ಅಂಕಣ

ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರ ಸೊಲ್ಲಡಗಿಸಲು ಟೊಂಕ ಕಟ್ಟಿ ನಿಂತಿದ್ದಾರೆ ಜಗತ್ತಿನೆಲ್ಲೆಡೆಯ ಎಡಪಂಥೀಯರು!! ಎಡಪಂಥೀಯರ “ಕೈ” ಮೇಲಾದರೆ ಬಲಪಂಥೀಯ ಮಾಧ್ಯಮಗಳಿಗಿಲ್ಲ ಉಳಿಗಾಲ!!

ಜಗತ್ತಿನೆಲ್ಲೆಡೆ ಬಲಪಂಥೀಯರ ಅನಿಸಿಕೆ ಅಭಿಪ್ರಾಯಗಳಿಗೆ ಬಲ ತುಂಬಿದ್ದೆ ಸಾಮಾಜಿಕ ಜಾಲತಾಣಗಳು. ಈ ಸಾಮಾಜಿಕ ಜಾಲತಾಣಗಳಿಂದಾಗಿಯೆ ಇವತ್ತು ಬಲಪಂಥೀಯರು ಬಲಿಷ್ಟರಾಗಿ ಎಡಪಂಥೀಯರು ಮೂಲೆಗುಂಪಾಗಿದ್ದಾರೆ. ದಶಕಗಳಿಂದ ತಾವು ಕಟ್ಟಿದ ಸುಳ್ಳಿನ ಸೌಧಗಳನ್ನು ಕ್ಷಣ ಮಾತ್ರದಲ್ಲಿ ಪುಡಿಗಟ್ಟಿ ಧೂಳೀಪಟ ಮಾಡುತ್ತಿದ್ದಾರೆ ಬಲ ಪಂಥೀಯರು. ಮುಖ್ಯಧಾರೆಯ ಎಲ್ಲಾ ಮಾಧ್ಯಮಗಳನ್ನು ಆಳುತ್ತಿದ್ದ ಎಡಪಂಥೀಯರ ಏಕಚಕ್ರಾಧಿಪತ್ಯಕ್ಕೆ ಸಡ್ಡು ಹೊಡೆದು ಭಾರತದಲ್ಲಿಯೂ ಹಿಂದೂಗಳಿಗೆ ಧ್ವನಿಯೆತ್ತುವ ಅಧಿಕಾರವಿದೆ ಎಂದು ತೋರಿಸಿಕೊಟ್ಟದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಲಪಂಥೀಯ ಮಾಧ್ಯಮಗಳು.

ಜಗತ್ತಿನ ಎಲ್ಲಾ ಎಡಪಂಥೀಯ ಪಕ್ಷಗಳಾದ ಡೆಮೋಕ್ರಾಟ್, ಲೇಬರ್, ಯುರೋಪಿಯನ್ ಘಟಕಗಳ ಸದಸ್ಯರು, ಮುಖ್ಯಧಾರೆಯ ಮಾಧ್ಯಮಗಳು ಮತ್ತು ಅವರ ಬೆಂಬಲಿಗ ಎನ್.ಜಿ.ಒ ಗಳು ಹಾಗೂ ಅಕಾಡಮಿಗಳು ಸಂಪ್ರದಾಯವಾದಿ ಅಥವಾ ಬಲಪಂಥೀಯ ಧ್ವನಿಗಳನ್ನು ಉಸಿರುಗಟ್ಟಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಇತೀಚೆಗೆ ಬಲಪಂಥೀಯರ ಧ್ವನಿಯನ್ನು ಅಡಗಿಸಲು ಇವರು ದಾಳವಾಗಿ ಬಳಸಿಕೊಂಡದ್ದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರನ್ನು! ಸುಶ್ಮಾ ಸ್ವರಾಜ್ ಗೆ ಟ್ವಿಟರಾಟಿಗಳು ಕೊಟ್ಟ ಮಾತಿನೇಟುಗಳನ್ನು ಬಹು ದೊಡ್ಡ ಅಪರಾಧವೆಂಬತೆ ಬಿಂಬಿಸಿ ಆಕೆಯ ಬೆಂಬಲಕ್ಕೆ ನಿಂತ ಎಡಪಂಥಿಯರು ಈ ಬೆಂಕಿಯಲ್ಲಿ ತಮ್ಮ ರೊಟ್ಟಿ ಸುಟ್ಟುಕೊಂಡಿದ್ದಾರೆ.

ಈ ಎಡಪಂಥೀಯರು ಸಾಮಾಜಿಕ ಜಾಲತಾಣಗಳ ಬಲಪಂಥೀಯರ ಮೇಲೆ ಕಾಳಿಂಗ ಮರ್ದನ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರು ತರಹೇವಾರಿ ಕಾರ್ಯತಂತ್ರಗಳನ್ನು ಉಪಯೋಗಿಸುತ್ತಾರೆ.

1.ಆನ್ ಲೈನ್ ಮಾಧ್ಯಮಗಳು ನಕಲಿ, ಫೇಕ್ ನ್ಯೂಸ್ ರಚಿಸುತ್ತವೆ ಮತ್ತು ಜನರಲ್ಲಿ ದ್ವೇಷ ಭಾವನೆ ಬಿತ್ತಿ ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ಗುಲ್ಲೆಬ್ಬಿಸುವುದು

2.ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳಿಂದ ದೈಹಿಕ ಹಲ್ಲೆಗಳಾಗುತ್ತವೆ ಎನ್ನುವ ಭಾವನೆಯನ್ನು ಜನರಲ್ಲಿ ಬಿತ್ತುವುದು. ಇವೆಲ್ಲದರ ಜೊತೆಗೆ ವರ್ಣಭೇದ ನೀತಿ, ಸ್ತ್ರೀವಾದ ಮುಂತಾದ ವಿಷಯಗಳನ್ನು ಮಿಶ್ರಣ ಮಾಡಿ ಚೌ ಚೌ ಬಾತ್ ಮಾಡುವುದು ಮತ್ತು ಜನರನ್ನು ದಾರಿ ತಪ್ಪಿಸುವುದು.

3.ಬಲಪಂಥೀಯ ವೆಬ್ ಸೈಟ್ ಗಳ ಜೊತೆ ಜಾಹೀರಾತು ಬ್ರಾಂಡ್ ಗಳು ಮತ್ತು ಪ್ರತಿಷ್ಟಿತ ಕಂಪನಿಗಳು ಹೊಂದಿರುವಂತಹ ವ್ಯಾಪಾರ ವಹಿವಾಟನ್ನು ಹಿಂತೆಗೆಯುವಂತೆ ಒತ್ತಡ ಹೇರುವುದು ಅಂತೆಯೆ ಅವರ ನೌಕರರು ಹಾಗೂ ಜಾಲತಾಣಗಳನ್ನು ಬೆದರಿಸುವುದು.

4.ನಿಮಗೆ ಗೊತ್ತಿರಲಿ, ಯಾಹೂ, ಫೇಸ್ ಬುಕ್, ಟ್ವಿಟರ್, ಗೂಗಲ್, ಅಮಜಾನ್, ಲಿಂಕ್ಡ್ ಇನ್ ಮುಂತಾದ ಕಂಪನಿಗಳ ಸಿ.ಇ.ಓ ಗಳು ಎಡಪಂಥೀಯ ವಿಚಾರಧಾರೆಯುಳ್ಳವರು ಮತ್ತು ತಮ್ಮ ದೇಶದ ಎಡಪಕ್ಷಗಳಿಗೆ ಕೋಟ್ಯಂತರ ರುಪಾಯಿಯ ದೇಣಿಗೆಗಳನ್ನು ಈ ಕಂಪನಿಗಳು ನೀಡುತ್ತಿವೆ.

5.ಈ ಎಡಪಂಥೀಯರು ಸಾಮಾಜಿಕ ಜಾಲತಾಣಗಳನ್ನೆ ನೇರವಾಗಿ ಗುರಿಯಾಗಿಸಲು ವಿವಾದಗಳನ್ನು ಬಳಸುತ್ತಾರೆ. ಬಲಪಂಥೀಯ ವೆಬ್ ಸೈಟ್ ಗಳ ಸಂಪಾದಕರನ್ನು ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಬ್ಯಾನ್ ಮಾಡುವಂತೆ ಮಾಡುತ್ತಾರೆ. ಉದಾ Breitbart.com ನ ಸಂಪಾದಕ Milo Yiannopoulos ಅನ್ನು ಟ್ವಿಟರ್ ಬ್ಯಾನ್ ಮಾಡಿದೆ. ಹಾಗೆಯೆ ಕೆಂಬ್ರಿಡ್ಜ್ ಅನಾಲಿಟಿಕಾದಂತಾಹ ವಿವಾದಗಳಾದ ಫೇಸ್ ಬುಕ್ ಅನ್ನೆ ತ್ಯಜಿಸಬೇಕೆಂದು ಟ್ರೆಂಡ್ ಸೃಷ್ಟಿ ಮಾಡಲಾಗಿತ್ತು. ಇವೆಲ್ಲ ಜನರು ಸಾಮಾಜಿಕ ಜಾಲತಾಣಗಳನ್ನು ತಾವಾಗಿಯೆ ತ್ಯಜಿಸಲಿ ಎಂದು ಎಡಪಂಥೀಯರು ಮಾಡುವ ಕುತಂತ್ರಗಳು.

6.ಪುನರಾವರ್ತಿತ ಸುದ್ದಿ ಚಕ್ರದ ಉತ್ತುಂಗ ಮತ್ತು ಈ ವಿಷಯದ ಬಗ್ಗೆ ಏಕಪಕ್ಷೀಯ ಚರ್ಚೆಗಳನ್ನು ತಲುಪಿದ ನಂತರ, ವಾಕ್ ಸ್ವಾತಂತ್ರದ ವ್ಯಾಖೆಯನ್ನೆ ಬದಲಾಯಿಸಿ ಫೇಕ್ ನ್ಯೂಸ್ ಮತ್ತು ದ್ವೇಷ ಭಾಷಣಗಳನ್ನು ವರ್ಗೀಕರಿಸಿ ಅವುಗಳ ಮೇಲೆ ಕಾನೂನು/ಶಾಸನ ರೂಪಿಸುವಂತೆ ಸರಕಾರಗಳನ್ನು ಒತ್ತಾಯಿಸುವುದು. ಈ ತೆರನಾದ ಕೇಸುಗಳು ಜರ್ಮನಿ, ಆಸ್ಟ್ರೇಲಿಯಾ, ಬ್ರಿಟನ್, ಸ್ವೀಡನ್ ಗಳಲ್ಲಿ ನಡೆದಿವೆ.

7.ಬಲಪಂಥೀಯರನ್ನು ಜೈಲಿಗೆ ತಳ್ಳುವುದು( ಬ್ರಿಟನಿನಲ್ಲಿ) ಸಾಮಾಜಿಕ ಜಾಲತಾಣಗಳ ಕಾನೂನನ್ನು ಉಲ್ಲಂಘಿಸಿದವರಿಗೆ(ಜರ್ಮನಿಯಲ್ಲಿ) ದಂಡ ವಿಧಿಸುವುದರ ಮೂಲಕ ಬಲಪಂಥೀಯರ ಸೊಲ್ಲಡಗಿಸಲಾಗುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗೆ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಬಂಧಿಸಿದ್ದು ಬಲಪಂಥೀಯರ ಧ್ವನಿಯಡಗಿಸುವ ಷಡ್ಯಂತ್ರದ ಭಾಗವಾಗಿತ್ತು.

8.ದ್ವೇಷ ಭಾಷಣವನ್ನು ವ್ಯಾಖ್ಯಾನಿಸಲು ಮತ್ತು ಮೇಲ್ವಿಚಾರಣೆ ಮಾಡಲು ಎಡ ಪ್ರಾಬಲ್ಯದ ಗುಂಪುಗಳು ಮತ್ತು ‘NGO’ ಗಳನ್ನು ಅಧಿಕೃತವಾಗಿ ನೇಮಿಸುವುದು. ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಸೇವೆಗಳನ್ನು ತೆಗೆದುಕೊಳ್ಳುವಂತೆ ಮಾಡುವುದು. ಗೂಗಲ್ ಮತ್ತು ರೆಡಿಟ್ ನಂತಹ ದೈತ್ಯ ಕಂಪನಿಗಳು ಎಡಪಂಥಕ್ಕೆ ವಾಲಲು ಈ ಗುಂಪುಗಳು ಮತ್ತು NGO ಅವರ ಚಿಂತನೆಯ ಕ್ರಮಗಳನ್ನು ಬದಲಾಯಿಸಿದ್ದೆ ಕಾರಣ. ಯೂ ಟ್ಯೂಬಿನ ಮಾತೃ ಸಂಸ್ಥೆ ಗೂಗಲ್ ಇಂತಹ ಹಲವಾರು ಸ್ವಘೋಷಿತ ದ್ವೇಷ ಭಾಷಣ ಮೇಲ್ವಿಚಾರಕ ಪೋಲೀಸರನ್ನು ನೇಮಿಸಿದೆ. ಇವರು ಅನಾಮಿಕರಾಗಿ ಕೆಲಸ ಮಾಡುತ್ತಾ ಯೂ ಟ್ಯೂಬಿನಲ್ಲಿ ಬರುವ ವಿಷಯಗಳಿಗೆ ದ್ವೇಷ ಭಾಷಣ ಎನ್ನುವ ಪಟ್ಟಿ ಕಟ್ಟಿ ಸಂಪ್ರದಾಯವಾದಿಗಳ ಧ್ವನಿಯನ್ನು ದಮನಿಸುತ್ತಿದ್ದಾರೆ.

9.ಸಾಮಾಜಿಕ ಮಾಧ್ಯಮದ ದೈತ್ಯರು ತಮ್ಮ ಪ್ರತಿಸ್ಪರ್ಧಿ ವೇದಿಕೆಗಳು ಮತ್ತು ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಮೂಲಕ ತಮ್ಮ ಏಕಸ್ವಾಮ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. 98% ಸ್ಮಾರ್ಟ್ ಫೋನ್ ಓಎಸ್ ಪಾಲುದಾರಿಕೆ ಹೊಂದಿರುವ ಆಪಲ್ ಮತ್ತು ಗೂಗಲ್ ಕಂಪನಿಗಳು ಇದೆ ರೀತಿ ತಮ್ಮ ಪ್ರತಿಸ್ಪರ್ಧಿಗಳನ್ನು ದಮನ ಮಾಡಿವೆ.

10.ಅಂತಿಮವಾಗಿ ಚೆಕ್ ಮೇಟ್ ನಡೆಯಲ್ಲಿ ಬಲಪಂಥೀಯ-ಸಂಪ್ರದಾಯವಾದಿ ಪಕ್ಷ-ಮಾಧ್ಯಮ ಮತ್ತು ಅವರ ಬೆಂಬಲಿಗರನ್ನು ಬಂಧಿಸುವುದು ಇಲ್ಲ ಅವರ ಮೇಲೆ ನಿಷೇಧ ಹೇರುವುದು ಇದೆ ಈ ಎಡಪಂಥೀಯರ ಲಕ್ಷ್ಯ. ಭಾರತದಲ್ಲಿ ಬರಖಾ, ರವೀಶ್, ಆರುಂಧತಿ, ಜಿಗ್ನೇಶ್, ಉಮರ್ ಖಾಲಿದ್ ನಂತಹವರು ಏನೇ ಮಾಡಿದರೂ, ದೇಶದ್ರೋಹದ ಘೋಷಣೆ ಕೂಗಿದರೂ ಅವರ ಮೇಲೆ ಯಾವ ಕ್ರಮವೂ ಜರುಗುವುದಿಲ್ಲ. ತಮಗೆ ವಾಕ್ ಸ್ವಾತ್ರಂತ್ರ್ಯವಿದೆ ಎಂದು ಇವರೆಲ್ಲ ಮೇಜು ಕುಟ್ಟಿ ಕುಟ್ಟಿ ವಾದ ಮಾಡುತ್ತಾರೆ. ಇವರು ತಮ್ಮ ಮಾಧ್ಯಮ-ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಬಹುದು. ಆದರೆ ಬಲಪಂಥೀಯರು ಸತ್ಯ ಬರೆದರೂ ಅದನ್ನು ಫೇಕ್ ನ್ಯೂಸ್ ಎಂದು ವರ್ಗೀಕರಿಸುತ್ತಾರೆ! ಬಲಪಂಥೀಯರ ಮೇಲೆ ಸದಾ ಕತ್ತಿ ಮಸೆಯುತ್ತಿರುತ್ತಾರೆ ಇವರೆಲ್ಲ.

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಇತ್ತೀಚೆಗೆ ನಡೆದ ಸುಶ್ಮಾ ಸ್ವರಾಜ್ ಟ್ವಿಟರ್ ವಿವಾದ ಎಡಪಂಥೀಯರಿಗೆ ‘ಬಲ’ ತುಂಬಿದೆ. ಒಂದು ವೇಳೆ 2019 ರಲ್ಲಿ ಮೋದಿ ಸೋತು ತೃತೀಯ ರಂಗವೇನಾದರೂ ಅಧಿಕಾರಕ್ಕೆ ಬಂದರೆ ಅದು ಮೊದಲು ಮಾಡುವ ಕೆಲಸವೆ ಬಲಪಂಥೀಯ ಮಾಧ್ಯಮಗಳ ಮತ್ತು ಬೆಂಬಲಿಗರ ಬೆನ್ನು ಮೂಳೆ ಮುರಿಯುವಂತಹ ಕಾನೂನು ರೂಪಿಸುವುದು. ವೆಟಿಕನ್ ಪುಂಗಿಗೆ ತಲೆಯಾಡಿಸುವ ಪಕ್ಷಗಳ ಮತ್ತು ಮುಖ್ಯಧಾರೆಯ ಮಾಧ್ಯಮಗಳ ಬಹು ದೊಡ್ಡ ಶತ್ರು ಬಲಪಂಥೀಯ ಮಾಧ್ಯಮ. ಹಾಗಾಗಿ ಬಲಪಂಥೀಯರ ಹುಟ್ಟಡಗಿಸಲು ಸೈನ್ಯ ತಯಾರು ಮಾಡಿ ನಿಂತಿವೆ ಎಡ ರಣ ಹದ್ದುಗಳು. 2019 ರ ಚುನಾವಣೆಯ ಮುನ್ನ ಎಲ್ಲಾ ಬಲಪಂಥೀಯ ಮಾಧ್ಯಮಗಳ ಮೇಲೆ ಸವಾರಿ ಮಾಡಿ, ಮೋದಿ ಅವರನ್ನು ಸೋಲಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸುವುದೆ ಈ ಎಡಪಂಥೀಯರ ಪರಮಗುರಿ. ಎಚ್ಚರ ಬಲಪಂಥೀಯರೆ ಎಚ್ಚರ….

-ಶಾರ್ವರಿ

Source
opindia
Tags

Related Articles

FOR DAILY ALERTS
 
FOR DAILY ALERTS
 
Close