ಪ್ರಚಲಿತ

ಅರಬ್ ದೇಶದ ಮುಸ್ಲಿಂ ರಾಜ ತನ್ನ ಭಾಷಣಕ್ಕೂ ಮೊದಲು ಹಿಂದೂ ದೇವರ ಸ್ಮರಣೆ ಮಾಡಿದ್ದೇಕೆ ಗೊತ್ತಾ…?!

ಮೋದಿ…ಮೋದಿ… ಜಗತ್ತಿನಾದ್ಯಂತ ಇಂದು ಕೇಳಿ ಬರುತ್ತಿರುವ ಒಂದೇ ಒಂದು ಹೆಸರು ‘ಮೋದಿ’. ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗುತ್ತಲೇ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಿತ್ತು. ಅತ್ಯಂತ ಹೆಚ್ಚು ಬಹುಮತದಿಂದ ಗೆದ್ದು ಪ್ರಧಾನಿ ಪಟ್ಟ ಅಲಂಕರಿಸಿದ ಮೋದಿ , ‘ನಾನು ಈ ದೇಶದ ಪ್ರಧಾನ ಸೇವಕ,ಪ್ರಧಾನ ಮಂತ್ರಿ ಅಲ್ಲ’ ಎಂದು ಹೇಳಿದ್ದರು. ಇಂತಹ ಹೇಳಿಕೆಯನ್ನು ನೀಡಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ನರೇಂದ್ರ ಮೋದಿಯವರು..!

ಯಾವ ದೇಶಗಳು ನರೇಂದ್ರ ಮೋದಿಯವರಿಗೆ ತಮ್ಮ ದೇಶಕ್ಕೆ ಬರಲು ವೀಸಾ ನೀಡುವುದಿಲ್ಲ ಎಂದು ಹೇಳಿಕೊಂಡಿತ್ತೋ ,ಅದೇ ದೇಶ ನರೇಂದ್ರ ಮೋದಿಯವರು ಪ್ರಧಾನಿಯಾದ ಕೂಡಲೇ ರೆಡ್ ಕಾರ್ಪೆಟ್ ಹಾಕಿ ತಮ್ಮ ದೇಶಕ್ಕೆ ಸ್ವಾಗತಿಸಿತ್ತು. ಭಾರತದ ಪ್ರಧಾನಿಯನ್ನು ತಮ್ಮ ದೇಶಗಳಿಗೆ ಆಹ್ವಾನಿಸಿ ಭರ್ಜರಿ ಸ್ವಾಗತ ನೀಡುತ್ತಿರುವ ದೇಶಗಳು ಇಂದು ಭಾರತವನ್ನು ನೋಡುವ ದ್ರಷ್ಟಿಯೇ ಬದಲಾಗಿದೆ..!

ಪ್ರದಾನಿ ನರೇಂದ್ರ ಮೋದಿಯವರು ವಿಶ್ವವನ್ನೇ ಮೋಡಿಗೊಳಿಸಿದ್ದಾರೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.ನರೇಂದ್ರ ಮೋದಿಯವರ ಅರಬ್ ರಾಷ್ಟ್ರವಾದ ದುಬೈ ಗೆ ಭೇಟಿ ನೀಡಿ ಹಿಂದೂ ದೇವಾಲಯವನ್ನು ಲೋಕಾರ್ಪಣೆಗೊಳಿಸಿದ್ದರು. ಇದು ದೇಶದ ಸಮಸ್ತ ಹಿಂದೂಗಳ ಪಾಲಿಗೆ ಸಂಭ್ರಮದ ಘಟನೆಯಾಗಿತ್ತು. ಆದರೆ ನರೇಂದ್ರ ಮೋದಿಯವರ ದುಬೈ ಭೇಟಿಯ ಬೆನ್ನಲ್ಲೇ ದುಬೈ ರಾಜಕುಮಾರ ಮೊಹಮದ್ ಬಿನ್ ಜಾಯೆಡ್ ಅಲ್ ನೆಹ್ಯಾನ್ ಅವರು ತಮ್ಮ ಭಾಷಣದ ಮೊದಲು ‘ಜೈ ಶ್ರೀ ರಾಮ್’ ಎಂದು ಉಧ್ಘರಿಸುವ ಮೂಲಕ ತಮಗೆ ಹಿಂದೂ ಧರ್ಮದ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದರು.

ಅರಬ್ ನೆಲದಲ್ಲಿ ಹಿಂದೂ ದೇವಾಲಯವೊಂದು ತಲೆ ಎತ್ತಿದೆ ಎಂದರೆ ಇದು ನರೇಂದ್ರ ಮೋದಿಯವರಿಗೆ ಅರಬ್ ರಾಜರುಗಳು ನೀಡುತ್ತಿರುವ ಗೌರವದ ಫಲವೇ ಹೊರತು ಮತ್ತೇನಲ್ಲ. ದುಬೈ ನಲ್ಲಿ ನಡೆದ ಮೊರಾರಿ ಬಾಪು ಅವರ ರಾಮಕಥಾ ಕಾರ್ಯಕ್ರಮದಲ್ಲಿ ದುಬೈ ರಾಜಕುಮಾರ ‘ಜೈ ಶ್ರೀ ರಾಮ್’ ಎಂದು ಭಾಷಣ ಆರಂಭಿಸಿದ್ದು, ಭಾರತದ ಸಂಸ್ಕೃತಿ ಹಾಗೂ ನರೇಂದ್ರ ಮೋದಿಯವರ ಮೋಡಿ ಬಗ್ಗೆ ಹೆಮ್ಮೆ ಮೂಡುವಂತಾಗಿದೆ..!

ಜೋರ್ಡಾನ್ ಹಾಗೂ ಪಾಲಿಸ್ತೀನ್ ರಾಷ್ಟ್ರಗಳ ಭೇಟಿ ಬಳಿಕ ಮೋದಿ ಅವರು ಪ್ರಧಾನಿಯಾದ ಬಳಿಕ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಅಬುದಾಬಿಗೆ ತೆರಳಿದ್ದು ,ಮಹತ್ತರವಾದ ಐದು ಒಪ್ಪಂದಗಳಿಗೆ ಪರಸ್ಪರ ಎರಡೂ ದೇಶಗಳು ಸಹಿ ಹಾಕಿಕೊಂಡಿವೆ‌. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಆರಬ್ ರಾಜಕುಮಾರ ಭಾರತದ ಬಗ್ಗೆ ಬಹಳ ಗೌರವವನ್ನು ಇಟ್ಟುಕೊಂಡಿದ್ದಾರೆ.

ಈ ಹಿಂದೆ , ಭಾರತದ ಪ್ರಧಾನಿಯೊಬ್ಬರು ಪ್ರಥಮ ಬಾರಿಗೆ ಇಸ್ರೇಲ್ ಭೇಟಿ ನೀಡುವ ವೇಳೆ ಇಸ್ರೇಲ್‌ ನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ ‘ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿಯೊಬ್ಬರು ನಮ್ಮ ದೇಶಕ್ಕೆ ಬರುತ್ತಿದ್ದಾರೆ’ ಎಂದು ತನ್ನ ಪತ್ರಿಕೆಯ ಮುಖಪುಟದಲ್ಲಿ ಬರೆಯುವ ಮೂಲಕ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ವಿಶೇಷವಾಗಿ ಗೌರವ ಸಲ್ಲಿಸಿತ್ತು..!
ಇದೇ ರೀತಿ ಇಸ್ರೇಲ್ ನ ‘ದಿ ಮಾರ್ಕ್’ ಎಂಬ ದಿನ ಪತ್ರಿಕೆಯು “ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಯಹೂದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಇಸ್ರೇಲಿಗರು ಹೆಚ್ಚಿನ ನಿರೀಕ್ಷೆ ಹೊಂದಿದ್ದರು.

ಆದರೆ ಅವರು ಹೆಚ್ಚೇನೂ ಹೇಳಲಿಲ್ಲ. ಆದರೆ ಇಂದು ೧೨೫ ಕೋಟಿ ಜನರ ಪ್ರಧಾನಿ, ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ವಿಶ್ವ ನಾಯಕ, ಮತ್ತು ಪ್ರಪಂಚದ ಅತೀ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚಿನ ಗಮನ ಸೆಳೆದಿದೆ ಎಂದು ಭಾರತ ಮತ್ತು ಇಸ್ರೇಲ್ ಸಂಬಂಧಗಳ ಕುರಿತ ಲೇಖನದಲ್ಲಿ ವಿವರಿಸಿದ್ದರು..!

ನರೇಂದ್ರ ಮೋದಿಯವರು ಮಾತನಾಡುವ ಮೊದಲು ಮಾತನಾಡಿದ ಪ್ಯಾಲಿಸ್ತೀನ್ ನ ಅಧ್ಯಕ್ಷ ಮೊಹಮದ್ ಅಬ್ಬಾಸ್ ‘ನಮ್ಮ ದೇಶದ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ನಮ್ಮೊಡನೆ ಕೈ ಜೋಡಿಸಬೇಕು,ಯಾಕೆಂದರೆ ನಮ್ಮ ದೇಶದ ಪರವಾಗಿಯೇ ಭಾರತದ ನಾಯಕತ್ವ ಬೆಂಬಲ ಸೂಚಿಸಿತ್ತು’ ಎಂದು ಹೇಳುವ ಮೂಲಕ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ವಿಕಾಸಗೊಳ್ಳುತ್ತಿದೆ ಎಂದು ಹೊಗಳಿದರು. ಭಾರತ ಹಿಂದಿನಿಂದಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.ಇಂತಹ ನಾಯಕರ ಜೊತೆ ಪ್ಯಾಲೀಸ್ತೀನ್ ಕೂಡಾ ಉತ್ತಮ ಸ್ನೇಹ ಸಂಬಂಧ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು..!

ಇಂದು ಇಡೀ ವಿಶ್ವವೇ ನರೇಂದ್ರ ಮೋದಿಗೆ ವಿಶೇಷವಾದ ಗೌರವ ಸಲ್ಲಿಸುತ್ತಿದೆ.ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಪಣತೊಟ್ಟಿರುವ ನರೇಂದ್ರ ಮೋದಿಯವರಿಗೆ ಇಂದು ಇಡೀ ವಿಶ್ವವೇ ತಲೆಬಾಗಿದೆ ಎಂದರೆ ತಪ್ಪಾಗದು…! ಯಾಕೆಂದರೆ ಭಾರತವನ್ನು ಕೀಳಾಗಿ ಕಾಣುತ್ತಿದ್ದ ಎಲ್ಲಾ ರಾಷ್ಟ್ರಗಳು ಇಂದು ಭಾರತದ ಜೊತೆ ಸ್ನೇಹ ಬೆಳೆಸಲು ಹಾತೊರೆಯುತ್ತಿವೆ.ತಮ್ಮ ದೇಶದ ಸ್ವಾತಂತ್ರ್ಯ ದಿ ಆಚರಣೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯನ್ನು ಆಹ್ವಾನಿಸಿ ವಿಶೇಷವಾದ ಗೌರವ ನೀಡುತ್ತದೆ ಎಂದರೆ ಇದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.ಇಂದು ಜಗತ್ತು ಭಾರತವನ್ನು ನೋಡುತ್ತಿರುವ ದ್ರಷ್ಟಿಕೋನವನ್ನು ಬದಲಾಯಿಸಿದೆ..!

ಈಗಾಗಲೇ ನರೇಂದ್ರ ಮೋದಿಯವರನ್ನು ವಿದೇಶ ಪ್ರವಾಸದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಎಲ್ಲಾ ದೇಶಗಳ ಜೊತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದು, ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೊಳ್ಳುವ ನಿರೀಕ್ಷೆ ಭಾರತೀಯರಲ್ಲಿದೆ.
ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಇಂದು ಇಡೀ ವಿಶ್ವವೇ ಭಾರತದ ಕಡೆಗೆ ಕಣ್ಣಾಡಿಸುತ್ತಿದೆ. ಭಾರತವನ್ನು ಜಗತ್ತಿನ ಮುಂದೆ ಮಂಡಿಯೂರಿ ನಿಲ್ಲುವಂತೆ ಮಾಡಿದ್ದ ಕಾಂಗ್ರೆಸ್ ನಿಂದ ಭಾರತವನ್ನು ರಕ್ಷಿಸಿ, ಹೋದಲ್ಲೆಲ್ಲಾ ಲಕ್ಷ ಲಕ್ಷ ಅಭಿಮಾನಿಗಳನ್ನು ಹೊಂದಿರುವ ಮೋದಿಗೆ ಇಂದು ಇಡೀ ವಿಶ್ವವೇ ತಲೆ ಬಾಗಿದೆ ಎಂದರೆ ತಪ್ಪಾಗದು..!ಇಂದು ಭಾರತೀಯರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಹೆಮ್ಮೆಯಿಂದ ನಾವು ಭಾರತೀಯರೆಂದು ಎದೆಯುಬ್ಬಿಸಿ ಹೇಳುವಂತಾಗಿದೆ…!

–ಅರ್ಜುನ್

Tags

Related Articles

Close