ಪ್ರಚಲಿತ

ರಾಹುಲ್ ಗಾಂಧಿಯ ನಾನ್ ವೆಜ್ ಊಟದ ಬಗ್ಗೆ ಕುಮಾರಸ್ವಾಮಿ ಏನಂದರು ಗೊತ್ತಾ?! ಇದು ವಿಧಾನಸಭಾ ಚುನಾವಣೆಯ ಹೊಸ ಗಿಮಿಕ್!!

ಈ ರಾಜಕೀಯವೇ ಹೀಗೆ , ಎಂಥವರನ್ನೂ ಆಟ ಆಡಿಸುತ್ತದೆ. ಸದ್ಯಕ್ಕೆ ರಾಜಕೀಯ ನಾಟಕ ಮಾಡುತ್ತಿರುವವರು ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್. ಕರ್ನಾಟಕದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗದಲ್ಲಿ ಪರಸ್ಪರ ಪೈಪೋಟಿ ಹೆಚ್ಚಾಗುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿದ್ದು ಒಬ್ಬರನ್ನೊಬ್ಬರು ಪರಸ್ಪರ ದೂರುವುದೇ ಸುದ್ದಿಯಾಗುತ್ತಿದೆ..!

ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶವನ್ನು ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಗೆ ಬಂದು ನಿಂತಿದೆ. ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಇಡೀ ದೇಶವೇ ಮೋದಿಯವರನ್ನು ಬೆಂಬಲಿಸಿ ಬಿಜೆಪಿಯತ್ತ ಮುಖಮಾಡಿದೆ. ಇದಕ್ಕೆ ಈವರೆಗೂ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಈಗಾಗಲೇ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ತತ್ತರಿಸಿದ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಕರ್ನಾಟಕದ ಚುನಾವಣೆಯ ದ್ರಷ್ಟಿಯಿಂದ ಪ್ರಚಾರಕ್ಕಾಗಿ ಆಗಮಿಸಿದ ಕಾಂಗ್ರೆಸ್ ನ ಮಹಾರಾಜ ರಾಹುಲ್ ಗಾಂಧಿ ಭರ್ಜರಿ ಪ್ರಚಾರಕ್ಕೆ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಯಿಂದಾಗಿ ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಕರ್ನಾಟಕದ ಹಿಂದೂ ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಗುಜರಾತ್ ನಲ್ಲೂ ಚುನಾವಣೆ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಹಿಂದೂ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್ ನ ಯಾವ ತಂತ್ರವೂ ಫಲಿಸಲಿಲ್ಲ.

ಇದೀಗ ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ‘ಟೆಂಪಲ್ ರನ್’ ಆರಂಭಿಸಿರುವ ರಾಹುಲ್ ತನ್ನ ರಾಜಕೀಯ ಲಾಭಕ್ಕಾಗಿ ಹಿಂದುತ್ವದೆಡೆಗೆ ಮುಖಮಾಡಿದ್ದಾರೆ. ಸಿದ್ದರಾಮಯ್ಯನವರು ಅಧಿಕಾರ ಹಿಡಿದ ದಿನದಿಂದಲೇ ಹಿಂದೂ ವಿರೋಧಿಯಾಗಿ ಆಳ್ವಿಕೆ ನಡೆಸುತ್ತಾ ಬಂದವರು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಓಲೈಕೆಗಾಗಿ ದೇವಾಲಯಗಳ ಭೇಟಿ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಆದರೆ ದೇವಸ್ಥಾನಗಳಿಗೆ ಹೋಗುವ ಸಂದರ್ಭಗಳಲ್ಲೂ ಮೀನು – ಮಾಂಸ ತಿಂದು ದೇವರ ದರ್ಶನ ಮಾಡುತ್ತಿದ್ದು , ತಮ್ಮ ನೈಜ ಸ್ವಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಹಿಂದೂಗಳ ಬಗ್ಗೆ ಚೂರು ಒಲವಿಲ್ಲದ ಸಿದ್ದರಾಮಯ್ಯ ಸರಕಾರ ಪದೇ ಪದೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡುತ್ತಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದ್ದರು. ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದ ಹೆಸರೆತ್ತಲೂ ಕರಾವಳಿಯಲ್ಲಿ ಆಲೋಚಿಸುವ ಜನರ ಮಧ್ಯೆಯೇ ಸಿದ್ದರಾಮಯ್ಯನವರು ಮಾಂಸ ಸೇವಿಸಿ ದೇವರ ದರ್ಶನಕ್ಕಾಗಿ ಹೋಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಬಯಲಾಗುತ್ತಿದ್ದಂತೆ ರಾಜ್ಯಾಡಳಿತ ಆಕ್ರೋಶ ವ್ಯಕ್ತವಾಗಿತ್ತು..!

ಇದೀಗ ಸಿದ್ದರಾಮಯ್ಯನವರ ರೀತಿಯಲ್ಲೇ ರಾಹುಲ್ ಗಾಂಧಿ ಕೂಡಾ ನಡೆದುಕೊಳ್ಳುತ್ತಿದ್ದು ಮಾಂಸ ಸೇವನೆ ಮಾಡಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ರಾಹುಲ್ ಗಾಂಧಿ ಮಾಂಸ ಸೇವಿಸಿ ದೇವಾಲಯಗಳಿಗೆ ಹೋಗುವುದನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ..! ಮಾಂಸ ಸೇವಿಸಿ ದೇವಸ್ಥಾನಗಳಿಗೆ ಹೋಗುವುದು ತಪ್ಪಲ್ಲ , ಇದನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಹಕ್ಕಿಲ್ಲ ಎನ್ನುವ ಮೂಲಕ ಮತ್ತೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ.

ರಾಹುಲ್ ಗಾಂಧಿ ಮಾಂಸ ತಿಂದು ದೇವಾಲಯಗಳ ಭೇಟಿ ನೀಡಿರುವ ವಿಚಾರಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎನ್ನುವ ಮೂಲಕ ಹಿಂದೂಗಳ ಭಾವನೆಗಳಿಗೆ ಮತ್ತೆ ಅವಮಾನವೆಸಗಿದ್ದಾರೆ..!

ಹಿಂದೂಗಳಲ್ಲಿ ಕೆಲವು ದೇವರುಗಳೇ ಮಾಂಸ ಪ್ರಿಯರು ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ ಕುಮಾರಸ್ವಾಮಿ ಅವರು ಮನುಷ್ಯನ ದೇಹವೇ ಮಾಂಸಗಳಿಂದ ಕೂಡಿದೆ ಎನ್ನುವ ಮೂಲಕ ನೇರವಾಗಿ ಹಿಂದೂ ದೇವರುಗಳನ್ನು ಅವಮಾನ ಮಾಡಿದ್ದಾರೆ , ಮತ್ತು ರಾಹುಲ್ ಗಾಂಧಿಯ ನಡೆಯನ್ನು ಸಮರ್ಥಿದಿಕೊಂಡಿದ್ದಾರೆ..!

ಈ ಹಿಂದೆ ಕಾಂಗ್ರೆಸ್ ಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ದೇವೇಗೌಡರ ಮಾತಿನ ಬೆನ್ನಲ್ಲೇ ಮಗ ಕುಮಾರಸ್ವಾಮಿ ಯವರು ಕಾಂಗ್ರೆಸ್ ನ ನಡೆಯನ್ನು ಸಮರ್ಥಿಸಿಕೊಂಡಿರುವುದು ಜೆಡಿಎಸ್ ನ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತದೆ.


‘ನಾವು ದೈವಭಕ್ತರು , ನಮ್ಮ ಮನೆಯಲ್ಲೂ ದೇವರ ಪೂಜೆ ನಿತ್ಯ ನಡೆಸುತ್ತೇವೆ’ ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ , ಇದೀಗ ಮಾಂಸ ಸೇವಿಸಿ ದೇವಾಲಯಗಳಿಗೆ ಭೇಟಿ ನೀಡಿದ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ ಮತ್ತೆ ತಮ್ಮ ದ್ವಂದ್ವ ನಿಲುವನ್ನು ತೋರಿಸುತ್ತಿದ್ದಾರೆ.

ಈ ಹಿಂದೆ ಡಿಕೆ ಶಿವಕುಮಾರ್ ಮನೆಗೆ ಐಟಿ ದಾಳಿ ನಡೆದ ಸಂದರ್ಭದಲ್ಲೂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮತ್ತು ಶಿವಕುಮಾರ್ ಗೆ ಬೆಂಬಲವಾಗಿ ನಿಂತಿದ್ದರು. ಕಾಂಗ್ರೆಸ್ ನ ಎಲ್ಲಾ ಕ್ರತ್ಯಗಳಲ್ಲಿ ಕುಮಾರಸ್ವಾಮಿ ಕೂಡಾ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಡಿಕೆ ಶಿವಕುಮಾರ್ ಮನೆಗೆ ಐಟಿ ದಾಳಿ ನಡೆದಾಗಲೂ ಕುಮಾರಸ್ವಾಮಿ ಅವರು ಶಿವಕುಮಾರ್ ಮನೆಗೆ ಭೇಟಿ ನೀಡಿ ‘ನಿಮ್ಮ ಜೊತೆ ನಾವಿದ್ದೇವೆ’ ಎಂಬ ಭರವಸೆ ಕೂಡಾ ನೀಡಿದ್ದರು.

ಕಾಂಗ್ರೆಸ್ ನ ಜೊತೆ ನಮಗೆ ಯಾವ ರೀತಿಯ ಸಂಬಂಧವೂ ಇಲ್ಲ ಎಂದು ಹೋದಲ್ಲೆಲ್ಲಾ ನಾಟಕವಾಡುತ್ತಿರುವ ದೇವೇಗೌಡರು ಮತ್ತು ಕುಮಾರಸ್ವಾಮಿ ಒಳಗೊಳಗೆ ಕಾಂಗ್ರೆಸ್ ನ ಜೊತೆ ಕೈಜೋಡಿಸಿಕೊಂಡಿರುವುದಂತೂ ಸ್ಪಷ್ಟ..!

–ಅರ್ಜುನ್

Tags

Related Articles

Close