ಪ್ರಚಲಿತ

ಭಾರತದ ಸನಾತನ ಧರ್ಮಕ್ಕೆ ಮನಸೋತ ಕಮ್ಯೂನಿಷ್ಟ್ ಚೀನಾದ ಮಾಧ್ಯಮ!! ಭಾರತದಲ್ಲಿ ಮೂಲಭೂತವಾದಿ ಇಸ್ಲಾಮಿಗೆ ಕಡಿವಾಣ ಹಾಕಲು ಹಿಂದುತ್ವವೆ ಕಾರಣ ಎಂದ ಡ್ರಾಗನ್!!

 

ಚೀನಾದ ಮಾಧ್ಯಮವು ಭಾರತದ ಸನಾತನ ಧರ್ಮವನ್ನು ಬಾಯಿತುಂಬಾ ಹೊಗಳಿರುವುದು ಇದೆ ಮೊದಲು. ಗ್ಲೋಬಲ್ ಟೈಮ್ಸ್ ನ ಒಂದು ಲೇಖನವು ಭಾರತದ ‘ಹಿಂದುತ್ವ’ವನ್ನು ಹೊಗಳುತ್ತಾ, ಮೂಲಭೂತವಾದಿ ಇಸ್ಲಾಂಗೆ ಕಡಿವಾಣ ಹಾಕುವಲ್ಲಿ ಹಿಂದುತ್ವ ಮುಖ್ಯ ಭೂಮಿಕೆಯನ್ನು ನಿಭಾಯಿಸಿದೆ ಎಂದು ಹೇಳಿಕೊಂಡಿರುವುದು ಸನಾತನಿಗಳಿಗೆಲ್ಲ ಹೆಮ್ಮೆಯ ವಿಚಾರ.

“ಪ್ರಪಂಚದ ಇತರ ಭಾಗಗಳಲ್ಲಿ ಮುಸ್ಲಿಂ ಗುಂಪುಗಳಿಗೆ ಸಂಭವಿಸಿದ ತೀವ್ರಗಾಮಿತ್ವದಿಂದ ಭಾರತದಲ್ಲಿರುವ ಬಹುತೇಕ ಮುಸ್ಲಿಮರು ದೂರ ಉಳಿದಿರುವಂತೆ ಏಕೆ ಕಾಣುತ್ತದೆ? ” ಎನ್ನುವ ಪ್ರಶ್ನೆಯೊಂದಿಗೆ ಲೇಖನವನ್ನು ಶುರು ಮಾಡುತ್ತಾ ಏಷಿಯಾದ ಇತರ ಭಾಗಗಳಲ್ಲಿ ಮುಸ್ಲಿಮರ ಆಟಾಟೋಪಗಳ ಬಗ್ಗೆ ಗಮನ ಹರಿಸುವಂತೆ ಮಾಡುತ್ತದೆ.

“ಇತರ ಏಷ್ಯಾದ ದೇಶಗಳ ಗುಂಪುಗಳೊಂದಿಗೆ ಹೋಲಿಸಿದರೆ ಭಾರತೀಯ ಮುಸ್ಲಿಮರು ಉಗ್ರಗಾಮಿ ಸಂಘಟನೆಗಳನ್ನು ಹೊಂದಿರುವುದು ಅಪರೂಪ. ಫಿಲಿಫೈನ್ಸಿನ ದಕ್ಷಿಣ ಭಾಗದಲ್ಲಿ, ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರಗಾಮಿಗಳು ತಾವು ಆಕ್ರಮಿಸಿದ ನಗರಗಳನ್ನು ಭಯಾನಕ ಸ್ಥಳಗಳಾಗಿ ಪರಿವರ್ತಿಸಿದ್ದಾರೆ. ದಕ್ಷಿಣ ಥೈಲ್ಯಾಂಡ್ನಲ್ಲಿ, ಮುಸ್ಲಿಂ ಉಗ್ರಗಾಮಿಗಳು ಪ್ರತಿವಾರವೂ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತವೆ” ಎಂದಿದೆ.

ಲೇಖನವು ಭಾರತದಲ್ಲಿ ಮೂಲಭೂತವಾದಿ ಇಸ್ಲಾಂ ನ ಅನುಪಸ್ಥಿತಿಗೆ ಹಿಂದೂ ಧರ್ಮವೇ ಕಾರಣ ಎಂದಿದೆ. ಏಷ್ಯಾದಲ್ಲಿ ‘ಇಸ್ಲಾಮಿನ ಆರ್ಕ್’ ಅನ್ನು ಭಾರತವೆ ಮುರಿಯುತ್ತದೆ ಎಂದು ಬರೆದುಕೊಂಡಿದೆ. ಸಮಸ್ತ ಏಷಿಯಾ ಖಂಡದಲ್ಲಿ ‘ಇಸ್ಲಾಮಿನ ಕಮಾನು’ ಹರಡಿಕೊಂಡಿದೆ. ಈ ಕಮಾನಿನಲ್ಲಿ ಫಿಲಿಪೈನ್ಸ್, ಇಂಡೋನೇಷ್ಯಾ, ಮಲೇಷಿಯಾ, ದಕ್ಷಿಣ ಥೈಲ್ಯಾಂಡ್, ದಕ್ಷಿಣ ಮಯನ್ಮಾರ್, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳು ಒಳಗೊಂಡಿವೆ. ಈ ದೇಶಗಳೆಲ್ಲಾ ಚರಿತ್ರೆ ಮತ್ತು ಜನಾಂಗೀಯ ಸಂಘರ್ಷಗಳಿಂದಾಗಿ ಉದ್ವಿಗ್ನತೆಯನ್ನು ಎದುರಿಸುತ್ತಿದೆ.

ಇಸ್ಲಾಮಿನ ಈ ಕಮಾನನ್ನು ಕೇವಲ ಭಾರತ ಮಾತ್ರ ಮುರಿಯುತ್ತಿದೆ. ಈ ಕಾರಣದಿಂದಾಗಿಯೆ ಭಾರತ ಜಗತ್ತಿನಲ್ಲಿಯೆ ಎತ್ತರದ ಸ್ಥಾನದಲ್ಲಿ ನಿಂತಿದೆ ಮತ್ತು ಈ ಕಾರಣದಿಂದಾಗಿಯೆ ತಮ್ಮ ಏಷ್ಯಾ ನೀತಿಗಳಿಗೆ ಬಂದಾಗ ಭಾರತ ಅಮೇರಿಕಾ, ಜಪಾನ್, ರಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳೊಂದಿಗೆ ಸಮಾನತೆ ಸಾಧಿಸುತ್ತದೆ. “ಭಾರತದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ಕೊರತೆ ಏಷ್ಯಾದಲ್ಲಿ ತನ್ನ ಪಾತ್ರವನ್ನು ನಿರ್ಧರಿಸಲು ಅದಕ್ಕೆ ಸಹಾಯಕವಾಗಿದೆ” ಎಂದು ಹೇಳಿಕೊಂಡಿದೆ.

ಸನಾತನಿಗಳೆ ಇನ್ನಾದರೂ ಹೆಮ್ಮೆ ಪಡಿ. ನಿಮ್ಮ ಧರ್ಮದ ಶಕ್ತಿಯನ್ನು ಅರಿಯಿರಿ. ಬರೋಬ್ಬರಿ ಒಂದು ಸಾವಿರ ವರ್ಷದ ಇಸ್ಲಾಮಿನ -ಬ್ರಿಟಿಷರ-ಹಿಂದೂ ವಿರೋಧೀ ಪಕ್ಷಗಳ ಆಡಳಿತದ ಬಳಿಕವೂ ನಾವು ಸನಾತನಿಗಳಾಗಿಯೆ ಉಳಿದಿದ್ದರೆ ಅದಕ್ಕೆ ನಮ್ಮ ಧರ್ಮವೆ ಕಾರಣ. ಸನಾತನ ಎಂದರೆ ಅಳಿಯದ್ದು ಅಥವಾ ಅಳಿಸಲಾಗದ್ದು. ಬ್ರಹ್ಮಾಂಡದಂತೆಯೆ ಅನಂತ ಸತ್ಯ, ಚಿರಯೌವನ, ನಿತ್ಯ ನೂತನ. ಸನಾತನಿ ಎನ್ನಲು ಹೆಮ್ಮೆ ಪಡಿ. ನಾಚಿಗೆಯಾಗುತ್ತದೆಯೆ? ಹಾಗಾದರೆ ಸನಾತನ ಭಾರತ ಬಿಟ್ಟು ಶಾಂತಿದೂತರ ರಾಷ್ಟ್ರಗಳಿಗೆ ತೊಲಗಿ.

–ಶಾರ್ವರಿ

economictimes

Tags

Related Articles

FOR DAILY ALERTS
 
FOR DAILY ALERTS
 
Close