ಅಂಕಣ

ಹನುಮ ಮೂರ್ತಿಯ ಬಣ್ಣ ಈ ರೀತಿ ಇರಲು ಕಾರಣವೇನು? ಹನುಮನಿಗೆ ಶ್ರೀರಾಮ ನೀಡಿದ ವರ ಇಂದಿಗೂ ಹನುಮ ಭಕ್ತರನ್ನು ಕಾಪಾಡುತ್ತಿದಿಯಾ?

ನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಆರಾಧ್ಯದೈವ!! ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ರಾಮಲಕ್ಷ್ಮಣರು ಎಂದರೆ ನಮ್ಮ ಜನರಿಗೆ ತಮ್ಮ ಮನೆಯವರಷ್ಟೇ ಹತ್ತಿರದವರು ಎಂಬ ಭಾವನೆಯಿದೆ. ಇಂಥಹ ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ…

Image result for sita mata with hanuman

ತ್ರೇತಾಯುಗದಲ್ಲಿ ರಾಮನ ಅವತಾರ ಮುಗಿಯುವ ಸಂದರ್ಭದಲ್ಲಿ ಕೇಸರಿ ತನಯ ರಾಮಬಂಟನಾದ ಹನುಮಂತನಿಗೆ ವಿಶೇಷ ವರವೊಂದನ್ನು ಕರುಣಿಸುತ್ತಾನಂತೆ. ಅದೇನೆಂದರೆ ರಾಮಯಾಣ ಮಹಾಗ್ರಂಥದ ಕಥೆ ಜನರ ಬಾಯಿಯಲ್ಲಿ ಎಷ್ಟು ಸಮಯ ಭೂಮಿಯಲ್ಲಿ ಉಳಿದುಕೊಳ್ಳುತ್ತೋ ಅಷ್ಟು ಸಮಯ ಹನುಮಂತನಿಗೆ ಜೀರಂಜೀವಿಯ ವರವನ್ನು ಕರುಣಿಸಿದ ಎಂದು ಪುರಾಣದ ಕಥೆಗಳು ಹೇಳುತ್ತೆ. ಪುರಾಣವನ್ನು ಕೆದಕುತ್ತಾ ಹೋದರೆ ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯಲ್ಲಿ ಹನುಮಂತನ ಪಾತ್ರ ಮಹತ್ವದ್ದು!!

ಯಾವ ಊರನ್ನೂ ನೋಡಿದರೂ ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲದಿರಲು ಸಾಧ್ಯವಿಲ್ಲ!! ಅಷ್ಟರ ಮಟ್ಟಿಗೆ ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ ‘ರಾಮಾಯಣ’ ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ ‘ಸೀತಾಯಾಶ್ಚರಿತಂ’ ಎಂದು ಕರೆಯಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು ‘ಹನುಮಾಯಣ’ವಂತೆ!! ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದೂ ಕರೆದಿದ್ದಾರೆ!!

Image result for rama with hanuma-sundara kaanda

ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ನಂತರ ರಾಮಾಯಣದ ಕಥೆಯು ಆಂಜನೇಯನನ್ನೇ ಅವಲಂಬಿಸಿದೆ. ಶ್ರೀರಾಮನಿಗೂ ಸುಗ್ರೀವನಿಗೂ ಸಖ್ಯವನ್ನು ಮಾಡಿಸಿದವನು, ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ. ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದವನು ಆಂಜನೇಯನೇ. ಯುದ್ಧ ಸಮಯದಲ್ಲಿ ರಾಮನಿಗೊರಗಿದ ಅನೇಕ ಕಷ್ಟಗಳನ್ನು ತನ್ನ ಮಹತ್ ಶಕ್ತಿ ಹಾಗೂ ಬುದ್ದಿವಂತಿಕೆಯಿಂದ ನಿವಾರಣೆ ಮಾಡಿದವನೂ ಈತನೇ. ಇಂತಹ ಮಹಾಮಹಿಮನನ್ನು ಇಡೀ ಭರತಖಂಡವೇ ಹಾಡಿ ಹೊಗಳುತ್ತಿದೆ. ಪುರಾಣಗಳು ಸ್ತುತಿಸುತ್ತಿವೆ. ಏಕಮುಖೀ ಹನುಮಂತನಿಂದ ಹಿಡಿದು ಸಹಸ್ರಮುಖಿ ಹನುಮಂತನವರೆಗೆ ಅನೇಕ ರೂಪಗಳಲ್ಲಿ ಅವನ ಉಪಾಸನೆ ನಡೆಯುತ್ತಲೇ ಇದೆ!!

Image result for rama with hanuma

ತನ್ನ ಅಗಾಧವಾದ ಶಕ್ತಿಯ ಕಾರಣದಿ0ದಲೇ ಲ0ಕೆಯಲ್ಲಿ ರಾವಣನ ಕುಟು0ಬವನ್ನು ಅ0ತ್ಯಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಿದ ಹನುಮಂತನನ್ನು ಶಕ್ತಿಯ ದೇವತೆಯೆಂದು ಪೂಜಿಸಲಾಗುತ್ತದೆ. ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು. ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾನೆ!! ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ ಮತ್ತು ಅಗ್ನಿ ಪುರಾಣದಲ್ಲೂ ಹನುಮಂತನ ಹಾಡಿ ಕೊಂಡಾಡಿದ್ದಾರೆ!!

Image result for red hanuman ji

ಹನುಮನು ಸಿಂಧೂರವನ್ನು ಮೈತುಂಬಾ ಹಚ್ಚಿಕೊಂಡಿರುವುದರಿಂದ ಅವರ ಮೂರ್ತಿಯು ಕೆಂಪಗಿದೆ. ಇದರ ಹಿಂದೆ ಒಂದು ಕಾರಣ ಕೂಡ ಇದೆ. ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿರುವುದನ್ನು ಒಮ್ಮೆ ನೋಡಿದ ಹನುಮನು ದೇವಿಯನ್ನು ಇದೇಕೆ ನೀವು ಕೇಸರಿ ಹಚ್ಚುಕೊಳ್ಳುತ್ತೀರಿ ಎಂದು ಕೇಳುತ್ತಾನೆ ಹನುಮ!!. ರಾಮನ ಮೇಲಿನ ಪ್ರೀತಿ ಮತ್ತು ಗೌರವ ಹಾಗೂ ಮಾಂಗಲ್ಯದ ಸಂಕೇತವಾಗಿ ಸಿಂಧೂರ ಇರುವುದರಿಂದ ಹಣೆಗೆ ಹಚ್ಚಿಕೊಳ್ಳುತ್ತಿರುವುದಾಗಿ ಸೀತಾ ಮಾತೆ ಹೇಳುತ್ತಾಳೆ!! ರಾಮ ಭಕ್ತ ಹನುಮಂತನು ತನ್ನ ಮೈ ತುಂಬಾ ಸಿಂಧೂರವನ್ನು ಬಳಿದುಕೊಂಡು ರಾಮನ ಮೇಲಿನ ಪ್ರೀತಿ, ಆದರವನ್ನು ಈ ಮೂಲಕ ತೋರಿಸುತ್ತಾರೆ. ಇದನ್ನರಿತ ರಾಮನು ಹನುಮನ ಭಕ್ತಿಗೆ ಮೆಚ್ಚಿ ಅವರಿಗೆ ವರವನ್ನು ನೀಡುತ್ತಾರೆ. ಯಾರು ಹನುಮಂತನ ಸಿಂಧೂರವನ್ನು ಹಚ್ಚಿ ಪೂಜಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಇರುವುದಿಲ್ಲ ಮತ್ತು ಆ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದಾಗಿದೆ. ಹೀಗೆ ಹನುಮಂತನನ್ನು ಭಕ್ತರು ಅತೀವ ಭಕ್ತಿಯಿಂದ ನೆನೆದರೆ ಖಂಡಿತ ಅವರಿಗೆ ಒಲಿಯುತ್ತಾನೆ!!

source:
veerakesari.in

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close