ಪ್ರಚಲಿತ

 ಗಲ್ಫ್ ನ ಪ್ರಸಿದ್ಧ ವಿದ್ಯಾಲಯದ ಅಧ್ಯಕ್ಷರು ಮೋದಿ ಬಗ್ಗೆ ಬರೆದ ಲೇಖನದಲ್ಲಿ ಏನಿದೆ ಗೊತ್ತಾ?! ಗಲ್ಫ್ ನಮೋ ಮಯ…

ಮೋದಿ ಅಂದರೆ ಹಾಗೇನೆ. ಅವರದ್ದು ಚಿನ್ನದ ಪುಟದಂತಿರುವ ವ್ಯಕ್ತಿತ್ವ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದರು. ಇದು ವಿಶ್ವದ ದಿಗ್ಗಜರ ಮಾತುಗಳೂ ಹೌದು.ಯಾಕೆಂದರೆ ಪ್ರಧಾನಿ ಮೋದಿಯವರ ನಡವಳೆಕೆಯಲ್ಲೇ ಒಂದು ಶಕ್ತಿ ಅಡಗಿದೆ.

ಮುಸ್ಲಿಂ ರಾಷ್ಟ್ರದಲ್ಲಿ “ನಮೋ” ನಮಃ…

ಮುಸ್ಲಿಂ ರಾಷ್ಟ್ರ ಗಲ್ಫ್ ನಲ್ಲಿ ಮೋದಿ ಹವಾ ಭಾರೀ ಸದ್ದು ಮಾಡುತ್ತಿದೆ. ಮೋದಿ ಮೋದಿ ಎಂಬ ಕೂಗು ಸಮಾವೇಶದುದ್ದಕ್ಕೂ ಸದ್ದು ಮಾಡುತ್ತಿದೆ. ಇಡೀ ಮುಸ್ಲೀಂ ರಾಷ್ಟ್ರವೇ ಮೋದಿಮಯವಾಗಿದೆ.

ಮೋದಿ ಬಗ್ಗೆ ಬರೆದರು ಪ್ರಸಿದ್ಧ ವಿದ್ಯಾಧಿಪತಿಗಳು…

ಮೋದಿ ಬಗ್ಗೆ ಗಲ್ಫ್ ನ ಪ್ರಸಿದ್ಧ ಬಿರ್ಮಿಂಗಾಮ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ.ಅಶೋಕ್ ಆನಂದ್ ಲೇಖನವನ್ನು ಬರೆದಿದ್ದಾರೆ. ಇದು ಗಲ್ಫ್ ರಾಷ್ಟ್ರದಲ್ಲಿ ಮೋದಿಯನ್ನು ಮತ್ತಷ್ಟು ವಿಜೃಂಭಿಸುವಂತೆ ಮಾಡಿದೆ. ಡಾ.ಅಶೋಕ್ ಏನು ಹೇಳಿದ್ದಾರೆ ನೋಡೋಣ ಬನ್ನಿ…

1. ಮೊದಲನೆಯದಾಗಿ ರಾಷ್ಟ್ರದ ಬಹುತೇಕ ರಾಜಕಾರಣಿಗಳ ಹಾಗೆ ನರೇಂದ್ರ ಮೋದಿ ಭ್ರಷ್ಟನಲ್ಲ.

ಇದಕ್ಕೆ ಉದಾಹರಣೆ ನರೇಂದ್ರ ಮೋದಿಯವರ ಅಣ್ಣ ತಮ್ಮಂದಿರುಗಳು, ಕುಟುಂಬ ಈಗಲೂ ಸರ್ಕಾರದ ಯಾವುದೇ ಸೌಲಭ್ಯಗಳನ್ನ ದುರುಪಯೋಗಪಡಿಸಿಕೊಂಡಿಲ್ಲ. ಈಗಲೂ ಅವರು ತಮ್ಮ ಹಳೆಯ ಮನೆ, ತಮ್ಮ ಹಳೆಯ ಉದ್ಯೋಗದ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ.

ಆದರೆ ನಮ್ಮ ದೇಶದ ರಾಬರ್ಟ್ ವಾದ್ರಾ ಕುಟುಂಬ, ಅಖಿಲೇಶ್ ಯಾದವ್ ಕುಟುಂಬದ 22 ಜನ ಕುಟುಂಬಸ್ಥರು, ಬಿಲಿಯನಗಟ್ಟಲೇ ಆಸ್ತಿಯ ಒಡತಿ ಮಾಯಾವತಿಯ ಕುಟುಂಬವನ್ನೊಮ್ಮೆ ನೋಡಿದಾಗ ಮೋದಿಯೇ ಸರ್ವಶ್ರೇಷ್ಠ ಅನಿಸೋದಂತೂ ಸುಳ್ಳಲ್ಲ.

2.ತನ್ನ ಓಟಬ್ಯಾಂಕಿಗೆ ಧಕ್ಕೆಯಾಗಬಹುದು ಅಂತ ಗೊತ್ತಿದ್ದರೂ ದೇಶದ ಸುರಕ್ಷತೆಗಾಗಿ, ಭವಿಷ್ಯಕ್ಕಾಗಿ ಎಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೋದಿ ಹಿಂಜರಿಯಲ್ಲ.

3.ನಾನು ವಿದೇಶದಲ್ಲಿದ್ದೇನೆ, ಕಳೆದ ನಾಲ್ಕು ವರ್ಷಗಳಿಂದ ಭಾರತವೆಂದರೆ ಹೊರ ರಾಷ್ಟ್ರಗಳು ನೋಡುವ ದೃಷ್ಟಿಕೋನವೇ ಬದಲಾಗಿಬಿಟ್ಟಿದೆ, ಅದನ್ನ ನಾನು ಸ್ವತಃ ಹೊರರಾಷ್ಟ್ರದಲ್ಲಿದ್ದು ಅನುಭವಿಸಿದ್ದೇನೆ.

ಪ್ರಧಾನಿ ಮೋದಿ ನಮ್ಮ ದೇಶದ ಸಂಸ್ಕೃತಿ, ಘನತೆ ಗೌರವವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.

4. ಪ್ರಧಾನಿ ಮೋದಿಯವರ ಸಚಿವ ಸಂಪುಟದ ಯಾವೊಬ್ಬ ಮಂತ್ರಿಗಳ ಹೆಸರೂ ಕೂಡ ಒಂದೇ ಒಂದು ಹಗರಣದಲ್ಲಿ ಇಲ್ಲೀವರೆಗೂ ಕೇಳಿಬಂದಿಲ್ಲ.

ಆದರೆ ಇದಕ್ಕೂ ಮುನ್ನ ದೇಶದಲ್ಲಿ ಬರೀ ಹಗರಣಗಳ ಸಂತೆಯೇ ಎದ್ದು ಕಾಣುತ್ತಿತ್ತು.
67 ವರ್ಷಗಳ ಕಾಲ ಬೇಲಿಯೇ ಎದ್ದು ಹೊಲ ಮೇಯ್ದಂಗೆ ದೇಶವನ್ನ ಲೂಟಿ ಮಾಡುತ್ತಲೇ ಬಂದಿದ್ದರು ಹಿಂದಿಮ ರಾಜಕಾರಣಿಗಳು, ರಾಜಕೀಯ ಪಕ್ಷಗಳು.

5. ಚೀನಾ ಹಾಗು ಪಾಕಿಸ್ತಾನದಂತಹ ಬದ್ಧ ವೈರಿ ರಾಷ್ಟ್ರಗಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯವಿರುವ ಜಗತ್ತಿನ ಏಕೈಕ ನಾಯಕನೆಂದರೆ ಅದು ನರೇಂದ್ರ ಮೋದಿ ಮಾತ್ರ. ಇದು ನಾನು ಹೇಳ್ತಿಲ್ಲ ಇದನ್ನ ಸ್ವತಃ ಜಗತ್ತಿನ ದೊಡ್ಡಣ್ಣ ಅಮೇರಿಕಾ ಕೂಡ ಒಪ್ಪಿ ಮೋದಿಯನ್ನು ಹಾಡಿ ಹೊಗಳುತ್ತಿದೆ.

ನರೆಂದ್ರ ಮೋದಿಯೆಂಬ ಹೆಸರು ಕೇಳಿದರೆ ಸಾಕು ಚೀನಾ, ಪಾಕಿಸ್ತಾನ ಥರಗುಟ್ಟುತ್ತವೆ.

6. ದೇಶದ ಬಡ ಜನರಿಗೊಮ್ಮೆ ಮಾತನಾಡಿಸಿ “ನೀವು ಬ್ಯಾಂಕಿಮ ಮುಖ ಯಾವಾಗ ನೋಡದ್ರಿ?” ಅಂತೊಮ್ಮೆ ಕೇಳಿ. ಅವರು ಹೇಳೋದು ನರೇಂದ್ರ ಮೋದಿಯವರ ಹೆಸರಲ್ಲದೇ ಬೇರೆ ಯಾರ ಹೆಸರೂ ಹೇಳಲ್ಲ.

ನರೇಂದ್ರ ಮೋದಿಯವರ ಜನಧನ್ ಯೋಜನೆಯಿಂದ ಬಡವರಿಗೆ ಹಾಗು ಸರ್ಕಾರದ ಬೊಕ್ಕಸಕ್ಕೆ ಸುಮಾರು 40 ಸಾವಿರ ಕೋಟಿಯಷ್ಟು ಆದಾಯವಾಗಿದೆ.

 

7. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ 18 ನೇ ಶತಮಾನದಿಂದ ಬ್ರಿಟಿಷರಿಂದ ಜಾರಿಗೊಳೊಸಲ್ಪಟ್ಟ ಸುಮಾರು 1500 ಕಾನೂನುಗಳನ್ನ ಐ.ಪಿ.ಸಿ ಯಿಂದ ತೆಗೆದು ಹಾಕಲಾಗಿದೆ.

8.ರೈತರಿಗೆ, ಬಡವರಿಗೆ, ಶ್ರಮಿಕರಿಗೆ ಸಬ್ಸಿಡಿ ಹಣ ನೇರವಾಗಿ ಅವರ ಬ್ಯಾಂಕ್ ಅಕೌಂಟಿಗೆ ಜಮೆಯಾಗುತ್ತಿದೆ.

ಮೊದಲೆಲ್ಲಾ ರೈತರ, ಬಡವರ ಹಣವನ್ನ ಅವರಿಗೆ ನೀಡಿಯಾಗಿದೆ ಅಂತ ದೇಶದಲ್ಲಿ ಕಾಂಗ್ರೆಸ್, ಪಂಚಾಯ್ತಿ ಸದಸ್ಯರು, ಮಧ್ಯವರ್ತಿಗಳು ಅದೆಷ್ಟು ಲೂಟಿ ಮಾಡಿದ್ದಾರೋ ಆ ದೇವರೇ ಬಲ್ಲ. ಆದರೆ ಮೋದಿ ಇದಕ್ಕೆಲ್ಲ ಕಡಿವಾಣ ಹಾಕಿ ಸಬ್ಸಿಡಿ ಹಣವನ್ನ ಫಲಾನುಭವಿಗಳಿಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ.

9.ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಸರಿ ಸುಮಾರು 3 ಕೋಟಿ ಹೆಣ್ಣುಮಕ್ಕಳಿಗೆ ಗ್ಯಾಸ್ ಸಂಪರ್ಕ ನೀಡುವ ಮೂಲಕ ಅವರ ಕಣ್ಣೀರು ಒರೆಸಿದ್ದು ಇದೇ ಮೋದಿ.

ಸೌದೆಯ ಮೂಲಕ ಒಲೆ ಹಚ್ಚಿ ಕಣ್ಣೀರು ಹಾಕುತ್ತಿದ್ದ ದೇಶದ ಹೆಂಗಳೆಯರ ಮುಖದ ಮೇಲೆ ಮಂದಹಾಸ ಮೂಡಿಸಿದ್ದು ಇದೇ ಮೋದಿ.

10. GST, ಡಿಮಾನಿಟೈಸೇಶನ್ ಬಿಡಿ ಅದರ ಮಹತ್ವ ನಮಗೀಗ ಅರ್ಥವಾಗಲ್ಲ, ಆದರೆ ನಮ್ಮ ಮುಂದಿನ ಪೀಳಿಗೆ ಹಾಗು ಭಾರತದ ಭವಿಷ್ಯಕ್ಕೆ ಅದೆಷ್ಟು ಸಹಕಾರಿಯಾಗುತ್ತೆ ಅನ್ನೋದು ಮುಂಬರುವ ದಿನಗಳಲ್ಲಿ ನಮಗೆ ಗೊತ್ತಾಗುತ್ತೆ.

ಮುಂದಿನ ಪೀಳಿಗೆ ನರೇಂದ್ರ ಮೋದಿ ಎಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ನಮ್ಮ ದೇಶದ ಭದ್ರತೆಗೆ ಬುನಾದಿ ಹಾಕಿದರಲ್ಲ ಅಂತ ಅವರೇ ಮಾತನಾಡಿಕೊಳ್ಳುತ್ತಾರೆ.

ಇಂತಹ ಸುಮಾರು ಉದಾಹರಣೆಗಳನ್ನು ನಾನು ನಿಮಗೆ ಕೊಡಬಲ್ಲೆ, ಅಷ್ಟಕ್ಕೂ 70 ವರ್ಷಗಳ ಹಗರಣಗಳ ಭಾರತ ಬದಲಾಗೋಕೆ ಸ್ವಲ್ಪ ಸಮಯವಾದರೂ ಬೇಕಲ್ಲವೇ?

ನಮ್ಮ ದೇಶದಲ್ಲಿ ಹಿಂದೆಲ್ಲಾ ನಡೆದ ಭ್ರಷ್ಟಾಚಾರ, ಅಸೂಯೆಯ ರಾಜಕಾರಣ, ಹತ್ಯಾಕಾಂಡ, ಹಗರಣಗಳನ್ನೊಮ್ಮೆ ಹಿಂತಿರುಗಿ ನೋಡಿ. ಅವುಗಳನ್ನೆಲ್ಲಾ ಥಟ್ಟಂತ ಪರಿಹರಿಸೋಕೆ ಸರ್ವಾಧಿಕಾರಿಯಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಂತೂ ಅಲ್ಲ. ಆತ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಿಂದ ಆಯ್ಕೆಯಾದ ವ್ಯಕ್ತಿ.

ಆತನಿಗೆ ದೇಶದ ಮೂಲ ಸಮಸ್ಯೆಗಳನ್ನು ಜಡಸಮೇತ ಕಿತ್ತೆಸೆಯಲು ಸ್ವಲ್ಪ ಕಾಲಾವಕಾಶ ಕೊಡಲೇಬೇಕಲ್ಲವೇ?

ಕೊನೆಯದಾಗಿ, ನರೇಂದ್ರ ಮೋದಿ ಅಥವ ಬಿಜೆಪಿ ದೇಶಕ್ಕಾಗಿ ಒಳ್ಳೆಯದು ಮಾಡುತ್ತಿದ್ದಾರೋ ಇಲ್ಲವೋ ಅನ್ನೋ ಪ್ರಶ್ನೆಯಲ್ಲ, ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಕಾಂಗ್ರೆಸ್ಸಿನಂತಹ ಭ್ರಷ್ಟ ಪಕ್ಷಕ್ಕೇ 6 ದಶಕಗಳ ಕಾಲ ಅಧಿಕಾರ ನೀಡಿದ್ದೇವೆ ಅಂದಮೇಲೆ ಮೋದಿಯಂತಹ ಪ್ರಾಮಾಣಿಕನಿಗೆ ಮತ್ತೊಂದು ಅವಕಾಶ ನೀಡೋದು ತಪ್ಪಾ ಅನ್ನೋದು!!

ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಜನ ಕಂಡು ಕೇಳರಿಯದಂತಹ ಬದಲಾವಣೆಗಳು ತರೋದಂತೂ ಶತ ಸತ್ಯ!!

ಮುಂದಿನ ಚುನಾವಣೆಯಲ್ಲಿಯೂ ನರೇಂದ್ರ ಮೋದಿಯವರಂತಹ ವ್ಯಕ್ತಿಗೆ ನಾನಂತೂ ವಿದೇಶದಿಂದ ಬಂದು ಮತ ಹಾಕುತ್ತೇನೆ, ಮತ್ತೆ ನೀವು?

ಎಸ್ ಇದು ಮೋದಿ ಮಾಡಿದ ಮ್ಯಾಜಿಕ್ ಗೆ ಫಿದಾ ಆಗಿರುವ ಪ್ರತಿಷ್ಟಿತ ವಿದ್ಯಾಲಯದ ಅಧ್ಯಕ್ಷರು ಮುಂದಿನ ಭಾರಿಯೂ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ. ಇದಲ್ಲವೇ ನಮೋ ಹವಾ ಅಂದರೇ..?

-ಸುನಿಲ್ ಪಣಪಿಲ

Tags

Related Articles

Close