ಪ್ರಚಲಿತ

ವಿಡಿಯೋ ಮಾಡಿ ಬಹುಮಾನ ಗೆಲ್ಲಿ!! ಜಲ ಸಂರಕ್ಷಣೆಗೆ ಕೇಂದ್ರದ ವಿಭಿನ್ನ ಹೆಜ್ಜೆ… 

ನರೇಂದ್ರ ಮೋದಿ ಸರಕಾರವು ದೇಶದ ಸುಭಿಕ್ಷೆಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರಲ್ಲದೇ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜನರಿಗೆ ಆಗಾಗ್ಗೆ ಜಾಹೀರಾತಿನ ಮುಖಾಂತರ ಅಥವಾ ‘ಮನ್ ಕೀ ಬಾತ್’ ಮುಖಾಂತರ,  ಅಷ್ಟೇ ಅಲ್ಲದೇ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರವು ತಾವು ಜಾರಿಗೊಳಿಸಿರುವ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಲೇ ಇದೆ!! ಈಗಾಗಲೇ ಬಯಲು ಮುಕ್ತ ಶೌಚಾಲಯ ನಿರ್ಮಿಸಬೇಕೆಂದು ದೇಶದ ಜನತೆಗೆ ಉತ್ತೇಜಿಸುತ್ತಿರುವ ಮೋದಿ ಸರಕಾರವು ಇದೀಗ ದೇಶದ ಜನರನ್ನು ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಸಲುವಾಗಿ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿದೆ.

ಈಗಾಗಲೇ ದೇಶಾದ್ಯಂತ ವಿವಿಧ ರಾಜ್ಯಗಳ ನಡುವೆ ಇರುವ ಎಲ್ಲಾ ನದಿ ನೀರು ಹಂಚಿಕೆ ವಿವಾದವನ್ನು ಒಂದೇ ನ್ಯಾಯಾಧೀಕರಣ ಇತ್ಯರ್ಥಗೊಳಿಸಲು ನಿರ್ಧರಿಸಿದ್ದಲ್ಲದೇ, ರಾಜ್ಯಗಳ ಜಲ ವಿವಾದ ತೀರ್ಮಾನಗೊಳಿಸುವ ಏಕ ರಾಷ್ಟ್ರೀಯ ನ್ಯಾಯಾಧೀಕರಣ ಸ್ಥಾಪನೆಗೂ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿದೆ!! ಈ ಹೊಸ ನ್ಯಾಯಾಧಿಕರಣವು ಅಸ್ತಿತ್ವಕ್ಕೆ ಬಂದರೆ, ಪ್ರಸ್ತುತವಿರುವ ಎಲ್ಲಾ ನದಿ ವ್ಯಾಜ್ಯಗಳ ನ್ಯಾಯಾಧಿಕರಣಗಳು ಅದರಲ್ಲೇ ವಿಲೀನಗೊಳ್ಳಲಿವೆ.

ಇದರ ಬೆನ್ನಲ್ಲೇ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ದೇಶದ ಜನರನ್ನು ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಸಲುವಾಗಿ ‘ಜಲ್ ಬಚಾವೋ, ವಿಡಿಯೋ ಬನಾವೋ, ಪುರಸ್ಕಾರ್ ಲಾವೋ’ ಎಂಬ ಸ್ಪರ್ಧೆಯನ್ನು ಆಯೋಜನೆಗೊಳಿಸಿದೆ.

ಏನಿದು ‘ಜಲ್ ಬಚಾವೋ, ವಿಡಿಯೋ ಬನಾವೋ, ಪುರಸ್ಕಾರ್ ಲಾವೋ’??

ನೀರು ಒಂದು ಅತ್ಯಂತ ವಿರಳವಾದ ಸಂಪನ್ಮೂಲ ಎನ್ನುವುದು ಎಲ್ಲರೂ ತಿಳಿಯಲೇ ಬೇಕಾದ ಸತ್ಯ!! ಇಪ್ಪತ್ತೊಂದನೆಯ ಶತಮಾನದಲ್ಲಿ ದೇಶ ಮತ್ತು ದೇಶಗಳ ನೀರಿನ ಸಂಪನ್ಮೂಲಗಳ ವಿಚಾರವಾಗಿ ದೊಡ್ಡ ಹೋರಾಟವೇ ನಡೆಯುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೇಶಗಳಲ್ಲಿ ನದಿ ನೀರಿನ ಹಂಚಿಕೆ ವಿಚಾರವಾಗಿ ಹೋರಾಟ ನಡೆಯುತ್ತಿದೆ. ನೀರು ಹಂಚಿಕೆಯ ವಿಚಾರವಾಗಿ ವಿವಿಧ ರಾಜ್ಯಗಳ ನಡುವೆ, ಜಿಲ್ಲೆ ಜಿಲ್ಲೆಗಳ ನಡುವೆ, ಜನಸಾಮಾನ್ಯರ ನಡುವೆ ಘರ್ಷಣೆ ಇರುವುದನ್ನು ನಾವು ನೋಡುತ್ತಲೇ ಇದ್ದೇವೆ. ನೀರು ಇದ್ದಾಗ ನೀರು ಹಂಚಿಕೆ ಪ್ರಶ್ನೆ ಉದ್ಭವಿಸುತ್ತದೆ. ಎಲ್ಲಾ ಜಲಾಶಯಗಳಲ್ಲಿ ನೀರೇ ಇಲ್ಲವಾದಾಗ ಹಂಚಿಕೆ ಹೇಗೆ ಸಾಧ್ಯವಾಗುತ್ತದೆ, ಅಂತಹ ದಿನ ಬರಬಹುದು, ಅಂತಹ ಪರಿಸ್ಥಿತಿಯ ವಿರುದ್ಧ ಹೋರಾಡಲು ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅನಿವಾರ್ಯ!!

ಹಾಗಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ದೇಶದ ಜನರನ್ನು ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಸಲುವಾಗಿ ‘ಜಲ್ ಬಚಾವೋ, ವಿಡಿಯೋ ಬನಾವೋ, ಪುರಸ್ಕಾರ್ ಲಾವೋ’ ಎಂಬ ಸ್ಪರ್ಧೆಯನ್ನು ಆಯೋಜನೆಗೊಳಿಸಿದೆ. ಹೌದು… ಜನರು ತಾವು ಜಲ ಸಂರಕ್ಷಣೆ ಮತ್ತು ಜಲ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ವೀಡಿಯೋಗಳನ್ನು  ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿ ಅದರ ಲಿಂಕ್ ನ್ನು ‘ಮೈಗೌ’ ಪೋರ್ಟಲ್ ಗೆ ಕಳುಹಿಸಿಕೊಡಬೇಕಾಗಿರುವುದು ಅತೀ ಮುಖ್ಯವಾಗಿದೆ!! ಅಷ್ಟೇ ಅಲ್ಲದೇ, ಇದರಲ್ಲಿ ಆಯ್ಕೆಯಾದ ಮೂರು ಅತ್ಯುತ್ತಮ ವೀಡಿಯೋಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ!!

ಅಷ್ಟ್ಕಕೂ ವಿಡಿಯೋ ಅಪ್ ಲೋಡ್ ಮಾಡಲು ಇರುವ ಕೊನೆಯ ದಿನಾಂಕವಾದರೂ ಯಾವುದು ಗೊತ್ತೇ??

ಪ್ರಪಂಚದಲ್ಲಿ ಚೀನಾ ನಂತರ ಅಂತರ್ಜಲದ ದೊಡ್ಡ ಬಳಕೆಯಾಗುವುದು ನಮ್ಮ ಭಾರತ ದೇಶದಲ್ಲಿಯೇ, ಕುಡಿಯುವ ನೀರಿಗಾಗಿ ಶೇಕಡಾ 85 ರಷ್ಟು ಮತ್ತು ನೀರಾವರಿ ಕೃಷಿಯ ಸರಬರಾಜಿಗಾಗಿ ಶೇಕಡಾ 60 ರಷ್ಟು ಅಂತರ್ಜಲ ಪೂರೈಕೆಯನ್ನೇ ಅವಲಂಬಿಸಿದೆ. ಕಡಿಮೆ ವೆಚ್ಚದ ಕಾರಣ ಅಂತರ್ಜಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಹೀಗಿರುವಾಗ ಕುಸಿಯುತ್ತಿರುವ ಅಂತರ್ಜಲದ ಮಟ್ಟದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಹಾಗಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಜನರನ್ನು ಉತ್ತೇಜಿಸುವ ಸಲುವಾಗಿ ಸ್ಪರ್ಧೆಯನ್ನು ಏರ್ಪಡಿಸಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಇನ್ನು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸಿರುವ ಸ್ಪರ್ಧಾಳುಗಳು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿ ಅದರ ಲಿಂಕ್ ನ್ನು ‘ಮೈಗೌ’ ಪೋರ್ಟಲ್ ಗೆ ಕಳುಹಿಸಿಕೊಡಬೇಕಾಗಿರುವುದು ಅತೀ ಮುಖ್ಯವಾಗಿದೆ!! ಅಷ್ಟೇ ಅಲ್ಲದೇ ಸೃಜನಶೀಲತೆ, ನೈಜತೆ, ತಾಂತ್ರಿಕ ನಿಪುಣತೆ, ಕಲಾ ಅರ್ಹತೆ, ವಿಡಿಯೋ ಗುಣಮಟ್ಟ, ವಿಷಯ, ದೃಶ್ಯ ಪ್ರಭಾವಗಳ ಆಧಾರದ ಮೇಲೆ ಮೂರು ಅತ್ಯುತ್ತಮ ವೀಡಿಯೋಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಪ್ರಥಮ ಬಂದವರಿಗೆ 25 ಸಾವಿರ ರೂಪಾಯಿ, ದ್ವಿತೀಯ ಬಂದವರಿಗೆ 15 ಸಾವಿರ ರೂಪಾಯಿ, ತೃತೀಯ ಬಂದವರಿಗೆ 10 ಸಾವಿರ ದೊರೆಯಲಿದೆ!! ಇನ್ನು ಈ ವಿಡಿಯೋ ಅಪ್ ಲೋಡ್ ಮಾಡಲು ನವೆಂಬರ್ 4 ಇದಕ್ಕೆ ಕೊನೆಯ ದಿನವಾಗಿದೆ.

ಒಟ್ಟಿನಲ್ಲಿ ಪರಿಸರ ವ್ಯವಸ್ಥೆಯ ಮೇಲೆ ನಿರಂತರವಾಗಿ ಆಗುತ್ತಿರುವ ಹಾನಿಯಿಂದ ಪ್ರತಿವರ್ಷ ಮಳೆಯ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ, ಹೀಗಾಗಿ ಭೂಮಿಯ ಮೇಲೆ ವಾಸ ಮಾಡುತ್ತಿರುವ ಮನುಷ್ಯರಾಗಿ, ಈ ದೇಶದ ಪ್ರಜೆಯಾಗಿ ನಾವು ನೀರನ್ನು ಉಳಿಸುವ ಮತ್ತು ಮಿತವಾಗಿ ಬಳಸುವ ಪ್ರತಿಜ್ಞೆ ಮಾಡಲೇಬೇಕಾಗಿದೆ. ಹೀಗಾಗಿ ಇದೀಗ ಕೇಂದ್ರ ಸರಕಾರವು ದೇಶದ ಜನರನ್ನು ಜಲ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಲು ಹೊಸ ತಂತ್ರವನ್ನು ಹುಡುಕಿರುವುದೇ ಹೆಮ್ಮೆಯ ವಿಚಾರವಾಗಿದೆ.

ಮೂಲ:
http://zeenews.india.com/india/

– ಪುಷ್ಕರ

Tags

Related Articles

Close