ಪ್ರಚಲಿತ

ಜೆಟ್ ಏರ್‌ವೇಸ್‌ನ ಬಗ್ಗೆ ದೇಶವೇ ಬೆಚ್ಚಿಬೀಳಿಸುವ ಸತ್ಯ! ಭಾರತದ “ಆ” ಕುಟುಂಬಕ್ಕೂ ದಾವೂದ್ ಇಬ್ರಾಹಿಮ್‌ ಮತ್ತು ಜೆಟ್ ಏರ್‌ವೇಸ್ ಸಂಸ್ಥಾಪಕನಿಗೂ ಇರುವ ಸಂಬಂಧವೇನು?

ದು ಯಾವೊಬ್ಬ ಭಾರತೀಯನೂ ಊಹಿಸಲೂ ಆಗದಂಥ ಸತ್ಯ, ಪ್ರತಿಯೊಬ್ಬ ಭಾರತೀಯನೂ ಒಂದು ಧೃಡ ನಿರ್ಧಾರಕ್ಕೆ ಬರಬೇಕಾದ ಸಮಯ. ಯಾರನ್ನು ಬೆಂಬಲಿಸಬೇಕು ಯಾರನ್ನು ತಿರಸ್ಕರಿಸಬೇಕು ಎಂದು ಈ ಸತ್ಯಾಂಶ ತಿಳಿದ ನಂತರ ಯೋಚಿಸಿ. ಯಾಕೆಂದರೆ ನಮ್ಮ ದೇಶದಲ್ಲಿ ಇಂತಹ ಒಂದು ಕುಟುಂಬ ಕೂಡ ಇದೆಯಾ ಅಥವಾ ಇಂತವರನ್ನೂ ನಾವು ಬೆಂಬಲಿಸಿದ್ದೇವಾ ಎಂದು ನಿಮ್ಮ ತಲೆ ನೀವೇ ಚಚ್ಚಿಕೊಳ್ಳುವ ಕಾಲ ಬಂದಿದೆ.
ದೇಶದ ಪ್ರತಿಯೊಬ್ಬರಿಗೂ ಜೆಟ್ ಏರ್‌ವೇಸ್ ಬಗ್ಗೆ ಗೊತ್ತಿದೆ, ಯಾಕೆಂದರೆ ಅತೀ ಹೆಚ್ಚು ಭಾರತೀಯರು ತಮ್ಮ ಪ್ರಯಾಣವನ್ನು ಜೆಟ್ ಏರ್‌ವೇಸ್ ವಿಮಾನದಲ್ಲೇ ಮಾಡಿದ್ದಾರೆ ಎಂಬುದು ಹಲವರಿಗೆ ಹೆಮ್ಮೆ ಇರಬಹುದು. ಆದರೆ ಕೈಯಲ್ಲಿ ಏನೂ ಇಲ್ಲದ ವ್ಯಕ್ತಿಯೊಬ್ಬ ಸಾವಿರಾರು ಕೋಟಿಯ ಕಂಪನಿಯ ಒಡೆಯನಾಗುತ್ತಾನೆ, ಆತನ ಕಂಪನಿಗೆ ಯಾವ ದಾಖಲೆಯೂ ಇಲ್ಲದ ಮೂಲಗಳಿಂದ ಹೂಡಿಕೆ ಆಗುತ್ತದೆ, ಆ ಹೂಡಿಕೆದಾರರ ಜೊತೆ ಭಾರತದ “ಒಂದು ಕುಟುಂಬ” ಕೈಜೋಡಿಸುತ್ತದೆ ಎಂದರೆ ನಂಬಲು ಕಷ್ಟವಾದರೂ ನಂಬಲೇಬೇಕು.!

1993ರಲ್ಲಿ ಪ್ರಾರಂಭವಾದ ಜೆಟ್ ಏರ್‌ವೇಸ್ ಕಂಪನಿ ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಮಿಸ್ಟರ್ ನರೇಶ್ ಗೋಗಯ್ ಎಂಬಾತ ಪ್ರಾರಂಭಿಸಿದ ಕಂಪನಿ ಕೇವಲ ಭಾರತಕ್ಕೆ ಸೀಮಿತವಾಗಿತ್ತು. ಆದರೆ 2004ರಲ್ಲಿ ಅಂದರೆ 12 ವರ್ಷಗಳ ಜೆಟ್ ಏರ್‌ವೇಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಿತು ಮಾತ್ರವಲ್ಲದೆ ಅತೀ ವೇಗವಾಗಿ ಬೆಳೆದ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಆದರೆ ಇಷ್ಟೊಂದು ವೇಗವಾಗಿ ಬೆಳೆಯುತ್ತಿರುವ ಕಂಪನಿಯ ಹಿಂದೆ ಯಾರಿದ್ದಾರೆ ಎಂಬ ಸತ್ಯಾಂಶ ಹುಡುಕುತ್ತಾ ಹೋದಾಗ ಸಿಕ್ಕ ಆಶ್ಚರ್ಯವೇ ದಾವೂದ್ ಇಬ್ರಾಹಿಂ.

ದಾವೂದ್ ಇಬ್ರಾಹಿಂ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ, ಯಾಕೆಂದರೆ ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್‌ ಕ್ರಿಮಿನಲ್ ಈತ. ಪಾಕಿಸ್ತಾನದಲ್ಲೇ ಕೂತು ಜಗತ್ತಿನ ಕೆಲ ದೇಶಗಳಲ್ಲಿ ಬಾಂಬ್ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದ ದಾವೂದ್ ಜೆಟ್ ಏರ್‌ವೇಸ್ ಕಂಪನಿಯ ಜೊತೆ ಹೂಡಿಕೆದಾರನಾಗಿದ್ದ ಎಂಬ ಸತ್ಯಾಂಶವನ್ನು ಕನ್ನಡದ ಪವರ್ ಟಿವಿ ಎಂಬ ಮಾದ್ಯಮವೊಂದು ಬಯಲಿಗೆಳೆದಿದೆ. ಏನೂ ಇಲ್ಲದ ಕಂಪನಿಯೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅತೀ ವೇಗವಾಗಿ ಬೆಳೆದು ಬಂದಾಗ ಹಲವಾರು ರೀತಿಯ ಅನುಮಾನಗಳು ವ್ಯಕ್ತವಾಯಿತು. ಆ ಸಮಯದಲ್ಲಿ ಭಾರತದಲ್ಲಿ ಕಾಂಗ್ರೆಸ್ ಆಡಳಿತವಿತ್ತು , ಈ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪ ಬಂದಾಗ ಇದರ ಬಗ್ಗೆ ತನಿಖೆ ನಡುವೆಸುವಂತೆ ಒತ್ತಾಯ ಕೂಡ ಉಂಟಾಯಿತು. ಯಾಕೆಂದರೆ ಭಾರತದಲ್ಲಿ ತನ್ನದೇ ಆದ ಒಂದು ಹೆಸರು ಗಳಿಸಿದ್ದ ಸಹರಾ ಕಂಪನಿಯನ್ನೇ ಜೆಟ್ ಏರ್‌ವೇಸ್ ಮಾಲಕ ನರೇಶ್ ಗೋಗಯ್ ಖರೀದಿಸಿ ಎರಡೂ ಕಂಪನಿಯನ್ನು ಒಟ್ಟಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅನುಮಾನ ಹೆಚ್ಚಾಗಿ, ಸರಕಾರದ ಮೇಲೆ ಒತ್ತಡವೂ ಹೆಚ್ಚಾಯಿತು. 2007ರಲ್ಲಿ ಸಹರಾ ಕಂಪನಿಯ ಬೆಲೆ ಒಟ್ಟಾರೆಯಾಗಿ 5 ಲಕ್ಷ ಡಾಲರ್ ನಷ್ಟು ಇತ್ತು, ಆದರೆ ನರೇಶ್ ತಾನು ಖರೀದಿಸುವ ವೇಳೆ ಅಂದರೆ 2008ರಲ್ಲಿ ಆ ಕಂಪನಿಗೆ 3.30 ಲಕ್ಷ ಡಾಲರ್‌ಗೆ ಕುಸಿತಗೊಂಡಿತ್ತು. ನಂತರ 2008ರಲ್ಲಿ ಜೆಟ್ ಏರ್‌ವೇಸ್ ತನ್ನ ಇನ್ನೊಂದು ಜೆಟ್ ಲೈಟ್ ಎಂಬ ಅಂಗ ಸಂಸ್ಥೆಯನ್ನು ಸ್ಥಾಪಿಸುತ್ತದೆ. ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸುವ ಸೇವೆ ಒದಗಿಸುತ್ತಿತ್ತು, ಮತ್ತು 2009ರಲ್ಲಿ ಜೆಟ್ ಕನ್ನೆಕ್ಟ್ ಎಂಬ ಮತ್ತೊಂದು ಕಂಪನಿ ಪ್ರಾರಂಭವಾಗುತ್ತದೆ, ಇದು ಕೂಡ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಅನುಕೂಲಕರವಾಗಿತ್ತು. ಜೆಟ್ ಏರ್‌ವೇಸ್ ಬರೋಬ್ಬರಿ 300 ವಿಮಾನಗಳನ್ನು ಹೊಂದಿತ್ತು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಮಾರು 74 ಸ್ಥಳಗಳಿಗೆ ಪ್ರಯಾಣ ಮಾಡುತ್ತಿತ್ತು. ಆದರೆ ಸದ್ಯ ಜೆಟ್ ಏರ್‌ವೇಸ್ ಕಂಪನಿ ಸಂಪೂರ್ಣ ನಷ್ಟದಲ್ಲಿದ್ದು, ಕಳೆದ. ಹತ್ತು ವರ್ಷಗಳಲ್ಲಿ ಈ ಕಂಪನಿಗೆ ಏನಾಯ್ತು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.?

ಕಂಪನಿಯ ಸಂಸ್ಥಾಪಕ ನರೇಶ್ ಗೋಗಯ್ ಅನಿವಾಸಿ ಭಾರತೀಯ ಎಂದು ಹೇಳಿಕೊಂಡರೂ ಕೂಡ ಆತ ಯಾವ ದೇಶದಲ್ಲಿ ಏನು ಮಾಡುತ್ತಿದ್ದಾನೆ ಎಂಬ ದಾಖಲೆ ಇಲ್ಲ. ಭಾರತದ ಪಂಜಾಬ್‌ನಲ್ಲಿ ಹುಟ್ಟಿದ ಈತ ಬಡಕುಟುಂಬದ ಹಿನ್ನೆಲೆಯಲೆಯುಳ್ಳವರು, ಕಂಪನಿ ಆರಂಭಿಸುವಾಗ ಯಾವುದೇ ದೊಡ್ಡ ವ್ಯಕ್ತಿಗಳ ಸಂಪರ್ಕ ಇಲ್ಲದ ಈತ ಮೋಸ್ಟ್ ವಾಂಟೆಡ್‌ ಕ್ರಿಮಿನಲ್ ದಾವೂದ್ ಇಬ್ರಾಹಿಂ ಜೊತೆ ಹೇಗೆ ನಂಟು ಬೆಳೆಸಿದ್ದಾರೆ ಎಂಬುದೇ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಸ್ವತಃ ಲೋಕಸಭೆಯಲ್ಲಿ ಜೆಟ್ ಏರ್‌ವೇಸ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಇದಾದ ನಂತರ ಜೆಟ್ ಏರ್‌ವೇಸ್ ಬಗೆಗಿನ ಸಂಶಯಗಳು ಹೆಚ್ಚುತ್ತಾ ಹೋಯಿತು, ಆದ್ದರಿಂದಲೇ ಸರಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಿತ್ತು. ಆದರೆ ಮುಖ್ಯ ಅಧಿಕಾರಿಯಾಗಿದ್ದ ಅಂಜನ್ ಗೋಸ್ ಅವರನ್ನು ಅಂದಿನ ಕಾಂಗ್ರೆಸ್ ಸರಕಾರ ಎತ್ತಂಗಡಿ ಮಾಡಿತ್ತು. ಈ ಪ್ರಕರಣದ ಬಗ್ಗೆ ಅಂಜನ್ ಗೋಸ್ ಅವರು ಆಂತರಿಕ ಸುರಕ್ಷತಾ ಇಲಾಖೆಯ ಜಂಟಿ ಕಾರ್ಯದರ್ಶಿ ಆಗಿದ್ದ ಸಂಗೀತಾ ಗೈರಾಲ ಎಂಬವರಿಗೆ ಒಂದು ಪತ್ರ ಬರೆಯುತ್ತಾರೆ. ಈ ಪತ್ರದಲ್ಲಿ ಜೆಟ್ ಏರ್‌ವೇಸ್ ಮುಖ್ಯಸ್ಥ ನರೇಶ್ ಗೋಯಲ್ ಮತ್ತು ದಾವೂದ್ ಇಬ್ರಾಹಿಂ ನಡುವೆ ಇರುವ ಸಂಪರ್ಕದ ಬಗ್ಗೆ ಮಾಹಿತಿ ನೀಡುತ್ತಾರೆ.!

ಅಷ್ಟೇ ಅಲ್ಲದೆ ಜೆಟ್ ಏರ್‌ವೇಸ್ ಕಂಪನಿಯ ಮುಖ್ಯಸ್ಥರಾಗಿ 1992ರಲ್ಲಿ ಹಸ್ಮುಖ್ ದೀಪ್‌ಚಂದ್ ಎಂಬಾತ ನೇಮಕಗೊಳ್ಳುತ್ತಾನೆ. ಈತನ ಹಿನ್ನೆಲೆ ಹುಡುಕುತ್ತಾ ಹೋದರೆ ದೇಶದ ಬಹು ದೊಡ್ಡ ಹಗರಣವಾದ ‘ಪನಮ ಹಗರಣದಲ್ಲಿ’ ಹಸ್ಮುಖ್ ದೀಪ್‌ಚಂದ್ ಅವರ ಹೆಸರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಈತ ದಾವೂದ್ ಇಬ್ರಾಹಿಮ್‌ನ ಆಪ್ತ ಸ್ನೇಹಿತ ಕೂಡ ಹೌದು.‌!

ಇದಾದ ನಂತರದಲ್ಲಿ ದಾವೂದ್ ಜೊತೆಗೆ ಜೆಟ್ ಏರ್‌ವೇಸ್ ಕಂಪನಿಗೆ ಇರುವ ಸಂಬಂಧ ನಿಜವಾಗಿತ್ತು. ನರೇಶ್ ಗೋಯಲ್ ಬಗ್ಗೆ 2004-05ರಲ್ಲಿ ಆಂಗ್ಲ ಮಾಧ್ಯಮವೊಂದು ಹಾಡಿ ಹೊಗಳಿ ವರದಿ ಮಾಡಿತ್ತು. ಬರೋಬ್ಬರಿ 18 ಕಂಪನಿಗಳ ಒಡರಯನಾಗಿರುವ ನರೇಶ್, ತನ್ನ 14 ಕಂಪನಿಗಳು ಭಾರತದಲ್ಲಿದ್ದರೆ 4 ಕಂಪನಿಗಳು ವಿದೇಶದಲ್ಲಿ ಇದೆ ಎಂಬುದಾಗಿ ವರದಿ ಮಾಡಿತ್ತು. ಐಲ್ ಆಫ್ ಮ್ಯಾನ್ ಎಂಬ ದೇಶದಲ್ಲಿ 1992ರಲ್ಲಿ ಟೈ ವಿಂಡ್ಸ್ ಕಾರ್ಪೋರೇಷನ್ ಎಂಬ ಕಂಪನಿ ಪ್ರಾರಂಭವಾಗುತ್ತದೆ. ಆದರೆ ಆ ಕಂಪನಿಗೆ ಹೂಡಿಕೆ ಮಾಡಿದ ಹಣ ಎಲ್ಲಿಂದ ಬಂತು ಹೇಗೆ ಬಂತು ಎಂಬ ವಿಚಾರವೇ ಬಹಿರಂಗವಾಗುವುದಿಲ್ಲ. ಯಾಕೆಂದರೆ ಐಲ್ ಆಫ್ ಮ್ಯಾನ್ ದೇಶವನ್ನು ‘ಟ್ಯಾಕ್ಸ್ ಸ್ವರ್ಗ’ ಎಂದೇ ಕರೆಯಲಾಗುತ್ತದೆ. ಆದ್ದರಿಂದ ಈ ಬಗ್ಗೆ ಕೂಡ ಹಲವಾರು ಸಂಶಯ ವ್ಯಕ್ತವಾಗುತ್ತದೆ.!

ಹಸ್ಮುಖ್ ದೀಪ್‌ಚಂದ್ ನಂತರದಲ್ಲಿ ಕಂಪನಿಯ ಮುಖ್ಯಸ್ಥರಾಗಿ ಜಾವೇದ್ ಅಕ್ತರ್, ಖಾದ್ರಿ ಮುಸ್ತಫಾ ಇಫ್ತಿಕರ್, ಗಾಂಡೇರ್ ಇಸ್ಮಾಯಿಲ್ ಮತ್ತು ನಾಲ್ಕನೇ ಡೈರೆಕ್ಟರ್ ಆಗಿ ಪಿತ್ರೋಡ ಗಂಗಾರಾಮ್ ಸತ್ಯ ಎಂಬಾತನ ನೇಮಕವಾಗುತ್ತದೆ. ಈತನ ಬಗ್ಗೆ ತಿಳಿದುಕೊಳ್ಳಲೇಬೇಕು, ಯಾಕೆಂದರೆ ಅಂತರಾಷ್ಟ್ರೀಯ ಹಗರಣಗಳಲ್ಲಿ ಭಾಗಿಯಾದ ಆರೋಪ ಈತನ ಮೇಲಿದೆ. ಅಷ್ಟೇ ಅಲ್ಲದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮೇಲಿರುವ ಕೆಲ ಹಗರಣಗಳ ಆರೋಪದಲ್ಲೂ ಪಿತ್ರೋಡ ಗಂಗಾರಾಮ್ ಸತ್ಯ ಎಂಬಾತನ ಹೆಸರೂ ಕೇಳಿ ಬಂದಿದೆ. ಜೆಟ್ ಏರ್‌ವೇಸ್ ಕಂಪನಿಗೆ ದುಬೈ ದೇಶದಿಂದ ಹಣ ಬರುತ್ತಿತ್ತು ಮತ್ತು ಯಾರು ಹಣ ರವಾನೆ ಮಾಡುತ್ತಿದ್ದರು ಎಂಬ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ದಾವೂದ್ ಇಬ್ರಾಹಿಮ್‌ನ ಹೂಡಿಕೆಯ ಹಣದಲ್ಲಿ ಬೆಳೆದ ಕಂಪನಿಯ ಜೊತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಏನು ಸಂಬಂಧ ಎಂಬುದೇ ಭಾರತೀಯರ ಮುಂದಿರುವ ಪ್ರಶ್ನೆ?

ವಿಜಯ್ ಮಲ್ಯ, ನೀರವ್ ಮೋದಿ ಭಾರತಕ್ಕೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾದಾಗ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸಿಗರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಬರೋಬ್ಬರಿ 17,000 ಕೋಟಿ ಸಾಲದಲ್ಲಿರುವ ಜೆಟ್ ಏರ್‌ವೇಸ್ ಕಂಪನಿಯ ಮುಖ್ಯಸ್ಥ ಕೂಡ ನಾಪತ್ತೆಯಾದರೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನೇ ಪ್ರಶ್ನಿಸುತ್ತಾರೆಯೇ ಎಂಬುದು ನಮ್ಮ ನಿಮ್ಮ ಮುಂದಿರುವ ಪ್ರಶ್ನೆ?
ಯಾಕೆಂದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜೆಟ್ ಏರ್‌ವೇಸ್ ಮುಖ್ಯಸ್ಥರ ಜೊತೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಂಪರ್ಕ ಇದೆ, ಹಾಗಾದರೆ ದಾವೂದ್ ಇಬ್ರಾಹಿಂ ಮತ್ತು ಗಾಂಧಿ ಕುಟುಂಬ ಎಂದು ಕರೆಯಲ್ಪಡುವ ಒಂದು ಕುಟುಂಬಕ್ಕೂ ಸಂಬಂಧವಿದೆಯೇ…?

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close