ಪ್ರಚಲಿತ

ಪಾಕಿಸ್ಥಾನದ ಪರ ಘೋಷಣೆ ಕೂಗುವವರನ್ನು ದೇಶದಿಂದ ಗಡೀಪಾರು ಮಾಡಬೇಕಿದೆ!! ಯಾಕೆ ಗೊತ್ತಾ?

ಪ್ರತಿಯೊಂದು ದೇಶದ ರಕ್ಷಣೆಗೆ ಆಯಾ ದೇಶದ ಸೇನೆಯು ಸದಾ ತಮ್ಮ ಜೀವವನ್ನು ಒತ್ತೆಯಿಟ್ಟು ಗಡಿಭಾಗದಲ್ಲಿ ಶತ್ರುಗಳ ದಾಳಿಗೆ ಎದೆಯೊಡ್ಡಿ ನಿಲ್ಲುತ್ತಾರೆ.ಯಾವಾಗ ಏನಾಗುತ್ತದೋ ಎಂಬುದು ಅರಿವಿಗೇ ಇಲ್ಲದೇ ಇದ್ದರು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತಮ್ಮ ಮೈಯೆಲ್ಲಾ ಕಣ್ಣು ಮಾಡಿ ದೇಶವನ್ನು ಕಾಯುತ್ತಿರುತ್ತಾರೆ.ತಮ್ಮ ಜೀವನವನ್ನೇ ದೇಶಕ್ಕಾಗಿ ಮೀಸಲಿಡುವ ಸೈನಿಕರಿಗೆ ಬಿಗ್ ಸಲ್ಯೂಟ್..!!

ಎಲ್ಲಾ ದೇಶದಲ್ಲೂ ಸೈನಿಕರು ದೇಶಸೇವೆ ಮತ್ತು ತಮ್ಮ ಜೀವನದ ಆಧಾರಕ್ಕೋಸ್ಕರ ಸೇನೆಗೆ ಸೇರಿಕೊಂಡರೆ ಭಾರತದಲ್ಲಿ ಮಾತ್ರ ದೇಶಪ್ರೇಮ ವನ್ನು ಮೈಗೂಡಿಸಿಕೊಂಡೇ ಬೆಳೆದು ಭಾರತಾಂಬೆಯ ಕಾಲ ಅಡಿಯಲ್ಲಿ ದೇಶ ಸೇವೆ ಮಾಡುತ್ತಾರೆ. ಭಾರತೀಯ ಸೈನಿಕರು ತಮ್ಮ ಜೀವವನ್ನೇ ಪಣತೊಟ್ಟು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾರೆ. ಎಲ್ಲಾ ದೇಶಗಳಲ್ಲಿ ಯುದ್ದದ ಭೀತಿ ಇದ್ದರೆ ,ಭಾರತೀಯ ಸೈನಿಕರಿಗೆ ಮಾತ್ರ ವರ್ಷವಿಡೀ ಯುದ್ದವೇ ಆಗಿರುತ್ತದೆ.

ಯಾಕೆಂದರೆ ಶತ್ರು ರಾಷ್ಟ್ರವಾದ ಪಾಕಿಸ್ತಾನ ಮತ್ತು ಚೀನಾ ದೇಶಗಳು ಸದಾ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಲೇ ಇರುತ್ತವೆ..! ಆದ್ದರಿಂದ ದೇಶದ ರಕ್ಷಣೆಗಾಗಿ ಭಾರತೀಯ ಸೈನಿಕರು ಸದಾ ಎಚ್ಚರಿಕೆಯಿಂದಲೇ ಕಾರ್ಯನಿರ್ವಹಿಸುತ್ತಿರಬೇಕಾಗುತ್ತದೆ.ಒಂಚೂರು ಯಾಮಾರಿದರೂ ಪಾಕಿಸ್ತಾನ ತನ್ನ ಉಗ್ರರನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತದೆ.

ಜಮ್ಮು ಕಾಶ್ಮೀರದ ಗಡಿಭಾಗವು ಭಾರತ ಮತ್ತು ಪಾಕಿಸ್ತಾನದ ಮುಖ್ಯ ಗಡಿಭಾಗವಾಗಿದೆ. ಈ ಭಾಗದಲ್ಲಿ ಪಾಕಿಸ್ತಾನವು ಪದೇ ಪದೇ ಉಗ್ರರನ್ನು ಬಳಸಿ ದುಷ್ಕ್ರತ್ಯ ಎಸಗಲು ಪ್ರಯತ್ನಿಸುತ್ತಲೇ ಇದೆ ‌ಆದ್ದರಿಂದಲೇ ಈ ಗಡಿಭಾಗದಲ್ಲಿ ಹೆಚ್ಚಿನ ಸೇನೆಯನ್ನು ನಿವೇಜನೆ ಮಾಡಲಾಗಿದೆ. ಭಾರತೀಯ ಸೈನಿಕರ ಮೇಲೆ ಈ ಗಡಿಭಾಗದಲ್ಲಿ ಪಾಕಿಸ್ತಾನ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಿದೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂಬ ವಾದಕ್ಕೆ ಇಳಿದ ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಹೊಂಚುಹಾಕುತ್ತಿದೆ..!

ಜಮ್ಮು ಕಾಶ್ಮೀರದ ಗಡಿಯಲ್ಲಿ ಸೈನಿಕರಿಗೆ ಪ್ರತಿದಿನವೂ ಯದ್ಧದ ವಾತಾವರಣವೇ ಇರುತ್ತದೆ. ಯಾವ ಹೊತ್ತಿನಲ್ಲಿ ದಾಳಿ ನಡೆಯುತ್ತದೆ ಎಂಬ ಅರಿವಿಲ್ಲದೆ ಕಾರ್ಯನಿರ್ವಹಿಸಬೇಕಾಗುತ್ತದೆ. ದಿನ ಬೆಳಗಾದರೆ ಎಷ್ಟು ಸೈನಿಕರ ಜೀವ ಹೋಗುತ್ತೋ ಏನೋ? ಎಂಬ ಆತಂಕದಲ್ಲಿಯೇ ಸೈನಿಕರು ದೇಶ ಕಾಯುತ್ತಿರುತ್ತಾರೆ..!

ಭಾರತ ಪಾಕಿಸ್ತಾನ ವಿಭಜನೆಗೊಂಡ ದಿನದಿಂದಲೇ ಪಾಕಿಸ್ತಾನ ಭಾರತದ ಮೇಲೆ ಕತ್ತಿಮಸೆಯುತ್ತಲೇ ಇರುವ ರಾಷ್ಟ್ರ.ಸದಾ ಒಂದಿಲ್ಲೊಂದು ವಿವಾದಗಳನ್ನು ಹುಟ್ಟುಹಾಕುತ್ತಲೇ ಇದೆ.ಗಡಿಭಾಗದಲ್ಲಿ ಕದನವಿರಾಮ ಉಲ್ಲಂಘನೆ ಮಾಡಿ ಭಾರತದತ್ತ ಗುಂಡಿನ ದಾಳಿ ಮಾಡುತ್ತಲೇ ಇದೆ‌.

ಇತ್ತ ಭಾರತದ ಅನ್ನ ತಿಂದು ಭಾರತದ ಮಣ್ಣಲ್ಲೇ ಬದುಕಿ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವ ಕೆಲ ವ್ಯಕ್ತಿಗಳು ಭಾರತದಲ್ಲಿದ್ದಾರೆ.ಗಡಿಯಲ್ಲಿ ಭಾರತೀಯ ಸೈನಿಕರು ದೇಶವನ್ನು ರಕ್ಷಣೆ ಮಾಡುತ್ತಿದ್ದರೆ,ಇಲ್ಲಿ ಸೈನಿಕರನ್ನೇ ದೂರುವ ಮನಸ್ಸಿನ ಜನಗಳಿದ್ದಾರೆ.ಅದರಲ್ಲೂ ನ್ಯಾಷನಲ್ ಕಾನ್ಫರೆನ್ಸ್ ಎಂಬ ಪಕ್ಷದ ನಾಯಕರು ತಮ್ಮ ಆತ್ಮವನ್ನು ಪಾಕಿಸ್ತಾನದಲ್ಲಿಯೇ ಬಿಟ್ಟು ಬಂದವರಂತೆ ವರ್ತಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಶನಿವಾರ ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಶಾಸಕ ಅಕ್ಬರ್ ಲೋನ್ ಎಂಬಾತ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ತನಗೆ ಪಾಕಿಸ್ತಾನವೇ ಸರ್ವಸ್ವವೂ ಎಂಬುದನ್ನು ಸಾಬೀತು ಪಡಿಸಿದ್ದಾನೆ..!

ಅಷ್ಟೇ ಅಲ್ಲ, ವಿಧಾನಸಭೆಯಿಂದ ಹೊರಗೆ ಬಂದ ಈತ ‘ನಾನು ವಿಧಾನಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ನಿಜ.ಇದು ನನ್ನ ವೈಯಕ್ತಿಕ ದ್ರಷ್ಟಿಕೋನ’ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾನೆ.ಅಕ್ಬರ್ ಲೋನ್ ನ ಈ ಹೇಳಿಕೆಗೆ ದೇಶದೆಲ್ಲೆಡೆ ತೀವ್ರ ಆಕ್ರೋಷ ವ್ಯಕ್ತವಾಗಿದೆ.ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀವ್ರ ಕೆಟ್ಟಿದ್ದು , ಇಂತಹ ಹೊತ್ತಲ್ಲೇ ಜಮ್ಮುವಿನ ಶಾಸಕ ಈ ರೀತಿ ನಡೆದುಕೊಂಡಿದ್ದು ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸಂಚಿಗೆ ಈತನೂ ಕೈಜೋಡಿಸಿಕೊಂಡಿದ್ದಾನೆಯೇ? ಎಂಬ ಅನುಮಾನವೂ ವ್ಯಕ್ತವಾಗಿದೆ…!

ಕೆಲ ದಿನಗಳ ಹಿಂದಷ್ಟೇ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಿ ಎಂದರೆ ಅಂತವರಿಗೆ ಮೂರು ವರ್ಷ ಜೈಲಿಗೆ ಹಾಕಬೇಕು ಎಂದು ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಸಂಸದ ಅಕ್ಬರುದ್ದೀನ್ ಓವೈಸಿ ,ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಲೇ ಬಂದವನು.ಆದರೆ ಜಮ್ಮುವಿನ ಶಾಸಕ ಅಕ್ಬರ್ ಲೋನ್ ನ ಈ ಹೇಳಿಕೆಗೆ ಯಾವುದೇ ಪ್ರತ್ಯುತ್ತರ ನೀಡದೇ ಇರುವುದನ್ನು ಗಮನಿಸಿದರೆ ಇಂತವರು ಭಾರತದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಪ್ರೇರೇಪಿಸುತ್ತಿರುವುದು ಕಾಣಬಹುದು.

ಭಾರತೀಯರ ರಕ್ಷಣೆಗಾಗಿ ಗಡಿಯಲ್ಲಿ ನಮ್ಮ ಸೈನಿಕರು ತಮ್ಮ ಜೀವ – ಜೀವನವನ್ನು ತ್ಯಜಿಸಿ ಹೋರಾಡುತ್ತಾರೆ.ಇಂತಹ ಸ್ಥಿತಿಯಲ್ಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಇಂತವರನ್ನು ನಿಜವಾಗಿಯೂ ಭಾರತದಿಂದ ಗಡಿಪಾರು ಮಾಡಲೇಬೇಕು…!!!

–ಅರ್ಜುನ್

Tags

Related Articles

Close