ಪ್ರಚಲಿತ

ತ್ರಿವಳಿ ತಲಾಖ್‍ಗೆ ಇನ್ನಿಲ್ಲ ಅವಕಾಶ! ಲೋಕಸಭೆಯಲ್ಲಿ ಮಂಡನೆಯಾಯ್ತು ಮಹತ್ವದ ಮಸೂದೆ! ಇನ್ನು ತಲಾಖ್ ನೀಡಿದರೆ ಮುಸ್ಲಿಂ ಪುರುಷರಿಗಿದೆ ಮಾರಿ ಹಬ್ಬ!

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಒಂದಲ್ಲಾ ಒಂದು ಮಹತ್ವದ ಘೋಷಣೆಯನ್ನು ಘೋಷಿಸುತ್ತಲೇ ಬರುತ್ತಿದೆ. ಈ ಘೋಷಣೆಗಳಲ್ಲಿ ಅತ್ಯಂತ ಕಠಿಣ ನಿರ್ಧಾರಗಳನ್ನೂ ಕೇಂದ್ರ ಕೈಗೊಂಡಿವೆ. ಕೆಲವರು ಇದನ್ನು ವಿವಾದಾತ್ಮಕ ಎಂದು ಬಣ್ಣಿಸಿದರೂ ಮತ್ತೆ ಕೆಲವರು ಐತಿಹಾಸಿಕ ನಿರ್ಧಾರವೆಂದು ಕರೆಯುತ್ತಾರೆ. ಆದರೆ ಕಳೆದ 4 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಯಾವ ನಿರ್ಧಾರವನ್ನೂ ವಾಪಾಸ್ ಪಡೆಯದೇ ಇರೋದು ಮಾತ್ರ ಕೇಂದ್ರ ಸರ್ಕಾರದ ಆಡಳಿತ ವೈಖರಿಯ ಗಂಭೀರತೆಯನ್ನು ಬಿಂಬಿಸುತ್ತದೆ.

ಸದನದಲ್ಲಿ ಮಂಡನೆಯಾಯ್ತು ತ್ರಿವಳಿ ತಲಾಖ್ ಮಸೂದೆ!

ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರ ಬಾಳಿನಲ್ಲಿ ಚೆಲ್ಲಾಟವಾಡುತ್ತಿತ್ತು. ಕೆಲ ರಾಷ್ಟ್ರಗಳಲ್ಲಿ ಇದು ನಿಷೇಧಗೊಂಡಿದ್ದರೂ ಭಾರತ ಸಹಿತ ಮತ್ತೆ ಕೆಲ ರಾಷ್ಟ್ರಗಳಲ್ಲಿ ಹಾಗೇ ಉಳಿದಿತ್ತು. ಭಾರತದಲ್ಲಿ ಅತಿಯಾದ ಜಾತ್ಯಾತೀತ ನಿಲುವು ಹಾಗೂ ಅಲ್ಪಸಂಖ್ಯಾತರ ಪರವಿದ್ದ ರಾಜಕೀಯ ನಿಲುವುಗಳೇ ಈ ದುರಂತಗಳಿಗೆಲ್ಲಾ ಕಾರಣವಾಗಿತ್ತು. ಆದರೆ ಮೋದಿ ಸರಕಾರ ಬಂದ ನಂತರ ಇಂತಹ ಚಟುವಟಿಕೆಗಳಿಗೆ ಬ್ರೇಕ್ ನೀಡಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧ ಎಂಬ ಕಠಿಣ ನಿರ್ಧಾರವನ್ನು ಘೋಷಿಸಿತ್ತು. ಭಾರತದ ಮುಸ್ಲಿಮರು ಸೇರಿದಂತೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಬೀದಿಗಿಳಿದು ಹೋರಾಟ ಮಾಡಿದ್ದರು. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಆದರೆ ಮುಸ್ಲಿಂ ಮಹಿಳೆಯರು ಮಾತ್ರ ನರೇಂದ್ರ ಮೋದಿ ಸರಕಾರವನ್ನು ಮೆಚ್ಚಿ ಕೊಂಡಾಡಿದ್ದರು. ನಮ್ಮ ಜೀವನವನ್ನು ಭಯಮುಕ್ತ ಮಾಡಿದ್ದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳ ಮಹಾ ಪೂರವನ್ನೇ ನೀಡಿದ್ದರು.

ನ್ಯಾಯಾಲಯವೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆನ್ನು ತಟ್ಟಿತ್ತು. “ನಮ್ಮ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ” ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಕೆಲವರಿಗೆ ಭಾರೀ ಮುಖಭಂಗವಾಗಿತ್ತು. ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಡನೆಗೆ ಇದ್ದಂತಹ ಅಡೆತಡೆಗಳು ಒಂದೊಂದಾಗೇ ನಿವಾರಣೆಯಾಗುತ್ತಲೇ ಬಂದಿತ್ತು. ಆವರೆಗೂ ಬೊಬ್ಬಿರಿಯುತ್ತಿದ್ದ ಕಾಂಗ್ರೆಸ್ ಪಕ್ಷ ಕೋರ್ಟ್ ಆದೇಶದಿಂದ ಕಂಗೆಟ್ಟು ಹೋಗಿತ್ತು.

Image result for modiji in cabinet meeting

ಇದೀಗ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಡನೆಯಾಗಿದೆ. ಈ ಹಿಂದೆ ಮಂಡಿಸಿದ್ದ ಮಸೂದೆಯನ್ನು ಕೊಂಚ ತಿದ್ದುಪಡಿ ಮಾಡಿದ್ದ ಮೋದಿ ಸಚಿವ ಸಂಪುಟ ಗುರುವಾರ ಲೋಕಸಭೆಯಲ್ಲಿ ಮಂಡನೆ ಮಾಡಿದೆ. ಈ ಹಿಂದಿನ ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದ್ದ ಮುಸ್ಲಿಂ ಪುರುಷರಿಗೆ ಜಾಮೀನು ರಹಿತ ಜೈಲು ಶಿಕ್ಷೆ ಎಂದು ಘೋಷಿಸಲಾಗಿತ್ತು. ಇದನ್ನು ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದವು. ಹೀಗಾಗಿ ತನ್ನ ನಿಲುವಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡ ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ನ್ಯಾಯಾದೀಶರ ನಿರ್ಧಾರದ ಮೇರೆಗೆ ಜಾಮೀನು ನೀಡಬಹುದು ಎಂದು ತಿದ್ದುಪಡಿ ಮಾಡಿ ಮಸೂದೆ ಮಂಡಿಸಲಾಗಿದೆ.

ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ರಕ್ಷಣೆ ಎಂಬ ಮಸೂದೆ ಮಂಡನೆಯಾಗಿದೆ. ಮಂಡನೆಯಾಗಿರುವ ಈ ಮಸೂದೆಯಲ್ಲಿ ಎಲ್ಲವೂ ಮುಸ್ಲಿಂ ಮಹಿಳೆಯರ ನಿರ್ಧಾರದ ಮೇಲೆಯೇ ನಿಂತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪತಿ ಪರಿಹಾರ ನೀಡಲು ಒಪ್ಪಿದರೆ ಜಾಮೀನು ನೀಡಬಹುದು ಹಾಗೂ ವಿಚ್ಚೇದನ ನೀಡಿದ ನಂತರವೂ ಪತ್ನಿ ರಾಜಿ ಸಂಧಾನಕ್ಕೆ ಒಪ್ಪಿದರೆ ಅದಕ್ಕೆ ಅವಕಾಶ ನೀಡಬಹುದು ಹಾಗೂ ನೀಡಿದ ದೂರನ್ನೂ ವಾಪಾಸ್ ಪಡೆಯಬಹುದು ಎಂದೂ ಮಸೂದೆಯಲ್ಲಿ ಮಂಡನೆ ಮಾಡಲಾಗಿದೆ. ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆ ಮುಂದೆ ರಾಜ್ಯಸಭೆಯಲ್ಲೂ ಸದ್ದು ಮಾಡಲಿದೆ.

Image result for trivali talaq

ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕಿನ ರಕ್ಷಣೆಗಾಗಿ ಅದೆಷ್ಟೋ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವ ಸರಕಾರವೂ ಇಂತಹಾ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ಧೈರ್ಯವನ್ನು ಮಾಡಿದ್ದಿಲ್ಲ. ಆದರೆ ಇದೀಗ ಪ್ರಧಾನಿ ಮೋದಿ ಸರಕಾರ ಇಂತಹಾ ಕಠಿಣ ಹಾಗೂ ಐತಿಹಾಸಿಕ ನಿರ್ಧಾರವನ್ನೂ ಕೈಗೊಂಡಿದ್ದು ಮುಸ್ಲಿಂ ಮಹಿಳೆಯರ ಪಾಲಿಗೆ ಆಶಾಕಿರಣವಾಗಿದೆ.

-ಸುನಿಲ್ ಪಣಪಿಲ

Related Articles

FOR DAILY ALERTS
 
FOR DAILY ALERTS
 
Close