ಪ್ರಚಲಿತ

ಮೋದಿ ಸರಕಾರದ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಶ್ಲಾಘಿಸಿದ ವಿಶ್ವಸಂಸ್ಥೆ! ಭಾರತದ ಮುಂಜಾಗ್ರತಾ ಕ್ರಮಕ್ಕೆ ತಲೆಬಾಗಿದ ಜಗತ್ತು!

ಜನರಿಗಾಗಿ, ದೇಶಕ್ಕಾಗಿ ಏನಾದರೊಂದು ಮಾಡುತ್ತೇನೆ ಎಂದು ಹೊರಟು ನಿಂತವನಿಗೆ ಯಾವ ಅಡೆತಡೆಯೂ ಲೆಕ್ಕಕ್ಕಿಲ್ಲ ಎಂಬುದನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೋದಿ ಏನೇ ಮಾಡಿದರು ಅದರ ಹಿಂದೆ ದೇಶದ ಏಳಿಗೆಗಾಗಿ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ. ಇದೀಗ ಮೋದಿ ಸರಕಾರ ಕೈಗೊಂಡ ಕ್ರಮವನ್ನು ಕಂಡು ಸ್ವತಃ ವಿಶ್ವಸಂಸ್ಥೆ ಅಭಿನಂದನೆ ಸಲ್ಲಿಸಿದ್ದು, ಜಗತ್ತು ನಿಬ್ಬೆರಗಾಗಿದೆ. ಹೌದು ಇದೀಗ ದೇಶಾದ್ಯಂತ ಫನಿ ಚಂಡಮಾರುತದ ಭೀತಿ ಎದುರಿಸುತ್ತಿದ್ದು ಈಗಾಗಲೇ ಪಶ್ಚಿಮ ಬಂಗಾಳ, ಒಡಿಸ್ಸಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಚಂಡಮಾರುತದ ಪ್ರಭಾವ ಬೀರಿದೆ.‌ ಕೆಲವೊಂದು ಪ್ರಾಣಹಾನಿ ಕೂಡ ನಡೆದಿದ್ದು, ಹೆಚ್ಚಿನ ಅಪಾಯವನ್ನು ಭಾರತ ಸರಕಾರ ತಡೆದಿದೆ ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ. ಫನಿ ಚಂಡಮಾರುತ ಕಳೆದೆರಡು ದಶಕದಲ್ಲಿ ಅತೀ ದೊಡ್ಡ ಚಂಡಮಾರುತ ಆಗಿದ್ದು ಇದರ ಆರ್ಭಟಕ್ಕೆ ಯಾವ ಪ್ರಮಾಣದ ಪ್ರಾಣಹಾನಿ ಹಾಗೂ ಇತರ ನಷ್ಟ ಅನುಭವಿಸಬೇಕಿತ್ತೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಅವೆಲ್ಲವನ್ನೂ ಮೆಟ್ಟಿನಿಂತ ಮೋದಿ‌ ಸರಕಾರ ಹೆಚ್ಚಿನ ಎಲ್ಲಾ ಅಪಾಯವನ್ನು ತಡೆದು ಜಗತ್ತು ಮೆಚ್ಚುವಂತಹ ಕೆಲಸ ಮಾಡಿದೆ.!

ಅಪಾಯದ ಬಗ್ಗೆ ಮೊದಲೇ ಮಾಹಿತಿ ಪಡೆದಿತ್ತು ಮೋದಿ ಸರಕಾರ!

ದೇಶಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ‌ ಮೋದಿಯವರ ದೇಶದ ಬಗೆಗಿನ ಕಾಳಜಿ ಯಾವ ಮಟ್ಟಕ್ಕೆ ಇದೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತ ಎಲ್ಲಾ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣಾ ಗದ್ದಲದಲ್ಲಿ ಬ್ಯುಸಿಯಾಗಿದ್ದರೆ ಪ್ರಧಾನಿ ಮೋದಿ ಮಾತ್ರ ದೇಶಕ್ಕಾಗುವ ಅಪಾಯದ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಬೇಕಾದ ಪರಿಹಾರ ವ್ಯವಸ್ಥೆ ಮಾಡಿಕೊಂಡಿದ್ದರು. ಫನಿ ಚಂಡಮಾರುತ ಭಾರತದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ನಿಖರ ಮಾಹಿತಿ ನೀಡಿದ್ದು ತಕ್ಷಣ ಮೋದಿ ಸರಕಾರ ಆಪತ್ತು ಪರಿಸ್ಥಿತಿಯನ್ನು ಎದುರಿಸಲು ಯಾವ ಕ್ರಮ ಬೇಕೋ ಅದನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಸದ್ಯ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಭಾರತದಲ್ಲಿ ಇದೆ ಎಂದರೆ ತಪ್ಪಾಗದು. ಯಾಕೆಂದರೆ ಭಾರತದ ಇಸ್ರೋ ಸಂಸ್ಥೆಯು ಜಗತ್ತೇ ನಿಬ್ಬೆರಗಾಗುವಂತೆ ಕೆಲಸ ಮಾಡುತ್ತಿದೆ. ಇದೀಗ ಫನಿ ಚಂಡಮಾರುತದ ಬಗ್ಗೆ ಕೂಡ ಇಸ್ರೋ ಭಾರತ ಸರಕಾರಕ್ಕೆ ಮುನ್ಸೂಚನೆ ನೀಡಿತ್ತು. ಭೂಮಿಗೆ ಅಪ್ಪಳಿಸುವ ಈ ಚಂಡಮಾರುತ ಭಾರತಕ್ಕೆ ಅಪಾರ ಪ್ರಮಾಣದ ಹಾನಿ ಮಾಡಲಿದೆ ಎಂದು ಇಸ್ರೋ ಎಚ್ಚರಿಕೆ ನೀಡಿತ್ತು.‌ ದೇಶದಲ್ಲಿ ಚುನಾವಣೆಯ ಗದ್ದಲ ಹೆಚ್ಚಿದ್ದರು ಮೋದಿ ಸರಕಾರ ಮಾತ್ರ ಇತ್ತ ಈ ಬಗ್ಗೆ ತುರ್ತು ಸಭೆ ಕರೆದು ಮುಂಜಾಗ್ರತಾ ಕ್ರಮವಾಗಿ ಏನು ಮಾಡಬಹುದು ಎಂಬುದರ ನಕ್ಷೆ ತಯಾರಿಸಿತ್ತು. ಅದರಂತೆಯೇ ಇಸ್ರೋ ಸಂಸ್ಥೆಯು ಸೂಚಿಸಿದ ಸ್ಥಳಗಳಿಂದ ಲಕ್ಷಾಂತರ ಜನರನ್ನು ಕೇಂದ್ರ ಸರಕಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಕರಾವಳಿ ಪ್ರದೇಶದಲ್ಲಿ ಅಪಾಯ ಹೆಚ್ಚು ಎಂಬ ಕಾರಣಕ್ಕೆ ಭಾರತದ ಎನ್‌ಡಿ‌ಆರ್‌ಎಫ್ ಪಡೆಯನ್ನು ಮತ್ತು ಭಾರತದ ಎಲ್ಲಾ ಮೂರು ವಿಭಾಗದ ರಕ್ಷಣಾ ಪಡೆಯನ್ನು ನಿಯೋಜಿಸಿತ್ತು. ಅಷ್ಟೇ ಅಲ್ಲದೆ ಒರಿಸ್ಸದ ಕರಾವಳಿ ತೀರದ ಏರ್‌ಪೋರ್ಟ್ ಗಳನ್ನು ಸಂಪೂರ್ಣ ಭಾರತೀಯ ಸೇನೆಯ ಸುಪರ್ದಿಗೆ ನೀಡಲಾಗಿತ್ತು. ಫನಿ ಚಂಡಮಾರುತದ ಬಗ್ಗೆ ಮುನ್ಸೂಚನೆ ಪಡೆದ ಕೇಂದ್ರ ಸರಕಾರ ಕೈಗೊಂಡ ಮೊದಲ ಕ್ರಮ‌ ಇದಾಗಿದ್ದು, ಚಂಡಮಾರುತ ಬೀಸಿದ ನಂತರ ಮತ್ತಷ್ಟು ರಕ್ಷಣಾ ಪಡೆಯನ್ನು ಹೆಚ್ಚಿಸಿತ್ತು.!

ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆ ಹೀಗೆ ಎಲ್ಲಾ ಪ್ರಮುಖ ಮೂರು ವಿಭಾಗವನ್ನು ಕೂಡ ಜನರ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ ಮೋದಿ ಸರಕಾರ, ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಂಡರು. ಇತ್ತ ಭಾರತದ ಈ ಒಂದು ಕ್ರಮವನ್ನು ಕಂಡು ಸ್ವತಃ ವಿಶ್ವಸಂಸ್ಥೆ ಅಭಿನಂದನೆ ಸಲ್ಲಸಿದ್ದು, ಜನರ ಬಗ್ಗೆ ಕೇಂದ್ರ ಸರಕಾರಕ್ಕಿರುವ ಕಾಳಜಿ ಎಂತದ್ದು ಎಂಬುದು ಸಾಬೀತಾಗಿದೆ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲದೆ 2015-30 ರ ಅವಧಿಗೆ ಭಾರತ ಸರಕಾರ ಇದೇ ಮೊಟ್ಟಮೊದಲ ಬಾರಿಗೆ ಮಾಡಿಕೊಂಡ “ಸೆನ್‌ಡಾಯ್ ಫ್ರೇಮ್ ವರ್ಕ್” ಒಪ್ಪಂದದ ಪ್ರಕಾರ ಈ ಕ್ರಮ ಕೈಗೊಂಡಿದ್ದು ಭಾರತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ.!

ರಾಜಕೀಯವಾಗಿ ಪ್ರಧಾನಿ ಮೋದಿಯನ್ನು ಟೀಕಿಸಿದ ವಿರೋಧಿಗಳು ಕೂಡ ಇಂದು ಮೋದಿಯನ್ನು ಹೊಗಳುವಂತಗಿದೆ. ಯಾಕೆಂದರೆ ಚಂಡಮಾರುತದಿಂದ ಹಾನಿ ಉಂಟಾಗಬಹುದು ಎಂಬ ಲೆಕ್ಕಾಚಾರದಿಂದ ಕೇಂದ್ರ ಸರಕಾರ ಮೊದಲೇ ಪರಿಹಾರ ಕೂಡ ಘೋಷಣೆ ಮಾಡಿತ್ತು. ಪ್ರಕೃತಿ ವಿಕೋಪವಾಗಲಿ ಏನೇ ಆಗಲಿ, ದೇಶದ ಜನರ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಮೋದಿ ಸರಕಾರದ ಕ್ರಮಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close