ಅಂಕಣಪ್ರಚಲಿತ

ಗೋಮಾತೆಯ ಸಗಣಿಯನ್ನು ಮನೆಯ ನೆಲ ಮತ್ತು ಗೋಡೆಗೆ ಹಚ್ಚೋದರ ಹಿಂದಿನ ಮಹತ್ವವಾದರೂ ಏನು? ವಿಜ್ಞಾನ ಏನು ಹೇಳುತ್ತದೆ ಗೊತ್ತೇ?

ಹಿಂದೂ ಧರ್ಮದಲ್ಲಿ ಪ್ರಾಣಿಗಳಿಗೆ ಗೌರವವನ್ನು ಸಲ್ಲಿಸುವುದು ಅತ್ಯಂತ ಹಳೆಯ ಸಂಪ್ರದಾಯವಾಗಿದ್ದು, ಅದರಲ್ಲೂ ವಿಶೇಷವಾಗಿ ಗೋವನ್ನು ಪವಿತ್ರವಾದ ಜೀವಿಯೆಂದು ಹಿಂದೂ ಧರ್ಮಶಾಸ್ತ್ರಗಳಲ್ಲಿ ಪರಿಗಣಿಸಿದೆ. ಇನ್ನು, ಗೋಮಯವೆಂದು ಕರೆಯಲ್ಪಡುವ ಹಸುವಿನ ಸೆಗಣಿಯನ್ನು ಸಂಪ್ರದಾಯಸ್ಥ ಮನೆಗಳಲ್ಲಿ ಇಂದಿಗೂ ಕೂಡ ಹತ್ತುಹಲವು ಉದ್ದೇಶಗಳಿಗಾಗಿ ಬಳಸುತ್ತಾರೆ. ಸಸ್ಯಗಳ ಬೆಳವಣಿಗೆಗಾಗಿ ಹಸುವಿನ ಸೆಗಣಿಯಂತೂ ಅತ್ಯುತ್ತಮವಾದ ಗೊಬ್ಬರವಾಗಿದೆ ಮತ್ತು ಅಂತಹ ಸಸ್ಯಗಳಿಂದ ಉತ್ಪನ್ನವಾಗುವ ಆಹಾರವಸ್ತುಗಳು ವಿಶೇಷವಾದ, ಹೆಚ್ಚುವರಿ ಆರೋಗ್ಯ ತತ್ವಗಳನ್ನೊಳಗೊಂಡಿರುತ್ತವೆ. ಇಂತಹ ಗೋಮಯವನ್ನು ಮನೆಯ ನೆಲ ಮತ್ತು ಗೋಡೆಗೆ ಹಚ್ಚೋದರ ಹಿಂದಿನ ಮಹತ್ವವಾದರೂ ಏನು ಗೊತ್ತೇ?
ಹಿಂದೂ ನಂಬಿಕೆಗಳ ಪ್ರಕಾರ, ಗೋವನ್ನು ಒಂದು ಪವಿತ್ರವಾದ ಪ್ರಾಣಿಯೆಂದು ಪರಿಗಣಿಸಲಾಗಿದೆಯಲ್ಲದೇ ಹಿಂದೂ ಧರ್ಮದಲ್ಲಿ ಗೋಮಯಕ್ಕೆ ವಿಶೇಷವಾದ ಆಧ್ಯಾತ್ಮಿಕ ಮಹತ್ವವಿದೆ!! ಹೌದು, ಗೋವು ಯಾವುದೇ ಮಾಂಸಾಹಾರವನ್ನು ಸೇವಿಸದೇ ಬರಿಯ ಹುಲ್ಲು ಹಾಗೂ ಕಾಳುಗಳನ್ನು ಮಾತ್ರವೇ ಸೇವಿಸುವುದರಿಂದ ಗೋಮಯವು ಪವಿತ್ರವಾಗಿದ್ದು, ಅದು ಸ್ವೀಕಾರಾರ್ಹವಾಗಿದೆ. ಅನೇಕ ಪೂಜಾವಿಧಿಗಳಲ್ಲಿ ಒಣಗಿಸಿದ ಹಾಗೂ ಹಸಿಯಾಗಿರುವ ತಾಜಾ ಗೋಮಯಗಳೆರಡನ್ನೂ ಬಳಸಿಕೊಳ್ಳಲಾಗುತ್ತದೆಯಲ್ಲದೇ ಗೋವರ್ಧನ ಪೂಜೆಯಿಂದಾರಂಭಿಸಿ ವಿವಿಧ ಹೋಮಹವನಗಳವರೆಗೂ ಪೂಜಾವಿಧಿಗಳಲ್ಲಿ ಗೋಮಯವನ್ನು ಬಳಸಲಾಗುತ್ತದೆ.
ಆದರೆ ಗೋಮಯವನ್ನು ಮನೆಯ ನೆಲ ಮತ್ತು ಗೋಡೆಗೆ ಹಚ್ಚೋದು ಸನಾತನ ಕಾಲದಿಂದಲೂ ನಡೆದು ಬಂದಂತಹ ಸಂಪ್ರದಾಯವಾಗಿದ್ದು, ಮನೆಯಲ್ಲಿ ಯಾವುದೆ ಹಬ್ಬ ಹರಿದಿನ ಇರಲಿ, ಸಡಗರದ ಕ್ಷಣವೇ ಇರಲಿ ಮನೆಯ ಅಂಗಳಕ್ಕೆ ದನದ ಸಗಣಿ ಹಚ್ಚುತ್ತಾರೆ. ಈ ಸಂಪ್ರದಾಯ ಇಂದು ಹೆಚ್ಚಾಗಿ ಕಂಡು ಬರದಿದ್ದರೂ ಸಹ ಕೆಲವು ಹಳ್ಳಿಗಳಲ್ಲಿ ಇಂದಿಗೂ ಮನೆಯ ನೆಲ, ಗೋಡೆಯನ್ನು ಪೂರ್ತಿಯಾಗಿ ಸಗಣಿಯಿಂದ ಮಾಡಿರುವುದನ್ನು ನಾವು ಕಾಣಬಹುದು!! ಅಷ್ಟಕ್ಕೂ ಸೆಗಣಿಯ ಮಹತ್ವವಾದರೂ ಏನು ಗೊತ್ತೇ?
Image result for cow dung on wall
ಹಿಂದೂ ಸಂಪ್ರದಾಯದಲ್ಲಿ ಹಸುವನ್ನು ಗೋಮಾತೆ ಎಂದು ಪೂಜಿಸುತ್ತಾರೆ. ಅದರಂತೆ ದನದ ಮೂತ್ರ ಮತ್ತು ಸಗಣಿ ಇವೆಲ್ಲವೂ ತುಂಬಾ ಪವಿತ್ರವಾದುದು ಎಂದು ಹೇಳಲಾಗುತ್ತದೆ. ಭಾರತೀಯ ಕೆಲ ಗ್ರಾಮಗಳಲ್ಲಿ ಇಂದಿಗೂ ಸಹ ಹಬ್ಬ ಹರಿದಿನಗಳಲ್ಲಿ ಮನೆಯನ್ನು ಕ್ಲೀನ್ ಮಾಡಲು ಸಗಣಿಯನ್ನು ನೀರಿಗೆ ಮಿಕ್ಸ್ ಮಾಡಿ ನೆಲಕ್ಕೆ ಹಚ್ಚುವುದು ನಾವು ಇಂದಿಗೂ ಕಾಣಬಹುದು. ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ ಸಗಣಿಯನ್ನು ಮನೆಯ ನೆಲಕ್ಕೆ ಮತ್ತು ಗೋಡೆಗೆ ಹಚ್ಚುವುದರಿಂದ ಮನುಷ್ಯನಿಗೆ ಹಾನಿಯನ್ನುಂಟು ಮಾಡುವಂತಹ ಅನೇಕ ಬ್ಯಾಕ್ಟೀರಿಯಾಗಳನ್ನು ಇದು ಕೊಲ್ಲುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಗಣಿಯಲ್ಲಿರುವ ಮಿನೆರಲ್ಸ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣದಿಂದಾಗಿ ಮನುಷ್ಯನಿಗೆ ತಗಲುವಂತಹ ಹೆಚ್ಚಿನ ಸಮಸ್ಯೆ – ರೋಗಗಳನ್ನು ನಿವಾರಣೆ ಮಾಡುತ್ತದೆಯಲ್ಲದೇ ಸಣ್ಣ ಸಣ್ಣ ಕೀಟಾಣುಗಳಾದ ಚೇಳು, ಸಹಸ್ರಪದಿ ಮೊದಲಾದ ಕೀಟಾಣುಗಳು ಮನೆಯೊಳಗೆ ಬಾರದಂತೆ ಸಗಣಿ ತಡೆಯುತ್ತದೆ. ಇನ್ನು, ಸಗಣಿಯನ್ನು ಮನೆಯ ಗೋಡೆಗೆ ನೆಲಕ್ಕೆ ಹಚ್ಚುವುದರಿಂದ ನ್ಯಾಚುರಲ್ ಸೊಳ್ಳೆ ನಿವಾರಕವಾಗಿದೆ. ಇದರಿಂದಾಗಿ ಸೊಳ್ಳೆ ಮನೆಯಿಂದ ದೂರವಾಗುತ್ತದೆಯಲ್ಲದೇ ಚಳಿಗಾಲದಲ್ಲಿ ಸಗಣಿ ಹಚ್ಚಿರುವ ಮನೆಯು ತುಂಬಾನೆ ಬಿಸಿಯಾಗಿರುವುದನ್ನು ನಾವು ಕಾಣಬಹುದು!!
Related image
ಹಿಂದೂ ಧರ್ಮದಲ್ಲಿ ಪ್ರಾಣಿಗಳಿಗೆ ಗೌರವವನ್ನು ಸಲ್ಲಿಸುವುದು ಅತ್ಯಂತ ಹಳೆಯ ಸಂಪ್ರದಾಯವಾಗಿದ್ದು, ಅದರಲ್ಲೂ ವಿಶೇಷವಾಗಿ ಗೋವನ್ನು ಪವಿತ್ರವಾದ ಜೀವಿಯೆಂದು ಹಿಂದೂ ಧರ್ಮಶಾಸ್ತ್ರಗಳಲ್ಲಿ ಪರಿಗಣಿಸಿರಲು ಹಲವಾರು ಕಾರಣಗಳಿವೆ. ಗೋವು ದೇವ ಸಮಾನ ಪ್ರಾಣಿ ಅಥವಾ ಕಾಮಧೇನುವಾಗಿದ್ದು, ಒಂದು ದನದ ಸೆಗಣಿ 5 ಎಕರೆ ಭೂಮಿಯ ಫಲವತ್ತತೆಯನ್ನು ವೃದ್ಧಿಸಬಲ್ಲದು. ಅಷ್ಟೇ ಅಲ್ಲದೆ ಹಸುವಿನ ಒಣಗಿದ ಸೆಗಣಿ (ಭರಣಿ)ಯು ಒಂದು ಅತ್ಯುತ್ತಮವಾದ ಇಂಧನವಾಗಿದ್ದು, ಹಳ್ಳಿಯ ಜನರು ತಮ್ಮ ಆಹಾರವನ್ನು ಬೇಯಿಸಲು ಬಳಸುವ ಮಣ್ಣಿನ ಕುಲುಮೆಗಳಲ್ಲಿ ಭರಣಿಯನ್ನೇ ಇಂಧನವಾಗಿ ಬಳಸುತ್ತಿದ್ದರು!!
ಅನೇಕ ಆಧ್ಯಾತ್ಮಿಕ ಯಜ್ಞಗಳಲ್ಲಿ ಒಣಗಿಸಿರುವ ಗೋಮಯ (ಭರಣಿ) ಹಾಗೂ ಆಕಳ ತುಪ್ಪಗಳನ್ನು ಬಳಸಿಕೊಂಡು ಅಗ್ನಿಜನನವನ್ನು ಮಾಡಲಾಗುತ್ತದೆ. ಗೋಮಯವನ್ನು ತುಪ್ಪದೊಂದಿಗೆ ಉರಿಸುವ ಪ್ರಕ್ರಿಯೆಯು ಮನೆಯನ್ನು ಶುದ್ದೀಕರಿಸುವ ಅತ್ಯುತ್ತಮವಾದ ಮಾರ್ಗವೆಂದು ಹೇಳಲಾಗಿದೆ. ಇಷ್ಟು ಮಾತ್ರವೇ ಅಲ್ಲ, ವೈಜ್ಞಾನಿಕವಾಗಿಯೂ ಕೂಡ ಸಂಶೋಧನೆಗಳು ಹೊರಗಡೆ ಇರುವ ಫಲಿತಾಂಶದ ಪ್ರಕಾರ, ಗೋಮಯವು ವಾತಾವರಣದ ಗಾಳಿಯನ್ನು ಶುದ್ಧೀಕರಿಸುತ್ತದೆ ಹಾಗೂ ಪರಿಸರವನ್ನು ಮಾಲಿನ್ಯ ಮುಕ್ತ ಹಾಗೂ ಹಾನಿಕಾರಕ ವಿಕಿರಣಗಳಿಂದ ಮುಕ್ತವನ್ನಾಗಿ ಮಾಡುತ್ತದೆ.
Related image
ಗೋವು ನಿಜಕ್ಕೂ ಅತ್ಯಂತ ಪವಿತ್ರವಾದ ಹಾಗೂ ಮಂಗಳಕರವಾದ ಪ್ರಾಣಿಯಾಗಿದ್ದು, ವಾಸ್ತವವಾಗಿ ಗೋವಿನಿಂದ ಮಾನವನಿಗಾಗುವ ಪ್ರಯೋಜನಗಳು ಅಪಾರವಾಗಿದೆ!! ಮಾತೃಸ್ವರೂಪಿಣಿಯಾಗಿರುವ ಗೋವು ಎಂದೆಂದಿಗೂ ವಧಾರ್ಹಳಲ್ಲ, ಬದಲಾಗಿ ಅತ್ಯಂತ ವಂದನೀಯ ಹಾಗೂ ಪೂಜನೀಯ ತಾಯಿಯಾಗಿದ್ದಾಳೆ!! ಮನುಷ್ಯರಿಗೆ ಅಮೃತಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ. ಹಾಗಾಗಿ ಭಾರತೀಯ ಆಹಾರ ಸಂಸ್ಕೃತಿ ಯಲ್ಲಿ ಹಾಲು, ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನಮಾನವಿರುವುದನ್ನು ಗಮನಿಸಬಹುದಾಗಿದೆ.
– Postcard team
Tags

Related Articles

FOR DAILY ALERTS
 
FOR DAILY ALERTS
 
Close