ಪ್ರಚಲಿತ

ಸರ್ಜಿಕಲ್ ಸ್ಟ್ರೈಕ್ ವೇಳೆ ಚಿರತೆ ಮೂತ್ರ ಬಳಕೆ ಮಾಡಿದ್ದ ಭಾರತೀಯ ಸೇನೆ!! ರೋಚಕ ಮಾಹಿತಿ ಬಿಚ್ಚಿಟ್ಟ ಮಾಜಿ ಲೆಫ್ಟಿನೆಂಟ್ ಜನರಲ್!!

2016ರ ಸೆಪ್ಟೆಂಬರ್ 29 ರಂದು ಭಾರತೀಯ ದೇಶಪ್ರೇಮಿಗಳಿಗೆ ಮರೆಯಲಾಗದ ದಿನ.. ಅಂದು ನಮ್ಮ ಸೈನಿಕರು ತೋರಿಸಿದ ಪರಾಕ್ರಮಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದತ್ತ ನೋಡುತ್ತಿತ್ತು!! ಭಾರತೀಯರೇ ಹಾಗೆ…. ನಾವು ಯಾರಿಗೂ ತೊಂದರೆ ಕೊಡಲ್ಲ.. ತೊಂದರೆ ಕೊಟ್ಟರೆ ಏನಾಗುತ್ತೆ ಅಂತಾ ಇಡೀ ಜಗತ್ತೇ ಬೆಚ್ಚಿಬಿದ್ದ ಸರ್ಜಿಕಲ್ ಸ್ಟ್ರೈಕ್ ನಿದರ್ಶನ!! ಇಂದಿಗೂ ಆ ದಿನ ನೆನಪಾದರೆ ಪಾಕಿಗಳು ಗಡಗಡ ನಡುಗುತ್ತಾರೆ!! ಹೇಡಿಯಂತೆ ಭಾರತದೊಳಗೆ ನುಸುಳಿ ಸೈನಿಕರ ಮೇಲೆ, ನಾಗರಿಕರ ಮೇಲೆ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕರಿಗೆ ಪಾಠ ಕಲಿಸಲು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು! ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ, ಉಗ್ರರ ನೆಲೆಗಳನ್ನು ಧ್ವಂಸಮಾಡಿ, ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆಯ ದಿಟ್ಟ ಸರ್ಜಿಕಲ್ ದಾಳಿಯಿಂದಾಗಿ ಉಗ್ರರ ಅಟ್ಟಹಾಸವನ್ನೇ ಹುಟ್ಟಗಿಸಿದ್ದರು!! ಇದೀಗ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ!!

ಸರ್ಜಿಕಲ್ ಸ್ಟ್ರೈಕ್ ವೇಳೆ ಚಿರತೆ ಮೂತ್ರ ಬಳಕೆ!!

ಪಾಕಿಸ್ತಾನದ ಪ್ರಾಂತ್ಯದಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ವೇಳೆ ಭಾರತೀಯ ಸೇನೆಯ ಯೋಧರು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ!! ಈ ವಿಚಾರ ಕೇಳುವಾಗಲೇ ಒಮ್ಮೆ ನಿಮಗೆ ಯೋಚನೆ ಬರಬಹುದು.. ಸರ್ಜಿಕಲ್ ಸ್ಟ್ರೈಕ್‍ಗೂ ಚಿರತೆ ಮೂತ್ರಕ್ಕೂ ಏನು ಸಂಬಂಧ ಅಂತಾ.. ಹೌದು ಪಾಕ್‍ನಲ್ಲಿ ರಾತ್ರಿ ಹೊತ್ತು ನಾಯಿಗಳಿಂದ ಬಚಾವಾಗಲು ಈ ತಂತ್ರ ಅನುಸರಿದ್ದಾಗಿ ನಿವೃತ್ತ ನಗ್ರೋಟ ಕಾಪ್ರ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ. ಪಾಕಿಸ್ತಾನದ ಗಡಿಯಿಂದ 15 ಕಿ.ಮೀ ಒಳಗೆ ನುಗ್ಗಿ 2016ರಲ್ಲಿ ಭಾರತ ಕೈಗೊಂಡಿದ್ದ ಸರ್ಜಿಕಲ್ ಸ್ಟ್ರೈಕ್‍ನ ಕುರಿತು ಅವರು ಮಾತನಾಡಿದ್ದು ಜೈವಿಕ ಶಾಸ್ತ್ರವನ್ನು ಅಧ್ಯಯನ ನಡೆಸಿದ್ದರು. ಸರ್ಜಿಕಲ್ ದಾಳಿ ವೇಳೆ ಅವರ ಪಾತ್ರವೂ ಸಾಕಷ್ಟಿದ್ದು ನೌಶೆರದಲ್ಲಿ ಅವರು ಸೇನೆಯ ಬ್ರಿಗೇಡ್ ಕಮಾಂಡರ್ ಆಗಿ ರಾಜೇಂದ್ರ ನಿಂಬೋರ್ಕರ್ ಸೇವೆ ಸಲ್ಲಿಸಿದ್ದರು.

ನಮ್ಮ ಹೆಮ್ಮೆಯ ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿ, ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಯೋಧರು ಚಿರತೆ ಮೂತ್ರ ಬಳಸಿದ್ದರು. ಪಿಒಕೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವಾಗ ನಾಯಿಗಳಿಂದ ತಪ್ಪಿಸಿಕೊಳ್ಳಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಭಾರತೀಯ ಯೋಧರು ಬಳಸಿದ್ದರು ಎಂಬ ಮಾಹಿತಿಯನ್ನು ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ತಿಳಿಸಿದ್ದಾರೆ!! ಚಿರತೆಗಳಿಂದ ರಕ್ಷಿಸಿಕೊಳ್ಳಲು ನಾಯಿಗಳು ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಸರ್ಜಿಕಲ್ ದಾಳಿ ವೇಳೆ ಯೋಧರು ಗ್ರಾಮ, ಹಳ್ಳಿಗಳ ನಡುವೆ ಸಾಗುವ ವೇಳೆ ನಾಯಿಗಳಿಂದ ದಾಳಿಯಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಲಾಗಿತ್ತು!!

ಅಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಯೋಜನೆ ಜಾರಿಗೊಳಿಸಲು ಒಂದು ವಾರದ ಗಡುವು ನೀಡಿದ್ದರು. ಯೋಧರಿಗೆ ಯೋಜನೆ ಬಗ್ಗೆ ತಿಳಿಸಲಾಗಿತ್ತು. ಆದರೆ ಯಾವ ದಿನ, ಸ್ಥಳದ ಕುರಿತು ಮಾಹಿತಿ ನೀಡಿರಲಿಲ್ಲ. ದಾಳಿಗೆ ತೆರಳುವ ಹಿಂದಿನ ದಿನ ದಾಳಿಯ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು ಎಂದರು. ದಾಳಿಗೆ ಮುಂಜಾನೆಯ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದೆವು. ಉಗ್ರರ ಲಾಂಚ್‍ಪ್ಯಾಡ್‍ಗಳನ್ನು ನಾವು ಗುರುತಿಸಿದ್ದೆವು. ಮುಂಜಾನೆ 3.30ರ ವೇಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಷ್ಟರೊಳಗೆ ನಮ್ಮ ಸೈನ್ಯದ ತಂಡಗಳು ಕಷ್ಟದ ಹಾದಿ, ಅಪಾಯಕಾರಿ ನೆಲಬಾಂಬ್ ಇರುವ ಪ್ರದೇಶಗಳನ್ನು ದಾಟಿ, ದಾಳಿಗೆ ಸಿದ್ಧವಾಗಿದ್ದರು. ಯೋಜನೆಯ ಪ್ರಕಾರ ದಾಳಿ ನಡೆಸಿ 29 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿವರಿಸಿದ್ದರು!!

ಸರ್ಜಿಕಲ್ ದಾಳಿಯಲ್ಲಿ ಯಶಸ್ವಿಯಾಗಿಸಿದವರಲ್ಲಿ ನಿಂಬೋರ್ಕರ್ ಒಬ್ಬರಾಗಿದ್ದ ಹಿನ್ನೆಲೆಯಲ್ಲಿ, ಥೋರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಭಾರತೀಯರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಸುಮಾರು 29 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದು ರಾಜೇಂದ್ರ ಅವರು ವಿವರಿಸಿದರು. ಇದೀಗ ಮೋದಿ ಯುಗ ಇಲ್ಲಿ ಉಗ್ರರ ಆಟ ಯಾವುದೂ ನಡೆಯಲ್ಲ ಎಂಬುವುದಕ್ಕೆ ಪಾಕಿಸ್ತಾನದ ಹುಟ್ಟಡಗಿಸಿದ್ದ ಸರ್ಜಿಕಲ್‍ಸ್ಟ್ರೈಕ್ ಜ್ವಲಂತ ಸಾಕ್ಷಿ ……

source : vijaykarnataka

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close