ಪ್ರಚಲಿತ

ಹೊಸ ದಾಖಲೆ ನಿರ್ಮಿಸಿ ವಿರೋಧಿಗಳಿಗೆ ಕಪಾಳಮೋಕ್ಷ ಮಾಡಿದ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲು! ಮೋದಿ ಯೋಜನೆಗಳ ಯಶಸ್ಸಿನ ಸಾಲಿಗೆ ಮತ್ತೊಂದು ಹೆಸರು ಸೇರ್ಪಡೆ!

ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕುವ ವಿರೋಧಿಗಳ ಸಂಖ್ಯೆ ಕಡಿಮೆ‌ ಏನಿಲ್ಲ, ದೇಶಕ್ಕಾಗಿ ಶ್ರಮಿಸುತ್ತಿರುವ ಮೋದಿ ಬಂದ ನಂತರ ಜಾರಿಗೊಳಿಸಿದ ಯೋಜನೆಗಳು ಒಂದಲ್ಲ ಎರಡಲ್ಲ, ತೆಗೆದುಕೊಂಡ ನಿರ್ಧಾರಗಳಿಗೆ ಲೆಕ್ಕವೇ ಇಲ್ಲ. ಇತ್ತ ಮೋದಿ ಕೈಗೊಂಡ ಯೋಜನೆಗಳು ಯಾವುವು ಕೂಡ ವಿಫಲವಾಗಿಲ್ಲ ಎಂಬುದು ವಿಶೇಷವಾಗಿ ಗಮನಿಸಬೇಕಾದ ಅಂಶ. ಆದರೂ ಮೋದಿಯವರನ್ನು ವಿರೋಧಿಸುವ ವಿಪಕ್ಷಗಳು ಕಳೆದ ಬಾರಿ ಮೋದಿಯವರು ಜಾರಿಗೊಳಿಸಿದ ಹೊಸ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚಾರವನ್ನು ಕೂಡ ವಿರೋಧಿಸಿದ್ದರು. ಸ್ವದೇಶಿ ನಿರ್ಮಿತ ರೈಲು ಸಂಚಾರ ಪ್ರಧಾನಿ ಮೋದಿಯವರ ಕನಸಿನ‌ ಯೋಜನೆಯಾಗಿತ್ತು, ಅದರಂತೆ ಅದನ್ನು ಸಾಕಾರಗೊಳಿಸಿದ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದರು. ಆದರೆ ಈ ವಿಶೇಷ ರೈಲು ಸಂಚಾರಕ್ಕೆ ಉಂಟಾದ ಅಡೆತಡೆಗಳು ಅನೇಕ, ಆದರೂ ಅದನ್ನೆಲ್ಲಾ ಮೀರಿ ಇದೀಗ ಈ ರೈಲು ಹೊಸ‌ ದಾಖಲೆ ನಿರ್ಮಿಸಿದೆ. ಭಾರತದ ಇತಿಹಾಸದಲ್ಲೇ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು.!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸ್ವದೇಶಿ ನಿರ್ಮಿತ ರೈಲು ಆಗಿದ್ದರಿಂದ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಯಾಕೆಂದರೆ ಭಾರತದಲ್ಲಿ ರೈಲು ಸಂಚಾರ ಮುಖ್ಯವಾದ ಒಂದು ಸಾರಿಗೆ ವ್ಯವಸ್ಥೆ, ಆದ್ದರಿಂದ ದೇಶೀಯ ನಿರ್ಮಿತ ರೈಲ್ವೆಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬುದು ಅರಿವಾಗಿತ್ತು.‌ ಇಂತಹ ಸಂದರ್ಭದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷೆ ನಡೆಸುವ ವೇಳೆಯಲ್ಲಿಯೇ ವಿರೋಧ ವ್ಯಕ್ತವಾಯಿತು, ಪರೀಕ್ಷೆಗೆಂದು ಸಂಚರಿಸುತ್ತಿದ್ದ ರೈಲಿನ ಮೇಲೆ ವಿರೋಧಿಗಳು ಕಲ್ಲು ಬಿಸಾಕಿ ರೈಲಿಗೆ ಹಾನಿ ಮಾಡಿದ್ದರು. ೨-೩ ಬಾರಿ ಇದೇ ರೀತಿ ಘಟನೆ ನಡೆದಿದ್ದು, ನಂತರದಲ್ಲಿ ರೈಲಿಗೆ ಅಧಿಕೃತವಾಗಿ ಸಂಚಾರಕ್ಕೆ ಅವಕಾಶ ನೀಡಲಾಯಿತು. ಇದಾದ ನಂತರ ಒಂದೇ ಒಂದು ದಿನ ಬಿಡುವಿಲ್ಲದೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸತತ ೧ ಲಕ್ಷ ಕಿಲೋ ಮೀಟರ್ ಸಂಚರಿಸಿದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಇತ್ತ ದೇಶದ ರಾಜಧಾನಿ ದೆಹಲಿ – ಪ್ರಯಾಗ್‌ರಾಜ್ ನಡುವೆ ಗಂಟೆಗೆ ೧೦೦ ಕಿಲೋ ಮೀಟರ್ ವೇಗದಲ್ಲಿ ಸಂಚರಿಸಿದ ದೇಶದ ಮೊದಲ ರೈಲು ಎಂಬ ದಾಖಲೆ ನಿರ್ಮಿಸಿದೆ.!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಸ್ವತಃ ಪ್ರಧಾನಿ ಮೋದಿಯವರೇ ಚಾಲನೆ ನೀಡಿದ್ದರು, ಇದಕ್ಕೂ ವಿಪಕ್ಷಗಳ ವಿರೋಧ ಇತ್ತು. ಇದಾದ ನಂತರ ರೈಲು ಮೊದಲ ಸಂಚಾರದಲ್ಲಿ ಸ್ವಲ್ಪ ಸಮಸ್ಯೆ ಅನುಭವಿಸಿದ್ದರಿಂದ‌ ಇದಕ್ಕೂ ಮೋದಿಯೇ ಕಾರಣ ಎಂಬಂತೆ ಬಿಂಬಿಸಿದ್ದ ವಿರೋಧಿಗಳು ಪ್ರತಿಯೊಂದಕ್ಕೂ ಮೋದಿಯೇ ಕಾರಣ ಎಂದು ಹೇಳತೊಡಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಏನೇ ಮಾಡಿದರು ಅದರ ಹಿಂದೆ ದೇಶದ ಅಭಿವೃದ್ಧಿ, ದೇಶದ ಭವಿಷ್ಯದ ಆಲೋಚನೆ ಇದ್ದೇ ಇರುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೂ ರಾಜಕೀಯವಾಗಿ ಮೋದಿಯವರನ್ನು ವಿರೋಧಿಸುವ ವಿರೋಧಿಗಳು ಅವರ ಯೋಜನೆಗಳನ್ನು ಕೂಡ ವಿರೋಧಿಸುತ್ತಾರೆ. ಆದರೆ ವಿರೋಧಿಸಿದಷ್ಟು ಮೋದಿಯವರ ಯೋಜನೆಗಳು ಯಶಸ್ವಿಯಾಗುತ್ತಲೇ ಇದೆ ಎಂಬುದು ವಿಶೇಷ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close