಪ್ರಶ್ನೆ ಮೂಡಿತ್ತು. ಈ ವೇಳೆ ಸಿಕ್ಕ ಉತ್ತರ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು.

Image result for arjun sarja modi

ಸರ್ಜಾ ಆಪ್ತ ಹಾಗೂ ಖ್ಯಾತ ಉದ್ಯಮಿ ಪ್ರಶಾಂತ್ ಸಂಬರಗಿ ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದರು. ಶ್ರುತಿಯ ಈ ಆರೋಪದ ಹಿಂದೆ ಕ್ರೈಸ್ತ ಮಿಷಿನರಿಗಳ ಕೈವಾಡ ಇದೆ ಎಂಬ ಆರೋಪವನ್ನು ಮಾಡಿದ್ದಾರೆ. “ಯಾರು ಪ್ರಧಾನಮಂತ್ರಿ ಮೋದಿಯನ್ನು ಮೆಚ್ಚಿಕೊಂಡಿದ್ದಾರೋ, ಯಾರು ಹಿಂದೂ ಧರ್ಮವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾರೋ ಅವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿದ್ದರೆ ಅವರನ್ನು ಹೆಣೆದು ಸಾಮಾಜಿಕವಾಗಿ ಅವರನ್ನು ಕುಗ್ಗಿಸಲು ವಿದೇಶೀ ಮಿಷಿನರಿಗಳು ನಡೆಸುತ್ತಿರುವ ಷಡ್ಯಂತ್ರವೇ ಮೀಟೂ. ಇದಕ್ಕೆ ಆರೋಪ ಮಾಡಿದವರಿಗೆ ಕೋಟಿಗಟ್ಟಲೆ ವಿದೇಶದಿಂದ ಹಣ ಬರುತ್ತಿದೆ. ಶ್ರುತಿಯ 2 ಖಾತೆಗೂ ವಿದೇಶದಿಂದ ಹಣ ಬಂದಿದೆ” ಎಂಬ ಆರೋಪವನ್ನು ದಾಖಲೆ ಸಮೇತ ಮಾಡಿದ್ದರು. ಮಾತ್ರವಲ್ಲದೆ ಈ ಬಗ್ಗೆ 600 ಪುಟಗಳ ವರದಿಯನ್ನು ಪೊಲೀಸ್ ಠಾಣೆಯಲ್ಲಿ ನೀಡಿ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

“ಅರ್ಜುನ್ ಸರ್ಜಾ 25 ಕೋಟಿ ವೆಚ್ಚದ ಬೃಹತ್ ಹನುಮಂತನ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಚೆನ್ನೈನಲ್ಲಿ ನಿರ್ಮಾಣವಾಗುತ್ತಿರುವ ಈ ಮಂದಿರವನ್ನು ಉಧ್ಘಾಟಿಸಲು ಸ್ವತಃ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಆಗಮಿಸುತ್ತಿದ್ದಾರೆ. ಸರ್ಜಾರ ಮೋದಿ ಪ್ರೇಮವನ್ನು ಕಂಡು ಎಡಚರರಿಗೆ ದಿಗಿಲು ಹುಟ್ಟುವಂತಾಗಿದೆ. ಈ ಕಾರಣಕ್ಕಾಗಿಯೇ ಸರ್ಜಾ ಮೇಲೆ ಇಂತಹಾ ಗಂಭೀರ ಆರೋಪ ಎಂಬ ವಿಚಾರವನ್ನು ಸಂಬರಗಿ ಬಯಲು ಮಾಡಿದ್ದಾರೆ.

ಇಲ್ಲಿಗೆ ಮೀಟೂ ಹಿಂದಿರುವ ತಂತ್ರಗಾರಿಗೆ ಸ್ಪಷ್ಟವಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದ ಪ್ರಧಾನಿ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಶೈನ್ ಆಗುತ್ತಲೇ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಮೋದಿ ಅಧಿಕಾರಕ್ಕೆ ಏರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಈ ಕಾರಣಕ್ಕಾಗಿಯೇ ಮೋದಿಯವರನ್ನು ಮೆಚ್ಚಿಕೊಂಡಿರುವ ಫೇಮಸ್ ವ್ಯಕ್ತಿಗಳ ಮೇಲೆ ಮೀಟೂ ಎಂದು ಅವರ ಘನತೆಯನ್ನು ಕುಗ್ಗಿಸುವ ಹುನ್ನಾರ ಇದಾಗಿದೆ ಎಂಬುವುದೂ ಅಷ್ಟೇ ಸ್ಪಷ್ಟವಾಗಿದೆ.

ನಾನಾ ಪಾಟೇಕರ್, ಅರ್ಜುನ್ ಸರ್ಜಾ ಸಹಿತ ಇತರೆ ಮೋದಿ ಅಭಿಮಾನಿಗಳ ವಿರುದ್ಧ ಮೀಟೂ ಎಂಬ ಅಭಿಯನಾದ ಮೂಲಕ ಮಿಷಿನರಿಗಳು ನಡೆಸುತ್ತಿರುವ ಷಡ್ಯಂತ್ರ ಬಯಲಾಗಿದ್ದು ಇದೀಗ ಸಮಾಜದ ಮುಂದೆ ವ್ಯಾಟಿಕನ್ ಸಂಸ್ಕøತಿ ಬೆತ್ತಲಾಗಿದೆ. ಹಿಂದುತ್ವ ಹಾಗೂ ಮೋದಿಯನ್ನು ಮಣಿಸಲೆಂದು ನಡೆಸಿರುವ ಹುನ್ನಾರ ಬಟಾಬಯಲಾಗಿದ್ದು ತನ್ನ ತಂತ್ರಗಾರಿಕೆ ವಿಫಲವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close