ಪ್ರಚಲಿತ

ಮತ್ತೆ ಹುಚ್ಚುತನ ಮೆರೆದ ವಾಟಾಳ್ ನಾಗರಾಜ್!! ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ದು ಹೇಗೆ ಗೊತ್ತಾ..?!

ಕನ್ನಡ ಪರ ಹೋರಾಟ ಮಾಡುವುದಾಗಿ ಪದೇ ಪದೇ ಏನಾದರೊಂದು ಹುಚ್ಚಾಟ ಮಾಡುತ್ತಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ.  ಕನ್ನಡಕ್ಕಾಗಿ ನಮ್ಮ ಹೋರಾಟ , ಕರ್ನಾಟಕಕ್ಕಾಗಿ ನಮ್ಮ ಪಕ್ಷ ಎಂದು ಹೇಳಿಕೊಂಡು ತಿರುಗಾಡುತ್ತಿರುವ ವಾಟಾಳ್ ನಾಗರಾಜ್ ರಾಜಕೀಯ ಲಾಭ ಪಡೆಯಲು ಕಸರತ್ತುಗಳ ಮೇಲೆ ಕಸರತ್ತು ನಡೆಸುತ್ತಿದ್ದಾರೆ.

ಬೆಳೆ ಆಗಲಿಲ್ಲ , ಮಳೆ ಬರಲಿಲ್ಲ ಎಂದು ಕ್ಷುಲ್ಲಕ ಕಾರಣಕ್ಕೂ ಕರ್ನಾಟಕ ಬಂದ್ ನಡೆಸುವುದಾಗಿ ಹೇಳಿಕೊಳ್ಳುವ ವಾಟಾಳ್ ನಾಗರಾಜ್ , ಬಂದ್ ನಾಗರಾಜ್ ಎಂದೇ ಪ್ರಸಿದ್ಧಿ. ನಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಲ್ಲ , ನಮ್ಮ ಹೋರಾಟ ಕನ್ನಡದ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ವಾಟಾಳ್ ನಾಗರಾಜ್ ಇತ್ತೀಚೆಗೆ ಮಾತ್ರ ರಾಜ್ಯ ಕಾಂಗ್ರೆಸ್ ನ ಜೊತೆ ಕೈ ಜೋಡಿಸಿಕೊಂಡಿರುವುದು ಸ್ಪಷ್ಟ.

ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ದೂರುತ್ತಿರುವ ಸಿದ್ದರಾಮಯ್ಯನವರು ಕರ್ನಾಟಕಕ್ಕೆ ನರೇಂದ್ರ ಮೋದಿಯವರು ಬರುವುದನ್ನು ತಡೆಯಲು ಸರ್ಕಸ್ ನಡೆಸಿದ್ದರು. ಏನಾದರೊಂದು ತಂತ್ರ ರೂಪಿಸಿ ಬಿಜೆಪಿ ಸಮಾವೇಶವನ್ನು ವಿಫಲಗೊಳಿಸಬೇಕೆಂದು ಪಣ ತೊಟ್ಟಿದ್ದ ಸಿದ್ದರಾಮಯ್ಯನವರು ವಾಟಾಳ್ ನಾಗರಾಜ್ ರವರ ಜೊತೆ ಸೇರಿ ಕರ್ನಾಟಕ ಬಂದ್ ನಡೆಸಲು ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್ ನ ಯಾವ ತಂತ್ರವೂ ಫಲಿಸಲಿಲ್ಲ. ನರೇಂದ್ರ ಮೋದಿಯವರು ಯಶಸ್ವಿಯಾಗಿ ಕರ್ನಾಟಕದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದರು.!

ಬಂದ್ ನಡೆಸುವ ಹುನ್ನಾರದಲ್ಲಿದ್ದ ಸಿದ್ದರಾಮಯ್ಯ ಮತ್ತು ವಾಟಾಳ್ ನಾಗರಾಜ್ ಗೆ ಭಾರೀ ಮುಖಭಂಗವಾಗಿತ್ತು. ಇದೀಗ ಮತ್ತೆ ಹುಚ್ಚಾಟ ತೋರಿಸುತ್ತಿರುವ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಾಚರಣೆಯನ್ನು ತಮ್ಮದೇ ಶೈಲಿಯಲ್ಲಿ ಮಾಡಿ , ಇಡೀ ದೇಶ ಇದೇ ರೀತಿ ಪ್ರೇಮಿಗಳ ದಿನವನ್ನು ಆಚರಿಸಬೇಕೆಂದು ಕರೆಕೊಟ್ಟಿದ್ದಾರೆ.

ಕುರಿ – ಟಗರುಗೆ ಮದುವೆ ಮಾಡಿದ ವಾಟಾಳ್…!

ಫೆಬ್ರವರಿ ೧೪ ಪಾಶ್ಚಾತ್ಯ ಶೈಲಿಯಲ್ಲಿ ಆಚರಿಸುವ ‘ವೆಲೆಂಟೈನ್ ಡೇ’ ಭಾರತದಲ್ಲೂ ಆಚರಿಸುವವರಿದ್ದಾರೆ. ಪ್ರೀತಿಯನ್ನು ತೋರ್ಪಡಿಸಲು ದಿನ ನಿಗದಿ ಮಾಡುವ ಕೆಲವರು ಪ್ರೇಮಿಗಳ ದಿನದಂದು ಪಾಶ್ಚಾತ್ಯ ಶೈಲಿಯ ಹುಚ್ಚಾಟಕ್ಕೆ ಬಲಿಯಾಗುತ್ತಾರೆ. ದೇಶದ ಸಂಸ್ಕ್ರತಿಯನ್ನು ಹಾಳು ಮಾಡಲೆಂದೇ ಇರುವ ಕೆಲವರು ಈ ದಿನದಂದು ಬೇಡದ ಕೆಲಸ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ತಪ್ಪು ದಾರಿಗೆ ಕೊಂಡೊಯ್ಯಲಾಗುತ್ತದೆ ಎಂಬ ಕಾರಣಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧಿಸುತ್ತಲೇ ಬಂದಿದೆ.

ಆದರೆ ಇದೇ ಕಾರಣಕ್ಕಾಗಿ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಪ್ರೇಮಿಗಳ ದಿನದಂದು ಕುರಿ ಮತ್ತು ಟಗರುಗೆ ಮದುವೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವಾಟಾಳ್ ನಾಗರಾಜ್ ಇಡೀ ರಾಜ್ಯ ಮತ್ತು ದೇಶದಲ್ಲಿ ನಡೆಯುವ ಪ್ರೇಮಿಗಳ ದಿನಾಚರಣೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಎಲ್ಲರೂ ಇದೇ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬೇಕೆಂದು ಕರೆಕೊಟ್ಟಿದ್ದಾರೆ..!

ತಾನು ಸದಾ ಸುದ್ದಿಯಲ್ಲಿರಬೇಕೆಂಬ ಛಪಲದಿಂದ ಈ ರೀತಿ ವರ್ತಿಸುತ್ತಿರುವ ವಾಟಾಳ್ ನಾಗರಾಜ್ ಏನಾದರೊಂದು ಹುಚ್ಚಾಟಕ್ಕೆ ಕೈ ಹಾಕುತ್ತಾ ಹೆಸರನ್ನು ಛಾಲ್ತಿಯಲ್ಲಿರುವಂತೆ ಮಾಡುತ್ತಾರೆ. ಕರ್ನಾಟಕದ ಜನತೆ ವಾಟಾಳ್ ನಾಗರಾಜ್ ಗೆ ನಯಾ ಪೈಸೆಯ ಮರ್ಯಾದೆಯೂ ನೀಡುತ್ತಿಲ್ಲ.

ಕನ್ನಡ ಪರ – ಕರ್ನಾಟಕದ ಪರ ಎಂದು ಕೇವಲ ತೋರ್ಪಡಿಕೆಗಾಗಿ ನಡೆದುಕೊಳ್ಳುತ್ತಿರುವ ಕನ್ನಡ ಚಳವಳಿ ವಾಟಲ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಗೆ ಕೇವಲ ರಾಜಕೀಯ ದುರುದ್ದೇಶ ಮಾತ್ರವೇ ಇದೆ. ಆದ್ದರಿಂದಲೇ ಕಾಂಗ್ರೆಸ್ ನ ಜೊತೆ ಕೈಜೋಡಿಸಿ ಕೇಂದ್ರ ಸರಕಾರದ ವಿರುದ್ಧ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ.

ಈ ಹಿಂದೆ ಮಹಾದಾಯಿ ವಿಚಾರವಾಗಿ ರಾಜ್ಯ ಸರಕಾರವನ್ನು ಪ್ರಶ್ನಿಸುವ ಬದಲು ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ಪ್ರಶ್ನಿಸುತ್ತಿದ್ದ ವಾಟಾಳ್ ನಾಗರಾಜ್ ಸಿದ್ದರಾಮಯ್ಯನವರ ಜೊತೆ ಶಾಮೀಲಾಗಿರುವುದು ಸ್ಪಷ್ಟ.  ರಾಜ್ಯ ಕಾಂಗ್ರೆಸ್ ನ ಕ್ರಪಾಕಟಾಕ್ಷದಿಂದ ಪದೇ ಪದೇ ಬಂದ್ ನಡೆಸಲು ಕರೆ ಕೊಡುತ್ತಿರುವ ವಾಟಾಳ್ ನಾಗರಾಜ್ ಗೆ ರಾಜ್ಯ ಸರಕಾರದಿಂದ ಲಕ್ಷ ಲಕ್ಷ ಹಣ ಹೋಗುತ್ತಿರುವಯದು ಬಹಿರಂಗಗೊಂಡಿತ್ತು.

ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರದ ಮೋದಿ ಸರಕಾರದತ್ತ ಬೆರಳು ಮಾಡಿ ಮಾತನಾಡುವ ಮೂಲಕ ರಾಜ್ಯದ ಜನತೆಯ ಕಣ್ಣು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯೇತರ ಕನ್ನಡ ಪರ ಸಂಘಟನೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದ ವಾಟಾಳ್ ನಾಗರಾಜ್ ರವರ ಎಲ್ಲಾ ಮುಖವಾಡಗಳು ಕಳಚಿ ಬಿದ್ದಿವೆ..!

ಸದಾ ಒಂದಿಲ್ಲೊಂದು ರೀತಿಯಲ್ಲಿ ವಿವಾದಾತ್ಮಕವಾಗಿ ನಡೆದುಕೊಳ್ಳುವ ವಾಟಾಳ್ ನಾಗರಾಜ್ ಈ ಬಾರಿ ಮತ್ತೆ ತಮ್ಮ ಹುಚ್ಚಾಟ ಪ್ರದರ್ಶಿಸಿದ್ದಾರೆ. ತಾವು ಮಾತ್ರ ಈ ರೀತಿ ವರ್ತಿಸುವದಲ್ಲದೇ ರಾಜ್ಯದ ಎಲ್ಲರೂ ಇದೇ ರೀತಿ ಆಚರಿಸಬೇಕೆಂದು ಹೇಳುವ ಮೂಲಕ ಮತ್ತೆ ಟೀಕೆಗೆ ಒಳಗಾಗಿದ್ದಾರೆ.

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close