ಪ್ರಚಲಿತ

ಚಕ್ರವರ್ತಿ ಸೂಲಿಬೆಲೆ ಹೇಳಿದ ಅಜ್ಜಿ ಮತ್ತು ಸೈನಿಕನ ಕಥೆ-ಮೋದಿಗಾಗಿ ನಾವು…

೨೦೧೯ರ ಲೋಕಸಭಾ ಚುನಾವಣೆ ಬಂದೇ ಬಿಡ್ತು. ಕಳೆದ ಐದು ವರ್ಷದಿಂದ ಕಾಂಗ್ರೆಸ್ ಸಹಿತ ಮೋದಿ ವಿರೋಧಿಗಳು ಅದೆಷ್ಟು ಉರಿದುಕೊಳ್ಳುತ್ತಿದ್ದರು ಎಂದರೆ ೨೦೧೯ರ ಲೋಕಸಭಾ ಚುನಾವಣೆ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದರು. ಆದರೆ ಈ ಚುನಾವಣೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸುವುದು ಸುಲಭದ ಸಬ್ಜೆಕ್ಟ್ ಅಲ್ಲ ಎಂಬುವುದು ಮನವರಿಕೆಯಾಗಿದೆ. ಲೋಕಸಮರ ಹತ್ತಿರ ಬರುತ್ತಿದ್ದಂತೆಯೇ ದೇಶ ಚುನಾವಣೆಗೆ ಎಷ್ಟರ ಮಟ್ಟಿಗೆ ಸಜ್ಜಾಗಿದೆಯೆಂದರೆ ಈ ಬಾರಿ ಮತ ಕೇಳಲು ಬಿಜೆಪಿಗರು ಮನೆಗೆ ಬರುವ ಅಗತ್ಯವೇ ಇಲ್ಲ, ಮೋದಿಗಾಗಿ ನಾವೇ ಗಲ್ಲಿ ಗಲ್ಲಿಗೂ ಸುತ್ತುತ್ತೇವೆ ಎಂದು ಹೇಳುವಷ್ಟರ ಮಟ್ಟಿಗೆ ಮೋದಿ ಅಲೆ ನಿರ್ಮಾಣವಾಗಿದೆ.

ಬಿಜೆಪಿಯೇತರವಾಗಿ ಮೋದಿ ಪರವಾಗಿ ಕರ್ನಾಟಕದಲ್ಲಿ ಮತಪ್ರಚಾರ ನಡೆಸುವ ಅನೇಕ ತಂಡಗಳಲ್ಲಿ ಮತ್ತೊಂದು ಪ್ರಬಲವಾದ ತಂಡವೆಂದರೆ ಅದು ಪ್ರಖರ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ನೇತೃತ್ವದ “ಟೀಂಮೋದಿ” ತಂಡ. ರಾಜ್ಯದ ಮೂಲೆ ಮೂಲೆಗೂ ತೆರಳಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನಗಳನ್ನು ಜನತೆಗೆ ಮನಮುಟ್ಟುವಂತೆ ತಿಳಿಸಿ ಮತಗಟ್ಟೆಗೆ ಬರುವಾಗ ಮೋದಿಗೆ ಮತಬೀಳುವ ಹಾಗೆ ಕೆಲಸ ಮಾಡುತ್ತಿದ್ದಾರೆ ಚಕ್ರವರ್ತಿ ಸೂಲಿಬೆಲೆ.

ಇತ್ತೀಚೆಗೆ ಮಂಟಾರು ಎಂಬಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಅಜ್ಜಿಯೋರ್ವರ ಕಥೆ ಹೇಳಿದ್ದು ಮೋದಿಗಾಗಿ ಜನರ ನಾಡಿ ಮಿಡಿತ ಯಾವ ರೀತಿ ಸ್ಪಂಧಿಸುತ್ತಿದೆ ಎಂಬುವುದನ್ನು ಅರಿತುಕೊಳ್ಳಬಹುದಾಗಿದೆ. ಒಂದು ದಿನ ಚಕ್ರವರ್ತಿ ಸೂಲಿಬೆಲೆಯವರ ಟೀಂ ಮೋದಿ ಕಚೇರಿಯ ಎಲ್ಲಾ ಸ್ಥಳಗಳನ್ನು ಓರ್ವ ಅಜ್ಜಿ ಸುತ್ತುತ್ತಿದ್ದಳಂತೆ. ಈ ಅಜ್ಜಿಯ ನಡೆ ಚಕ್ರವರ್ತಿ ಸೂಲಿಬೆಲೆಯವರಿಗೆ ಆಶ್ಚರ್ಯವನ್ನುಂಟುಮಾಡಿತ್ತು. ಚಕ್ರವರ್ತಿ ಆ ಅಜ್ಜಿಯನ್ನು ಕರೆದು ಕೇಳಿಯೇಬಿಟ್ಟರು. “ಏನಜ್ಜೀ, ಕೊಠಡಿಯೆಲ್ಲಾ ಸುತ್ತುತ್ತಿದ್ದೀಯಾ ಏನು ವಿಷಯ?” ಚಕ್ರವರ್ತಿ ಸೂಲಿಬೆಲೆಯವರ ಪ್ರಶ್ನೆಗೆ ಅಜ್ಜಿಯ ಉತ್ತರ ಸ್ವತಃ ಚಕ್ರವರ್ತಿಯವರನ್ನೇ ಮೂಕವಿಸ್ಮಿತರನ್ನಾಗಿ ಮಾಡಿತ್ತು.

“ನನ್ನ ಮಗ ನಿಮ್ಮ ಕೆಲಸವನ್ನು ಕಂಡು ವಿದೇಶದಿಂದ ಕರೆ ಮಾಡಿ 35 ಸಾವಿರ ರೂ. ಕೊಟ್ಟು ಬನ್ನಿ ಎಂದು ಹೇಳಿದ್ದಾನೆ, ಅದಕ್ಕೆ ಕೊಡಲು ಬಂದಿದ್ದೇನೆ. ಆದರೆ ನಿಮ್ಮ ಕೆಲಸ ನೋಡಿದರೆ ನಿಮಗೆ ಇಷ್ಟು ಸಣ್ಣ ಮೊತ್ತ ಸಾಕಾಗಲ್ಲ” ಎನ್ನುತ್ತಲೇ 50 ಸಾವಿರ ರೂ.ಗಳ ಚೆಕ್ ಬರೆದು ಚಕ್ರವರ್ತಿ ಸೂಲಿಬೆಲೆಯವರ ಕೈಗೆ ಕೊಟ್ಟಿದ್ದರಂತೆ. ಈ ವೇಳೆ ಆ ಅಜ್ಜಿ, “ಮೋದಿ ನಮಗಾಗಿ ಎಷ್ಟೊಂದು ಕೆಲಸ ಮಾಡುತ್ತಿದ್ದಾರೆ, ಅವರಿಗಾಗಿ ನಾವು ಏನು ಮಾಡಿದರೂ ಕಡಿಮೆಯೇ, ಹೇಗಾದರೂ ಮಾಡ್ರಪ್ಪಾ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ತಂದು ಕೂರಿಸಿ” ಎಂದು ಹೇಳಿ ಹೊರಟು ಬಿಟ್ಟರಂತೆ.

ಇದಿಷ್ಟೇ ಅಲ್ಲದೇ ಮತ್ತೊಂದು ಕಡೆ ರಾಷ್ಟ್ರದ ಗಡಿ ಕಾಯುವ ಸೈನಿಕನೋರ್ವ ಚಕ್ರವರ್ತಿ ಬಳಿ “ಸಾರ್, ಮೋದಿಗಾಗಿ ನೀವು ಕೆಲಸ ಮಾಡುತ್ತಿದ್ದೀರಿ, ನಾವು ಕರ್ತವ್ಯದಲ್ಲಿ ಇರುವುದರಿಂದ ಏನನ್ನೂ ಮಾಡಲಾಗುವುದಿಲ್ಲ. ನಿಮ್ಮ ತಂಡದ ಬ್ಯಾಂಕ್ ಖಾತೆ ಸಂಖ್ಯೆ ಕೊಡಿ, ನನ್ನಿಂದಾಗುವಷ್ಟು ಹಣ ಹಾಕುತ್ತೇನೆ” ಎಂದು ಹೇಳಿದ್ದನ್ನು ಸ್ವತಃ ಚಕ್ರವರ್ತಿಯವರೇ ತಮ್ಮ ಭಾಷಣದಲ್ಲಿ ಹೇಳಿದ್ದರು.

ಓರ್ವ ವ್ಯಕ್ತಿಯ ಅಧಿಕಾರಕ್ಕಾಗಿ ಅಥವ ಪಕ್ಷದ ಅಧಿಕಾರಕ್ಕಾಗಿ ಪಕ್ಷ ಹಾಗೂ ಅದರ ಕಾರ್ಯಕರ್ತರು ದುಡಿಯುವುದು ಸಾಮಾನ್ಯ . ಆದರೆ ಓರ್ವ ವ್ಯಕ್ತಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸ್ವಯಂ ಸೇವಕರಾಗಿ ತಮ್ಮನ್ನು ತೊಡಗಿಸಿಕೊಳ್ಳುವುದು ಇದೇ “ಮೊದಲಾಸಲ”… ದಾಟ್ ಈಸ್ ಮೋದಿ….

– ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close