ದೇಶಪ್ರಚಲಿತ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಗೆ ತಟ್ಟಿದ 4,337 ರ ಶಾಪ ಭಾರತ ಪಾಲಿಗೆ ದುರಾದೃಷ್ಟವಾಗದಿರಲಿ ಮತ್ತು ಮಧ್ಯಪ್ರದೇಶದಲ್ಲಾದ ತಪ್ಪಿನಿಂದ ಇಡಿ ದೇಶವೆ ಪಾಠ ಕಲಿಯಲಿ

 

ಚುನಾವಣೆಯೆಂದರೆ ಅದೊಂದು ಹಬ್ಬ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೈಯಲ್ಲಿ ಸರ್ವೋಚ್ಚ ಹಕ್ಕನ್ನು ನೀಡಿರುವ ಭಾರತದ ಸಂವಿಧಾನದ ಈ ಹಬ್ಬವನ್ನು ಪ್ರತಿಯೊಬ್ಬರೂ ಆಚರಿಸಲೆ ಬೇಕು. ಮತದಾನ ಮಾಡುವುದು ಕೇವಲ ನಮ್ಮ ಕರ್ತ್ಯವ್ಯ ಮಾತ್ರವಲ್ಲ ಅದು ನಮ್ಮ ಹಕ್ಕು ಕೂಡಾ, ನಮ್ಮ ಹಕ್ಕನ್ನು ಉಪಯೋಗಿಸಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಸರ್ಕಾರಗಳನ್ನು ಆರಿಸುವಾಗ ಕೊಂಚವೆ ಎಡವಿದರೂ ಅದರ ಪರಿಣಾಮ ಗಂಭೀರವಾಗುತ್ತದೆ. ಸರಕಾರ ಆರಿಸಿವುದೆಂದರೆ ದುಡ್ಡು ಕೊಟ್ಟು ಬಟ್ಟೆ ತಂದತಲ್ಲ, ಇವತ್ತು ಇಷ್ಟವಾಗದಿದ್ದರೆ ನಾಳೆ ಹೋಗಿ ಬದಲಾಯಿಸುತ್ತೇವೆ ಎನ್ನಲು ಇದು ರೆಡಿಮೇಡ್ ಬಟ್ಟೆಯಲ್ಲ. ನಮ್ಮ ಒಂದು ತಪ್ಪು ನಿರ್ಧಾರ ರಾಜ್ಯ ಅಷ್ಟೇ ಏಕೆ ದೇಶವನ್ನೆ ಅಧಪಥನದ ಕೂಪಕ್ಕೆ ತಳ್ಳುತ್ತದೆ.

ಶಿವರಾಜ್ ಸಿಂಗ್ ಗೆ ತಟ್ಟಿತು 4,337 ರ ಶಾಪ!!

ಹೌದು ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯಬಹುದಿತ್ತು. ಕೇವಲ ಮತ್ತು ಕೇವಲ 4,337 ಮತಗಳು ಬಿದ್ದಿದ್ದರೆ ಬಿಜೆಪಿ ಗೆಲ್ಲುತ್ತಿತ್ತು. ಇದು ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂದು ಅಸಡ್ಡೆ ತೋರಿ ಚುನಾವಣೆಯ ದಿನ ತಿರುಗಾಟಕ್ಕೆ ಹೋಗುವ ಅಥವಾ ಸರಕಾರಗಳ ಮೇಲಿನ ಕೋಪವನ್ನು ನೋಟಾ ಒತ್ತುವ ಮೂಲಕ ತೋಡಿಕೊಳ್ಳುವಂತಹ ಮತದಾರರ ಉದಾಸೀನದ ಫಲ. ಇಂಥ ಆಲಸಿ-ಅಸಡ್ಡೆಯ ಜನಗಳಿಂದಾಗಿಯೆ ಒಬ್ಬ ಒಳ್ಳೆಯ ವ್ಯಕ್ತಿ ಚುನಾವಣೆಯಲ್ಲಿ ಸೋತು ಭ್ರಷ್ಟ, ಕೊಲೆಗಡುಕ, ದೇಶದ್ರೋಹಿ ಅಧಿಕಾರ ಹಿಡಿಯುವಂತಾಯಿತು. ಈಗ ಕೈ ಕೈ ಹಿಸುಕಿಕೊಂಡರೆ ಯಾವ ಪ್ರಯೋಜನವೂ ಬರದು.

ಚುನಾವಣಾ ಆಯೋಗದ ಅಂತಿಮ ಮಾಹಿತಿಯ ಪ್ರಕಾರ, ಮ.ಪ್ರ. ದ ಚುನಾವಣೆಯಲ್ಲಿ ಫೋಟೋ ಫಿನಿಷ್ ಸ್ಪರ್ಧೆ ಇತ್ತು. ರಾಜ್ಯಾದ್ಯಂತ ನಡೆದ ಚುನಾವಣೆಯ ಹತ್ತು ಸ್ಥಾನಗಳಲ್ಲಿ ವಿಜೇತ ಅಭ್ಯರ್ಥಿ ಮತ್ತು ರನ್ನರ್ ಅಪ್ ಮಧ್ಯೆ ಗೆಲುವಿನ ಅಂತರ 1,000 ಮತಗಳಿಗಿಂತಲೂ ಕಡಿಮೆ ಇತ್ತು. ಇದರಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಸೋತಿದ್ದರೆ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸೋತಿತ್ತು. ಬಿಜೆಪಿಯು ಈ ಏಳು ಸ್ಥಾನಗಳಲ್ಲಿ ಕೇವಲ 4,337 ಮತಗಳ ಅಂತರದಿಂದ ಸೋತಿದೆ ಎಂದರೆ, ನಮ್ಮ ಒಂದೊಂದು ಮತಕ್ಕೂ ಇರುವ ಬೆಲೆ ಎಂಥದ್ದೆನ್ನುವುದನ್ನು ಊಹಿಸಿ.

ರಾಜ್ಯದಲ್ಲಿ ಗೆಲುವಿನ ಅಂಚು 2,000 ಮತಗಳಿಗಿಂತ ಕಡಿಮೆಯಿದ್ದ 18 ಸ್ಥಾನಗಳು, 5,000 ಕ್ಕಿಂತ ಕಡಿಮೆಯಿರುವ 30 ಮತ್ತು 3,000 ಕ್ಕಿಂತ ಕಡಿಮೆ ಅಂತರವಿದ್ದ 45 ಸ್ಥಾನಗಳಿದ್ದವು. ಬಿಜೆಪಿ 41 ಶೇಕಡ ಮತಗಳನ್ನು ಪಡೆದುಕೊಂಡಿದ್ದರೆ ಕಾಂಗ್ರೆಸ್ 40.9 ಶೇಕಡ ಮತಗಳನ್ನು ಗಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ಗಿಂತ 47,824 ಹೆಚ್ಚು ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ಆದರೂ ಬಿಜೆಪಿ ಸೋತು ಅಧಿಕಾರದಿಂದ ದೂರವುಳಿಯಿತು. ಇದು ಕರ್ನಾಟಕದ ಕಥೆಯೂ ಹೌದು.

ಈಗ ಇದಕ್ಕೆ ಯಾರನ್ನು ಹೊಣೆಯನ್ನಾಗಿಸುವುದು? ಮತದಾನದಿಂದ ದೂರವುಳಿದ ಜನರನ್ನೆ? ನೋಟಾ ಒತ್ತಿದ ಮತದಾರರನ್ನೆ? ಸರಿಯಾದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೈ ಕಮಾಂಡನ್ನೆ? ಜನರ ಮತ್ತು ಕಾರ್ಯಕರ್ತರ ಮಧ್ಯೆ ಸಮನ್ವಯ ಸಾಧಿಸದ ಅಭ್ಯರ್ಥಿಯನ್ನೆ? ಅಥವಾ ಈ ದೇಶದ ದೌರ್ಭಾಗ್ಯವನ್ನೆ? ಯಾರೋ ಕೆಲವರು ಮಾಡುವ ತಪ್ಪಿಗೆ ಇಡಿಯ ದೇಶವೆ ಶಿಕ್ಷೆ ಅನುಭವಿಸಬೇಕೆ? ಮೊನ್ನೆ ಪಂಜಾಬಿನಲ್ಲಿ ನಡೆದ ಬಾಂಬ್ ದಾಳಿ ಇನ್ನು ಮಧ್ಯಪ್ರದೇಶ, ಛತ್ತಿಸ್ ಗಡ, ರಾಜಸ್ಥಾನದಲ್ಲಿ ನಡೆಯುವುದಿಲ್ಲವೆಂದು ಆಶ್ವಾಸನೆ ಕೊಡಲು ಯಾರಿಂದಾದರೂ ಸಾಧ್ಯವೆ?

ಕಳೆದ ನಾಲ್ಕು ವರ್ಷಗಳಲ್ಲಿ ಮಟ್ಟ ಹಾಕಲಾಗಿದ್ದ ನಕ್ಸಲಿಸಮ್ ಅನ್ನು ಮತ್ತೆ ಪುನಷ್ಚೇತನಗೊಳಿಸಿ, ಓಲೈಕೆ ರಾಜಕಾರಣ ನಡೆಸಿ, ಹಿಂದೂಗಳ ಕಗ್ಗೊಲೆ ಮಾಡಿ, ಅಭಿವೃದ್ದಿಯನ್ನು ಮರೀಚಿಕೆಯಾಗಿಸಿದರೆ ಯಾರು ಜವಾಬ್ದಾರಿ? ಕೈಲಿರುವ ಕೋಹಿನೂರ್ ಅನ್ನು ತಿಪ್ಪೆಗೆಸೆದು, ರಸ್ತೆ ಬದಿಯ ಕಲ್ಲನ್ನು ಕಿರೀಟಕಿಟ್ಟುಕೊಳ್ಳುವ ಕೆಲವೆ ಕೆಲವು ಮೂರ್ಖ ಮತದಾರ ತಪ್ಪಿಗೆ ಉಳಿದವರು ಬಲಿಯಾಗಬೇಕೆ? ಮಧ್ಯಪ್ರದೇಶಕ್ಕಂಟಿದ ಶಾಪ ದೇಶಕ್ಕೂ ಅಂಟಿದರೆ ಆಗ ಏನು ಮಾಡುವುದು? ಮಿಂಚಿ ಹೋದ ಕಾಲಕ್ಕೆ ಚಿಂತಿಸುತ್ತಾ ಕೂರುವುದೆ?

ನಾಳೆ ಲೋಕಸಭೆ ಚುನಾವಣೆಯಲ್ಲೂ ಹೀಗೇ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರುವುದೆನ್ನುವುದನ್ನು ಸರಿಯಾಗಿ ಯೋಚಿಸಿ. ಎಪ್ಪತ್ತು ವರ್ಷಗಳ ಬಳಿಕ ದೊರೆತ ಭ್ರಷ್ಟಾಚಾರವೆ ಮಾಡದ, ಕೇವಲ ದೇಶಕ್ಕಾಗಿ ದುಡಿಯುವ, ಭಾರತವನ್ನು ಶತ್ರು ದಾಳಿಯಿಂದ ಭದ್ರವಾಗಿಡುವ ಒಂದು ಬಲಿಷ್ಟ ಸರಕಾರದ ನಾಯಕನನ್ನು ಸೋಲಿಸಿ ಮನೆಗೆ ಕಳುಹಿಸಿದರೆ ಅತಿ ಹೆಚ್ಚು ನಷ್ಟ ಯಾರಿಗೆ? ಆ ನಾಯಕನಿಗೋ ಇಲ್ಲ ದೇಶಕ್ಕೋ? ಮೋದಿಯಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ ಒಪ್ಪಿಕೊಳ್ಳೋಣ, ಹಾಗಂತ ಈಗಾಗಲೆ ಬಗೆಹರಿಸುವ ಸಮಸ್ಯೆಗಳನ್ನು ಕಡೆಗಣಿಸಿ ಈ ಎಲ್ಲಾ ಸಮಸ್ಯೆಗಳಿಗೆ ಕಾರಣರಾದವರನ್ನೆ ಗದ್ದುಗೆಯಲ್ಲಿ ಕುಳ್ಳಿರಿಸಿ ಮತ್ತೆ ದೇಶವನ್ನು ಅಧಪಥನಕ್ಕೆ ತಳ್ಳೋಣ ಎನ್ನುತ್ತೀರಾ? ದೇಶ ದ್ರೋಹಿಗಳಿಗೆ 60 ವರ್ಷಗಳನ್ನೆ ನೀಡಿದ್ದೀರಿ ಒಬ್ಬ ದೇಶಭಕ್ತನಿಗೆ ಹತ್ತು ವರ್ಷ ನೀಡಲಾರಿರಾ…….

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close