ಪ್ರಚಲಿತ

ವಿಜಯಾ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ದಾಳವಾಗಿಸಿ ಸಮಾಜದ ಒಂದು ಬಲಿಷ್ಟ ಸಮುದಾಯವನ್ನು ಮೋದಿ ಸರಕಾರದ ವಿರುದ್ದ ಎತ್ತಿ ಕಟ್ಟುವ ಪಿತೂರಿಗೆ ಸಮಾಜದ ಬಂಧುಗಳು ಬಲಿಯಾಗಬಾರದು

 

ವಿಜಯಾ ಬ್ಯಾಂಕ್ , ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಈ ಮೂರು ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಹಬ್ಬಲಾಗುತ್ತಿದೆ. ಕರಾವಳಿಯ ಅತಿ ಬಲಿಷ್ಟ ಬಂಟ ಸಮುದಾಯವನ್ನು ಮೋದಿ ಸರಕಾರದ ವಿರುದ್ದ ಎತ್ತಿ ಕಟ್ಟುವ ವ್ಯವಸ್ಥಿತ ಪಿತೂರಿಯ ಭಾಗವಾಗಿ ವಿಜಯಾ ಬ್ಯಾಂಕ್ ಉಳಿಸಿ ಎನ್ನುವ ಆಂದೋಳನವನ್ನು ಕೈಗೊಳ್ಳಲಾಗುತ್ತಿದೆ. ದೇಶ -ವಿದೇಶಗಳಲ್ಲಿ ವಿಖ್ಯಾತವಾಗಿರುವ ಬಂಟ ಸಮುದಾಯವು ದೇಶಕ್ಕಾಗಿ ಸಮಾಜಕ್ಕಾಗಿ ಹಲವಾರು ಬಲಿದಾನಗಳನ್ನು ಮಾಡಿದೆ, ಮುಂದೆಯೂ ಮಾಡಲಿದೆ.

ಇತ್ತೀಚಿನ ದಿನಗಳಲ್ಲಿ ಬಂಟ ಸಮುದಾಯ ಮೋದಿ ಸರಕಾರದ ಪರವಾಗಿ ಗಟ್ಟಿಯಾಗಿ ನಿಂತಿದೆ. ದೇಶದ ಅತಿ ಬಲಿಷ್ಟ ಸಮುದಾಯವೊಂದು ಮೋದಿ ಸರಕಾರದ ಪರವಾಗಿ ನಿಂತಿರುವುದು ವಿರೋಧಿಗಳ ನಿದ್ದೆಗೆಡಿಸಿದೆ. ವಿರೋಧಿಗಳು ಒಂದು ವಿಷಯ ನೆನಪಿಡಲೆ ಬೇಕು. ಅಂದು ಕಾಂಗ್ರೆಸ್ಸಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ರಾತೋರಾತ್ರಿ “ಉಳುವವನೆ ಹೊಲದೊಡೆಯ” ಎನ್ನುವ ಕಾನೂನು ತಂದು ಇದೆ ಬಂಟ ಸಮುದಾಯದ ಅನ್ನಕ್ಕೆ ಕಲ್ಲು ಹಾಕಿದ್ದರು. ತನ್ನ ಉಣ್ಣುವ ಬಟ್ಟಲಿಗೆ ಕಲ್ಲು ಹಾಕಿದರೂ ಬಂಟ ಸಮುದಾಯ ಕಷ್ಟವನ್ನು ತುಟಿಕಚ್ಚಿ ಸಹಿಸಿಕೊಂಡು ಪರದೇಶಗಳಿಗೆ ಹೋಗಿ ರಾತ್ರಿ ಹಗಲು ದುಡಿದು ತನ್ನ ಸ್ವಸ್ವಾಮರ್ಥ್ಯದಿಂದ ಮೇಲೆ ಬಂದಿದೆ. ನೆನಪಿಡಿ ಭೂಮಿಯನ್ನು ಕಿತ್ತುಕೊಂಡದಕ್ಕೆ ಕಾಂಗ್ರೆಸ್ ಸರಕಾರ ಬಂಟ ಸಮುದಾಯಕ್ಕೆ ಪರಿಹಾರವಾಗಲಿ, ಮೀಸಲಾತಿಯನ್ನಾಗಲಿ ನೀಡಲಿಲ್ಲ. ಆಗ ಬಂಟ ಸಮುದಾಯದ ಮೇಲೆ ಇಲ್ಲದಿದ್ದ ಪ್ರೀತಿ ಈಗ ಒಮ್ಮೆಲೇ ಉಕ್ಕಿ ಹರಿಯಿತೆ?

ವಿಜಯಾ ಬ್ಯಾಂಕ್ ವಿಲೀನಗೊಳ್ಳುತ್ತಿದೆಯೆ ಹೊರತು ಮುಚ್ಚಲ್ಪಡುತ್ತಿಲ್ಲ

# ಮುಲ್ಕಿ ಸುಂದರರಾಮ್ ಶೆಟ್ಟರಿಂದ ಪ್ರಾರಂಭಿಸಲಾದ ವಿಜಯಾ ಬ್ಯಾಂಕ್ ಇದು ರಾಷ್ಟ್ರೀಕೃತ ಬ್ಯಾಂಕ್. ಇದು ಯಾವುದೆ ಪರಿವಾರದ ಅಥವಾ ಸಮುದಾಯದ ಸ್ವತ್ತಲ್ಲ. ಉಡುಪಿಯವರಾದ ಖಾನ್ ಬಹಾದುರ್ ಹಾಜಿ ಅಬ್ದುಲ್ಲಾ ಅವರಿಂದ ಸ್ಥಾಪಿಸಲ್ಪಟ್ಟ ಕಾರ್ಪೋರೇಷನ್ ಬ್ಯಾಂಕ್ ಹೇಗೆ ಅವರ ಪರಿವಾರದ ಮತ್ತು ಮುಸ್ಲಿಂ ಸಮುದಾಯದ ಸ್ವತ್ತಲ್ಲವೋ ಹಾಗೆ ಇದೂ ಕೂಡ. ಬ್ಯಾಂಕ್ ಗಳು ರಾಷ್ಟ್ರಕ್ಕೆ ಸಂಬಂಧಪಟ್ಟದ್ದೆ ಹೊರತು ಸಮುದಾಯಗಳಿಗೆ ಸಂಬಂಧಪಟ್ಟದಲ್ಲ.

# ‘ಲಾಭ’ದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ‘ನಷ್ಟ’ದಲ್ಲಿರುವ ಬ್ಯಾಂಕಗಳ ಜೊತೆ ವಿಲೀನ ಮಾಡುತ್ತಿದ್ದಾರೆ ಎನ್ನುವುದು ಸುಳ್ಳು. ಈ ಮೂರು ಬ್ಯಾಂಕ್ ಗಳಲ್ಲಿ ಅತಿ ಹೆಚ್ಚು ವಹಿವಾಟು ಹೊಂದಿರುವುದು ಬ್ಯಾಂಕ್ ಆಫ್ ಬರೋಡಾ, ತದನಂತರ ವಿಜಯಾ ಬ್ಯಾಂಕ್ ಆ ನಂತರ ದೇನಾ ಬ್ಯಾಂಕ್. ಎರಡು ಲಾಭದಲ್ಲಿರುವ ಬ್ಯಾಂಕ್ ಗಳನ್ನು ಒಂದು ಕಡಿಮೆ ಲಾಭ ತರುವ ಬ್ಯಾಂಕ್ ನೊಂದಿಗೆ ವಿಲೀನ ಗೊಳಿಸಲಾಗುತ್ತಿದೆ. ಇಂತಹ ಪ್ರಕ್ರಿಯೆಗಳು ಮುಂದೆಯೂ ಇತರ ಬ್ಯಾಂಕ್ ಗಳಿಗೆ ಅನ್ವಯಿಸಲಿವೆ.

# ಬ್ಯಾಂಕ್ ಆಫ್ ಬರೋಡಾ( NSE 2.01%), ವಿಜಯಾ ಬ್ಯಾಂಕ್( NSE1.59%) ದೇನಾ ಬ್ಯಾಂಕ್ (NSE -0.69%) ಈ ಮೂರು ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ದೇಶದ ಮೂರನೆಯ ಅತಿದೊಡ್ಡ ಸಾಲದಾತವನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿದೆ. ಇದರಂತೆಯೆ ಉಳಿದ 17 ಸರ್ಕಾರಿ ಸ್ವಾಮ್ಯದ ಸಾಲದಾತರನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಯಲಿದೆ. ವಿಲೀನಗೊಳಿಸುವ ಪ್ರಕ್ರಿಯೆಗೆ ಮೋದಿ ಸರಕಾರ ಹಸಿರು ನಿಶಾನೆ ತೋರಿದೆ ಅಷ್ಟೆ. ಆದರೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಬ್ಯಾಂಕಿನ ಆಡಳಿತ ಮಂಡಳಿಯ ಮೇಲಿದೆ.

ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ದೇಶಕ್ಕೇನು ಲಾಭ?

# ಬ್ಯಾಂಕ್ ಗಳ ಸಂಯೋಜಿತ ಘಟಕವು ದೇಶಾದ್ಯಂತ ಪ್ರಬಲವಾದ ಉಪಸ್ಥಿತಿಯನ್ನು ಹೊಂದಲಿದೆ. ಕಡಿಮೆ ವೆಚ್ಚದ ಠೇವಣಿಗಳ ಪೈಕಿ 34% ಕ್ಕಿಂತ ಹೆಚ್ಚು ಹಣವನ್ನು, 12% ರಷ್ಟು ಬಂಡವಾಳ ಬಫರ್ ಮತ್ತು 14.82 ಲಕ್ಷ ಕೋಟಿ ರೂ ವಹಿವಾಟು ಹೊಂದಲಿದೆ. ಈ ಮೂರೂ ಬ್ಯಾಂಕ್ ಗಳಲ್ಲಿ ಅತಿ ದೊಡ್ಡ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ದ ಒಟ್ಟು ವ್ಯಾಪಾರ 10.29 ಲಕ್ಷ ಕೋಟಿ, ವಿಜಯಾ ಬ್ಯಾಂಕ್ 2.79 ಲಕ್ಷ ಕೋಟಿ ಮತ್ತು ದೇನಾ ಬ್ಯಾಂಕ್ 1.72 ಲಕ್ಷ ಕೋಟಿ ರೂಪಾಯಿಗಳಾಗಿವೆ. ವಿಲೀನ ಪ್ರಕ್ರಿಯೆ ದೇಶದ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವ ಪರ್ಯಾಯ ಮಾರ್ಗವಾಗಿದೆ.

# ಕ್ಯಾಬಿನೆಟ್ ಮಂತ್ರಿಗಳಾದ ಅರುಣ್ ಜೇಟ್ಲಿ, ಪಿಯೂಷ್ ಗೋಯಲ್ ಮತ್ತು ನಿರ್ಮಲ ಸೀತಾರಾಮನ್ ರವರ ನೇತೃತ್ವದಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಬ್ಯಾಂಕ್ ಗಳ ಏಕೀಕರಣ ನಡೆಸುವ ವಿಷಯವನ್ನು ಪ್ರಸ್ತಾಪಿಸಲಾಗಿದೆ. ತುಲನಾತ್ಮಕವಾಗಿ ದುರ್ಬಲ ಬ್ಯಾಂಕುಗಳನ್ನು ವಿಲೀನ ಮಾಡಲಾಗುವುದಿಲ್ಲ ಮತ್ತು ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಈ ಬಗ್ಗೆ ಮಾತುಕತೆ ನಡೆಸಿವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ.

# ಬ್ಯಾಂಕ್ ವಿಲೀನ ಪ್ರಕ್ರಿಯಿಂದ ಬ್ಯಾಂಕಗಳ ಕಾರ್ಯ ದಕ್ಷತೆ ಹೆಚ್ಚಲಿದೆ. ದೇಶದ ಮೇಲೆ ಸಾಲದ ಹೊರೆ ತಗ್ಗಲಿದೆ. ಈಗಾಗಲೆ ನಿವೃತ್ತಿ ಅವಧಿಗೆ ಹತ್ತಿರವಾಗಿರುವ ಉದ್ಯೋಗಿಗಳಿಂದ ತೆರವಾಗಲಿರುವ ಸ್ಥಾನಗಳಿಗೆ ಉದ್ಯೋಗಿಗಳ ಭರ್ತಿ ಪ್ರಕ್ರಿಯೆ ನಡೆದು ಉದ್ಯೋಗಾವಕಾಶಗಳು ಸೃಷ್ಟಿಗೊಳ್ಳಲಿವೆ ಮಾತ್ರವಲ್ಲ ಬ್ಯಾಂಕ್ ಗಳು ಇನ್ನೂ ಹೆಚ್ಚು ತಂತ್ರಜ್ಞಾನ ಸ್ನೇಹಿಯಾಗಲಿವೆ. ವಿಲೀನ ಪ್ರಕ್ರಿಯೆ ಇನ್ನೂ ಮಾತುಕತೆ ಹಂತದಲ್ಲಿದೆ ಸಂಬಂಧ ಪಟ್ಟ ಬ್ಯಾಂಕ್ ಗಳು ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಿವೆ. ಅದಕ್ಕೂ ಮುನ್ನವೆ ವಿರೋಧಿಗಳು ಮೋದಿ ಸರಕಾರದ ವಿರುದ್ದ ಸುಳ್ಳು ಸುದ್ದಿ ಹಬ್ಬುವ ಕೆಲಸ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿ ಬಂಟ ಸಮುದಾಯವನ್ನು ಮೋದಿ ಸರಕಾರದ ವಿರುದ್ದ ಎತ್ತಿ ಕಟ್ಟುವ ಪಿತೂರಿಗೆ ಬಲಿಯಾಗದಿರಿ. ವಿರೋಧಿಗಳು ಮೋದಿಯವರನ್ನು ಸೋಲಿಸಲು ತರಹೇವಾರಿ ನಾಟಕಗಳನ್ನು ಆಡುತ್ತಿದ್ದಾರೆ, ಈ ಆಟಕ್ಕೆ ಬಲಿಯಾಗ ಬೇಡಿ. ದೇಶಕ್ಕಾಗಿ ಹಗಲಿರುಳು ದುಡಿಯುವ ಬಂಟ ಬಾಂಧವರು ಈ ಬಾರಿಯೂ ದೇಶದ ಜೊತೆ ನಿಲ್ಲುತ್ತಾರೆ ಎನ್ನುವ ಭರವಸೆ ಇದೆ. ಜಾತಿ ಆಧಾರದ ಮೇಲೆ ದೇಶ ಒಡೆಯುವ ಕುತಂತ್ರಿಗಳ ದಾಳಕ್ಕೆ ಬಲಿಯಾಗದೆ  ಜಾತಿ- ಧರ್ಮ- ಸಮುದಾಯ ಎನ್ನುವ ಬೇಲಿ ಹರಿದು ದೇಶಕ್ಕಾಗಿ ಒಗ್ಗಟ್ಟಿನಿಂದ ಹೋರಾಡೋಣ. ಒಂದು ಸಮುದಾಯಕ್ಕೆ ನಮ್ಮನ್ನು ಸೀಮಿತಗೊಳಿಸದೆ ಭಾರತೀಯರಾಗೋಣ.

ಮಹೇಶ್ ವಿಕ್ರಂ ಹೆಗ್ಡೆ

economictimes

Tags

Related Articles

FOR DAILY ALERTS
 
FOR DAILY ALERTS
 
Close