ಪ್ರಚಲಿತ

ಕಾಶ್ಮೀರದ ವಿಚಾರದಲ್ಲಿ ಯಾವ ದೇಶವೂ ಮೂಗುತೂರಿಸುವ ಅಗತ್ಯವಿಲ್ಲ! ಮುಸ್ಲಿಂ ರಾಷ್ಟ್ರಗಳ ಒಕ್ಕೂಟಕ್ಕೆ ಖಡಕ್ ವಾರ್ನಿಂಗ್ ನೀಡಿದ ಸುಷ್ಮಾ ಸ್ವರಾಜ್!

ಭಾರತ ಈ ಹಿಂದೆ ಕಾಶ್ಮೀರದ ವಿಚಾರದಲ್ಲಿ ಮೃದು ಧೋರಣೆ ತೋರಿದ್ದರಿಂದಲೇ ಇಂದು ಕಾಶ್ಮೀರಕ್ಕಾಗಿ ಪಾಕಿಸ್ತಾನ ಹೊಂಚು ಹಾಕುತ್ತಿದೆ. ಈ ಹಿಂದೆ ಕಾಂಗ್ರೆಸ್‌ ಕಾಶ್ಮೀರದ ವಿಚಾರದಲ್ಲಿ ಒಂದು ದಿಟ್ಟ ನಿಲುವು ಪ್ರದರ್ಶಿಸಿದ್ದರೆ ಇಂದು ಭಾರತಕ್ಕೆ ಕಾಶ್ಮೀರವನ್ನು ಉಳಿಸಿಕೊಳ್ಳಲು ಈ ರೀತಿಯ ಹೋರಾಟ ನಡೆಸಬೇಕಾದ ಅಗತ್ಯ ಬೀಳುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ಗೆ ದೇಶಕ್ಕಿಂತ ತಮ್ಮ ಕುಟುಂಬದ ಉದ್ದಾರವೇ ಮುಖ್ಯ ಆಗಿತ್ತು. ಇದೇ ಕಾರಣಕ್ಕಾಗಿ ದೇಶದ ಏಳಿಗೆಯನ್ನು ಕಾಂಗ್ರೆಸ್‌ ಬಯಸಿರಲಿಲ್ಲ. ಆದರೆ ಈಗ ದೇಶದ ಚಿತ್ರಣ ಬದಲಾಗಿದೆ, ದೇಶದ ಅಧಿಕಾರ ವಹಿಸಿಕೊಂಡವರು ಬದಲಾಗಿದ್ದಾರೆ. ದೇಶದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಚಿತ್ರಣ ಸಂಪೂರ್ಣ ಬದಲಾಗಿದೆ ಎಂಬುದು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಕೇವಲ ಮೋದಿ ಮಾತ್ರವಲ್ಲದೆ ಕೇಂದ್ರ ಸರಕಾರದ ಸಚಿವ ಸಂಪುಟವೇ ಹೀಗೆ, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಯಾವ ಮೂರನೇ ರಾಷ್ಟ್ರ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಹೌದು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರಕಾರ ಯಾವ ರೀತಿಯ ದಿಟ್ಟ ನಿಲುವು ತಾಳಿದೆ ಎಂದರೆ ಮುಸ್ಲಿಂ ರಾಷ್ಟ್ರಗಳು ದಂಗಾಗಿವೆ. ಯಾಕೆಂದರೆ ಸುಷ್ಮಾ ಸ್ವರಾಜ್ ಅವರು ನೀಡಿದ ಖಡಕ್ ವಾರ್ನಿಂಗ್ ಕಂಡು ಪಾಕಿಸ್ತಾನ ಮಾತ್ರವಲ್ಲದೆ ಪಾಕಿಸ್ತಾನದ ತೆರೆಮರೆಯಲ್ಲಿ ಬೆಂಬಲ ನೀಡುವ ಎಲ್ಲಾ ರಾಷ್ಟ್ರಗಳು ಕೂಡ ತೆಪ್ಪಗಾಗಿವೆ.!

ಇತ್ತೀಚೆಗೆ ಅರಬ್ ದೇಶದಲ್ಲಿ ನಡೆದ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಸಭೆಗೆ ಭಾರತವನ್ನು ಆಹ್ವಾನಿಸುವುದಕ್ಕೆ ಪಾಕಿಸ್ತಾನ ಅದೆಷ್ಟೇ ವಿರೋಧ ವ್ಯಕ್ತಪಡಿಸಿದರು ಕೂಡ ಯುಎಇ ಭಾರತಕ್ಕೆ ಆಹ್ವಾನ ನೀಡಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಇರುವುದರಿಂದ ಎರಡು ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ ಮಾತ್ರವಲ್ಲದೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗಿದೆ. ಇದರಿಂದ ಕಂಗಾಲಾಗಿರುವ ಪಾಕ್ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಸಭೆಗೆ ಭಾರತವನ್ನು ಆಹ್ವಾನಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಭಾರತವನ್ನು ಸದ್ಯ ಕಡೆಗಣಿಸಲು ಯಾವ ದೇಶಕ್ಕೂ ಸಾಧ್ಯವಾಗುತ್ತಿಲ್ಲ, ಆದ್ದರಿಂದಲೇ ಅರಬ್ ದೇಶ ಕೂಡ ಭಾರತವನ್ನು ಆಹ್ವಾನಿಸಿತು. ಇದರಿಂದ‌ ಅವಮಾನ ಅನುಭವಿಸಿದ ಪಾಕ್ ಕಾಶ್ಮೀರದ ವಿಚಾರವನ್ನು ಈ ಸಭೆಯಲ್ಲಿ ಪ್ರಸ್ತಾಪಿಸಿ ಭಾರತಕ್ಕೆ ಹೊಡೆತ ನೀಡಲು ಪ್ರಯತ್ನಿಸಿತ್ತು. ಪಾಕ್ ಪ್ರಸ್ತಾಪಕ್ಕೆ ಸಭೆಯಲ್ಲಿ ಚರ್ಚೆ ಕೂಡ ನಡೆಯಿತು. ಆದರೆ ಇದರಿಂದ ಅಸಮಧಾನಗೊಂಡ ಸುಷ್ಮಾ ಸ್ವರಾಜ್, ಕಾಶ್ಮೀರ ಎಂಬುದು ಭಾರತದ ಭೂಭಾಗ, ಅಷ್ಟೇ ಅಲ್ಲದೆ ಕಾಶ್ಮೀರ ಭಾರತದ ಆಂತರಿಕ ವಿಚಾರ ಆಗಿರುವುದರಿಂದ ಯಾವ ರಾಷ್ಟ್ರ ಕೂಡ ಇದರಲ್ಲಿ ಮೂಗುತೂರಿಸುವ ಅಗತ್ಯವಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.!

ಭಾರತ ಇಂದು ಯಾವ ದೇಶದ ಮುಂದೆಯೂ ಮಂಡಿಯೂರುವ ಮಾತೇ ಇಲ್ಲ, ಯಾಕೆಂದರೆ ಜಾಗತಿಕ ಮಟ್ಟದಲ್ಲಿ ಭಾರತದ ಸಾಮಾರ್ಥ್ಯ ಏನೆಂಬುದು ಇಂದು ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಅರಿತುಕೊಂಡಿದೆ. ಪಾಕಿಸ್ತಾನ ಕೂಡ ಭಾರತದ ಮುಂದೆ ಸೋತು ಸುಣ್ಣವಾಗಿ ಹೋಗಿದೆ ಎಂಬುದು ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ನೇರವಾಗಿ ಎದುರಿಸಲಾಗದ ಪಾಕಿಸ್ತಾನ ಬೇರೆ ದೇಶಗಳ ಸಹಾಯದಿಂದ ಭಾರತವನ್ನು ಮುಜುಗರಕ್ಕೀಡಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಪಾಕಿಸ್ತಾನದ ಯಾವ ತಂತ್ರವೂ ಫಲಿಸುತ್ತಿಲ್ಲ ಯಾಕೆಂದರೆ ಇಂದು ಭಾರತ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿದೆ ಮಾತ್ರವಲ್ಲದೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಭಾರತ ಮದ ಬೆಂಬಲಕ್ಕೆ ನಿಂತಿವೆ ಎಂಬುದು ಮತ್ತೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶ.

ಈ‌ ಹಿಂದೆ ಕಾಂಗ್ರೆಸ್‌ ನಮ್ಮ ದೇಶವನ್ನು ಯಾವ ರೀತಿ ಬಳಸಿಕೊಂಡಿತ್ತು ಎಂದರೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಕಡಿಮೆಯಾಗುತ್ತಲೇ ಇತ್ತು ಮತ್ತು ಭಾರತದ ಪ್ರಧಾನಿಗೆ ಯಾವ ವಿಶೇಷ ಗೌರವವೂ ಸಿಗುತ್ತಿರಲಿಲ್ಲ. ಆದರೆ ಇಂದು ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ, ಅಮೇರಿಕಾ ರಷ್ಯಾ ಇಸ್ರೇಲ್ ನಂತಹ ಬಲಿಷ್ಠ ರಾಷ್ಟ್ರವೇ ಭಾರತದ ಪ್ರಧಾನಿಯನ್ನು ಅತೀ ಹೆಚ್ಚು ಗೌರವದಿಂದ ಕಾಣುತ್ತಿದೆ ಎಂದರೆ ದೇಶದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಭಾರತ ಯಾವ ರೀತಿ ಬದಲಾಗುತ್ತಿದೆ ಎಂದು. ಅದೇನೇ ಇರಲಿ ಭಾರತದ ಆಂತರಿಕ ವಿಚಾರದಲ್ಲಿ ಮೂಗುತೂರಿಸಲು ಪ್ರಯತ್ನಿಸಿದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು ಭಾರತ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close