ಅಂಕಣ

ಕಂಡೂ ಕೇಳರಿಯದ ಬದಲಾವಣೆ ಆಗಲಿದೆ ಮೋದಿ ಭಾರತದಲ್ಲಿ! ಕೊಟ್ಟ ಭರವಸೆ ಪೂರ್ಣಗೊಳಿಸುವತ್ತ ನಮೋ ಚಿತ್ತ!

ನರೇಂದ್ರ ಮೋದಿ ಎಂಬ ಶಕ್ತಿಗೆ ದೇಶದ ಜನತೆ ಸತತ ಎರಡನೇ ಬಾರಿಗೆ ಬಹುಮತ ಕೊಟ್ಟು ಪ್ರಧಾನಿ ಪಟ್ಟಕ್ಕೆ ಏರಿಸಿದ್ದು ದೇಶದ ಜನರಿಗೆ ತಮ್ಮ ಆಸೆ ಬೇಡಿಕೆಗಳನ್ನು ಮೋದಿ ಈಡೇರಿಸುತ್ತಾರೆ ಎಂಬ ನಂಬಿಕೆ ಬಲವಾಗಿ ಇದೆ.‌ಯಾಕೆಂದರೆ ಕಳೆದ ಐದು ವರ್ಷದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಯಾವ ರೀತಿ ದೇಶದಲ್ಲಿ ಬದಲಾವಣೆ ಮಾಡಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಹೀಗಿರುವಾಗ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಧೃಡ ನಂಬಿಕೆಯೊಂದಿಗೆ ಮೋದಿಯವರಿಗೆ ಎರಡನೇ ಅವಕಾಶ ನೀಡಿದ ದೇಶದ ಜನತೆ ಈ ಬಾರಿ ತಮ್ಮ ಎಲ್ಲಾ ನಂಬಿಕೆಗಳು ನಿಜವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ‌ಯಾವುದೇ ಪಕ್ಷ ಗೆದ್ದರೂ ಕೆಲವು ತಿಂಗಳುಗಳವರೆಗೆ ಕೇವಲ ಸಂಭ್ರಮಾಚರಣೆ ಮಾಡುತ್ತಲೇ ಸಮಯ ಕಳೆದರೆ ಮೋದಿ ಸರಕಾರ ಈ ಬಾರಿ ವಿಭಿನ್ನವಾಗಿ ನಡೆದುಕೊಂಡಿದೆ. ಹೌದು ಈ ಕಳೆದ ಬಾರಿ ಮೋದಿ ಸರಕಾರ ಬಹುಮತದಿಂದ ಗೆದ್ದಾಗ ಇಡೀ ದೇಶವೇ ಸಂಭ್ರಮಾಚರಣೆ ಮಾಡುತ್ತಾ ಇತ್ತು, ಮಾತ್ರವಲ್ಲದೆ ಮೋದಿ‌ ಸರಕಾರ ಕೂಡ ಕೆಲ ಸಮಯದವರೆಗೆ ಸಂಭ್ರಮಾಚರಣೆಯಲ್ಲಿ ಇತ್ತು. ಹೀಗಾಗಿ ಕೆಲವೊಂದು ಮಹತ್ತರವಾದ ನಿರ್ಧಾರ, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ಎರಡು ವರ್ಷಗಳೇ ಬೇಕಾಯಿತು. ಆದರೂ ಮೋದಿಯವರು ಜಾರಿಗೊಳಿಸಿದ ಯೋಜನೆಗಳಾಗಲಿ, ಕೈಗೊಂಡ‌ ನಿರ್ಧಾರಗಳಾಗಲಿ ವಿಫಲವಾಗಿಲ್ಲ ಎಂಬುದು ಸ್ಪಷ್ಟ.!

ಈ ಬಾರಿ ಮೋದಿ ಸರಕಾರದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಕೆಲಸ ಕಾರ್ಯಗಳು ಆರಂಭವಾಗಿದೆ. ಇಡೀ ದೇಶದಲ್ಲಿ ಕೇಸರಿ ಪಡೆ ಸಂಭ್ರಮಾಚರಣೆ ನಡೆಸುತ್ತಿದ್ದರೆ, ಅತ್ತ ಮೋದಿ ಸರಕಾರ ಮಹತ್ವದ ನಿರ್ಧಾರಕ್ಕೆ ಸಹಿ ಹಾಕಿ, ದೇಶದಲ್ಲಿ ಹೊಸ ಬದಲಾವಣೆ ತರಲು ಸಜ್ಜಾಗಿದ್ದಾರೆ. ಹೌದು 2014ರಲ್ಲಿ ಮೋದಿ ಸರಕಾರದ ಮೇಲೆ ನಂಬಿಕೆಯಿಟ್ಟ ದೇಶದ ಜನತೆ ಮೋದಿಯವರಿಗೆ ಬಹುತೇಕ ನೀಡಿ ಗೆಲ್ಲಿಸಿದ್ದರು.‌ಅದರಂತೆ ನಡೆದುಕೊಂಡು ಬಂದ ಮೋದಿ ತಾವು ನೀಡಿದ ಭರವಸೆಗಳನ್ನು ಒಂಚೂರು ತಪ್ಪದೆ ಈಡೇರಿಸಿದ್ದಾರೆ. ಆದರೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕೆಲವೊಂದು ವಿಚಾರಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ‌ ಕೈಗೊಳ್ಳದೇ ಇದ್ದರೆ ಮುಂದೊಂದು ದಿನ ಭಾರತ ಅಪಾಯದ ಹಾದಿಗೆ ಹೋಗುವದರಲ್ಲಿ ಸಂಶಯವಿಲ್ಲ ಎಂಬುದು ಸದ್ಯ ಪ್ರತಿಯೊಬ್ಬರಿಗೂ ಅರಿವಾಗಿದೆ. ಇದನ್ನೇ ಅರಿತುಕೊಂಡ ಮೋದಿ ಸರಕಾರ ಈ ಬಾರಿ ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕ್ರಮ‌ ಕೈಗೊಳ್ಳುವ ಸಾಧ್ಯತೆ ಹೆಚ್ಚು ಇದೆ.!

ಹೌದು ಈಗಾಗಲೇ ಕೇಂದ್ರ ಗೃಹ ಸಚಿವರಾಗಿ ನೇಮಕಗೊಂಡ ಅಮಿತ್ ಶಾ ಇಂದು ತಮ್ಮ ಮೊದಲ ಸಭೆಯಲ್ಲೇ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದಾರೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಹುಟ್ಟಡಗಿಸಲು ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ ಶಾ, ಭಯೋತ್ಪಾದನೆ ಸಂಪೂರ್ಣ ನಾಶವಾಗಲೇಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆರ್ಟಿಕಲ್ 35A ರದ್ದು ಸೇರಿದಂತೆ ಅನೇಕ ಸವಾಲುಗಳು ಮೋದಿ ಸರಕಾರದ ಮುಂದಿದ್ದರೆ, ಇತ್ತ ಚೀನಾ ಪಾಕಿಸ್ತಾನದ ಹುಟ್ಟಡಗಿಸುವ ಕೆಲಸವೂ ನಡೆಯಬೇಕಾಗಿದೆ. ಆದ್ದರಿಂದ ಈ ಬಾರಿ ಮೋದಿ ಸರಕಾರ ಹೊಸ ಕ್ರಾಂತಿ ಸೃಷ್ಟಿಸುವುದು ಖಂಡಿತ ಎಂಬ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.!

ರಾಮಮಂದಿರ ನಿರ್ಮಾಣ, ಬಡತನ ನಿರ್ಮೂಲನೆ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ, ಹೀಗೆ ಕೆಲವೊಂದು ಸವಾಲುಗಳು ಕೇಂದ್ರ ಸರಕಾರದ ಮುಂದಿದೆ. ಒಂದೆಡೆ ಪ್ರಧಾನಿ ಮೋದಿಯವರು 2022ಕ್ಕೆ ತಮ್ಮ ಕನಸಿನ ಭಾರತವನ್ನು ನಿರ್ಮಾಣ ಮಾಡಿಯೇ ಸಿದ್ಧ ಎಂದು ಹೇಳಿಕೊಂಡಿದ್ದು ಅದನ್ನೂ ಪೂರೈಸಬೇಕಾದ ಜವಾಬ್ದಾರಿ ಮೋದಿಯವರ ಮೇಲಿದೆ. ಆದ್ದರಿಂದ ಈ ಬಾರಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮೋದಿ ಸರಕಾರ ಹೆಚ್ಚು ಸಮಯ ಕಾಯುವ ಹಾಗಿಲ್ಲ ಮತ್ತು ಮೋದಿ ಸರಕಾರ ಇನ್ನೇನು ಆರು ತಿಂಗಳಲ್ಲಿ ಮಹತ್ತರವಾದ ನಿರ್ಧಾರ ಕೂಡ ಕೈಗೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close