ದೇಶಪ್ರಚಲಿತರಾಜಕೀಯ

ದೀದಿಗೆ ಶಾಕ್ ನೀಡಿದ ಮೋದಿ-ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ.!ನಿಜವಾಯ್ತು ನಮೋ ಭವಿಷ್ಯ.!

ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರು ಅಲ್ಲಿನ ಟಿಎಂಸಿ ಪಕ್ಷ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಬ್ಬರಿಸಿದ್ದರು. “ಮಮತಾ ಬ್ಯಾನರ್ಜಿಯವರೇ, ಲೋಕಸಭಾ ಫಲಿತಾಂಶ ಬರುತ್ತಲೇ ನಿಮ್ಮ ಶಾಸಕರು ಹಾಗೂ ಕಾರ್ಯಕರ್ತರು ನಮ್ಮ ಪಕ್ಷ ಸೇರುತ್ತಾರೆ. ಕಾದು ನೋಡಿ” ಎಂದು ಸವಾಲು ಹಾಕಿದ್ದರು. ಇದೀಗ ಮೋದಿ ನುಡಿದ ಭವಿಷ್ಯ ನಿಜವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ದಿಗ್ವಿಜಯ ಸಾಧಿಸುತ್ತಲೇ ದೀದಿಗೆ ಕಂಟಕ ಎದುರಾಗಿದೆ.

ಇಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಮೂವರು ಶಾಸಕರು ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ದೆಹಲಿಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಟಿಎಂಸಿ ಪಕ್ಷದ ದಂಡೇ ನೆರೆದಿತ್ತು. ಮೂವರು ಶಾಸಕರು ಹಾಗೂ 60 ಸ್ಥಳೀಯ ಸಂಸ್ಥೆಯ ಜನಪ್ರತಿಧಿಗಳು ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರ ಸಮ್ಮುಖದಲ್ಲಿ ಅನೇಕ ಮಂದಿ ಟಿಎಂಸಿ ನಾಯಕರು ಬಿಜೆಪಿ ಸೇರಿದ್ದು ಸಾವಿರಾರು ಟಿಎಂಸಿ ಕಾರ್ಯಕರ್ತರು ಬಿಜೆಪಿ ಪಾಲಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂಬಂತಾಗಿದ್ದ ಸಂದರ್ಭದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಸಖತ್ತಾಗಿಯೇ ಮೋಡಿ ಮಾಡಿದ್ದಾರೆ. ಹಲವಾರು ಗೊಂದಲಗಳು ಘರ್ಷಣೆಗಳ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತೆ ಪುಟಿದೆದ್ದಿದೆ. ಒಂದಲ್ಲಾ ಎರಡಲ್ಲಾ, ಬರೋಬ್ಬರಿ 18 ಸ್ಥಾನವನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದೆ. ಹೀಗಾಗಿ ಈಗಾಗಲೇ ಅನೇಕ ಮಂದಿ ಬಿಜೆಪಿ ಕಡೆ ಮುಖ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಬಿಜೆಪಿ ಕಡೆ ಮುಖ ಮಾಡುವ ಎಲ್ಲಾ ಸಾಧ್ಯತೆಗಳೂ ನಿಶ್ಚಳವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close