ಪ್ರಚಲಿತ

ಕರ್ನಾಟಕದ ಈ ಪ್ರಸಿದ್ಧ ದೇವಾಲಯವೆಂದರೆ ರಾಹುಲ್‍ಗೇಕೆ ಭಯ?! ಅಲ್ಲಿ ಹೋದರೆ ಕೊಲೆಯಾಗುತ್ತಾರಾ?

ಈ ಕಾಂಗ್ರೆಸ್ಸಿಗರೇ ಒಂಥರಾ ಡಿಫರೆಂಟ್!! ಅವರ ಮನಸ್ಥಿತಿಯೇ ದಂದ್ವತೆಗೆ ಒಳಪಟ್ಟಿದೆ… ಕಾರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಏನೇನೆಲ್ಲಾ ಎಡವಟ್ಟು ಮಾಡಿಕೊಲ್ಳುತ್ತಿದ್ದಾರೋ ತಿಳಿಯುತ್ತಿಲ್ಲ.. ಹಿಂದೂಗಳು ಮೂಢ ನಂಬಿಕೆಯನ್ನು ನಂಬುತ್ತಿದ್ದಾರೆ ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಇದೀಗ ಕಾಂಗ್ರೆಸ್‍ನ ಯುವರಾಜನೇ ಮೂಢ ನಂಬಿಕೆಯನ್ನು ನಂಬುವಂತಾಗಿದ್ದಾರೆ..

ಕಾಂಗ್ರೆಸ್ ಮನಸ್ಥಿತಿಯು ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ದ್ವಂದ್ವತೆಗೆ ಒಳಪಟ್ಟಿದೆ ಅಂತಾನೇ ಹೇಳ ಬಹುದು.. ಅಂದು ರಾಮಾಯಣ ಮತ್ತು ಅದರೊಂದಿಗೆ ಸಂಬಂಧಿಸಿದ ಎಲ್ಲವೂ ನಕಲಿ ಎಂದು ಕಾಂಗ್ರೆಸ್ ಸರಕಾರ ಎಲ್ಲರನ್ನು ಬಲವಾಗಿ ನಂಬಿಸಲು ಹರಸಾಹಸ ಪಡುತ್ತಾರೆ. ಆದರೆ ಅದಕ್ಕೆ ತಕ್ಕ ಪುರಾವೆ ಸಿಕ್ಕಿ ರಾಮಾಯಣ ನಿಜವೆಂದು ಸಾಭೀತಾಯಿತು…

ಅದಲ್ಲದೆ ರಾಮ ನಿರ್ಮಿಸಿದ ರಾಮ ಸೇತುವನ್ನು ಕೂಡಾ ಅದೊಂದು ಮೂಢ ನಂಬಿಕೆ ಎಂದು ಬೊಬ್ಬೆ ಇಟ್ಟರು.. ಅದಕ್ಕೂ ಸರಿಯಾದ ಪುರಾವೆ ಸಿಕ್ಕಿತು.. ಹೀಗೆ ಹಲವಾರು ಬಾರಿ ಕಾಂಗ್ರೆಸ್ಸಿಗರು ಹಿಂದೂಗಳು ನಂಬಿಕೊಂಡು ಬಂದಂತಹ ಎಲ್ಲಾ ಸಂಪ್ರದಾಯಗಳನ್ನು ಮೂಢ ನಂಬಿಕೆ ಎಂದು ಜರಿಯುತ್ತಿದ್ದ ಕಾಂಗ್ರೆಸ್ಸಿಗರು ಇಂದು ತಮ್ಮದೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯೇ ಹಿಂದೂಗಳು ನಂಬಿರುವಂತಹ ಸಂಪ್ರದಾಯವನ್ನು ಪಾಲಿಸಿರುವುದು ಹೇಗೆ?!

350 ಕಿಮೀ ಬೆಂಗಳೂರಿನ ಹಂಪಿಯಲ್ಲಿ ವಿರೂಪಾಕ್ಷ ದೇವಾಲಯವಿದೆ!! ವಾಸ್ತವವಾಗಿ, ಈ ದೇವಾಲಯವು ಹಂಪಿಯಲ್ಲಿರುವ ಸ್ಮಾರಕಗಳ ಸಮೂಹವಾಗಿದೆ, ಯುನೆಸ್ಕೋದ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಗಿದೆ. ಈ ದೇವಾಲಯವು ಶಿವ ರೂಪವಾದ ವಿರೂಪಾಕ್ಷಕ್ಕೆ ಅರ್ಪಿತವಾಗಿದೆ.

ವಿರೂಪಾಕ್ಷ ದೇವಾಲಯಕ್ಕೆ ರಾಹುಲ್ ಗಾಂಧಿ ಹೋಗಲು ನಿರಾಕರಿಸಿದ್ದಾದರೂ ಏಕೆ?

ವಿರೂಪಾಕ್ಷ ದೇವಾಲಯವು ವಿಶ್ವ ಪ್ರಸಿದ್ಧಿಯನ್ನು ಹೊಂದಿರುವಂತಹದ್ದು!! ಹಂಪಿಗೆ ಹೋದರೂ ಇಷ್ಟು ಪ್ರಸಿದ್ದಿ ಹೊಂದಿರುವ ದೇವಾಲಯಕ್ಕೆ ಹೋಗಲು ರಾಹುಲ್ ಗಾಂಧಿ ಯಾಕೆ ಒಪ್ಪಲಿಲ್ಲ ಎಂಬುವುದಕ್ಕೆ ಬಲಾಢ್ಯವಾದ ಕಾರಣವಿದೆ… ಇಷ್ಟು ದಿನಗಳವರೆಗೆ ತಾನೂ ಒಬ್ಬ ಹಿಂದೂ ಎಂದು ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳಲು ಪಾಪ ಈ ಎಲ್ಲಾ ದೇವಸ್ಥಾನಗಳಿಗೆ ಹೋಗಿ ಹಣೆ ತುಂಬಾ ಕುಂಕುಮವನ್ನು ಹಾಕಿ ಹಿಂದೂಗಳನ್ನು ನಂಬಿಸಲು ಹೊರಟವರು ನಿನ್ನೆ ಮಾತ್ರ ವಿರೂಪಾಕ್ಷ ದೇವಾಲಯಕ್ಕೆ ಹೋಗಲೇ ಇಲ್ಲ!!

ಈ ದೇವಾಲಯವು ಕಲಾತ್ಮಕ ಸ್ತಂಭವಾಗಿದ್ದು ಮುಖ್ಯಮಂತ್ರಿಗಳು ಮತ್ತು ಮಾಜಿ ಪ್ರಧಾನ ಮಂತ್ರಿಗಳು ಸೇರಿದಂತೆ ಹಲವು ರಾಜಕಾರಣಿಗಳು ಈ ದೇವಾಲಯಕ್ಕೆ ಭೇಟಿ ನೀಡಲು ಭಯಪಡುತ್ತಾರೆ.!! ಇಷ್ಟು ಇತಿಹಾಸವನ್ನು ಹೊಂದಿರುವ ಈ ವಿರೂಪಾಕ್ಷ ದೇವಾಲಯಕ್ಕೆ ಒಮ್ಮೆ ರಾಜೀವ್ ಗಾಂಧಿ ಕೂಡಾ ಭೇಟಿಯಾಗಿದ್ದರು… ಭೇಟಿ ಮಾಡಿದ ನಂತರ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಯಿತು ಎಂದು ನಂಬಲಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು 1992 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತದ ನಂತರದ ಎಸ್. ಬಂಗಾರಪ್ಪನವರು ತನ್ನ ಅಧಿಕಾರವನ್ನೇ ಕಳೆದುಕೊಂಡರು ಎನ್ನಲಾಗಿದೆ… ಈ ಭಯದಿಂದನೇ ರಾಹುಲ್ ಗಾಂಧಿ ವಿರೂಪಾಕ್ಷ ದೇವಾಲಯಕ್ಕೆ ಹೋಗಲು ತಯಾರಿರಲಿಲ್ಲ!!

ಕಾಂಗ್ರೆಸ್‍ಗೆ ಭಾರೀ ಅವಮಾನ ಮಾಡಿದ ರಾಹುಲ್ ಗಾಂಧಿ!!

ಇಷ್ಟು ದಿನಗಳವರೆಗೆ ಮೂಢ ನಂಬಿಕೆಯನ್ನು ದೂರುತ್ತಿದ್ದ ಕಾಂಗ್ರೆಸ್ಸಿಗರಿಗೆ ಇಂದು ರಾಹುಲ್ ಮಾತ್ರ ಅದನ್ನೇ ಪಾಲಿಸಿ ಬಿಟ್ಟಂತಿದೆ!! ಎಲ್ಲಿ ಹೋದರೂ ಒಂದಲ್ಲ ಒಂದು ಎಡವಟ್ಟನ್ನು ಮಾಡಿಕೊಂಡು ಬರುವ ರಾಹುಲ್ ಈ ಬಾರಿ ಮತ್ತೊಮದು ಎಡವಟ್ಟು ಅಂತಾನೇ ಹೇಳಬಹುದು!! ಈ ವಿಷಯವನ್ನೆಲ್ಲಾ ಅರಿತ ರಾಹುಲ್ ಗಾಂಧಿ ತನ್ನ ಅಧಿಕಾರಕ್ಕೆ ಎಲ್ಲಿ ಕುತ್ತು ತರುತ್ತದೋ ಎಂಬ ಭಯದಿಂದ ಹಂಪಿಗೆ ಹೋದವರು ವಿರೂಪಾಕ್ಷಾ ದೇವಾಲಯಕ್ಕೆ ಹೋಗಲಿಲ್ಲ.. ಹಾಗಾದರೆ ಈ ಬಾರಿ ವಿರೂಪಾಕ್ಷ ದೇವಾಲಯಕ್ಕೆ ಹೋಗದೆ ಹಿಂದೂಗಳ ನಂಬಿಕೆಗೆ ಬೆಂಬಲಿಸಿದ್ದು ಹಾಗೂ ಸಿದ್ದರಾಮಯ್ಯ ಸರಕಾರಕ್ಕೇ ಅವಮಾನ ಮಾಡಿದ್ದಾರೆ ರಾಹುಲ್ ಗಾಂಧಿ!!

ಆದರೆ ಇಲ್ಲಿಯ ಪ್ರಧಾನ ಅರ್ಚಕರು ಹೇಳುವ ಪ್ರಕಾರ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಬರುವ ಯಾರಾದರೂ ಇಲ್ಲಿ ಕೆಲವು ಆಚರಣೆಗಳನ್ನು ಪಾಲಿಸಬೇಕು ಎಂಬ ನಿಯಗಳೊಂದಿಗೆ ಇಲ್ಲಿ ಬರಬೇಕಾಗುತ್ತದೆ.. ಆದರೆ ಇಲ್ಲಿ ಬರುವ ಕೆಲವು ರಾಜಕೀಯ ವ್ಯಕ್ತಿಗಳು ಮಾತ್ರ ತಮಗಿಷ್ಟ ಬಂದಂತೆ ವರ್ತಿಸಿದರೆ ಅದಕ್ಕೆ ದೇವರು ಕೂಡಾ ಒಪ್ಪದೆ ಅವರ ಅವನತಿಗೆ ಕಾರಣರಾಗುತ್ತಾರೆ ಎಂಬ ಮಾತನ್ನು ಸ್ವತಃ ಇಲ್ಲಿ ಅರ್ಚಕರೇ ಹೇಳುತ್ತಾರೆ…

ಆದರೆ ಸಿದ್ದರಾಮಯ್ಯವರು ಅಂದಿನಿಂದ ಹಿಂದೂಗಳು ನಂಬಿಕೊಂಡು ಬಂದಿರುವ ಎಲ್ಲಾ ನಂಬಿಕೆಗಳಿಗೂ ಅದು ಮೂಢ ನಂಬಿಕೆ ಎಂದು ಹೇಳಿ ಅದನ್ನೇ ಎಲ್ಲಾ ಸಂಪ್ರಾದಯಗಳಿಗೂ ಕಡಿವಾಣವನ್ನು ಹಾಕುತ್ತಾರೆ… ಆದರೆ ಇಂದು ರಾಹುಲ್ ಗಾಂಧಿ ಮಾಡಿದ್ದಾದರೂ ಏನು? ತಾನು ಮೂಢ ನಂಬಿಕೆಯನ್ನು ನಂಬುತ್ತೇನೆ ಎಂದು ಕಾಂಗ್ರೆಸ್ ಸರಕಾರಕ್ಕೆ ದೊಡ್ಡ ಅವಮಾನವನ್ನು ಮಾಡಿದ್ದಾರೆ..ವಕೇವಲ ಹಿಂದೂ ಧರ್ಮದಲ್ಲಿ ಮಾತ್ರವೇ ಮೂಢನಂಬಿಕೆ ಎನ್ನುವುದನ್ನು ಜಗದ್ಜಾಹೀರುಗೊಳಿಸಿ ಮಾನ ಮರ್ಯಾದೆ ಕಳೆಯಲು ಯತ್ನಿಸುತ್ತೀರಲ್ಲಾ, ಈಗ ನಿಮ್ಮ ಪಕ್ಷದ ರಾಷ್ಟ್ರೀಯಾಧ್ಯಕ್ಷನೇ ಈ ರೀತಿಯಾಗಿ ಮೂಢ ನಂಬಿಕೆಗೆ ಒಳಗಾಗಿರುವುದು ಎಷ್ಟರ ಮಟ್ಟಿಗೆ ಸರಿ?!! ಈಗ ರಾಹುಲ್ ಗಾಂಧಿ ಮಾಡಿರುವುದು ಮೂಢನಂಬಿಕೆ ಅಂತ ಅನ್ನಿಸೋದಿಲ್ವಾ..?

https://twitter.com/rishibagree/status/962287012337324033

ನೀವು ಮೂಢನಂಬಿಕೆ ಪ್ರತಿಬಂಧ ವಿಧೇಯಕವನ್ನೇನೋ ಮಂಡಿಸಿದ್ದೀರಿ. ಆದರೆ ನಿಮ್ಮ ಕಾರಿನ ಮೇಲೆ ಕಾಗೆ ಕುಳಿತುಬಿಟ್ಟಿತು ಎನ್ನುವ ಕಾರಣಕ್ಕಾಗಿ ನೀವು ನಿಮ್ಮಕಾರನ್ನೇ ಬದಲಾಯಿಸಿದ್ದೀರಲ್ವಾ ಸ್ವಾಮೀ… ಅದು ಮೂಢನಂಬಿಕೆ ಅಲ್ವಾ..? ಕೇವಲ ಕಾಗೆ ಕೂತ ಕಾರಣಕ್ಕಾಗಿ ಅಷ್ಟೊಂದು ಸುಂದರವಾಗಿರುವ ಕಾರನ್ನು ಯಾರಾದ್ರು ಬದಲಾಯಿಸುತ್ತಾರೆಯೇ..?

ನಿಮ್ಮ ಸಚಿವರುಗಳು ಅವರ ಕೊಠಡಿಗಳ ವಾಸ್ತು ಸರಿಯಿಲ್ಲ ಎಂದು ಕೊಠಡಿಗಳನ್ನು ಕೆಡವಿ, ವಾಸ್ತು ಪ್ರಕಾರ ಧಿಕ್ಕುಗಳನ್ನೇ ಬದಲಾಯಿಸಿಕೊಂಡಿದ್ದರಲ್ಲಾ. ಕೆಂಗಲ್ ಹನುಮಂತಯ್ಯ ಕಟ್ಟಿರುವ ಆ ಸುಂದರ ವಿಧಾನಸೌಧಾದ ಕೊಠಡಿಗಳನ್ನೇ ಮುರಿದು ಹಾಕಿದ್ದರಲ್ಲಾ… ಅದು ಮೂಢನಂಬಿಕೆ ಅಲ್ವಾ..? ನೀವ್ಯಾಕೆ ನಿಮ್ಮ ಸಚಿವರುಗಳನ್ನು ಪ್ರಶ್ನಿಸಿಲ್ಲಾ ಸಾಹೇಬ್ರೇ..?

ತಾನೊಬ್ಬ ಮಹಾ ನಾಸ್ತಿಕ ಎಂದು ಹೇಳಿಕೊಂಡು ಬರುತ್ತಿರುವ ತಾವು ಅನೇಕ ಬಾರಿ ನಾಸ್ತಿಕತೆಯನ್ನು ನಿರೂಪಿಸಿದ್ದೀರಿ. ಉಡುಪಿಗೆ ಆಗಮಿಸಿದರೂ ಮಠಕ್ಕೆ ಆಗಮಿಸಿಲ್ಲ, ಮಂಗಳೂರಿಗೆ ಬಂದರೂ ಕುದ್ರೊಳ್ಳಿಗೆ ಆಗಮಿಸಿಲ್ಲ. ಆದರೆ ಧರ್ಮಸ್ಥಳಕ್ಕೆ ಮೀನು ತಿಂದು ದರ್ಶನ ಮಾಡಿ ನಾಸ್ತಿಕನೆಂದು ಸಾಭೀತುಪಡಿಸುತ್ತಿದ್ದೀರ.

ಆದರೆ ಕದ್ದು ಮುಚ್ಚಿ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಶತ್ರುಸಂಹಾರ ಪೂಜೆಯನ್ನು ಮೈಸೂರಿನ ಹಳ್ಳಿಯೊಂದರಲ್ಲಿ ಮಾಡಿದ್ರಲ್ಲಾ… ಅದು ಮೂಢನಂಬಿಕೆ ಅಂತ ಅನ್ನಿಸಿಲ್ಲವೇ? ನಿಮ್ಮದೇ ಸಚಿವ ಸಂಪುಟದ ಸಚಿವರು ಮಳೆಗಾಗಿ ಯಾಗದ ಮೊರೆ ಹೋಗಿದ್ದಾಗ ನೀವೇ ಅದನ್ನೆಲ್ಲಾ ಮೂಢನಂಬಿಕೆ ಎಂದು ನಿರಾಕರಿಸಿ ಬಿಟ್ರಿ. ಆದರೆ ನಂತರ ಸುರಿದ ಭಾರೀ ಮಳೆಯಿಂದಾಗಿ ಇಡೀ ರಾಜ್ಯದ ಜನಜೀವನವೇ ಅಸ್ತವ್ಯಸ್ತವಾದಾಗ, ಸಾಕಪ್ಪಾ ಮಳೆ ಎಂದು ದೇವರ ಮೊರೆ ಹೋಗಿದ್ದಿರಿ ಅಲ್ಲವೇ?

ಒಟ್ಟಾರೆಯಾಗಿ ನಿಮ್ಮ ಸರ್ಕಾರ ಇದೆಯೆಂಬುವುದೇ ಮೂಢನಂಬಿಕೆಯಾಗಿದೆ. ಮೊದಲು ಅದನ್ನು ನಿಷೇಧಿಸಬೇಕಾಗಿದೆ. ಅದನ್ನು ನೀವು ನಿಷೇಧಿಸುವುದಲ್ಲ. ಬದಲಾಗಿ ಜನರೇ ನಿಷೇಧಿಸುತ್ತಾರೆ. ಈ ರಾಜ್ಯದ ಅತಿ ದೊಡ್ಡ ಮೂಢನಂಬಿಕೆಯಾದ “ಕಾಂಗ್ರೆಸ್” ಎಂಬ ಪಕ್ಷವನ್ನು ಶಾಶ್ವತವಾಗಿ ನಿಷೇಧಿಸುವತ್ತ ಜನರು ಈಗಾಗಲೇ ತೀರ್ಮಾನಿಸಿಯಾಗಿದೆ. ಹೌದು… ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಲು ಜನರು ತೀರ್ಮಾನಿಸಿ ಆಗಿದೆ.

ಹೀಗಾಗಿಯೇ ತನ್ನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕೆನ್ನುವ ಉದ್ಧೇಶದಿಂದ ಈ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡಿಸಿದ್ದಾರೆ ಅಷ್ಟೇ… ಅಷ್ಟಾದರೂ ಅಲ್ಪಸಂಖ್ಯಾತ ಓಲೈಕೆಯನ್ನು ಮಾತ್ರ ಬಿಟ್ಟೇ ಇಲ್ಲ ಈ ಸಿದ್ದರಾಮಯ್ಯ. ಇರಲಿ… ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯದ ಅತಿ ದೊಡ್ಡ ಮೂಢನಂಬಿಕೆಯಾದ ಕಾಂಗ್ರೆಸ್ಸನ್ನು ಮತದಾರರು ನಿಷೇಧಿಸಿ ದೊಡ್ಡ ಸಾಧನೆ ಮಾಡಬೇಕಾಗಿದೆ. ಇದರೊಂದಿಗೆ ಮತದಾರರೂ ತಮ್ಮ ಹೆಸರನ್ನು ಇತಿಹಾಸದಲ್ಲಿ ಬರೆದುಕೊಳ್ಳಬೇಕಾಗಿದೆ. ಪಾಪ ಕೊನೆಗೂ ರಾಹುಲ್ ಗಾಂಧಿ ಇಂತಹ ನಂಬಿಕೆಗಳನ್ನು ನಂಬಿದ್ದಾರಂತಾಯಿತು ಬಿಡಿ!!

ಪವಿತ್ರ

Tags

Related Articles

Close