ಪ್ರಚಲಿತ

ಸರ್ದಾರ್ ಪಟೇಲರ ಏಕತಾ ಪ್ರತಿಮೆ ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಬಾಯಿ ತುಂಬಾ ಕೊಂಡಾಡಿದ ಅಮೇರಿಕಾ ದೂತಾವಾಸದ ಅಧಿಕಾರಿ!! ಅಮೇರಿಕಾಗೂ ಗೊತ್ತಾಯ್ತು ಭಾರತೀಯರ ಗತ್ತು!

ಸರ್ದಾರರ ಏಕತಾ ಪ್ರತಿಮೆಯನ್ನು ವೀಕ್ಷಿಸಿದ ಯುಎಸ್ ಕಾನ್ಸುಲೇಟ್ ಜನರಲ್, ಎಡ್ಗಡ್ ಡಿ ಕಗನ್ ಪ್ರತಿಮೆಯ ಅಗಾಧತೆಯನ್ನು ಬಾಯಿ ತುಂಬಾ ಕೊಂಡಾಡಿದ್ದಾರೆ. ಪ್ರತಿಮೆಯ ನಿರ್ಮಾಣದ ಗಾತ್ರ, ಅದರ ಹಿಂದಿರುವ ಮಹತ್ವಾಕಾಂಕ್ಷೆ ಮತ್ತು ಸೌಂದರ್ಯದ ಬಗ್ಗೆ ತಾನು ಬಹಳ ಪ್ರಭಾವಿತನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೊದಲು ಪ್ರತಿಮೆಯ ಚಿತ್ರಗಳನ್ನು ನೋಡಿರುವುದಾಗಿಯೂ ಮತ್ತು ಅದನ್ನು ಟಿವಿಯಲ್ಲಿ ವೀಕ್ಷಿಸಿರುವುದಾಗಿಯೂ ಹೇಳಿದ ಕಗನ್ ಪ್ರತಿಮೆಯನ್ನು ಪ್ರತ್ಯಕ್ಷ ಕಾಣುವುದು ಅವೆಲ್ಲದ್ದಕ್ಕಿಂತಲೂ ಪ್ರಭಾವಶಾಲಿಯಾಗಿದೆ ಎಂದರು. ವಿಶ್ವದ ಅತಿ ಎತ್ತರದ ಪ್ರತಿಮೆಗೆ ಭೇಟಿ ನೀಡುವಲ್ಲಿ ಬಹಳ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆಂದು ದೇಶ್ ಗುಜರಾತ್ ಪತ್ರಿಕೆ ವರದಿ ಮಾಡಿದೆ.

ಸರ್ದಾರರ ಪ್ರತಿಮೆಗೆ ಅಷ್ಟು ಹಣ ಯಾಕೆ ಸುರಿಯಬೇಕಿತ್ತು, ಅದರ ಬದಲಿಗೆ ಆಸ್ಪತ್ರೆಯೋ ಅಥವಾ ಶಾಲೆಯೋ ಕಟ್ಟಬಾರದಿತ್ತೆ ಎನ್ನುವವರು ಒಂದು ವಿಷಯ ನೆನಪಿಡಬೇಕು. ಶಾಲೆ ಆಸ್ಪತ್ರೆಗಳನ್ನು ಎಲ್ಲಿಯೂ ಕಟ್ಟಬಹುದು, ಆದರೆ ಅದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನ ಬರುವುದಿಲ್ಲ, ದೇಶದ ಬೊಕ್ಕಸಕ್ಕೆ ಪ್ರವಾಸೋದ್ಯಮದಿಂದ ಆದಾಯವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಮೇರಿಕಾ, ಇಂಗ್ಲೆಂಡಿನಂತಹ ದೇಶಗಳು ಭಾರತಕ್ಕೆ ಬಂದು ಭಾರತದ ಗತ್ತನ್ನು ಕಂಡು ನಾಚಿ ನೀರಾಗಿ ತಲೆ ತಗ್ಗಿಸುವುದಿಲ್ಲ. ಭಾರತದ ಶಕ್ತಿ ಪ್ರದರ್ಶನವನ್ನು ಕಂಡು ಇವತ್ತು ಜಗತ್ತಿನ ಎಲ್ಲಾ ದೇಶಗಳು ದಂಗಾಗಿವೆ, ಭಾರತವನ್ನು ಬಾಯಿ ತುಂಬಾ ಹಾಡಿ ಹೊಗಳುತ್ತಿವೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಆಗಲೂ ಇದೆ ರೀತಿ ದೇಶ ವಿದೇಶದ ಅಧಿಕಾರಿಗಳು ಹಾಗೂ ರಾಷ್ಟ್ರಾಧ್ಯಕ್ಷರು ಕೂಡಾ ಭಾರತಕ್ಕೆ ಭೇಟಿ ನೀಡುತ್ತಾರೆ ಮಾತ್ರವಲ್ಲ ಭಾರತದ ಭವ್ಯ ಪರಂಪರೆಯನ್ನು ಅಪ್ಪಿಕೊಂಡು ಒಪ್ಪಿಕೊಳ್ಳುತ್ತಾರೆ. ಇದುವರೆಗೂ ವಿದೇಶದ ಕಣ್ಣುಗಳಿಗೆ ಭಾರತವನ್ನು ಬಡ ದೇಶ, ಒಂದು ಹೊತ್ತು ಉಣ್ಣಲೂ ಗತಿಯಿಲ್ಲದ ಭಿಕಾರಿಗಳ ದೇಶ ಎನ್ನುವಂತೆ ತೋರಿಸಲಾಗಿದೆ. ಆದರೆ ಈಗ ಜಗತ್ತು ನೋಡುತ್ತಿರುವ ಭಾರತವೆ ಬೇರೆ. ಹೇಗೆ ನಮ್ಮ ಮನೆಗೆ ಅತಿಥಿಗಳು ಬಂದಾಗ ನಾವು ನಮ್ಮ ಮನೆಯ ಅತಿ ಸುಂದರ ಕೋಣೆಯನ್ನು ತೋರಿಸಿ ಬೀಗುತ್ತೇವೋ ಹಾಗೆಯೆ ನಮ್ಮ ದೇಶಕ್ಕೆ ವಿದೇಶದ ಅತಿಥಿಗಳು ಬಂದಾಗ ಅವರಿಗೆ ಕೊಳಚೆ ಗೇರಿಯನ್ನು ತೋರಿಸುವ ಬದಲು ಇಂತಹ ಭವ್ಯ ಸ್ಮಾರಕಗಳನ್ನು ತೋರಿಸಬೇಕು.

ಅದಕ್ಕಾಗಿಯೆ ಮೋದಿಜಿ ಪಟೇಲರ, ಶ್ರೀ ರಾಮನ, ಛತ್ರಪತಿ ಶಿವಾಜಿಯ ಭವ್ಯ ಪ್ರತಿಮೆಗಳನ್ನು ನಿರ್ಮಾಣ ಮಾಡುತ್ತಿರುವುದು. ನಿಧಾನವಾಗಿಯಾದರೂ ಸರಿ ಜಗತ್ತಿಗೆ ಭಾರತದ ಗತ್ತೇನನ್ನುವುದು ಗೊತ್ತಾಗಿದೆ. ಭಾರತವನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಂಡಿದ್ದ ದೇಶಗಳೆಲ್ಲಾ ಈಗ ಭಾರತದ ಕಾಲ ಬುಡಕ್ಕೆ ಬಂದು ಬಿದ್ದಿವೆ. ಇದಕ್ಕೆಲ್ಲಾ ಕಾರಣ ಭಾರತದ ಸಮರ್ಥ ನಾಯಕತ್ವ. ಇಂತಹ ನಾಯಕ ಐದಲ್ಲ ಹದಿನೈದು ವರ್ಷ ದೇಶವನ್ನಾಳಬೇಕು. ಭಾರತ ಮತ್ತೊಮ್ಮೆ ವಿಶ್ವ ಗುರು ಪಟ್ಟಕ್ಕೇರಬೇಕು.

–ಶಾರ್ವರಿ

video courtesy: Desh Gujarat

Tags

Related Articles

FOR DAILY ALERTS
 
FOR DAILY ALERTS
 
Close