ಪ್ರಚಲಿತ

ವಿರೋಧಿಗಳಿಂದ ಸಿಡಿದಿದ್ದ ಗುಂಡೊಂದು ತನ್ನದೆಗೆ ಹೊಕ್ಕರೂ ಆ ವೀರ ಯೋಧನ ಆಲೋಚನೆ ಏನಾಗಿತ್ತು ಗೊತ್ತಾ..? ಇಂತವರಿಂದಲೇ ನಾವಿನ್ನೂ ಬದುಕಿದ್ದೇವೆ.!

ನಮ್ಮ ಯೋಧರ ಒಂದೊಂದು ಸಾಹಸಗಾಥೆಯನ್ನು ಕೇಳಿದರೂ ಮೈ ಜುಮ್ಮೆನ್ನುತ್ತದೆ!! ತನ್ನ ಇಡೀ ಕುಟುಂಬವನ್ನು ಬಿಟ್ಟು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡ ಹೊರಟ ಯೋಧರೇ ನಮ್ಮ ನಿಜವಾದ ಹೀರೋಗಳು… ಒಂದೊಂದು ಸಾಹಸ ಕಥೆಗಳೂ ದೇಶಭಕ್ತಿಯನ್ನು ಇಮ್ಮುಡಿಗೊಳಿಸುತ್ತದೆ!! ಕಳೆದ ವರ್ಷ 18 ನವೆಂಬರ್ 2017ರಂದು ಭಾರತೀಯ ಸೇನೆಗೆ ಕಾಶ್ಮೀರದ ಬಂಡಿಪೆÇೀರಾ ಜಿಲ್ಲೆಯ ಹಾಜಿನ್ ಪ್ರದೇಶದ ಗ್ರಾಮವಾದ ಚಂದೇರ್ಗೀರ್ನಲ್ಲಿ ಪಾಕಿಸ್ತಾನದ ಆರು ಮಂದಿ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ವಿಚಾರ ನಮ್ಮ ಕಮಾಂಡೋ ಪಡೆಗಳಿಗೆ ತಿಳಿಯಿತು!! ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಆ ಭಯೋತ್ಪಾದಕರನ್ನು ಸದೆ ಬಡೆಯಲು ಭಾರತೀಯ ವಾಯುಸೇನೆಯ ಗರುಡಾ ಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಅವರಿಗೆ ಆದೇಶಿಸಿತು.

ಉಗ್ರರು ಒಂದು ಮನೆಯಲ್ಲಿ ಅಡಗಿರುವ ವಿಚಾರ ನಮ್ಮ ಸೇನೆಗೆ ತಿಳಿಯಿತು!! ಈ ವಿಚಾರ ತಿಳಿದ ಭಾರತೀಯ ವಾಯುಸೇನೆಯ ಗುರುಡಾ ಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ನೇತೃತ್ವದ ತಂಡ ಆ ಮನೆಯನ್ನು ಸುತ್ತುವರೆದರು. ಈ ವೇಳೆ ಉಗ್ರರು ಸೈನಿಕರ ನಡುವೆ ನಿರಂತರ ಗುಂಡಿನ ದಾಳಿ ನಡೆಯಿತು. ಈ ವೇಳೆ ನಿರಾಲ ಉಗ್ರರಿಗೆ ತೀವ್ರ ಪ್ರತಿರೋಧ ತೋರುತ್ತಿದ್ದರು. ಉಗ್ರರನ್ನು ಎಲ್ಲಾ ಕಡೆಯಿಂದ ಸುತ್ತುವರಿಯಲಾಗಿತ್ತು…

ಆದರೆ ಈ ಬಗ್ಗೆ ಅರಿತಿದ್ದ ಕಮಾಂಡೋ ನಿರಾಲಾ ಅತ್ಯುನ್ನತ ಶೌರ್ಯ ಪ್ರದರ್ಶನ ತೋರಿದರು. ಉಗ್ರರು ಸಿಡಿಸುತ್ತಿದ್ದ ಗುಂಡುಗಳಿಗೆ ಅಂಜದೇ ಮುನ್ನುಗ್ಗಿದ ನಿರಾಲಾ ತಮ್ಮ ಗುಂಡಿನ ದಾಳಿ ಮೂಲಕ ಮೂವರು ಉಗ್ರರ ಮೈಗೆ ಗುಂಡಿನ ದಾಳಿ ನಡೆಸಿದರು. ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಅವರನ್ನು ನೋಡಿದ ಉಗ್ರರ ತಂಡ ಗುಂಡಿನ ದಾಳಿ ನಡೆಸಿತು. ಅದಕ್ಕೆ ತಕ್ಕಂತೆ ಜ್ಯೋತಿ ಪ್ರಕಾಶ್ ನಿರಾಲ ಅವರು ಪ್ರತಿ ದಾಳಿ ನಡೆಸಿದರು. ಆದರೆ ಅಷ್ಟೊತ್ತಿಗಾಗಲೇ ಜ್ಯೋತಿ ಪ್ರಕಾಶ್ ನಿರಾಲ ಅವರ ಎದೆಗೆ ಗುಂಡುಗಳು ತಾಕಿ, ದೇಹ ಜರ್ಜಿತವಾಗಿತ್ತು!!

ಆದರೆ ತನ್ನ ಎದೆಗೆ ಗುಂಡು ತಾಗಿದರೂ ಅಂಜದೆ ನಾನೇನಾದರೂ ಈಗಲೇ ಕುಸಿದು ಬಿಟ್ಟರೆ ಈ ಭಯೋತ್ಪಾದಕರು ನನ್ನ ದೇಶವನ್ನು ಸರ್ವನಾಶ ಮಾಡುತ್ತಾರೆಂದು ಆಲೋಚಿಸಿದ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಎದ್ದು ನಿಂತು ಅಲ್ಲಿದ್ದ ಮೂರು ಭಯೋತ್ಪಾದಕರನ್ನು ಸಂಹರಿಸಿದರು!! ದೇಹಕ್ಕೆ ಹಲವು ಗುಂಡು ತಾಗಿದ್ದರೂ ಪಟ್ಟು ಬಿಡದೆ ಅವರು ಉಗ್ರರನ್ನು ಮುಗಿಸಿ ಬಿಟ್ಟ ಧೀರ ಯೋಧ ಇವರು!! ತೀವ್ರವಾಗಿ ಗಾಯಗೊಂಡಿದ್ದ ನಿರಾಲಾ ಅವರನ್ನು ಕಾಪೆರ್Çೀರಲ್ ಸೇನಾ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿರಾಲಾ ಸಾವನ್ನಪ್ಪಿದ್ದರು. ಎದೆಗೆ ಗುಂಡು ತಾಕಿದ್ದರಿಂದ ವೀರ ಯೋಧ ತಾಯ್ನಾಡಿಗೆ ಪ್ರಾಣವನ್ನು ಅರ್ಪಿಸಿಬಿಟ್ಟ. ಒಂದು ವೇಳೆ ಉಗ್ರರ ಯೋಜನೆ ಫಲಿಸಿದ್ದೇ ಆಗಿದ್ದರೆ, ನಿರಾಲಾ ಜೊತೆಗಿದ್ದ ಹಲವು ಯೋಧರು ಸಾವನ್ನಪ್ಪುವ ಸಾಧ್ಯತೆ ಇತ್ತು!! ಈ ಯೋಧ ಭಾರತೀಯ ವಾಯುಸೇನೆಯ ಗರುಡಾ ಪಡೆಯ ಹೆಮ್ಮೆಯ ಕಮಾಂಡೊ ಆಗಿದ್ದರು…. ಇಂತಹ ಸೈನಿಕರ ಕಥೆಗಳನ್ನು ಕೇಳಬೇಕಾದರೆ ನಿಜವಾಗಿಯೂ ಕಣ್ಣಂಚಿನಲ್ಲಿ ನೀರು ಬರುತ್ತದೆ!!

 

ಮತ್ತೊಂದು ವಿಚಾರವೆಂದರೆ ವೀರ ಯೋಧ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ಅಂದು ಕೊಂದ ಭಯೋತ್ಪಾದಕರು ಸಾಮಾನ್ಯ ಭಯೋತ್ಪಾದಕರಲ್ಲ. ಹತರಾಗಿದ್ದ ಮೂವರಲ್ಲಿ ಓರ್ವ ಭಯೋತ್ಪಾದಕ ಲಷ್ಕರ್ ಏ ತೋಯ್ಬಾದ ವರಿಷ್ಠ ಹಾಗೂ 26/11 ಮುಂಬೈ ದಾಳಿಯ ರೂವಾರಿ ಝಕಿವುರ್ರಹ್ಮಾನ್ ಲಖ್ವಿಯ ಸೋದರಳಿಯನಾಗಿದ್ದ. ಅಸಾಧರಣ ಶೌರ್ಯ ಹಾಗೂ ದೇಶಕ್ಕೆ ನೀಡಿದ ಸೇವೆಗಾಗಿ ಮರಣೋತ್ತರವಾಗಿ ವೀರ ಹುತಾತ್ಮ ಯೋಧ ಜ್ಯೋತಿ ಪ್ರಕಾಶ್ ನಿರಾಲ ಅವರ ಪತ್ನಿಗೆ ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ಪಡೆಯುತ್ತಿರುವ ಭಾರತೀಯ ವಾಯು ಪಡೆಯ ಮೊದಲ ಕಮಾಂಡರ್ ಜ್ಯೋತಿ ಪ್ರಕಾಶ್ ನಿರಾಲಾರಾಗಿದ್ದಾರೆ!! ತಮ್ಮ ಇಡೀ ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ನಮ್ಮ ಯೋಧರೇ ನಿಜವಾಗಿಯೂ ಗ್ರೇಟ್… ಅವರಿಗೆ ಸದಾ ನಾವು ಚಿರರುಣಿಯಾಗಬೇಕು!!

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close