ಅಂಕಣ

ಭಾರತದ ಮೇಘಾಲಯದ ಪರ್ವತಗಳಲ್ಲಿರುವ ಗುಹೆಯಿಂದ ವಿಶ್ವಕ್ಕೆ ದೊರೆಯಿತು ಹೊಸತೊಂದು ಯುಗ!! ನಾವೀಗ ಜೀವಿಸುತ್ತಿರುವುದು ಮೇಘಾಲಯನ್ ಯುಗದಲ್ಲಿ!!

ವಿಶ್ವದ ಭೂವಿಜ್ಞಾನಿಗಳು ನಮ್ಮ ಭೂಮಿಯ ಆಯಸ್ಸನ್ನು ವಿವಿಧ ಸಂಶೋಧನೆಗಳ ಮೂಲಕ ಕಂಡುಹಿಡಿದಿದ್ದಾರೆ. ಸೌರ ಮಂಡಲದ ರಚನೆಯಿಂದ ಹಿಡಿದು, ನಾವಿರುವ ಭೂಮಿಯ ಆಯಸ್ಸು, ನಾವು ಜೀವಿಸುತ್ತಿರುವ ಯುಗ, ಎಲ್ಲದರ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಆದರೆ ನಮ್ಮ ಆಧುನಿಕ ವಿಜ್ಞಾನಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಈ ಬಗ್ಗೆ ಅಧ್ಯಯನ ನಡೆಸಿದ್ದರು ಮತ್ತು ಕಾಲವನ್ನು ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗ ಎಂಬ ನಾಲ್ಕು ಯುಗಗಳಾಗಿ ವಿಂಗಡಿಸಿದ್ದರು.

ಭೂಮಿಯ ಆಯುಸ್ಸಿನ ಬಗ್ಗೆ ಇದುವರೆಗೂ ನಡೆಸಿದ ಸಂಶೋಧನೆಗಳಿಗೆ ಹೊಸತೊಂದು ಸತ್ಯ ಸೇರ್ಪಡೆಯಾಗಿದೆ ಮತ್ತು ಆ ಅಧ್ಯಯನ ನಡೆಸಿರುವುದು ಭಾರತದ ಮೇಘಾಲಯದಲ್ಲಿ. ಈ ಅಧ್ಯಯನಗಳಿಂದ ವಿಶ್ವಕ್ಕೆ ಹೊಸತೊಂದೆ ಯುಗ ದೊರಕಿದೆ ಮತ್ತು ಅದಕ್ಕೆ ಮೇಘಾಲಯನ್ ಯುಗ ಎಂದು ಹೆಸರಿಸಲಾಗಿದೆ.

ವಿಜ್ಞಾನದ ಪ್ರಕಾರ ಯುಗಗಳ ವರ್ಗೀಕರಣ

phanerozoic eon (ದೃಶ್ಯ ಜೀವಿ ಮಹಾಕಾಲ): ಇಂದಿನಿಂದ 541 ವರ್ಶಗಳ ಹಿಂದೆ ಭೂಮಿಯ ಮೇಲೆ ಜೀವ ವಿಕಾಸವಾಗಿತ್ತು. ನಾವೆಲ್ಲಾ ಈ ಯುಗಕ್ಕೆ ಸಂಬಂಧ ಪಟ್ಟವರು. ಇದನ್ನ ನಾವು ಸತ್ಯ ಯುಗ ಅಂತಲೂ ಹೇಳಬಹುದು. ಈ ಕಾಲದಲ್ಲಿಯೆ ಜೀವಿಗಳ ಜೀವ ವಿಕಾಸದ ಆರಂಭ ನಡೆದಿತ್ತು.

ಈ ಮಹಾಕಾಲದಲ್ಲಿ ಮೂರು ಉಪ ವಿಭಾಗಗಳಿವೆ: ಇವುಗಳನ್ನ era ಎನ್ನುತ್ತಾರೆ.
paleozoic era
mesozoic era
cenozoic era

ಮನುಷ್ಯ phanerozoic ಮಹಾಕಾಲದ cenozoic ಯುಗದಲ್ಲಿದ್ದಾನೆ. cenozoic ಇಂದಿನಿಂದ 66 ಮಿಲಿಯನ್ ವರ್ಶಗಳ ಹಿಂದೆ ಪ್ರಾರಂಭವಾಗಿತ್ತು. ಈ ಯುಗವನ್ನು ವಿಭಿನ್ನ ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ. 11,700 ವರ್ಶಗಳ ಹಿಂದೆ Holocene Epoch ಪ್ರಾರಂಭವಾಗಿತ್ತು. ಈ Holocene Epoch ನ ಭಾಗವೇ ಮೇಘಾಲಯನ್ ಯುಗ. ಈ ಸಂಶೋಧನೆ ವಿಶ್ವಕ್ಕೆ ಒಂದು ಹೊಸ ಆಯಾಮವನ್ನೆ ಕೊಟ್ಟಿದೆ. ಭಾರತದ ಬೆಟ್ಟಗಳಿಂದ ವಿಶ್ವಕ್ಕೆ ಹೊಸ ಯುಗವೊಂದು ದೊರಕಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಈ ವರ್ಶ ಜೂನ್ ನಿಂದ ನಾವು ಅಧಿಕ್ಕೃತವಾಗಿ phanerozoic ಮಹಾಕಾಲದ cenozoic ಯುಗದ Holocene Epoch ನ ಮೇಘಾಲಯನ್ ಚರಣದಲ್ಲಿ ಬದುಕುತ್ತಿದ್ದೇವೆ!!

ಮೇಘಾಲಯನ್ ಯುಗ

ಇಂದಿನಿಂದ 4,200 ವರ್ಶಗಳ ಮೊದಲು ಶುರುವಾಗಿತ್ತು. ಭೂ ವೈಜ್ಞಾನಿಕ ದೃಷ್ಟಿಯಿಂದ ಈ ಯುಗ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಯುಗದ ಆರಂಭಕಾಲದಲ್ಲಿಯೆ ಭಾರತದಲ್ಲಿ ಭಯಂಕರ ಬರ ಎದುರಾಗಿತ್ತು ಎನ್ನುವುದು ಈಗ ತಿಳಿದು ಬಂದಿದೆ. ಸಿಂಧೂ ನಾಗರಿಕತೆ ಗುಳೇ ಹೋಗಲು 5 ಸಾವಿರ ವರ್ಶಗಳ ಹಿಂದೆ ನಡೆದ ಬರ ಕಾರಣವೆಂದು ಈಗ ಅಧ್ಯಯಯನಗಳು ಹೇಳುತ್ತಿವೆ. ಕಡಿಮೆಯೆಂದರೂ ಇನ್ನೂರು ವರ್ಶಗಳ ಈ ಬರದಿಂದಾಗಿ ಹಲವಾರು ಸಭ್ಯತೆಗಳು ನಷ್ಟವಾದವು ಇಲ್ಲವೆ ನೀರಿನಾಶ್ರಯ ಇರುವ ಜಾಗಕ್ಕೆ ಗುಳೇ ಹೋದವು.

Holocene Epoch ನ ಮೂರು ಉಪವಿಭಾಗಗಳಾದ ಗ್ರೀನ್ ಲ್ಯಾಂಡಿಯನ್, ನಾರ್ತ್ ಗ್ರಿಫಿಯನ್ ಮತ್ತು ಮೇಘಾಲಯನ್ ಯುಗಗಳಲ್ಲಿ ಭಾರತದ ಮೇಘಾಲಯದ ಚಿರಾಪುಂಜಿಯ ಬೆಟ್ಟಗಳಲ್ಲಿ ಅತಿ ದೊಡ್ಡ ಮತ್ತು ಆಳವಾದ (Mawmluh caves)ಗುಹೆಗಳ ಅಧ್ಯಯನದಿಂದ ಮೇಘಾಲಯನ್ ಯುಗದ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪೃಥ್ವಿ ವಿಜ್ಞಾನ ವಿಭಾಗದ ಪ್ರೋಫೆಸರ್ ಆಶೀಶ್ ಸಿನ್ಹಾ ತಂಡವು ಗುಹೆಗಳಲ್ಲಿರುವ ಹಿಮ ಮತ್ತು ಸ್ಟಾಲೆಗ್ಮೈಟ್ ಮಾದರಿಗಳಿಂದ ಯೂರೆನಿಯಮ್-ಥೋರಿಯಮ್ ಡೇಟಿಂಗ್ ವಿಧಾನ ನಡೆಸಿ ಈ ಸಂಶೊಧನೆಯನ್ನು ನಡೆಸಿದೆ. ಹಿಮ ಮತ್ತು ಸ್ಟಾಲೆಗ್ಮೈಟ್ ಗಳನ್ನು ‘ಅಂತರಾಷ್ಟ್ರೀಯ ಭೂಗರ್ಭ ಮಾಪಕ’ದ ರೂಪದಲ್ಲಿ ಹೆಚ್ಚಿನ ಸಂಶೋಧನೆಗಳಿಗಾಗಿ ಸಂರಕ್ಷಿಸಿ ಇಡಲಾಗಿದೆ.

Quaternary. Tertiary. CENO. -ZOIC. Present. Phanerozoic eon is divided into three eras: Paleozoic (543 to 250 million years ago), divided into six periods. Mesozoic (250 to 65 million years ago), divided into three periods. Cenozoic (65 million years ago to present), divided into two periods and seven epochs. 65. MYA. Cretaceous. Triassic. Jurassic. MESOZOIC MYA. Cambrian. Ordovidan. Silurian. Devonian. Carboniferous. Permian. PALEOZOIC. The eon that we live in is called the Phanerozoic and is divided into the Palaeozoic, Mesozoic, Cenozoic eras. The Paleozoic era ( ancient life ) is the first era of the Phanerozoic, and spans from roughly 543 million to 250 million years ago. It is subdivided into six periods, which correspond to critical geological events. The first of its periods is the Cambrian. Marked by expansions and extinctions of early archaic plants and animals, the Palaeozoic era was terminated by the Permian mass extinction. The Mesozoic era ( middle life ) covers the time from 250 million to 65 million years ago. It has three periods and is often called the age of reptiles. The Cenozoic era ( recent life ) extends from 65 million years ago to the present. Its two periods are divided into seven epochs. The Cenozoic era is known as the age of mammals. We are now living in the Holocene epoch MYA.

ವಿಶ್ವದಲ್ಲಾಗಿರುವ ಜಲವಾಯು ಪರಿವರ್ತನೆಗಳ ಸಂಶೋಧನೆಯಲ್ಲಿ ಈ ಆವಿಷ್ಕಾರ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭೂಮಿಯ ಮೇಲೆ ನಡೆಯುವ ಉತ್ಖನನ ಮತ್ತು ಅಲ್ಲಿ ದೊರೆಯುವ ಪಳೆಯುಳಿಕೆಗಳಿಂದ ಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಆದರೆ ಈ ಸಂಶೋಧನೆಗಳಿಂದ ನಿಖರವಾಗಿ ಭೂಮಿಯ ಆಯಸ್ಸನ್ನು ಅಳೆಯಬಹುದು ಮತ್ತು ಮಾನವನ ಜೀವ ವಿಕಾಸದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬಹುದು.

ಸಾವಿರಾರು ವರ್ಶಗಳ ಹಿಂದೆ ನಮ್ಮ ಪೂರ್ವಜರು ಕಂಡು ಕೊಂಡ ಸತ್ಯಗಳನ್ನೇ ನಾವು ಮತ್ತೆ ಮತ್ತೆ ಆವಿಷ್ಕಾರ ನಡೆಸಿ ಬೀಗುವುದು. ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನವನ್ನು ಅಂದಿಗೂ ನಾವೆ ಕೊಟ್ಟಿರುವುದು, ಇಂದಿಗೂ ನಾವೆ ಕೊಡುತ್ತಿರುವುದು. ಭಾರತ ಎಂಬ ಪುಣ್ಯ ಭೂಮಿ ಇಲ್ಲದಿರುತ್ತಿದ್ದರೆ ಪ್ರಪಂಚ ಇಂದೂ ಅನಾಗರಿಕತೆಯಲ್ಲೆ ನರಳುತ್ತಿತ್ತು. ಇದು ಸತ್ಯ.

-Postcard team

Tags

Related Articles

FOR DAILY ALERTS
 
FOR DAILY ALERTS
 
Close