ಅಂಕಣ

ಅಹಿಂಸೆಯ ಪ್ರತಿಪಾದಕಾರದಂತಹ ಬೌದ್ಧರೇ ಆತ್ಮ ರಕ್ಷಣೆಗಾಗಿ ಖಡ್ಗ ಝಳಪಿಸಬೇಕಾದರೆ ಈ ರೋಹಿಂಗ್ಯಾ ಮುಸ್ಲಿಮರು ಅದೆಷ್ಟು ಅಪಾಯಕಾರಿಯಾಗಿರಬೇಕು!!

ರೋಹಿಂಗ್ಯಾ ಎಂದರೆ ಸಾಕು ಇಡಿಯ ವಿಶ್ವವೇ ಬೆಚ್ಚಿ ಬೀಳುತ್ತದೆ. ರೋಹಿಂಗ್ಯಾ ಅಮಾಯಕರು, ನಿರಾಶ್ರಿತರು, ಪಾಪದವರು, ನಿರ್ಗತಿಕರು ಎಂದು ದೇಶ-ವಿದೇಶದ ಜಾತ್ಯಾತೀತ ಬುದ್ದಿಜೀವಿಗಳು, ಮಾನವಾಧಿಕಾರ ಪ್ರಾಧಿಕಾರಗಳು ನಾ ಮುಂದು ತಾ ಮುಂದು ಎಂದು ಓಡೋಡಿ ಬರುತ್ತವೆ. ಮ್ಯಾನ್ಮಾರ್(ಬರ್ಮಾ) ದ ರಾಖೈನ್ ಎಂಬ ಪುಟ್ಟ ಊರಿನ ನಿವಾಸಿಗಳು ಬಾಂಗ್ಲಾ ವಲಸಿಗರೆಂದು ಹೇಳಲಾಗುತ್ತದೆ. ಬರ್ಮಾದವರು ಇವರನ್ನು ತಮ್ಮ ದೇಶದ ಮೂಲ ನಿವಾಸಿಗಳೆಂದು ಒಪ್ಪಿಕೊಳ್ಳಲು ತಯಾರಿಲ್ಲದಿರುವುದರಿಂದ ಇವರೀಗ ನಿರ್ವಸಿತರು. ಇಂತಹ ನಿರ್ವಸಿತರು ಆಶ್ರಯ ಅರಸುತ್ತಾ ಹೋಗುವುದೆಲ್ಲಿ ಗೊತ್ತೆ? ಹಿಂದೂ ಅಥವಾ ಬೌದ್ಧ ಬಾಹುಳ್ಯದ ದೇಶಗಳಿಗೆ!

ರೋಹಿಂಗ್ಯಾಗಳಿಗೆ ಪಾಪ-ಪುಣ್ಯ ಎನ್ನುವ ವಿಶ್ವಸಂಸ್ಥೆ ಅಮೇರಿಕಾದಲ್ಲೋ, ಇಂಗ್ಲೆಂಡಿನಲ್ಲೋ ಇವರಿಗೆ ವಸತಿ ಕಲ್ಪಿಸಿ ಕೊಡುವುದಿಲ್ಲ. ಅದು ಹೋಗಲಿ ಪ್ರಂಪಚದಲ್ಲಿ ಮುಸ್ಲಿಂ ಬಾಹುಳ್ಯವಿರುವ ಐವತ್ತು ದೇಶಗಳಿವೆಯಲ್ಲಾ? ಅಲ್ಲಾದರೂ ಇವರಿಗೆ ವಸತಿ ಕಲ್ಪಿಸಬಹುದಲ್ಲಾ? ಊಹೂಂ, ಯಾವ “ಮುಸ್ಲಿಮ್” ದೇಶವೂ ರೋಹಿಂಗ್ಯಾ ಮುಸ್ಲಿಮರನ್ನು ಇಟ್ಟುಕೊಳ್ಳಲು ತಯಾರಿಲ್ಲ! ಪ್ರಪಂಚದ ಅಷ್ಟೂ ದೇಶಗಳು “ನಮಗೆ ಬೇಡವೆನ್ನುವ” ರೋಹಿಂಗ್ಯಾಗಳಿಗೆ ಭಾರತದಲ್ಲಿ ಮಾತ್ರ ಕೆಂಪು ಚಾದರ ಹಾಕಿ ಸನ್ಮಾನ ಮಾಡಬೇಕಂತೆ. ಹೇಗಿದೆ ನ್ಯಾಯ?

ಈ ರೋಹಿಂಗ್ಯಾಗಳೇನು ಸಾಮಾನ್ಯದವರಲ್ಲ. ಜಾತ್ಯಾತೀತ ಮಾಧ್ಯಮಗಳು ಇವರನ್ನು ಅಮಾಯಕರಂತೆ ತೋರಿಸುವಷ್ಟು ಅಮಾಯಕರು ಇವರೇನಲ್ಲ. ಹಾಗಿದ್ದರೆ ಇವತ್ತು ಜಗತ್ತಿನ ಅಷ್ಟೂ ದೇಶಗಳೂ ರೋಹಿಂಗ್ಯಾರನ್ನು ಹೊರದಬ್ಬುತ್ತಿರಲಿಲ್ಲ. ಈ ರೋಹಿಂಗ್ಯಾಗಳ ಹಿಂದೆ ಪಾಕಿಸ್ತಾನ ಪ್ರೇರಿತ ಮುಜಾಹಿದೀನ್ ನಂತಹ ಆತಂಕವಾದಿ ಸಂಘಟನೆಗಳಿವೆ. ಪ್ರಪಂಚದಲ್ಲೇ ಅತೀ ವೇಗವಾಗಿ ಹೆಚ್ಚುತ್ತಿರುವುದು ರೋಹಿಂಗ್ಯಾ ಮುಸಲ್ಮಾನರ ಸಂಖ್ಯೆ. ಎಲ್ಲಿ ಮುಸ್ಲಿಂ ಬಾಹುಳ್ಯ ಹೆಚ್ಚಾಗುವುದೋ ಅಲ್ಲಿ ಅಲ್ಪ ಸಂಖ್ಯಾತರ ಗತಿ ಏನಾಗುವುದೆನ್ನುವುದಕ್ಕೆ ಕಾಶ್ಮೀರವೇ ಸಾಕ್ಷಿ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳೂ ಇದಕ್ಕೆ ಹೊರತೇನಲ್ಲ.

Related image

ಯೋಚಿಸಿ ಅಹಿಂಸೆಯನ್ನು ಪ್ರತಿಪಾದಿಸುವ ಬೌದ್ಧರಂತ ಬೌದ್ಧರೇ ಖಡ್ಗ ಹಿಡಿದು ರೋಹಿಂಗ್ಯಾರನ್ನು ಓಡಿಸಬೇಕಾದರೆ ಇವರಿನ್ನೆಷ್ಟು ಅಪಾಯಕಾರಿಯಾಗಿರಬಹುದು? ನೆನಪಿಡಿ, ಯಾವತ್ತೂ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ರೋಹಿಂಗ್ಯಾರವರು ತಪ್ಪೇ ಮಾಡದಿರುತ್ತಿದ್ದರೆ ಬೌದ್ಧರೇಕೆ ಖಡ್ಗ ಹಿಡಿಯಬೇಕಾಗಿತ್ತು. ಬರ್ಮಾ ವಿಷಯ ಹಾಗಿರಲಿ, ಈಗ ಶ್ರೀಲಂಕಾದಲ್ಲೂ ಮುಸ್ಲಿಂ ಮತ್ತು ಬೌದ್ಧ ಸಮುದಾಯದವರ ನಡುವೆ ಸಂಘರ್ಷ ನಡೆಯಿತಲ್ಲ? ಇದಕ್ಕೇನನ್ನುವರು ಜಾತ್ಯಾತೀತ ಬುದ್ದಿಜೀವಿಗಳು? ಇಲ್ಲಿಯೂ ಅಷ್ಟೆ ಮೊದಲು ಹಲ್ಲೆ ಮಾಡಿದ್ದು ಮುಸ್ಲಿಮರೇ. ಅದಕ್ಕೆ ಪ್ರತೀಕಾರವಾಗಿ ಬೌದ್ಧರೂ ಅವರದೇ ರೀತಿಯಲ್ಲಿ ಉತ್ತರ ಕೊಟ್ಟರು. ಈಗ ಶ್ರೀಲಂಕಾದಲ್ಲಿ ಹತ್ತು ದಿನಗಳ ತುರ್ತು ಪರಿಸ್ಥಿತಿ ಘೋಷಣೆಯಾಗಿದೆಯೆಂದಾದರೆ ಘರ್ಷಣೆಯ ತೀವ್ರತೆಯ ಬಗ್ಗೆ ಯೋಚಿಸಿ.

ವಿಚಿತ್ರವೆಂದರೆ ಮುಸ್ಲಿಮ ಮತಾಂಧರು ಹಿಂದೂಗಳ, ಬೌದ್ಧರ ಯಾ ಸಿಖ್ಖರ ಮೇಲೆ ಆಕ್ರಮಣ ಮಾಡಿದಾಗ ವಿಶ್ವದ ಮಾಧ್ಯಮಗಳು, ಮಾನವಾಧಿಕಾರ ಸಂಸ್ಥೆಗಳು ಗಪ್ ಚುಪ್. ಅದೇ ಆತ್ಮ ರಕ್ಷಣೆಗೋಸ್ಕರ ಹಿಂದೂಗಳೂ, ಬೌದ್ಧರು ಅಥವಾ ಸಿಖ್ಖರು ಕತ್ತಿ ಹಿಡಿದರೆ ಮಾನವಾಧಿಕಾರದ ಹನನ! ಇನ್ನು ಮುಸ್ಲಿಂ ಬಾಹುಳ್ಯದ ಕೊಲ್ಲಿ ರಾಷ್ಟ್ರಗಳು ಇವರಿಗೆ ಆಶ್ರಯ ಕೊಡುವುದೇ ಇಲ್ಲ. ಮೊದಲನೇ ಕಾರಣ ಇವರನ್ನು ಕೊಲ್ಲಿ ರಾಷ್ಟ್ರಗಳು ನಿಜವಾದ ಮುಸ್ಲಿಮರೆಂದು ಪರಿಗಣಿಸುವುದೇ ಇಲ್ಲ! ಏಕೆಂದರೆ ಇವರೆಲ್ಲ ಮತಾಂತರ ಹೊಂದಿದ ಹಿಂದೂಗಳು!! ಇನ್ನು ಎರಡನೇ ಕಾರಣ, ಸ್ವತಃ ಮುಸ್ಲಿಂ ರಾಷ್ಟ್ರಗಳಲ್ಲೇ ಏಕ ಮತವಿಲ್ಲ. ಕಟ್ಟರವಾದ-ಉದಾರವಾದ, ಸೌದಿ-ಕತಾರ್, ಶಿಯಾ-ಸುನ್ನಿ ಎಂದುಕೊಂಡು ಇವರೇ ತಲೆ ಒಡೆದುಕೊಳ್ಳುತ್ತಿದ್ದಾರೆ. ಆರ್ಥಿಕವಾಗಿಯೂ ದಿವಾಳಿ ಎದ್ದಿರುವ ಕೊಲ್ಲಿ ರಾಷ್ಟ್ರಗಳಲ್ಲಿ ಅಲ್ಲಿರುವವರಿಗೇ ನೆಲೆ ಇಲ್ಲದಂತಾಗಿದೆ ಇನ್ನು ನಿರಾಶ್ರಿತ ಮುಸ್ಲಿಮರನ್ನೆಲ್ಲಿಡುವುದು ಅವರು?

ಭಾರತೀಯ ಬಹುಸಂಖ್ಯಾತರಿಗೆ ಮಾನವಾಧಿಕಾರದ ಪಾಠ ಮಾಡಲು ಓಡೋಡಿ ಬರುವ ಎಲ್ಲಾ ರಾಷ್ಟ್ರಗಳೂ ತಮ್ಮ ದೇಶದಲ್ಲಿ ರೋಹಿಂಗ್ಯಾಗಳಿಗೆ ಆಶ್ರಯ ಕೊಡಲು ತಯಾರಿಲ್ಲ ಎನ್ನುವುದು ತಿಳಿದಿರಲಿ. ಯಾರಿಗೂ ಬೇಡವಾದ ರೋಹಿಂಗ್ಯಾರವರನ್ನು ನಾವೇಕೆ ಸಾಕಿ ಸಲಹಬೇಕು? ರೋಹಿಂಗ್ಯಾರನ್ನೂ ಕೆಂಪು ಚಾದರ ಹಾಸಿ ಕರೆತರಲು ನಮಗೇನು ಹುಚ್ಚು ನಾಯಿ ಕಡಿದಿದೆಯೇ? ಅಷ್ಟಕ್ಕೂ ನಮ್ಮ ದೇಶದಲ್ಲೇ ಇದ್ದು, ತಿಂದುಂಡು, ಬಾಂಬಿಡುವ ಜನರಿಗೇನು ಕಮ್ಮಿ ಇಲ್ಲವಲ್ಲ, ಇನ್ನು ಅವರೂ ಬಂದು ಬಾಂಬಿಡಬೇಕೇ? ಈಗಾಗಲೇ ಭಾರತದಲ್ಲಿ ಬಂದು ಅವಿತು ಕುಳಿತಿರುವ ರೋಹಿಂಗ್ಯಾರನ್ನು ಹೊರದಬ್ಬುವುದೇ ಹರಸಾಹಸವಾಗಿದೆ. ಇನ್ನು ಹೊಸಬರನ್ನು ಕರೆತರಲು ಮುಂದಡಿಯಿಟ್ಟರೆ, ನಮ್ಮ ಗೋರಿಯನ್ನು ನಾವೇ ತೋಡಿದಂತೆ.

ಶನ್ನು

Tags

Related Articles

FOR DAILY ALERTS
 
FOR DAILY ALERTS
 
Close