ಪ್ರಚಲಿತ

ಬಾಯಿಗೆ ಬಂದಂತೆ ಮಾತನಾಡಿದ ಸಾರಿಗೆ ಸಚಿವರ ಗ್ರಹಚಾರ ಬಿಡಿಸಿದ ಸುಮಲತಾ! ಮಂಡ್ಯದಲ್ಲಿ ರಾಜಕೀಯ ಯುದ್ಧ ಆರಂಭಿಸಿದ ಅಂಬಿ ಪತ್ನಿ?

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣ ಮಾತ್ರವಲ್ಲದೆ ರಾಜ್ಯ ರಾಜಕಾರಣದಲ್ಲೂ ಬಾರಿ ಗದ್ದಲ ಆರಂಭವಾಗಿದೆ. ಕಾಂಗ್ರೆಸ್‌ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ತಯಾರಿ ಜೋರಾಗಿ ನಡೆಯುತ್ತಿದ್ದು ಟಿಕೆಟ್‌ಗಾಗಿ ಕಿತ್ತಾಟ ಕೂಡ ಆರಂಭವಾಗಿದೆ. ‌ಸದ್ಯ ಮಂಡ್ಯ ರಾಜಕಾರಣದ ಬಗ್ಗೆ ರಾಜ್ಯಾದ್ಯಂತ ಸುದ್ಧಿಯಾಗುತ್ತಿದ್ದು ಮಂಡ್ಯದ ಗಂಡು ಅಂಬರೀಶ್ ಅವರ ಪತ್ನಿ ಸುಮಲತಾ ಅವರು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಮತ್ತು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೂಡ ಜೋರಾಗಿದ್ದು ಇತ್ತ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕೂಡ ಜೆಡಿಎಸ್‌ ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

ಸುಮಲತಾ ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ ಯಾಕೆಂದರೆ ಬಿಜೆಪಿ ಸುಮಲತಾ ಅವರನ್ನು ಸಂಪರ್ಕ ಮಾಡಿಲ್ಲ ಎಂಬುದನ್ನು ಸ್ವತಃ ಸುಮಲತಾ ಅವರೇ ಹೇಳಿಕೊಂಡಿದ್ದು ಕಾಂಗ್ರೆಸ್‌ ಕೂಡ ಸಂಪರ್ಕ ಮಾಡುವುದು ಅನುಮಾನವಾಗಿದೆ. ಯಾಕೆಂದರೆ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ನಿಖಿಲ್‌ನನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಆದ್ದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸುಮಲತಾ ಅವರನ್ನು ಸ್ಪರ್ಧಿಸುವುದು ಕಷ್ಟ, ಆದರೆ ಕುಮಾರಸ್ವಾಮಿ ಅವರು ನೀಡಿದ ಒಂದೇ ಒಂದು ಹೇಳಿಕೆಗೆ ಟಾಂಗ್ ನೀಡಿದ ಸುಮಲತಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಗೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ್ದಾರೆ.!

ಮಂಡ್ಯದ ಜನತೆಯ ಬಗ್ಗೆ ನನಗೆ ಪಾಠ ಮಾಡಲು ಬರಬೇಡಿ!

ಮಂಡ್ಯದ ಜನರ ಬಗ್ಗೆ ಸುಮಲತಾ ಅವರಿಗೆ ಅಷ್ಟೊಂದು ಅರಿವಿಲ್ಲ ಮತ್ತು ರಾಜಕೀಯಕ್ಕೆ ಬರಬೇಕಾದರೆ ಜನರ ಆಶೀರ್ವಾದ ಬೇಕು ಎಂದು ಸುಮಲತಾ ಅವರ ವಿರುದ್ಧ ಮಾತನಾಡಿದ ರಾಜ್ಯ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರಿಗೆ ತಿರುಗೇಟು ನೀಡಿದ ಸುಮಲತಾ ಅವರು, ಮಂಡ್ಯದ ಜನರ ಬಗ್ಗೆ ನನಗೆ ಯಾರ ಪಾಠವೂ ಅಗತ್ಯವಿಲ್ಲ, ನಮ್ಮ ಜನರ ಮೇಲೆ ನನಗೆ ವಿಶ್ವಾಸವಿದೆ ಎಂದು ಹೇಳಿ ತಿರುಗೇಟು ನೀಡಿದ್ದಾರೆ.ಅದೇ ರೀತಿ ಮಾತನಾಡಿದ ಸುಮಲತಾ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಇತರರನ್ನು ಕಡೆಗಣಿಸುತ್ತಿದ್ದಾರೆ. ಮಗನ ವ್ಯಾಮೋಹಕ್ಕಾಗಿ ನಮ್ಮ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೇದಿಕೆಯಲ್ಲೇ ಕಣ್ಣೀರಿಟ್ಟ ಸುಮಲತಾ!

ಸಾವಿರಾರು ಸಾರ್ವಜನಿಕರು ಸೇರಿದ್ದ ಸಮಾರಂಭದಲ್ಲಿ ಮಾತನಾಡುತ್ತಾ ಸುಮಲತಾ ಅವರು ಕಣ್ಣೀರಿಟ್ಟ ಘಟನೆಯೂ ನಡೆಯಿತು.‌ ನನ್ನ ಪತಿ ಅಂಬರೀಶ್ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿದವರಲ್ಲ, ಹೀಗಿರುವಾಗ ಅಂಬರೀಶ್ ಅವರನ್ನು ಹೆಸರನ್ನು ಈಗ ರಾಜಕೀಯ ವಿಚಾರದಲ್ಲಿ ಬಳಸುವುದು ಸರಿಯಲ್ಲ ಎಂದು ಹೇಳುತ್ತಾ ಭಾವುಕರಾದ ಸುಮಲತಾ ವೇದಿಕೆಯಲ್ಲೇ ಕಣ್ಣೀರಿಟ್ಟರು. ಅದೇ ರೀತಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಸುಮಲತಾ, ನನ್ನ ಬಳಿ ಯಾವ ರಾಜಕೀಯ ಪಕ್ಷಗಳ ನಾಯಕರು ಕೂಡ ಬಂದು ಮಾತನಾಡಿಲ್ಲ, ರಾಜಕೀಯಕ್ಕೆ ಬರುವಂತೆ ಯಾರ ಒತ್ತಡವೂ ಇಲ್ಲ.‌ ನನ್ನ ನಿರ್ಧಾರ ಏನೆಂಬುದು ನಾನೇ ನಿರ್ಧರಿಸುತ್ತೇನೆ ಇದರ ಬಗ್ಗೆ ಯಾರ ಮಾತೂ ನಾನು ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೊಂಡರು. ಆದರೆ ತಮ್ಮ ಕುಟುಂಬ ರಾಜಕೀಯಕ್ಕಾಗಿ ಇತರರ ವಿರುದ್ಧ ಮಾತನಾಡುವ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಅವರು ಅಸಮಧಾನ ಹೊರಹಾಕಿದರು.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close