ಪ್ರಚಲಿತ

ಜನತೆಯ ಮನಗೆದ್ದ ಉಡುಪಿ ಶಾಸಕರು! ಜನರ ಸಾಮಾನ್ಯ ಸಮಸ್ಯೆಗೂ ಭರ್ಜರಿ ರೆಸ್ಪಾನ್ಸ್ ನೀಡುತ್ತಿರುವ ಶಾಸಕರು!

ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶವಿದ್ದರೆ ತನಗೆ ಸಿಕ್ಕ ಅಧಿಕಾರವನ್ನು ಯಾವ ರೀತಿಯಲ್ಲಿ ಜನರಿಗಾಗಿ ಮೀಸಲಿಡಬೇಕು ಎಂಬುದು ರಾಜಕೀಯ ವ್ಯಕ್ತಿಗಳಿಗೆ ಹೇಳಿಕೊಡಬೇಕಾಗಿಲ್ಲ, ಆದರೆ ಒಳ್ಳೆಯ ಮನಸ್ಸು ಬೇಕಷ್ಟೆ. ಯಾಕೆಂದರೆ ಅಧಿಕಾರ ಕೈಗೆ ಸಿಗುವುದಕ್ಕೂ ಮೊದಲು ಜನರ ಬಳಿ ಕೈಮುಗಿದುಕೊಂಡು ತಲೆ ತಗ್ಗಿಸುತ್ತಾ ನಂತರ ಚುನಾವಣೆಯಲ್ಲಿ ಗೆದ್ದ ತಕ್ಷಣ ಕ್ಷೇತ್ರದ ಜನರ ಕೈಗೆ ಸಿಗದಂತೆ ಓಡಾಡುವ ರಾಜಕಾರಣಿಗಳ ನಡುವೆ ಉಡುಪಿಯ ಶಾಸಕರಾದ ಕೆ ರಘುಪತಿ ಭಟ್ ಅವರು ತಮ್ಮ ದಿನನಿತ್ಯದ ಒಂದೊಂದು ಕೆಲಸಗಳ ಮೂಲಕವೇ ಕ್ಷೇತ್ರದ ಜನರ ಮನ ಗೆಲ್ಲುತ್ತಿದ್ದಾರೆ. ಯಾಕೆಂದರೆ ಉಡುಪಿಯ ಶಾಸಕರಾದ ರಘುಪತಿ ಭಟ್ ಅವರಿಗೆ ಆಡಳಿತ ನಡೆಸಿದ ಅನುಭವವಿದೆ ಮತ್ತು ತಮ್ಮ ಆಡಳಿತ ಅವಧಿಯಲ್ಲಿ ತಮ್ಮ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಪಡಿಸಬಹುದು ಎಂಬ ದೂರದೃಷ್ಟಿ ಇದೆ. ಅದೇ ಕಾರಣಕ್ಕಾಗಿ ಕ್ಷೇತ್ರದ ಜನರ ಪಾಲಿಗೆ ಅಚ್ಚುಮೆಚ್ಚಿನ ಶಾಸಕರಾಗಿದ್ದಾರೆ.!

Image result for raghupathi bhat

ಊರವರ ಸಮಸ್ಯೆಗೆ ಸಿಕ್ತು ಶೀಘ್ರ ಪರಿಹಾರ..!

ತಮ್ಮ ಊರಿನ ಸಮಸ್ಯೆಗಳನ್ನು ತಮ್ಮ ಕ್ಷೇತ್ರದ ಜನಪ್ರಿನಿಧಿಗಳ ಬಳಿ ಹೇಳಿಕೊಳ್ಳುವುದು ಜನರ ಕರ್ತವ್ಯವಾದರೆ, ಅದನ್ನು ಬಗೆಹರಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಅದನ್ನೇ ಬೆಳೆಸಿಕೊಂಡು ಬಂದಿರುವ ಶಾಸಕ ರಘುಪತಿ ಭಟ್ ಅವರು ಇದೀಗ ತಮ್ಮ ಕ್ಷೇತ್ರದ ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ದೊಡ್ಡನಗುಡ್ಡೆ ,ಮನೋಲಿ ಗುಜ್ಜಿ , ಚಕ್ರತೀರ್ಥ, ಎಮ್‌ಜಿಎಮ್ ಮಾರ್ಗವಾಗಿ ಚಲಿಸುತ್ತಿದ್ದ ಸರಕಾರಿ ಬಸ್ಸನ್ನು ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲಿ ನಿಲ್ಲಿಸಲಾಗಿತ್ತು. ಕೆಲಸಕ್ಕೆ ಹೋಗುವ ಜನರು ಮಾತ್ರವಲ್ಲದೆ, ನೂರಾರು ಶಾಲಾ – ಕಾಲೇಜು ವಿದ್ಯಾರ್ಥಿಗಳು ಈ ಬಸ್‌ನಲ್ಲಿಯೇ ಸಂಚರಿಸುತ್ತಿದ್ದರು. ಆದರೆ ಏಕಾಏಕಿ ಬಸ್ ಸಂಚಾರವನ್ನೇ ನಿಲ್ಲಿಸಿದ್ದರಿಂದ ಸಾರ್ವಜನಿಕರು ಕಂಗಾಲಾಗಿದ್ದರು. ಈ ಹಿಂದಿನ ಶಾಸಕರ ಬಳಿ ಸಮಸ್ಯೆ ಹೇಳಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ, ಆದರೆ ಇದೀಗ ರಘುಪತಿ ಭಟ್ ಅವರ ಬಳಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ, ಮಾತ್ರವಲ್ಲದೆ ಬಸ್ ಸಂಚಾರ ಪುನಃ ಆರಂಭವಾಗುವಂತಾಗಿದೆ.!


ಇದು ಕೇವಲ ಒಂದು ವಿಚಾರವಷ್ಟೇ, ಇಂತಹ ಅನೇಕ ಸಮಸ್ಯೆಗಳನ್ನು ಹೇಳಿಕೊಂಡ ತಕ್ಷಣ ಬಗೆಹರಿಸುವ ನಮ್ಮ ಶಾಸಕರು ನಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಇಂತಹ ಶಾಸಕರು ನಮ್ಮ ಪಾಲಿಗೆ ದೊರಕಿದ್ದೇ ನಮ್ಮ ಅದೃಷ್ಟ, ಏಕೆಂದರೆ ಸಮಸ್ಯೆ ಹೇಳಿಕೊಂಡು ಶಾಸಕರ ಬಳಿಗೆ ಹೋದ ತಕ್ಷಣ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ ಎಂದರೆ ಇಂತಹ ಶಾಸಕರನ್ನು ನಾವು ಕಳೆದುಕೊಳ್ಳುತ್ತೇವೇಯೇ..? ನಮ್ಮ ಕ್ಷೇತ್ರದ ಅಭಿವೃದ್ಧಿ ಖಂಡಿತ ಆಗುತ್ತದೆ ಎಂಬ ನಂಬಿಕೆಯೂ ನಮ್ಮಲ್ಲಿದೆ, ಕಾರಣ ಶಾಸಕರ ಆಡಳಿತ ಶೈಲಿ.

ಅಷ್ಟೇ ಅಲ್ಲದೆ ಈ ಹಿಂದಿನ ಶಾಸಕರಾದ ಪ್ರಮೋದ್ ಮಧ್ಯರಾಜ್ ಅವರ ಎಲ್ಲಾ “ಬ್ಯಾನರ್ ರಾಜಕೀಯಕ್ಕೂ” ತಿಲಾಂಜಲಿ ಹಾಡಿದ ರಘುಪತಿ ಭಟ್ ಅವರು ತಮ್ಮದೇ ಹೊಸ ಶೈಲಿಯ ಆಡಳಿತದಿಂದ ಜನರ ಮನ – ಮನೆಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಕೇವಲ ತೋರ್ಪಡಿಕೆಗಾಗಿ ಆಡಂಬರದ ಆಡಳಿತ ನಡೆಸುತ್ತಿದ್ದ ಮಾಜಿ ಶಾಸಕರ ಎಲ್ಲಾ ವಿಧಾನಗಳನ್ನೂ ನಿಲ್ಲಿಸುವ ಮೂಲಕ ತಮ್ಮ ಆಡಳಿತವನ್ನು ಜನರು ಮೆಚ್ಚಿಕೊಳ್ಳುವಂತೆ ಮಾಡಿದ್ದಾರೆ. ಇದು ಓರ್ವ ನೈಜ ರಾಜಕಾರಣಿಯ ಆಡಳಿತ ಶೈಲಿ, ಯಾಕೆಂದರೆ ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂಬ ಗಾದೆ ಮಾತಿದೆ, ಅಂತೆಯೇ ತಾನು ತನ್ನ ಕ್ಷೇತ್ರದ ಜನರಿಗೆ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಎಲ್ಲೂ ತೋರ್ಪಡಿಸದೆ ಸಾಮಾನ್ಯ ಜನರ ರೀತಿಯಲ್ಲಿ ಆಡಳಿತ ನಡೆಸುತ್ತಿದ್ಧಾರೆ ನಮ್ಮ ಹೆಮ್ಮೆಯ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು..!

ಅಚ್ಛೇದಿನ್..

  • ಸಂಪತ್ ರಾಜ್
Tags

Related Articles

FOR DAILY ALERTS
 
FOR DAILY ALERTS
 
Close