ಅಂಕಣ

ದೇಶಕ್ಕಾಗಿ ಗಂಡನ ವಿರುದ್ಧವೇ ಬಂಡೆದ್ದ ಬೆಂಕಿಬಾಣ ಬಿರುದ್ದಾಂಕಿತ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯನ್ನು ನಾವು ಮರೆತಿದ್ದೇವಾ? ಇಲ್ಲಿದೆ ನೋಡಿ ಆಕೆಯ ಯಶೋಗಾಥೆ!!

ಸಾವಿರಾರು ವರ್ಷಗಳಿಂದ ಭಾರತ ತನ್ನ ಅಮೂಲ್ಯ ಸಂಪತ್ತು, ಶ್ರೀಮಂತ ಸಂಸ್ಕøತಿ, ಸಂಪ್ರದಾಯ ಮತ್ತು ಸಾಹಿತ್ಯಕ್ಕಾಗಿ ವಿದೇಶಿ ಆಕ್ರಮಣಕಾರರಿಗೆ ಭಾರತ ಆಕರ್ಷಣೀಯ ಸ್ಥಳವಾಗಿತ್ತು… ಕೇವಲ ಇವರಿಗೆ ನಮ್ಮ ದೇಶ  ಮಾತ್ರ ಆಕರ್ಷಣೀಯ ಸ್ಥಳವಾಗಿರಲಿಲ್ಲ! ಹೊರತಾಗಿ ಇವರು ಭಾರತವನ್ನು ತಮ್ಮ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬಳಸಿಕೊಳ್ಳದೆ, ಭಾರತದ ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ದೋಚಿ ಇಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂನ ತತ್ವಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು.!! ಕೊನೆಗೆ ಅನೇಕ ಹಿಂದೂ ಭಾರತೀಯರಿಗೆ ಸತ್ಯದ ಅರಿವಾಗುತ್ತದೆ. ನಮ್ಮ ಸಂಸ್ಕøತಿಯನ್ನು ಅವನತಿಯತ್ತ ಕರೆದುಕೊಂಡು ಹೋಗುತ್ತಾರೆ ಅನ್ನೋ ಅರಿವಾಗಿ ಬಹುತೇಕ ಭಾರತೀಯ ರಾಜರು ಮತ್ತು ರಾಣಿಯರು ಹಿಂದೂ ಸಂಸ್ಕøತಿ ಮತ್ತು ಹಿಂದೂ ರಾಷ್ಟ್ರವನ್ನು ರಕ್ಷಿಸುವಲ್ಲಿ ತಮ್ಮ ಜೀವಗಳನ್ನೇ ತ್ಯಾಗ ಮಾಡಿದ್ದಾರೆ.!! ಅಂತಹ ಮಹಿಳಾ ರಾಣಿಯಲ್ಲಿ ತನ್ನ ಜೀವನ್ನೇ ತನ್ನ ದೇಶಕ್ಕಾಗಿ ಮುಡುಪಾಗಿಟ್ಟು ಈ ಅಬ್ಬಕ್ಕ ರಾಣಿಯ ಬಗ್ಗೆ ಇಂದು ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಾವು ನೆನೆದು ಒಂದು ಧನ್ಯವಾದವನ್ನು ಸಮರ್ಪಿಸಬೇಕು ಆಕೆಗೆ!!

ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ತುಳುನಾಡಿನ ರಾಣಿ!! ಇವರು 16ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದ ವೀರ ರಾಣಿ!! ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು.!! ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ಅವರ ಪ್ರಯತ್ನವನ್ನು ನಾಲ್ಕು ದಶಕಗಳ ಕಾಲ ಹಿಮ್ಮೆಟ್ಟಿಸಿದ ವೀರ ರಾಣಿ!! ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು!! ವಸಾಹಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದವಳು!!!

ಅಬ್ಬಕ್ಕ ಸಣ್ಣ ರಾಜ್ಯವಾದ ಉಳ್ಳಾಲದ ರಾಣಿಯಾಗಿದ್ದು, ಇತಿಹಾಸದಲ್ಲಿ ಇನ್ನೂ ಅವಿಸ್ಮರಣೀಯವಾಗಿದ್ದಾಳೆ. ಆದರೆ ಇಂತಹ ಕೆಚ್ಚೆದೆಯ ರಾಣಿಯ ಬಗ್ಗೆ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ತಿಳಿಸಲು ನಮ್ಮ ಪಠ್ಯಪುಸ್ತಕದಲ್ಲಿ ಜಾಗವೇ ಇಲ್ಲ ಎಂಬೂದು ಮಾತ್ರ ವಿಷಾದನೀಯ.

ಅಬ್ಬಕ್ಕ ಬಾಲ್ಯದಿಂದಲೂ ಅತ್ಯಂತ ಶಕ್ತಿಶಾಲಿ ಹಾಗೂ ಅವಳ ಸಾಮ್ರಾಜ್ಯದಲ್ಲಿ ಎಲ್ಲಾ ಬಿಲ್ಲುಗಾರಿಕೆ ಮತ್ತು ಕತ್ತಿ ವರಸೆಯಲ್ಲಿ ಓರ್ವ ಮುಖ್ಯಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಇವಳು ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದು, ಅತ್ಯಂತ ಸರಳ ಜೀವನವನ್ನು ನಿರ್ವಹಿಸುತ್ತಿದ್ದಳು. ರಾಣಿಯಾಗಿದ್ದರೂ ಸಾಮಾನ್ಯ ಮನುಷ್ಯರಂತೆ ಉಡುಗೆ ತೊಡುಗೆಯನ್ನು ಧರಿಸುತ್ತಿದ್ದು, ಎಷ್ಟೇ ರಾತ್ರಿಯಾಗಿದ್ದರೂ ತನ್ನ ಕುದುರೆ ಹತ್ತಿಕೊಂಡು ಎಲ್ಲಾ ಕಡೆ ಸುತ್ತಾಡಿ ಜನರ ಸುಖ ದು:ಖಗಳನ್ನು ವಿಚಾರಿಸಿಕೊಂಡು ಬರುತಿದ್ದ ಅತ್ಯಂತ ಸರಳ ಜೀವಿ!!

ರಾಣಿ ಅಬ್ಬಕ್ಕ ತನ್ನ ರಾಜ್ಯದ ತನ್ನ ಎಲ್ಲಾ ಜನರನ್ನು ಜಾತಿ ಭೇದ ಮಾಡದೆ ಸಮಾನತೆಯಿಂದ ನೋಡುತ್ತಿದ್ದಳು. ಅಬ್ಬಕ್ಕ ಜೈನ ಧರ್ಮದಲ್ಲಿ ಬೆಳೆದಿದ್ದು, ಹಿಂದುತ್ವಕ್ಕೆ ಅತ್ಯಂತ ಮಹತ್ವವನ್ನು ನೀಡುತ್ತಿದ್ದಳು ಹಾಗೂ ಶಿವ ದೇವರ ಆರಾಧನೆಯನ್ನು ಮಾಡುತ್ತಿದ್ದಳು. ಅವಳ ಸೈನ್ಯದಲ್ಲಿ ಅನೇಕ ಜಾತಿಯ ಜನರಿದ್ದರೂ ಕೂಡಾ ಅವಳು ಅವರನ್ನೆಲ್ಲಾ ಸಮಾನತೆಯಿಂದ ನೋಡುತ್ತಿದ್ದಳು. ‘ಇತಿಹಾಸ ಯಾವಾಗಲು ಗೆದ್ದವರ ಸ್ವತ್ತು’ ಅನ್ನೋ ಮಾತಿದೆಯಲ್ಲ,ಆ ಮಾತು ನಿಜವೆ ಆಗಿದ್ದರೆ 15-16 ಶತಮಾನದಲ್ಲಿ ತನ್ನ ಪರಾಕ್ರಮಗಳಿಂದಾಗಿ ‘ಯುರೋಪ್-ಪರ್ಷಿಯ’ಗಳಲ್ಲಿ ಪ್ರಖ್ಯಾತಳಾಗಿದ್ದ ನಮ್ಮ ‘ಉಲ್ಲಾಳದ ರಾಣಿ ಅಬ್ಬಕ್ಕ’ ಅನ್ನೋ ಧೀರ ಹೆಣ್ಣು ಮಗಳ ಹೆಸರು ಇಂದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರಬೇಕಿತ್ತು! ಆದರೆ ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ ಈ ರಾಣಿ ಅಬ್ಬಕ್ಕಳ ಬಗ್ಗೆ? ಯಾರು ಈ ರಾಣಿ ಅಬ್ಬಕ್ಕ?

Image result for rani abbakka

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಶುರುವಾದ ಆಂತರಿಕ ಕಲಹಗಳ ಲಾಭ ಪಡೆದ ಪೋರ್ಚುಗೀಸರು ಮಂಗಳೂರಿಗೂ ಕಾಲಿಟ್ಟಾಗಿತ್ತು. ಕೆಳದಿಯ ವೆಂಕಟಪ್ಪ ನಾಯಕ ನಿಧಾನವಾಗಿ ಪ್ರದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತಿದ್ದ ಕಾಲವದು. ಭಾರತದ ಮೆಣಸು, ಏಲಕ್ಕಿ, ಅಕ್ಕಿ ಹಾಗೂ ಇತರೆ ಸಾಂಬಾರು ಪದಾರ್ಥಗಳನ್ನ ಇಲ್ಲಿನ ವರ್ತಕರಿಂದ ಕಡಿಮೆ ಬೆಲೆಗೆ ಬಲವಂತವಾಗಿ ಕೊಂಡೊಯ್ದು ತಮ್ಮ ಸಾಮ್ರಾಜ್ಯವನ್ನ ಶ್ರೀಮಂತಗೊಳಿಸಿಕೊಳ್ಳುತಿದ್ದ ಪೋರ್ಚುಗೀಸ್ ರಕ್ಕಸ ಪಡೆಗೆ ‘ಉಲ್ಲಾಳ’ ಎಂಬ ಪುಟ್ಟ ಬಂದರು ನಗರಿಯ ಮೇಲೆಯೆ ಸದಾ ಕಣ್ಣು.ಉಳಿದ ರಾಜರೆಲ್ಲ ರಕ್ಕಸ ಪಡೆಗೆ ಶರಣಾಗಿದ್ದರೆ, ರಾಣಿ ಅಬ್ಬಕ್ಕ ಮಾತ್ರ ಪೋರ್ಚುಗೀಸರ ಆದೇಶಕ್ಕೆ ಸೊಪ್ಪು ಹಾಕದೆ, ಕ್ಯಾಲಿಕಟ್ಟಿನ ಜಾಮೊರಿನ್ಗಳ ಸಹಾಯದಿಂದ ತನ್ನ ಪ್ರದೇಶದ ಪದಾರ್ಥಗಳನ್ನು ಸೀದಾ ಅರಬ್ ದೇಶಗಳಿಗೆ ಕಳಿಸುತಿದ್ದಳು.ಸಹಜವಾಗೆ ಉಲ್ಲಾಳವು ಸಮೃದ್ಧವಾಗಿತ್ತು ಹಾಗೆ ಅರಬ್ ದೇಶದವರು ಕೂಡ ಪೋರ್ಚುಗೀಸರಿಗಿಂತ ಅಬ್ಬಕ್ಕನ ಜೊತೆಯೆ ವ್ಯವಹಾರ ಮಾಡಲಾರಂಭಿಸಿದ್ದರು.ಇದರಿಂದ ಕೆರಳಿದ ರಕ್ಕಸ ಪಡೆ ಅಬ್ಬಕ್ಕಳ ಸರಕಿನ ಹಡಗುಗಳ ಮೇಲೆ ಆಕ್ರಮಣ ಮಾಡಿತ್ತು.

ಕುಪಿತಳಾದ ಅಬ್ಬಕ್ಕ ಸೀದಾ ನುಗ್ಗಿದ್ದು ಅದಾಗಲೆ ಪೋರ್ಚುಗೀಸರಿಂದ ಲೂಟಿಯಾಗಿ ಬಂಧಿಯಾಗಿದ್ದ ‘ಮಂಗಳೂರಿಗೆ’. ಅಬ್ಬಕ್ಕಳ ಆರ್ಭಟಕ್ಕೆ ಪೋರ್ಚುಗೀಸರು ಹಿಮ್ಮೆಟ್ಟಿದ್ದರು ‘ಮಂಗಳೂರು’ ಅಬ್ಬಕ್ಕಳ ತೆಕ್ಕೆಗೆ ಬಿತ್ತು. ರಕ್ಕಸ ಪಡೆಗೆ ಮುಖಭಂಗವಾಗಿತ್ತು. ಅಬ್ಬಕ್ಕ ಯುರೋಪ್‍ನಾಧ್ಯಂತ ಮನೆ ಮಾತಾಗಿದ್ದಳು. ರಕ್ಕಸ ಪಡೆಯೊಂದಿಗೆ ಆಕೆಯದ್ದು ನಿರಂತರ ಸಂಘರ್ಷ. ಹಾಗೆ ಮತ್ತೊಂದು ಯುದ್ಧದಲ್ಲಿ ಮಂಗಳೂರು ರಕ್ಕಸರ ಪಾಲಾಗಿತ್ತು. ಬಂಗಾಡಿಯನ್ನ ವಶ ಪಡಿಸಿಕೊಂಡ ಕೆಳದಿಯ ನಾಯಕ, ಮಂಗಳೂರಿನ ಕಡೆ ಹೊರಟಾಗ, ಉಲ್ಲಾಳ ಸುಲಭದ ತುತ್ತಾಗಬಹುದು ಎಂದು ಎಣಿಸಿ ತಮ್ಮ ನೌಕಾ ಪಡೆಯ ಮೂಲಕ ಪೋರ್ಚುಗೀಸರು ಆಕ್ರಮಣ ಮಾಡಿದರು. ತನ್ನ ನಿಷ್ಟಾವಂತ ಮೊಗವೀರ ಸೈನಿಕರನ್ನ ಚಿಕ್ಕ ದೋಣಿಗಳಲ್ಲಿ ಶತ್ರುಗಳ ನೌಕಾಪಡೆಯ ಬಳಿಗೆ ‘ಶತ್ರುಗಳನ್ನ ಹಿಮ್ಮೆಟ್ಟಿಸಿ, ಸಮುದ್ರಕ್ಕೆ ಆಹಾರವಾಗಿಸಿ’ ಅನ್ನುವ ಘೋಷ ವಾಕ್ಯದೊಂದಿಗೆ ಸದ್ದಿಲ್ಲದೆ ಕಳಿಸಿದ್ದಳು ಅಬ್ಬಕ್ಕ! ಬಳಿ ಸಾಗಿದ ಸೈನಿಕರು ತೆಂಗಿನ ನಾರು,ಚಿಪ್ಪಿಗೆ ಬೆಂಕಿ ಹಚ್ಚಿ ಪೋರ್ಚುಗೀಸರ ನೌಕಪಡೆಯನ್ನೆ ದ್ವಂಸ ಮಾಡಿದ್ದರು. ಮತ್ತೊಮ್ಮೆ ಬೆಚ್ಚಿ ಬಿದ್ದಿತ್ತು ಯುರೋಪ್!

‘ಸ್ಪಾನಿಶ್ ಆರ್ಮಡಾವನ್ನ ಸೋಲಿಸಿದ್ದ ಬ್ರಿಟನ್ನಿನ ಮೊದಲನೆ ಎಲಿಜಬೆತ್ಗಿಂತಲು ರಾಣಿ ಅಬ್ಬಕ್ಕ ಮುಂದಿನ ಸಾಲಲ್ಲಿ ನಿಲ್ಲುತ್ತಾಳೆ’ ಅಂತ ಇಟಲಿಯ ಯಾತ್ರಿಕ ‘ಪಿಯಟ್ರೊ ಡಿ ವಿಲ್ಲೇ’ ವರ್ಣಿಸಿದ್ದು.

ಕೇವಲ ಯುದ್ಧ ಕಲೆ ಮಾತ್ರವಲ್ಲದೆ,ರಾಜತಾಂತ್ರಿಕತೆಯಲ್ಲು ನಿಪುಣಳಾಗಿದ್ದ ಅಬ್ಬಕ್ಕ, ಕೆಳದಿಯ ವೆಂಕಟಪ್ಪ ನಾಯಕ,ಬಿಜಾಪುರದ ಸುಲ್ತಾನ,ಕ್ಯಾಲಿಕಟ್ನ ಜಾಮೋರಿನ್ಗಳ ಜೊತೆ ಗೆಳೆತನ ಸಾಧಿಸಿದ್ದಳು. ಈ ನಾಲ್ವರ ಗೆಳೆತನದಿಂದಾಗಿ ಕೂಡ ಪೋರ್ಚುಗೀಸರಿಗೆ ಅಬ್ಬಕ್ಕ ತಲೆನೋವಾಗಿದ್ದಳು. ಕಡೆಗೂ ಆಕೆಯ ಗಂಡನ ಮೋಸದಿಂದಲೆ ಆಕೆ ಸೋತಳು. ಯುದ್ಧದಲ್ಲಿ ಸೆರೆ ಸಿಕ್ಕ ಅಬ್ಬಕ್ಕ ಸೆರೆಮನೆಯಲ್ಲಿ ಕ್ರಾಂತಿಗೆ ಪ್ರಯತ್ನಿಸಿದಾಗ ರಕ್ಕಸ ಪಡೆಯ ಗುಂಡಿಗೆ ಬಲಿಯಾದಳು ಅನ್ನೋದು ಒಂದು ಮಾಹಿತಿಯಾದರೆ,ಮಾರಣಾಂತಿಕವಾಗಿ ಪೆಟ್ಟು ತಿಂದ ಅಬ್ಬಕ್ಕಳನ್ನ ಪೋರ್ಚುಗೀಸರು ಮುಟ್ಟದಿರಲಿ ಎಂದು ಅವಳ ನೆಚ್ಚಿನ ಸೈನಿಕರು ಬೇರೆಡೆಗೆ ತಂದರು ಅಲ್ಲಿ ಆಕೆ ಅಸ್ತಂಗತಳಾದಳು ಅನ್ನೋದು ಇನ್ನೊಂದು ಮಾಹಿತಿ.

ಪರ್ಶಿಯಾದ ದೊರೆಯಿಂದ ಅಬ್ಬಕ್ಕಳ ಗುಣಗಾನ ಕೇಳಿದ್ದ ಇಟಾಲಿಯನ್ ಯಾತ್ರಿಕ ‘ಪಿಯಟ್ರೊ ಡಿ ವಿಲ್ಲೇ’ ಅಬ್ಬಕ್ಕಳನ್ನ ಭೇಟಿ ಮಾಡಲೆಂದು ಬಂದ, ಪಕ್ಕದ ಊರಿಗೆ ಕೆಲಸದ ಮೇಲೆ ಹೋದ ರಾಣಿಯ ದಾರಿ ಕಾಯುತ್ತ ನಿಂತಿದ್ದ. 8-10 ಜನರೊಂದಿಗೆ ‘ಬರಿಗಾಲಲ್ಲಿ’ ಸಾಧಾರಣ ಸೀರೆಯನ್ನುಟ್ಟು ಬಂದು ನಿಂತಿದ್ದಳು ರಾಣಿ ಅಬ್ಬಕ್ಕ! ಪ್ರಪಂಚ ಯಾನ ಮಾಡಿಕೊಂಡು ಹಲವು ದೇಶದ ರಾಜ-ರಾಣಿಯರ ವೈಭವನ್ನ ಕಂಡು ಬಂದಿದ್ದ ವಿಲ್ಲೇ ಅಬ್ಬಕ್ಕಳ ಸರಳತೆಗೆ ದಂಗು ಬಡಿದು ಹೋಗಿದ್ದ. ಸಾಮಾನ್ಯ ಮಹಿಳೆಯಂತೆ ಕಾಣುವ ಈಕೆಯೇ ಏನು ಪೋರ್ಚುಗೀಸರ ಎಡೆಮುರಿ ಕಟ್ಟಿದವಳು? ಪರ್ಷಿಯಾದ ದೊರೆ ವರ್ಣನೆ ಮಾಡಿದ ಸಾಹಸಿ ಮಹಿಳೆ ಈಕೆನಾ? ಅನ್ನುವ ಅನುಮಾನವು ಅವನನ್ನ ಬಹುಶಃ ಕಾಡದೆ ಇದ್ದಿರಲಾರದು!

ಕ್ರಮ ಬದ್ಧವಾದ ಭಾರತದ ಮೊದಲ ನೌಕಾಪಡೆಯನ್ನ ಕಟ್ಟಿದ ಶ್ರೇಯಸ್ಸು ಅಬ್ಬಕ್ಕಳಿಗೆ ಸಲ್ಲುತ್ತದೆ. ಹಾಗೆಯೆ ವಿದೇಶಿ ಆಕ್ರಮಣಕಾರರಿಂದ ಭಾರತಮಾತೆಯ ರಕ್ಷಣೆಗೆ ನಿಂತ “ಮೊಟ್ಟ ಮೊದಲ ಭಾರತ ನಾರಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ”.

ಭಯ ಅಂದರೇನು ಅನ್ನುವುದೆ ತಿಳಿಯದ ಆಕೆಯನ್ನ ಜನ ‘ಅಭಯ ರಾಣಿ’ ಅಂತ ಕರೆಯುತಿದ್ದರು. ಕಡೆಯ ಬಾರಿಗೆ ಯುದ್ಧದಲ್ಲಿ ‘ಅಗ್ನಿವನ’ (ಬೆಂಕಿ ಬಾಣ) ಬಳಸಿದ ಕೀರ್ತಿಯು ಆಕೆಯದೆ ಅನ್ನುವ ಮಾತುಗಳಿವೆ. ಅಸಲಿಗೆ ಮೂರು ಜನ ಅಬ್ಬಕ್ಕರಿದ್ದರು. ಮೊದಲನೆಯ ರಾಣಿ ಅಬ್ಬಕ್ಕಳಿಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಬಹು ಪರಾಕ್ರಮಿಗಳು ಅದರಲ್ಲು ಎರಡನೆಯವಳು ಬಲಶಾಲಿ ಅನ್ನುವ ಮಾತಿದೆಯಾದರೂ. ತುಳು ಜನಪದದಲ್ಲಿ,ಭೂತಾರಧನೆಯಲ್ಲಿ ಮೂರು ಜನ ಅಬ್ಬಕ್ಕರಿಗೂ ಒಂದೆ ಸ್ಥಾನ ನೀಡಲಾಗಿದೆ.

ಯಥಾ ಪ್ರಕಾರ ಭಾರತದ ಇತಿಹಾಸ ಇಂತ ಮಹಾನ್ ಹೋರಾಟಗಾರ್ತಿಯನ್ನು ಕಡೆಗಣಿಸಿದೆ. ಅಲ್ಲೊಬ್ಬರು ಇಲ್ಲೊಬ್ಬರು ದನಿಯೆತ್ತಿದ್ದರಿಂದಾಗಿ ಮಂಗಳೂರಿನಲ್ಲಿ ಹಾಗೂ ಬೆಂಗಳೂರಿನ ಮೂಲೆಯಲ್ಲಿ ಅಬ್ಬಕ್ಕಳ ಪ್ರತಿಮೆ ಸ್ಥಾಪನೆಯಾಗಿತ್ತು. ರಸ್ತೆ ಅಗಲೀಕರಣ,ಮೆಟ್ರೋ ಕಾಮಗಾರಿಗಳಿಗೆ ಸಿಕ್ಕು ಅದೀಗ ಕಳೆದುಹೋಗಿದೆ. ಪ್ರತಿವರ್ಷ ಉಲ್ಲಾಳದಲ್ಲಿ ಅಬ್ಬಕ್ಕ ಉತ್ಸವ ನಡೆಯುತ್ತದೆ,ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಎಂದಿನ ಸರ್ಕಾರಿ ನಿಯಮದಂತೆ ಕಸದ ಬುಟ್ಟಿ ಸೇರುತ್ತವೆ. ವಿಧಾನ ಸೌಧದ ಬಳಿಯೆ ಇರೋ ‘Queens road ಅನ್ನು ‘ರಾಣಿ ಅಬ್ಬಕ್ಕ ರಸ್ತೆ’ ಅಂತ ಮಾಡಿ ಅನ್ನುವ ಒಂದು ನಿರ್ಣಯಕ್ಕೆ ಇನ್ನು ಮುಕ್ತಿ ಸಿಕ್ಕಿಲ್ಲ. ಪುಣ್ಯಕ್ಕೆ 2003ರಲ್ಲಿ ಭಾರತ ಅಂಚೆಯವರು ಆಕೆಯ ನೆನಪಿಗೆ ಸ್ಟಾಂಪ್‍ಗಳನ್ನು ಹೊರತಂದರಾದರೂ ಒಟ್ಟಾರೆಯಾಗಿ ಇಡೀ ಭಾರತೀಯರ ಮನದಲ್ಲಿ ಅಬ್ಬಕ್ಕಳನ್ನ ಸ್ಥಾಪಿಸಬೇಕಾಗಿದ್ದ ಕಾರ್ಯವನ್ನ ಭಾರತ ಸರ್ಕಾರ ಹಾಗೂ ಕರ್ನಾಟಕದ ರಾಜಕೀಯ ಪಕ್ಷಗಳು ಎಂದಿಗೂ ಮಾಡಿಲ್ಲ.

ಯಾವ ಸರ್ಕಾರ ಅಬ್ಬಕ್ಕಳನ್ನ ಮರೆತರೆ ಏನು? ಉಲ್ಲಾಳ ಸಮುದ್ರದ ಅಲೆ ಅಲೆಯು ಅಬ್ಬಕ್ಕಳ ಕತೆಯನ್ನ ಹೇಳುತ್ತಲೆ ಇರುತ್ತವೆ.. ಹಾಗೆ ತುಳು ನಾಡಿನ ಜನಪದದಲ್ಲಿ,ಭೂತಾರಾಧನೆಯಲ್ಲಿ ಆಕೆ ಎಂದಿಗೂ ಅಮರಳಾಗಿರುತ್ತಾಳೆ!! ಅವಳ ಹೋರಾಟವನ್ನು ಯಾರೂ ನೋಡಿದ್ದಾರೋ ಅಗ್ನಿವಾಣವನ್ನು ಹೊತ್ತೊಯ್ಯುವ ಯೋಧ ಬೆಂಕಿಯ ಬಾಣ ಎಂದು ವರ್ಣಿಸಿದ್ದಾರೆ. ಇಂದಿಗೂ ಸಹ ಮಂಗಳೂರಿನಲ್ಲಿ ಅಬ್ಬಕ್ಕ ಸ್ಮರಣಾರ್ಥವಾಗಿ “ವೀರ ರಾಣಿ ಅಬ್ಬಕ್ಕ ಉತ್ಸವ” ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ.

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close