ಪ್ರಚಲಿತ

ಸಿದ್ದರಾಮಯ್ಯ ವಿರುದ್ಧ ಬುಗಿಲೆದ್ದ ಒಕ್ಕಲಿಗರ ಆಕ್ರೋಶ.! ನಿಮಗೆ ವೋಟ್ ಹಾಕೋಲ್ಲ ಎಂದು ಬಹಿರಂಗವಾಗಿ ಹೇಳಿದ್ದೇಕೆ ಗೊತ್ತಾ.?!

ದೇಶಾದ್ಯಂತ ಸೋಲಿನ ಮೇಲೆ ಸೋಲು ಅನುಭವಿಸಿಕೊಂಡು ಏನೂ ಮಾಡಲಾಗದ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ,ಕರ್ನಾಟಕದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗ ತೊಡಗಿದೆ. ಜಾತಿ – ಧರ್ಮಗಳ ಆಧಾರದಲ್ಲಿ ರಾಜಕೀಯ ನಡೆಸುತ್ತಿದ್ದ ಕಾಂಗ್ರೆಸ್ ನ ಎಲ್ಲಾ ತಂತ್ರಗಳಿಗೂ ಸದ್ಯ ರಾಜ್ಯದ ಜನತೆ ತಕ್ಕ ಉತ್ತರ ಕೊಡಲು ಸಜ್ಜಾಗಿದ್ದಾರೆ.

ಈಗಾಗಲೇ ಲಿಂಗಾಯತ ಮತ್ತು ವೀರಶೈವ ಧರ್ಮದ ಮಧ್ಯೆ ರಾಜಕೀಯ ನಡೆಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ ಗೆ ಸದ್ಯ ಮತ್ತೊಂದು ಗಂಡಾಂತರ ಎದುರಾಗಿದೆ.

ಯಾಕೆಂದರೆ ಕಾಂಗ್ರೆಸ್ ಸರಕಾರಿ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಎಲ್ಲಾ ಕೆಲಸಗಳಲ್ಲೂ ಹಸ್ತಕ್ಷೇಪ ಮಾಡಿಕೊಂಡು ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸಲೂ ಬಿಡದೇ ಇರುವುದರಿಂದ ಇದೀಗ ರಾಜ್ಯ ಕಾಂಗ್ರೆಸ್ ವಿರುದ್ಧ ಮತ್ತೊಂದು ಸಮಾಜ ತೊಡೆತಟ್ಟಿದೆ.

ಒಕ್ಕಲಿಗ ಸಮಾಜದಿಂದ ಕಾಂಗ್ರೆಸ್ ಗೆ ಎಚ್ಚರಿಕೆ..!

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕರು ಹಗರಣಗಳ ಮೇಲೆ ಹಗರಣ ನಡೆಸಿ ರಾಜ್ಯವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಇದೀಗ ಒಕ್ಕಲಿಗ ಸಮಾಜದ ಸರಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಕಾಂಗ್ರೆಸ್ ಸರಿಯಾಗಿ ಬಿಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿರುವ ರಾಜ್ಯ ಒಕ್ಕಲಿಗರ ಒಕ್ಕೂಟ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ವಿನಾಃ ಕಾರಣ ಒಕ್ಕಲಿಗ ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇವೆಲ್ಲದಕ್ಕೂ ಕಡಿವಾಣ ಹಾಕದಿದ್ದರೆ ಸರಕಾರ ಉರುಳಿಸಲು ನಮಗೆ ತಿಳಿದಿದೆ ಎಂದು ಒಕ್ಕೂಟ ಎಚ್ಚರಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ..!

ಚುನಾವಣೆಗಾಗಿ ಒಂದೊಂದೇ ತಂತ್ರ ರೂಪಿಸಿ ಲಾಭ ಗಳಿಸಲು ಯೋಜನೆ ರೂಪಿಸಿದ್ದ ಸಿದ್ದರಾಮಯ್ಯನವರಿಗೆ ಇದೀಗ ತಮ್ಮದೇ ತಂತ್ರ ತಿರುಗಿಬಿದ್ದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ ರಾಜ್ಯ ಒಕ್ಕಲಿಗರ ಒಕ್ಕೂಟವು ಕಾಂಗ್ರೆಸ್ ಇದೇ ರೀತಿ ವರ್ತಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲು ಖಚಿತ .

ನಾವೇ ಸ್ವತಃ ಕಾಂಗ್ರೆಸ್ ವಿರುದ್ಧ ತಿರುಗಿಬೀಳುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ಈವರೆಗೆ ಜಾತಿ ಮತ್ತು ಧರ್ಮದ ಆಧಾರದಲ್ಲಿಯೇ ರಾಜಕೀಯ ನಡೆಸುತ್ತಿದ್ದ ಕಾಂಗ್ರೆಸ್ ಚುನಾವಣೆಯ ಹೊಸ್ತಿಲಲ್ಲೇ ಒಂದೊಂದೇ ಏಟು ಬೀಳುತ್ತಿದ್ದು, ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗ ತೊಡಗಿದೆ.!

ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮದ ಪ್ರತ್ಯೇಕತೆಗೆ ನಾಟಕವಾಡಿದ ಕಾಂಗ್ರೆಸ್ ಗೆ ಸದ್ಯ ಜನತೆಯೇ ಪಾಠ ಕಲಿಸಿದ್ದು , ಇದೀಗ ಒಕ್ಕಲಿಗರ ಸಮಾಜವೂ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದೆ. ಇನ್ನೇನಿದ್ದರೂ ಕಾಂಗ್ರೆಸ್ ಗೆ ಸೋಲು ಖಚಿತ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close